Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಹಾವಿಗೂ ಹೃದಯಾಘಾತವಾಗುತ್ತಾ? ವೈರಲ್ ವಿಡಿಯೋದಲ್ಲಿ ಸೆರೆಯಾಗಿದ್ದು ಏನು?
ಬದಲಾಗತ್ತಿರುವ ಜೀವನ ಶೈಲಿಯಿಂದಾಗಿ ಹೃದಯಾಘಾತದಂತಹ ಸಮಸ್ಯೆ ಈಗ ಕಾಮನ್ ಆಗಿದೆ. ಅದ್ರಲ್ಲೂ ಚಿಕ್ಕ ಚಿಕ್ಕ ಮಕ್ಕಳಲ್ಲೂ ಹೃದಯಘಾತ ಸಂಭವಿಸುತ್ತಿದ್ದ ಪ್ರಕರಣಗಳು ನಮ್ಮ ನಡುವೆಯೂ ನಡೆಯುತ್ತಿರುವುದು ಸಹ ಆತಂಕ ಹುಟ್ಟಿಸಿತ್ತು. ಕೆಲವರು ಊಟ ಮಾಡುವಾಗ, ವ್ಯಾಯಾಮ ಮಾಡುವಾಗ, ಕುಳಿತಿರುವಾಗ, ಡ್ಯಾನ್ಸ್ ಮಾಡುವಾಗ ಕುಸಿದು ಬಿದ್ದು ಮೃತಪಡುತ್ತಿದ್ದ ಪ್ರಕರಣಗಳು ವರದಿಯಾಗುತ್ತಿದ್ದವು.
ಆದ್ರೆ ಈ ಹೃದಯಘಾತದ ಪ್ರಕರಣವು ಪ್ರಾಣಿಗಳಲ್ಲೂ ಕಂಡುಬಂದಿರುವುದು ನಮಗೆ ಈಗಾಗಲೇ ತಿಳಿದಿದೆ. ಪ್ರಾಣಿಗಳು ಸಹ ಹೃದಯಾಘಾತಕ್ಕೆ ಬಲಿಯಾಗುತ್ತವೆ. ಆದ್ರೆ ಈಗೊಂದು ವಿಡಿಯೋದಲ್ಲಿ ಹಾವೊಂದು ಹೃದಯಾಘಾತದಿಂದ ನರಳಾಡಿದೆ ಎಂದು ವೈರಲ್ ಆಗುತ್ತಿದೆ. ಇಲ್ಲಿ ಹಾವಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಹಾವಿಗೆ ಹೃದಯಾಘಾತವಾಗಬಹುದೇ ಎಂಬುದು ಪ್ರಶ್ನೆಯಾಗಿದೆ.

ರಾಜ್ಯದ ಹಾವೇರಿಯಲ್ಲಿ ಈ ವಿಡಿಯೋ ಸೆರೆಯಾಗಿದೆ ಎಂದು ವಿವರಿಸಲಾಗಿದೆ. ಇಲ್ಲಿನ ಬಳಕೆದಾರರೊಬ್ಬರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಹೃದಯಾಘಾತದಿಂದ ನಾಗರಹಾವು ಸಾವನ್ನಪ್ಪಿದೆ ಎಂದು ವಿಡಿಯೋ ಸಹಿತ ಕ್ಯಾಪ್ಷನ್ ನೀಡಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ನಾಗರ ಹಾವೊಂದು ನೆಲದ ಮೇಲೆ ಒದ್ದಾಡುತ್ತಿರುವುದನ್ನು ನಾವು ಗಮನಿಸಬಹುದು.
ಹಾವೊಂದು ನೆಲದಲ್ಲಿ ಬಿದ್ದು ನರಳುತ್ತಿರುವುದನ್ನು ಕಾಣಬಹುದು. ಹಾವಿಗೆ ಹೃದಯಾಘಾತವಾದರೆ ಅದೇ ನೋವು ಹಾವಿಗೆ ಕೂಡ ಬರುತ್ತದೆ ಎಂದು ಅಲ್ಲಿದ್ದವರು ಹೇಳುತ್ತಿರುವುದು ಕಂಡು ಬರುತ್ತಿದೆ. ಜುಲೈ 10 ರಂದು, ಯುವಕ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾನೆ. ವೀಡಿಯೊವನ್ನು 4.5 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.
ಹಾವು ಹಿಡಿಯಲು ಯುವಕ ಪ್ರಯತ್ನಿಸುತ್ತಿದ್ದು, ಹಿಡಿದು ಅದನ್ನು ಪ್ಲಾಸ್ಟಿಕ್ ಡಬ್ಬಿಯಲ್ಲಿ ತುಂಬುವ ಯತ್ನದಲ್ಲಿದ್ದಾನೆ. ಆದರೆ ಹಾವು ನೆಲದ ಮೇಲೆ ಒದ್ದಾಡುತ್ತಿದೆ. ಹಾವನ್ನು ಆತ ಎಚ್ಚರಿಸಲು ಮುಂದಾಗುತ್ತಿದ್ದಾನೆ. ಆದ್ರೆ ಹಾವು ಒದ್ದಾಡುತ್ತಲೇ ಇದೆ. ಆ ಹಾವು ಒದ್ದಾಡಿ ಪ್ರಾಣ ಬಿಟ್ಟಿದೆ ಎಂದು ತಿಳಿದುಬಂದಿದೆ.
ಹಾವುಗಳು ಹೃದಯ ಹೊಂದಿರುತ್ತವೆ. ಈ ಹಾವು ತನ್ನ ಹೃದಯಕ್ಕೆ ಅಗತ್ಯವಾಗ ರಕ್ತ ಪಂಪ್ ಮಾಡಲು ಸಾಧ್ಯವಾಗದೆ ಒದ್ದಾಡುತ್ತಿದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಜೊತೆಗೆ ಈ ಹಾವಿಗೆ ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗಿರುವ ಸಾಧ್ಯತೆಯೂ ಹೆಚ್ಚಾಗಿಯೇ ಇದೆ. ಈ ಮೊದಲು ಹಾವುಗಳು ಹೃದಯಘಾತಕ್ಕೆ ಒಳಗಾಗಿ ಮೃತಪಟ್ಟ ಉದಾಹರಣೆಗಳು ಸಹ ಇದೆ.
ಈ ವಿಡಿಯೋ ನೋಡಿದ ಮಂದಿ ಅಚ್ಚರಿ ಹೊರಹಾಕಿದ್ದಾರೆ. ನಿಜವಾಗಲು ಹಾವುಗಳಿಗೆ ಹೃದಯಾಘಾತವಾಗಿತ್ತಾ? ಅಥವಾ ಹಾವುಗಳು ಹೃದಯಾಘಾಯವಾಗಿ ಬದುಕುಳಿಯಲು ಸಾಧ್ಯವಿದೆಯೇ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ. ಕೆಲವರು ಹಾವಿಗೆ ಹೃದಯಾಘಾತವಾಗಿಲ್ಲ ಬದಲಿದೆ ಅದು ಉಸಿರುಗಟ್ಟಿರಬಹುದು. ಇಲ್ಲವೆ ಆಹಾರವಿಲ್ಲದೆ ನರಳಿರಬಹುದು ಎಂದು ಶಂಕಿಸಿದ್ದಾರೆ.
ಜೊತೆಗೆ ಈ ಹಾವಿಗೆ ಚಿಕಿತ್ಸೆ ನೀಡಿದರೆ ಅಥವಾ ಅದರ ಪಾಡಿಗೆ ಅದನ್ನು ಕಾಡಿನಲ್ಲಿ ಬಿಟ್ಟಿದ್ದರೆ ಬದುಕುಳಿಯುತ್ತಿತ್ತು, ಮನುಷ್ಯರು ಅದನ್ನೂ ಸಾಯಿಸಿದ್ದಾರೆ, ಉರಗ ರಕ್ಷಣೆಯ ಹೆಸರಲ್ಲಿ ಹಾವುಗಳ ಸಾವಿಗೂ ಇವರು ಕಾರಣ ಆಗುತ್ತಿದ್ದಾರೆ. ಆ ಹಾವಿಗೆ ವಯಸ್ಸಾಗಿದೆ ಎನಿಸುತ್ತಿದೆ, ಆತ ಅದನ್ನು ಬೆದರಿಸಿರಬಹುದು, ಇಲ್ಲವೆ ಗಾಯ ಏನಾದರು ಮಾಡಿರಬಹುದು. ಇದರಿಂದ ಹಾವಿಗೆ ಹೃದಯಾಘಾತವಾಗಿದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಇನ್ನು ಹಾವುಗಳು ಉಸಿರಾಡದೆ ಬಿದ್ದಾಗ ಕೆಲವು ಪ್ರಕರಣದಲ್ಲಿ ಸಿಪಿಆರ್ ಮೂಲಕ ಅವುಗಳಿಗೆ ಕೃತಕ ಉಸಿರಾಟ ನೆರವೇರಿಸಿ ಜೀವ ಉಳಿಸಿದ್ದ ಪ್ರಕರಣಗಳು ಸಹ ವರದಿಯಾಗಿದ್ದವು. ಹಾವುಗಳಿಗೆ ಸಿಪಿಆರ್ ಮಾಡಿ ಪೊಲೀಸ್ ಒಬ್ಬರು ಅದರ ಜೀವ ಉಳಿಸಿ ಸುದ್ದಿಯಾಗಿದ್ದರು. ಈ ಪ್ರಕರಣ ಇಲ್ಲಿ ನೆನೆಯಬಹುದು. ಈ ವಿಡಿಯೋ ಸಹ ಭಾರೀ ವೈರಲ್ ಆಗಿದ್ದು ಹಲವರು ಹಲವು ರೀತಿ ತಮ್ಮ ಅಭಿಪ್ರಾಯ ಹೊರಹಾಕುತ್ತಿದ್ದಾರೆ.



Click it and Unblock the Notifications