Latest Updates
-
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ
ದೀಪಾವಳಿ ಟಿಪ್ಸ್: ಸುರಕ್ಷಿತ ದೀಪಾವಳಿಗೆ ಏನು ಮಾಡಬೇಕು? ಇಲ್ಲಿವೆ ಟಿಪ್ಸ್!
ದೀಪದ ಹಬ್ಬ ದೀಪಾವಳಿ ಹತ್ತಿರವಾಗುತ್ತಿದೆ. ಹಿಂದೂಗಳಿಗೆ ಬಹಳ ಪ್ರಮುಖ ಹಾಗೆ ಸಂಭ್ರಮದ ಹಬ್ಬ ಎನ್ನಬಹುದು. ದೀಪಾವಳಿಯಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸಂಭ್ರಮಿಸಲು ಹಲವು ಕಾರಣಗಳಿರಲಿದೆ. ಸಿಹಿ ತಿಂಡಿಯಿಂದ ಹಿಡಿದು ಹಲವು ಸಂಪ್ರದಾಯಗಳ ಕಾರಣದಿಂದ ದೀಪಾವಳಿ ಪ್ರಮುಖ ಹಬ್ಬ ಎಂಬುದಾಗಿ ಪರಿಗಣಿಸಲ್ಪಟ್ಟಿದೆ.
ಹಾಗೆ ದೀಪಾವಳಿಯು ಅತ್ಯಂತ ಸುರಕ್ಷಿತವಾಗಿ, ಸಂಭ್ರಮದಿಂದ ಆಚರಿಸುವುದು ಕೂಡ ಮುಖ್ಯ. ವರ್ಣರಂಜಿತ ಪಟಾಕಿಗಳಿಂದ ಹಿಡಿದು ಹಿರಿಯರ ಹಲವು ಸಂಪ್ರದಾಯಗಳೊಂದಿಗೆ ಬೆರೆತ ವಿಶೇಷ ಹಬ್ಬವಿದು. ಇನ್ನು ಈ ಹಬ್ಬದಲ್ಲಿ ಹಲವು ಕೆಲಸಗಳನ್ನು ಮಾಡುವ ಕುರಿತು ಗಮನವಿಡಬೇಕು. ಹಾಗೆ ಮತ್ತೆ ಕೆಲವು ಕೆಲಸಗಳನ್ನು ಮಾಡಲೇಬಾರದು.

ನಾವಿಂದು ದೀಪಾವಳಿಯಲ್ಲಿ ಏನು ಮಾಡಬೇಕು? ಏನೆಲ್ಲಾ ಮಾಡಾರದು ಎಂಬ ಕುರಿತಾಗಿ ಇಲ್ಲಿ ತಿಳಿದುಕೊಳ್ಳೋಣ. ದೀಪಾವಳಿಯ ದಿನದಂದು ನೀವು ಕೂಡ ಸಂಭ್ರಮವನ್ನು ಡಬಲ್ ಮಾಡುವ ಉದ್ದೇಶದಿಂದ ಇದನ್ನು ಅನುಸರಿಸಿ. ಅದ್ರಲ್ಲೂ ನಿಮ್ಮ ಮಕ್ಕಳ ಕುರಿತು ಗಮನವಿಡಿ. ಹಾಗಾದ್ರೆ ಹಬ್ಬದ ಸಮಯದಲ್ಲಿ ನಾವು ಕೂಡ ಅನುಸರಿಸಬೇಕಾದ ಕೆಲವು ಟಿಪ್ಸ್‌ಗಳು ಇಲ್ಲಿವೆ. ಈ ಕೆಲವು ಟಿಪ್ಸ್ ಅನುಸರಿಸಿ ಸುರಕ್ಷಿತ ದೀಪಾವಳಿ ಆಚರಿಸಿ. ಹಾಗೆ ಇತರರಿಗೂ ಇದನ್ನು ಹಂಚಿಕೊಳ್ಳಿ.
ಬಟ್ಟೆ
ದೀಪಾವಳಿಯ ಸಮಯದಲ್ಲಿ ದೀಪ ಬೆಳಗುವುದು, ಪಟಾಕಿ ಸಿಡಿಸುವುದು, ಪೂಜೆಯಲ್ಲಿ ಭಾಗಿಯಾಗುವುದು ನೋಡಬಹುದು. ಇಂತಹ ಸಮಯದಲ್ಲಿ ಬೆಂಕಿಯೊಂದಿಗೆ ನಾವು ಹಲವು ಬಾರಿ ಸಂಪರ್ಕಕ್ಕೆ ಬರುತ್ತೇವೆ. ಹೀಗಾಗಿ ಈ ಸಮಯದಲ್ಲಿ ಹತ್ತಿ ಬಟ್ಟೆ ಧರಿಸುವುದು ಮುಖ್ಯ. ಇದನ್ನು ಬಿಟ್ಟು ತೆಳುವಾದ ಬಟ್ಟೆಗಳನ್ನು ಧರಿಸಬೇಡಿ. ಹಾಗೆ ಆದಷ್ಟು ಬೆಂಕಿಯಂತಹ ಅಪಾಯಕಾರಿ ವಸ್ತುಗಳಿಂದ ದೂರವಿರಿ. ಮಕ್ಕಳ ಕುರಿತಾಗಿ ವಿಶೇಷ ಗಮನವಿಡಿ.
ಪಟಾಕಿಗಳು
ನೀವು ಕಾನೂನುಬದ್ಧ ತಯಾರಕರಿಂದ ಪಟಾಕಿಗಳನ್ನು ಖರೀದಿಸಬೇಕು ಮತ್ತು ಅವುಗಳನ್ನು ಸಿಡಿಸುವ ಮೊದಲು ಸೂಚನೆಗಳು ಏನಿವೆ ಎಂಬುದನ್ನು ಕೂಡ ತಿಳಿದುಕೊಳ್ಳಿ. ಉತ್ತಮ ಗುಣಮಟ್ಟದ ಪಟಾಕಿಗಳ ಆಯ್ಕೆ ಉತ್ತಮ. ಹಾಗೆ ಹೊಸ ವಿಧಾನದ ಪಟಾಕಿಗಳಿಂದ ಆದಷ್ಟು ದೂರ ಇರುವುದು ಉತ್ತಮ. ಹಾಗೆ ಹಸಿರು ಪಟಾಕಿಗಳ ಸಿಡಿಸುವುದು ಹಾಗೆ ತೆರೆದ ಜಾಗದಲ್ಲಿ ಪಟಾಕಿಯನ್ನು ಸಿಡಿಸಬೇಕು.
ಪ್ರಥಮ ಚಿಕಿತ್ಸಾ ಕಿಟ್ ಯಾವಾಗಲು ಸಿದ್ದವಾಗಿರಲಿ
ಯಾವುದೇ ಸಮಯದಲ್ಲೂ ಬಳಕೆಗೆ ಸಿದ್ದವಿರುವಂತೆ ಪ್ರಥಮ ಚಿಕಿತ್ಸಾ ಕಿಟ್ ಅನ್ನು ಮನೆಯಲ್ಲಿ ಇಟ್ಟುಕೊಂಡಿರಿ. ಯಾವುದೇ ಸಣ್ಣಪುಟ್ಟ ಗಾಯಗಳಾದರೆ ತಕ್ಷಣ ಇದನ್ನು ಬಳಸಬಹುದು.
ಬಳಸಿದ ಪಟಾಕಿಗಳನ್ನು ಎಸೆಯುವುದು
ನೀವು ಹಚ್ಚುವ ಪಟಾಕಿಗಳು ಕೆಲವೊಮ್ಮೆ ಸಿಡಿಯುವುದಿಲ್ಲ. ಹಾಗೆ ಅದು ಸಿಡಿಯದೆ ಹಾಗೆ ಉಳಿದಿದ್ದರೆ ಅದನ್ನು ಮತ್ತೆ ಹಚ್ಚಲು ಮುಂದಾಗಬೇಡಿ. ಇದರಿಂದ ಅಪಾಯ ಹೆಚ್ಚಾಗುತ್ತದೆ. ಹೀಗಾಗಿ ಒಮ್ಮೆ ಸಿಡಿದಿಲ್ಲ ಎಂದರೆ ಅದನ್ನು ಬೆಂಕಿಗೆ ಎಸೆಯುವುದು, ಪೇಪರ್ ಬಳಸಿ ಸಿಡಿಸಲು ಮುಂದಾಗುವ ಕೆಲಸ ಮಾಡಬೇಡಿ. ಇದರಿಂದ ದೂರವೇ ಇರುವುದು ಉತ್ತಮ.
ದೀಪಗಳ ಇಡುವ ಸ್ಥಳ
ನೀವು ದೀಪಾವಳಿಯಲ್ಲಿ ಮೆಣದ ಬತ್ತಿ ಅಥವಾ ಎಣ್ಣೆ ದೀಪ ಹಚ್ಚಿ ಅದನ್ನು ಯಾವ ಸ್ಥಳದಲ್ಲಿ ಇಡಬೇಕು ಎಂಬುದನ್ನು ಸರಿಯಾಗಿ ನಿಗದಿ ಮಾಡಿ. ಏಕೆಂದರೆ ಆಯಕಟ್ಟಿನ ಸ್ದಳದಲ್ಲಿ ಇಟ್ಟು ದೀಪದಿಂದ ಅಪಾಯಗಳು ಎದುರಾಗಬಹುದು. ದೀಪಗಳು ಕೆಳಗೆ ಬಿದ್ದರೆ ಅಥವಾ ಬಟ್ಟೆಗಳಿಗೆ ತಗುಲಿ ಬೆಂಕಿ ಹಚ್ಚಿಕೊಳ್ಳಬಹುದು.
ಪ್ರಾಣಿಗಳ ಬಗ್ಗೆಯೂ ಇರಲಿ ಗಮನ
ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅದ್ರಲ್ಲೂ ನಾಯಿ, ಬೆಕ್ಕು, ಹಸುಗಳಿದ್ದರೆ ಅವುಗಳಿಂದ ದೂರದಲ್ಲಿ ಪಟಾಕಿ ಸಿಡಿಸುವುದು ಉತ್ತಮ. ಪ್ರಾಣಿಗಳಿಗೆ ಅತೀಯಾದ ಶಬ್ದವನ್ನು ಗ್ರಹಿಸುವ ಶಕ್ತಿ ಇರುವುದಿಲ್ಲ. ಹೀಗಾಗಿ ಪ್ರಾಣಿಗಳಿಗೆ ಹಾನಿಯಾಗದಂತೆ ಪಟಾಕಿಗಳ ಸಿಡಿಸುವುದು ಉತ್ತಮ.



Click it and Unblock the Notifications











