Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ದೀಪಾವಳಿ ಹಬ್ಬದಂದು ಎಷ್ಟು ದೀಪ ಹಚ್ಚಬೇಕು? ಎಷ್ಟು ಹಚ್ಚಿದರೆ ಅಶುಭ?
ದೀಪಾವಳಿಯಂದು ಎಷ್ಟು ದೀಪ ಹಚ್ಚಬೇಕು? ವಾಸ್ತು ಪ್ರಕಾರ ಹೀಗೆ ಮಾಡಿದರೆ ಲಕ್ಷ್ಮಿ ಕೃಪೆ ಖಚಿತ! ದೀಪಾವಳಿ ಎಂದರೆ ದೀಪಗಳ ಹಬ್ಬ. ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಸಂಕೇತ. ಹಿಂದೂ ಸಂಸ್ಕೃತಿಯಲ್ಲಿ ಈ ಹಬ್ಬವನ್ನು ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಪ್ರತಿ ಮನೆಗಳಲ್ಲಿ ದೀಪ ಬೆಳಗಿಸಿ ಲಕ್ಷ್ಮೀ ದೇವಿಯನ್ನು ಪೂಜಿಸಲಾಗುತ್ತದೆ. ಸುಖ, ಶಾಂತಿ, ನೆಮ್ಮದಿಗಾಗಿ ಪ್ರಾರ್ಥಿಸುವ ಈ ಸಂದರ್ಭದಲ್ಲಿ, ಬಂಧು ಬಳಗವೆಲ್ಲಾ ಸೇರಿ ಆಚರಿಸುತ್ತಾರೆ. ದೇವಸ್ಥಾನ, ಮನೆ ಹಾಗೂ ಕಚೇರಿಗಳಲ್ಲಿ ಆಯುಧಗಳನ್ನು ಪೂಜಿಸುವುದು ವಾಡಿಕೆ. ಕೆಲವರು ಲಕ್ಷ್ಮೀ ದೇವಿ ವಿಗ್ರಹವನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ.
ದೀಪಾವಳಿಯಂದು (diwali 2025) ದೀಪ ಹಚ್ಚುವಾಗ ತಿಳಿಯದೆ ಮಾಡುವ ಕೆಲವು ತಪ್ಪುಗಳಿಂದ ವಾಸ್ತು ದೋಷ ಉಂಟಾಗಬಹುದು. ಹೀಗಾಗಿ, ಈ ಸಮಯದಲ್ಲಿ ವಾಸ್ತು (vastu) ನಿಯಮಗಳನ್ನು ಅನುಸರಿಸುವುದು ಅಥವಾ ಪಾಲಿಸುವುದು ಅನಿವಾರ್ಯ. ದೇವರ ಮನೆಯಲ್ಲಿ ಎಷ್ಟು ದೀಪಗಳನ್ನು (diwali lamp) ಬೆಳಗಿಸಬೇಕು ಮತ್ತು ಅವುಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದು ಪ್ರಮುಖ ಅಂಶ. ಈ ಲೇಖನದಲ್ಲಿ ನಿಮ್ಮ ಎಲ್ಲಾ ಗೊಂದಲ ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

ದೇವರ ಕೋಣೆಯಲ್ಲಿ ಎಷ್ಟು ದೀಪ?
ದೇವರ ಕೋಣೆಯಲ್ಲಿ ಎರಡು ದೀಪದ ಕಂಬಗಳ ಜೊತೆ ಒಂದು ಕಾಮಾಕ್ಷಿ ದೀಪ ಇಡುವುದು ಶ್ರೇಷ್ಠ. ವಾಸ್ತು ಪ್ರಕಾರ, ಎರಡು ಕಾಮಾಕ್ಷಿ ದೀಪಗಳನ್ನು ಬೆಳಗಿಸಬಾರದು. ಒಂದೇ ಕಾಮಾಕ್ಷಿ ದೀಪ ಅಥವಾ ಅಷ್ಟಲಕ್ಷ್ಮೀ ದೀಪವನ್ನು ಹಚ್ಚಬಹುದು. ಆದರೆ, ಎರಡನ್ನೂ ಒಟ್ಟಿಗೆ ದೀಪಾವಳಿ ಹಬ್ಬದಂದು ಬೆಳಗಿಸಬಾರದು.
ಒಟ್ಟಾರೆಯಾಗಿ, ಎರಡು ದೀಪದ ಕಂಬಗಳು ಹಾಗೂ ಒಂದು ಕಾಮಾಕ್ಷಿ ದೀಪ, ಅಷ್ಟಲಕ್ಷ್ಮೀ ದೀಪ ಅಥವಾ ಮಣ್ಣಿನ ದೀಪ ಹಚ್ಚುವುದು ಶುಭಕರ. ಈ ದೀಪಗಳನ್ನು ಪೂರ್ವ ದಿಕ್ಕಿಗೆ, ಸೂರ್ಯನ ಅಸ್ತ ಮತ್ತು ಉದಯ ಕಾಣಿಸುವಂತೆ ಬೆಳಗಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಸೂರ್ಯೋದಯದ ಸಮಯದಲ್ಲಿ ಈ ದೀಪಗಳು ಸಕಾರಾತ್ಮಕತೆಯನ್ನು ಆಕರ್ಷಿಸುತ್ತವೆ.
ಮನೆಯಲ್ಲಿ ಯಾವ ದಿಕ್ಕಿಗೆ ದೀಪ ಹಚ್ಚಬೇಕು?
ಸೂರ್ಯಾಸ್ತದ ಸಮಯದಲ್ಲಿ ಬೆಳಗಿದ ದೀಪಗಳು ಮನೆಯಿಂದ ನಕಾರಾತ್ಮಕ ಶಕ್ತಿಯು ಹೊರಹೋಗಲು ಬಿಡುವುದಿಲ್ಲ. ಇದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಆದ್ದರಿಂದ, ದೀಪಾವಳಿಯಂದು ದೇವರ ಮನೆಯಲ್ಲಿ ಪೂರ್ವ ದಿಕ್ಕಿಗೆ ದೀಪ ಹಚ್ಚುವುದು ಮಂಗಳಕರ.
ಮನೆ ಬಾಗಿಲಲ್ಲಿ ಎಷ್ಟು ದೀಪ?
ಮನೆ ಬಾಗಿಲಲ್ಲಿ ಎರಡು ಮೂಲೆಗಳಲ್ಲಿ ಮಾತ್ರ ದೀಪಗಳನ್ನು ಹಚ್ಚಬೇಕು. ನಿಂಬೆಹಣ್ಣಿನ ದೀಪವನ್ನೂ ಬೆಳಗಿಸಬಹುದು. ಆದರೆ, ಮಣ್ಣಿನ ದೀಪ, ನಿಂಬೆಹಣ್ಣಿನ ದೀಪದ ಜೊತೆಗೆ ದೀಪದ ಕಂಬಗಳನ್ನು ಒಟ್ಟಿಗೆ ಇಡುವುದು ಶುಭವಲ್ಲ. ಬಾಗಿಲಿನ ಮಧ್ಯಭಾಗದಲ್ಲಿ ದೀಪ ಹಚ್ಚುವುದು ಮಂಗಳಕರವಲ್ಲ ಎಂದು ವಾಸ್ತು ತಜ್ಞರು ಅಭಿಪ್ರಾಯಪಡುತ್ತಾರೆ.
ಮುಖ್ಯ ದ್ವಾರದಲ್ಲಿ ಈ ದಿಕ್ಕಿನಲ್ಲಿ ದೀಪ ಹಚ್ಚಿ
ಬಾಗಿಲಿನಿಂದ ಸ್ವಲ್ಪ ದೂರದಲ್ಲಿ ರಂಗೋಲಿ ಬಿಡಿಸಿ, ಅದರ ಮಧ್ಯೆ ದೀಪವನ್ನು ಹಚ್ಚಬಹುದು. ಬಾಗಿಲಿನ ಮಧ್ಯಭಾಗದಲ್ಲಿ ದೀಪ ಹಚ್ಚುವುದು ಲಕ್ಷ್ಮೀ ದೇವಿಯ ಆಹ್ವಾನವನ್ನು ತಡೆಯುತ್ತದೆ ಎನ್ನಲಾಗುತ್ತದೆ. ಮನೆಯ ಮುಖ್ಯ ದ್ವಾರದ ಉತ್ತರ ದಿಕ್ಕಿನಲ್ಲಿ ದೀಪ ಹಚ್ಚುವುದು ಅತ್ಯಂತ ಮಂಗಳಕರ. ಉತ್ತರ ದಿಕ್ಕು ಲಕ್ಷ್ಮೀ ದೇವಿ ಹಾಗೂ ಕುಬೇರ ದೇವರ ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ.
ಸಾಲಬಾಧೆ ಕಡಿಮೆ, ಹಣ ಕೈಯಲ್ಲಿ ನಿಲ್ಲುತ್ತೆ
ಈ ದಿಕ್ಕಿಗೆ ಮುಖ ಮಾಡಿ ದೀಪ ಹಚ್ಚುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗಿ, ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಇದು ದೀಪ ಬೆಳಗಿಸಲು ಅತ್ಯಂತ ಶುಭ ಸ್ಥಾನ. ಮನೆಯ ಮುಖ್ಯ ದ್ವಾರದ ಮತ್ತೊಂದು ಮೂಲೆ ದಕ್ಷಿಣ ದಿಕ್ಕಾಗಿರುತ್ತದೆ. ಈ ದಿಕ್ಕಿಗೆ ಮುಖ ಮಾಡಿ ದೀಪ ಹಚ್ಚಬಾರದು. ಬದಲಿಗೆ, ಪೂರ್ವ ದಿಕ್ಕಿಗೆ ಮುಖ ಮಾಡಿ ದೀಪ ಬೆಳಗಿಸುವುದು ಶುಭ. ಪಶ್ಚಿಮ ದಿಕ್ಕಿಗೆ ಮುಖ ಮಾಡಿ ದೀಪ ಹಚ್ಚುವುದರಿಂದ ಸಾಲಬಾಧೆ ಕಡಿಮೆಯಾಗಿ, ದುಡಿದ ಹಣ ಕೈಯಲ್ಲಿ ನಿಲ್ಲುತ್ತದೆ.
ಮೆಟ್ಟಿಲುಗಳ ಮೇಲೆ ಎಷ್ಟು ದೀಪ?
ಮೆಟ್ಟಿಲುಗಳು ಅಥವಾ ಇತರೆ ಯಾವುದೇ ಸ್ಥಳದಲ್ಲಿ ದೀಪಾವಳಿಯಂದು ದೀಪಗಳನ್ನು ಬೆಳಗಿಸುವಾಗ, ಅವು ಸಮ ಸಂಖ್ಯೆಯಲ್ಲಿರಬಾರದು. ಬದಲಾಗಿ, ಬೆಸ ಸಂಖ್ಯೆಯಲ್ಲಿ ಇರಬೇಕು. ಏಕೆಂದರೆ, ಬೆಸ ಸಂಖ್ಯೆಗಳು ಸಕಾರಾತ್ಮಕತೆಯನ್ನು ಆಕರ್ಷಿಸುತ್ತವೆ. ಮೆಟ್ಟಿಲುಗಳ ಮೇಲೆ ಅಥವಾ ಮನೆಯ ಹೊರಗೆ ದೀಪಗಳನ್ನು ಬೆಳಗಿಸುವಾಗ ಅಕ್ಕಿಯಿಂದ ಅಲಂಕರಿಸುವುದು ಅಮಂಗಳಕರ.
ವಾಸ್ತು ಪ್ರಕಾರ, ಈ ದಿನ ಮನೆಯ ಧಾನ್ಯಗಳನ್ನು ಹೊರಗೆ ಇಡುವುದು ಸೂಕ್ತವಲ್ಲ. ಇದರಿಂದ ಮನೆಯಲ್ಲಿ ಧಾನ್ಯಗಳ ಕೊರತೆ ಉಂಟಾಗಬಹುದು. ಹೀಗಾಗಿ, ಹೂವುಗಳಿಂದ ಅಥವಾ ಇತರ ಯಾವುದೇ ವಸ್ತುಗಳಿಂದ ದೀಪಗಳನ್ನು ಅಲಂಕರಿಸಬಹುದು.



Click it and Unblock the Notifications
