Horoscope Today 17 June: ಜೂನ್ 17 ಈ ದಿನ ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?

ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಜೂನ್ 17ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಆಷಾಢ
ಪಕ್ಷ: ಕೃಷ್ಣಪಕ್ಷ
ತಿಥಿ: 09:11ರವರೆಗೆ ಚತುರ್ದಶಿ, ನಂತರ ಅಮವಾಸ್ಯೆ
ನಕ್ಷತ್ರ: ಸಂಜೆ 04:25ರವರೆಗೆ ರೋಹಿಣಿ ನಂತರ ಮೃಗಶೀರ್ಷ
ರಾಹುಕಾಲ: ಬೆಳಗ್ಗೆ 09:07ರಿಂದ 10:44ರವರೆಗೆ

ಮೇಷ ರಾಶಿ

ಈ ದಿನ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ನಿಮ್ಮ ಬಜೆಟ್ ಅನ್ನು ನೋಡಿಕೊಂಡು ಖರ್ಚು ಮಾಡಿ. ಕಚೇರಿಯಲ್ಲಿ ನಿಮ್ಮ ಯಾವುದೇ ಕೆಲಸವನ್ನು ಅಪೂರ್ಣವಾಗಿ ಬಿಡಬೇಡಿ, ಇಲ್ಲದಿದ್ದರೆ ಬಾಸ್ ಕೋಪಗೊಳ್ಳಬಹುದು. ವ್ಯಾಪಾರಸ್ಥರಿಗೆ ಈ ದಿ ಮಿಶ್ರಫಲ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 16
ಅದೃಷ್ಟದ ಸಮಯ: ಸಂಜೆ 5:35 ರಿಂದ 8:45 ರವರೆಗೆ

Dina Bhavishya June 17 2023 Today Rashi Bhavishya, Daily Horoscope in Kannada

ವೃಷಭ ರಾಶಿ

ಈ ದಿನ ಆರೋಗ್ಯ ಸಂಬಂಧಿ ಸಮಸ್ಯೆ ಎದುರಾಗಬಹುದು. ಇದೆಲ್ಲವೂ ನಿಮ್ಮ ನಿರ್ಲಕ್ಷ್ಯದ ಫಲ. ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ಪ್ರಯತ್ನಿಸಿ. ನಿಮ್ಮ ಅಸಡ್ಡೆ ವರ್ತನೆ ನಿಮ್ಮ ಪ್ರೀತಿಪಾತ್ರರ ಭಾವನೆಗಳನ್ನು ನೋಯಿಸಬಹುದು, ಆದ್ದರಿಂದ ಈ ಕುರಿತು ಜಾಗ್ರತೆವಹಿಸಿ. ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನವು ಬಲವಾಗಿರಲಿದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 29
ಅದೃಷ್ಟದ ಸಮಯ: ಬೆಳಿಗ್ಗೆ 6:55 ರಿಂದ 8:20 ರವರೆಗೆ

ಮಿಥುನ ರಾಶಿ

ಇಂದು ನೀವು ಕೆಲಸಕ್ಕೆ ಸಂಬಂಧಿಸಿದಂತೆ ದೀರ್ಘ ಪ್ರಯಾಣವನ್ನು ಮಾಡುವುದಾದರೆ ಅದನ್ನು ಮುಂದೂಡಬಹುದು. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಆದರೂ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ತಂದೆಯ ಕಡೆಯಿಂದ ಲಾಭವಾಗಲಿದೆ. ಆರೋಗ್ಯದ ಬಗ್ಗೆ ಗಮನ ಹರಿಸಿ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 37
ಅದೃಷ್ಟದ ಸಮಯ: ಮಧ್ಯಾಹ್ನ 12:50 ರಿಂದ ಮಧ್ಯಾಹ್ನ 3 ರವರೆಗೆ

ಕರ್ಕ ರಾಶಿ

ಸಂಗಾತಿಯೊಂದಿಗಿನ ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ನೀವು ಪರಸ್ಪರ ಉತ್ತಮ ಸಮಯವನ್ನು ಕಳೆಯುತ್ತೀರಿ. ಕಚೇರಿಯಲ್ಲಿ, ಕೋಪ ಮತ್ತು ದುರಹಂಕಾರದ ವರ್ತನೆ ಒಳ್ಳೆಯದಲ್ಲ. ಅದರಲ್ಲೂ ಮೇಲಾಧಿಕಾರಿಗಳ ಜೊತೆಮಾತನಾಡುವಾಗ ನಿಮ್ಮ ಮಾತುಗಳನ್ನು ಎಚ್ಚರಿಕೆಯಿಂದ ಬಳಸಿ. ಹಣದ ಪರಿಸ್ಥಿತಿ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ಸಮಯ: ಸಂಜೆ 5 ರಿಂದ ರಾತ್ರಿ 8 ರವರೆಗೆ

ಸಿಂಹ ರಾಶಿ

ಇಂದು ಕೆಲಸದಲ್ಲಿ ಬಿಡುವಿಲ್ಲದ ದಿನವಾಗಿರುತ್ತದೆ. ನಿಮಗೆ ಕಚೇರಿಯಲ್ಲಿ ಹೆಚ್ಚುವರಿ ಜವಾಬ್ದಾರಿಗಳನ್ನು ನೀಡಬಹುದು. ವ್ಯಾಪಾರಸ್ಥರು ಲಾಭ ಗಳಿಸಲು ಹೆಚ್ಚು ಶ್ರಮಿಸಬೇಕಾಗುವುದು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅಷ್ಟು ಸರಿಯಿರಲ್ಲ. ಮನೆಯಲ್ಲಿ ಜಗಳಗಳು ಉಂಟಾಗಬಹುದು, ತಾಳ್ಮೆಯಿಂದ ವರ್ತಿಸಿ, ಕೋಪದಿಂದ ನೀವಾಡುವ ಪದಗಳ ಕಡೆ ಗಮನವಿರಲಿ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಬೆಳಿಗ್ಗೆ 4 ರಿಂದ 8:25 ರವರೆಗೆ

ಕನ್ಯಾ ರಾಶಿ

ಆರೋಗ್ಯ ಸಂಬಂಧಿಸಿದ ಸಮಸ್ಯೆಯಿದ್ದರೆ ಈ ದಿನ ಸುಧಾರಣೆ ಕಂಡು ಬರಲಿದೆ. ಬಹಳ ಸಮಯದ ನಂತರ ಈ ದಿನ ನೀವು ನಿಮ್ಮ ಕೆಲಸದ ಮೇಲೆ ಸರಿಯಾಗಿ ಗಮನ ಹರಿಸಲು ಸಾಧ್ಯವಾಗುವುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಮೂಲ ಸೌಕರ್ಯಗಳು ಹೆಚ್ಚಾಗಲಿದೆ. ಸಂಗಾತಿಯೊಂದಿಗಿನ ಸಂಬಂಧವು ಮತ್ತಷ್ಟು ಗಟ್ಟಿಯಾಗಲಿದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಸಂಜೆ 5:55 ರಿಂದ 7:30 ರವರೆಗೆ

ತುಲಾ ರಾಶಿ

ಇಂದು, ಯಾವುದೇ ಕಾರಣವಿಲ್ಲದೆ, ಮನಸ್ಸಿನಲ್ಲಿ ಒಂದು ತಳಮಳವಿರುತ್ತದೆ, ಈ ದಿನ ಬೇಡದ ಚಿಂತೆಗಳು ನಿಮ್ಮನ್ನು ಕಾಡಬಹುದು. ಆದರೆ ನೀವು ಅನಗತ್ಯ ಚಿಂತೆಗಳಿಂದ ದೂರವಿರುವುದು ಉತ್ತಮ. ಹಣದ ವಿಚಾರದಲ್ಲಿ ಜಾಗರೂಕರಾಗಿರಬೇಕು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಕೆಲಸದ ಬಗ್ಗೆ ಹೇಳುವುದಾದರೆ ಈ ದಿನವು ಸಾಮಾನ್ಯವಾಗಿರಲಿದೆ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಸಂಜೆ 6 ರಿಂದ ರಾತ್ರಿ 9 ರವರೆಗೆ

ವೃಶ್ಚಿಕ ರಾಶಿ

ನೀವು ಯಾರಿಗಾದರೂ ಸಾಲವನ್ನು ನೀಡಿದ್ದರೆ ಅವರು ಆ ಹಣವನ್ನು ಹಿಂತಿರುಗಿಸಬಹುದು. ಕೆಲಸ-ಸಂಬಂಧಿತ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿದೆ. ನೀವು ಉದ್ಯೋಗ ಅಥವಾ ವ್ಯವಹಾರದಲ್ಲಿ ಪ್ರಗತಿ ಸಾಧಿಸಬಹುದು. ನಿಮ್ಮ ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಸಮಯ ಕಳೆಯುತ್ತೀರಿ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 22
ಅದೃಷ್ಟದ ಸಮಯ: ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ

ಧನು ರಾಶಿ

ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಈ ದಿನ ನಿಮಗೆ ತುಂಬಾ ಲಾಭದಾಯಕವಾಗಿರಲಿದೆ. ಈ ದಿನ ನೀವು ಆರ್ಥಿಕ ಲಾಭವನ್ನು ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಇಂದು ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಕೌಟುಂಬಿಕ ಜೀವನ ಸುಖಮಯವಾಗಿರಲಿದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ

ಮಕರ ರಾಶಿ

ಇಂದು ನೀವು ತುಂಬಾ ಸಮತೋಲಿತವಾಗಿ ವರ್ತಿಸಲು ಸಲಹೆ ನೀಡಲಾಗಿದೆ. ಪ್ರತಿಕೂಲ ಸಂದರ್ಭಗಳಲ್ಲಿ ಸಹ ಧನಾತ್ಮಕವಾಗಿರಲು ಪ್ರಯತ್ನಿಸಿ. ಕೆಲಸಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೆ ಶೀಘ್ರದಲ್ಲೇ ನಿಮ್ಮ ಸಮಸ್ಯೆಯನ್ನು ಪರಿಹರಿಸಲಾಗುವುದು. ಹಣದ ವಿಷಯದಲ್ಲಿ ಈ ದಿನವು ಉತ್ತಮವಾಗಿರುತ್ತದೆ. ಆರೋಗ್ಯ ಈ ದಿನ ಸ್ವಲ್ಪ ದುರ್ಬಲವಾಗಿರಲಿದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಬೆಳಿಗ್ಗೆ 6:15 ರಿಂದ 8:50 ರವರೆಗೆ

ಕುಂಭ ರಾಶಿ

ನೀವು ವಿದ್ಯಾರ್ಥಿಯಾಗಿದ್ದರೆ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಪ್ರಯತ್ನದಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ, ನೀವು ತುಂಬಾ ಧನಾತ್ಮಕವಾಗಿರುತ್ತೀರಿ. ಆರ್ಥಿಕ ರಂಗದಲ್ಲಿ, ಈ ದಿನವು ತುಂಬಾ ಉತ್ತಮವಾಗಿರಲಿದೆ. ಹಣದ ವಿಷಯದಲ್ಲಿ ಈ ದಿನ ಉತ್ತಮವಾಗಿರಲಿದೆ. ಈ ದಿನ ವ್ಯಾಪಾರಸ್ಥರ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 16
ಅದೃಷ್ಟದ ಸಮಯ: ಸಂಜೆ 4:30 ರಿಂದ ರಾತ್ರಿ 8:30 ರವರೆಗೆ

ಮೀನ ರಾಶಿ

ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಮನೆಯ ಸದಸ್ಯರೊಂದಿಗೆ ನಿಮ್ಮ ಹೊಂದಾಣಿಕೆಯು ಇನ್ನೂ ಉತ್ತಮವಾಗಿರುತ್ತದೆ. ಕೆಲಸವನ್ನು ಬದಿಗಿಟ್ಟು, ಇಂದು ನೀವು ಕುಟುಂಬದ ಜೊತೆ ಅಥವಾ ಸ್ನೇಹಿತರ ಜೊತೆ ಸಮಯ ಕಳೆಯುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಅವಿವಾಹಿತರಾಗಿದ್ದರೆ ನಿಮ್ಮ ಮದುವೆಯ ಮಾತುಕತೆ ನಡೆಯಬಹುದು.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಸಮಯ: ಮಧ್ಯಾಹ್ನ 2:45 ರಿಂದ ಸಂಜೆ 5 ರವರೆಗೆ

English summary

Dina Bhavishya June 17 2023 Today Rashi Bhavishya, Daily Horoscope in Kannada

Dina Bhavishya- Get Today's Rashi Bhavishy 17 June 2023 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada.
Story first published: Saturday, June 17, 2023, 4:00 [IST]
X
Desktop Bottom Promotion