Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
16 ವರ್ಷದೊಳಗಿನವರಿಗೆ ಸೋಷಿಯಲ್ ಮೀಡಿಯಾ ಬಳಕೆ ನಿರ್ಬಂಧ..! ಈ ರೀತಿ ನಿಯಮವೇಕೆ?
ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್‌ಗೆ ಹೇಗೆ ದಾಸರಾಗಿದ್ದಾರೆ ಎನ್ನುವುದನ್ನು ನಾವು ನೋಡಿದ್ದೇವೆ. ಅವರು ಊಟ, ತಿಂಡಿ, ನಿದ್ದೆ ಬಿಟ್ಟು ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಅದರಲ್ಲಿಯೂ 16 ವರ್ಷಕ್ಕಿಂತ ಕೆಳಗಿರುವ ಮಕ್ಕಳು ಹೆಚ್ಚಾಗಿ ಈ ವ್ಯಸನಕ್ಕೆ ಒಳಗಾಗಿರುತ್ತಾರೆ. ಅವರು ಯಾವುದರಲ್ಲಿಯೂ ಆಸಕ್ತಿ ತೋರದೆ ಬರಿ ಮೊಬೈಲ್ ಬಳಸುವುದು ನಾವಿಂದು ನೋಡಬಹುದು.
ಈ ವಯಸ್ಸಿನಲ್ಲಿ ಮಕ್ಕಳು ಸೋಷಿಯಲ್ ಮೀಡಿಯಾ ಬಳಸುವುದು, ಗೇಮ್ ಆಡುವುದು ಹೀಗೆ ಹತ್ತಾರು ವಿಚಾರಗಳಿಗಾಗಿ ಮೊಬೈಲ್ ಬಳಸುತ್ತಾರೆ. ಮೊಬೈಲ್ ಬಳಕೆ ಒಂದು ಹಂತದವರೆಗೂ ಮಾತ್ರವೇ ವರವಾಗಿರಲಿದೆ. ಒಂದು ಹಂತ ತಲುಪಿ ಅವರು ದಾಸರಾಗಿ ಬಿಟ್ಟರೆ ಹತ್ತು ಹಲವು ಸಮಸ್ಯೆಗಳ ಎದುರಿಸುತ್ತಾರೆ. ಓದಿನಲ್ಲಿ ಹಿಂದೆ ಬೀಳುವುದು, ಕಣ್ಣಿನ ಸಮಸ್ಯೆ, ವರ್ತನೆಯಲ್ಲೂ ಬದಲಾವಣೆ ಸೇರಿದಂತೆ ದೈಹಿಕ ಅನಾರೋಗ್ಯಗಳಿಗೂ ಇದು ದಾರಿಯಾಗುತ್ತಿದೆ.

ಈ ಅಂಶಗಳ ಪರಿಗಣಿಸಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು ಮೊಬೈಲ್ ಬಳಸದಂತೆ ಎಷ್ಟೇ ಎಚ್ಚರಿಕೆ ನೀಡಿದರೂ ಕೂಡ ಅವರಿಂದ ಮೊಬೈಲ್ ಬಳಕೆ ತಡೆಯುವುದು ಕಷ್ಟವಾಗುತ್ತಿದೆ. ಸದ್ಯ 16 ವರ್ಷಕ್ಕಿಂತ ಕೆಳಗಿರುವ ಮಕ್ಕಳು ಇನ್ಮುಂದೆ ಸೋಷಿಯಲ್ ಮೀಡಿಯಾ ಬಳಸುವಂತಿಲ್ಲ ಎಂದು ಸರ್ಕಾರ ಹೊಸ ನಿಯಮ ಜಾರಿ ಮಾಡಿದೆ.
ಹೌದು ಆಸ್ಟ್ರೇಲಿಯಾದಲ್ಲಿ ಈ ರೀತಿಯ ಹೊಸ ನಿಯಮ ಜಾರಿ ಮಾಡಲಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲಿನ 16 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳು ಯಾವುದೇ ಸೋಷಿಯಲ್ ಮೀಡಿಯಾ ಬಳಸುವಂತಿಲ್ಲ ಎನ್ನುವಂತಹ ಕಾನೂನು ಜಾರಿ ಮಾಡಲಾಗ್ತಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್‌ನಂತಹ ಪ್ಲಾಟ್‌ಫಾರ್ಮ್‌ಗಳು ಸೇರಿ ಹಲವು ಸೈಟ್‌ಗಳ ಬಳಕೆಯಿಂದ ಅವರನ್ನು ನಿರ್ಬಂಧಿಸಲಾಗಿದೆ.
ಒಂದು ವೇಳೆ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸೋಷಿಯಲ್ ಮೀಡಿಯಾ ಬಳಸಿದರೆ ಅಂತವರ ವಿರುದ್ಧ ದಂಡ ವಿಧಿಸುವ ಕಾನೂನು ಜಾರಿ ಮಾಡಿದೆ. ಮುಂದಿನ ವರ್ಷದ ಕೊನೆಯಲ್ಲಿ ಕಾನೂನಾಗಿ ಸಹಿ ಮಾಡಬಹುದಾದ ವಿಶ್ವದ ಮೊದಲ ಕಾನೂನುಗಳನ್ನು ಜಾರಿಗೆ ತರಲು ಆಸ್ಟ್ರೇಲಿಯಾ ಸರ್ಕಾರ ಯೋಜಿಸುತ್ತಿದೆ ಎಂದು ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಮಾಹಿತಿ ಹಂಚಿಕೊಂಡಿದ್ದಾರೆ.
ಅತಿಯಾದ ಸಾಮಾಜಿಕ ಮಾಧ್ಯಮಗಳ ಬಳಕೆಯು ಮಕ್ಕಳಲ್ಲಿ ಹಲವು ಸಮಸ್ಯೆಗೆ ದಾರಿಯಾಗುತ್ತಿದೆ. ಅದರಲ್ಲೂ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಹಳಷ್ಟು ಹಾನಿ ಮಾಡುತ್ತಿದೆ. ಅದರಲ್ಲೂ ಚೈಲ್ಡ್ ಪೋರ್ನೋಗ್ರಫಿ ಅಂತಹ ಪಿಡುಗು ಹೆಚ್ಚಾಗುತ್ತಿದೆ. ಹಾಗೆ ದ್ವೇಷ ಹರಡಲು ಕೂಡ ಕಾರಣವಾಗುತ್ತಿದೆ ಎಂಬ ಕಾರಣ ನೀಡಲಾಗಿದೆ.
ಮಕ್ಕಳಲ್ಲಿ ಸೋಷಿಯಲ್ ಮೀಡಿಯಾ ಬಳಕೆ ನಿರ್ಬಂಧಕ್ಕೆ ಸಂಬಂಧಿಸಿದಂತೆ ರೂಪುರೇಷೆ ತಯಾರಾಗುತ್ತಿದೆ. ಅದರಲ್ಲಿ ಸರ್ಕಾರದಿಂದ ಯಾವುದೇ ಹೇರಿಕೆಯಿಲ್ಲದೆ ಪೋಷಕರ ಸಂಪೂರ್ಣ ಬೆಂಬಲದೊಂದಿಗೆ ಹಾಗೂ ಸಂಸತ್‌ನ ಸದಸ್ಯರ ಅನುಮತಿಯೊಂದಿಗೆ ಕಾನೂನು ಮಾಡಲಾಗುತ್ತಿದೆ ಎಂದಿದ್ದಾರೆ.
ಆಸ್ಟ್ರೇಲಿಯಾ ಮಾತ್ರವಲ್ಲ ಈ ರೀತಿ ಅಪ್ರಾಪ್ತರಿಗೆ ಸೋಷಿಯಲ್ ಮೀಡಿಯಾ ಬಳಕೆ ನಿರ್ಬಂಧಿಸಲು ಹಲವು ರಾಷ್ಟ್ರಗಳು ಕಾನೂನು ಜಾರಿಯ ಚಿಂತನೆ ಮಾಡುತ್ತಿವೆ. ಫ್ರಾನ್ಸ್ ಕೂಡ 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ ಕುರಿತು ಚಿಂತಿಸಿದೆ. ಆದ್ರೆ ಬಹುತೇಕ ಎಲ್ಲಾ ಸಾಮಾಜಿಕ ಮಾಧ್ಯಮಗಳು 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಮ್ಮ ಮಾಧ್ಯಮ ಬಳಕೆಯಿಂದ ನಿಷೇಧಿಸುತ್ತವೆ. ಎಲ್ಲರು 13+ ರೇಟಿಂಗ್ ಹೊಂದಿರುತ್ತವೆ. ಆದ್ರೆ ಪೋಷಕರು ಇದನ್ನು ಗಂಭೀರವಾಗಿ ಪರಿಗಣಿಸಿರುವುದಿಲ್ಲ.



Click it and Unblock the Notifications