Latest Updates
-
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
1941ರ ಕ್ಯಾಲೆಂಡರ್ 2025ರ ಕ್ಯಾಲೆಂಡರ್ ಎರಡು ಒಂದೇ..! ಈ ಅಚ್ಚರಿ ವಿಚಾರ ನಿಮಗೆ ಗೊತ್ತಾ?
ವರ್ಷಗಳು ಉರುಳಿದಂತೆ ಕ್ಯಾಲೆಂಡರ್‌ಗಳ ಬದಲಾಯಿಸುತ್ತೇವೆ. ಹಾಗೆ ಕ್ಯಾಲೆಂಡರ್‌ಗಳು ಬದಲಾದಂತೆ ನಮ್ಮ ವಯಸ್ಸು ಕೂಡ ಹೆಚ್ಚಾಗೋದು ಕಾಮನ್. ಅದ್ರಲ್ಲೂ ಒಂದು ವರ್ಷ ಹಳೆಯದಾದಾಗ ಹಿಂದಿನ ವರ್ಷ ಏನೆಲ್ಲಾ ಘಟನೆಗಳು ನಡೆದವು ಎಂಬುದನ್ನು ಮೆಲುಕು ಹಾಕುತ್ತೇವೆ. ಹಾಗೆ ಪ್ರತಿ ವರ್ಷವೂ ಹಿಂದಿನ ವರ್ಷ ಈ ಸಮಯದಲ್ಲಿ ಏನೆಲ್ಲಾ ಘಟನೆಗಳು ನಡೆದಿದೆ ಅನ್ನೋದನ್ನು ಕೂಡ ಮೆಲುಕು ಹಾಕುತ್ತೇವೆ.
ಇತ್ತ ಪ್ರತಿ ವರ್ಷವೂ ಯಾವ ದಿನದಂದು ಯಾವ ವಿಶೇಷ ದಿನಗಳು ಬಂದಿದ್ದಾವೆ ಅನ್ನೋದು ಕೂಡ ಗಮನ ಸೆಳೆಯಲಿದೆ. ಹಾಗೆ ಕೆಲವೊಂದು ದಿನಾಂಕದಂದು ಬರುವ ಹಬ್ಬಗಳು ಪ್ರತಿಯೊಂದು ವರ್ಷವೂ ಒಂದೇ ರೀತಿ ಇರಲಿದೆ. ಕೇವಲ ವಾರಗಳು ಮಾತ್ರವೇ ಬದಲಾಗುತ್ತದೆ. ಆದ್ರೆ ನಿಮಗೆ ಗೊತ್ತಾ 1941ನೇ ವರ್ಷದ ಕ್ಯಾಲೆಂಡರ್ ಈಗಿನ 2025ರ ಕ್ಯಾಲೆಂಡರ್ ಒಂದೇ ಆಗಿದೆ.

ಹೌದು ಈ ರೀತಿಯ ವಿಚಿತ್ರ ಸನ್ನಿವೇಶವೊಂದಕ್ಕೆ ನಾವು ಸಾಕ್ಷಿಯಾಗಿದ್ದೇವೆ. 1941ನೇ ವರ್ಷದ ಕ್ಯಾಲೆಂಡರ್ ಹಾಗೂ 2025ರ ಕ್ಯಾಲೆಂಡರ್ ಎರಡೂ ಒಂದೇ ಆಗಿದೆ. ಒಂದೇ ರೀತಿಯ ದಿನಗಳು ಆ ವರ್ಷವೂ ಕೂಡ ಇರುವುದು ನೋಡಬಹುದು. 2025ರ ಜನವರಿ 1 ಬುಧವಾರದಂದು ಆರಂಭಗೊಂಡಿರುವಂತೆ 1941ನೇ ವರ್ಷದಂದು ಕೂಡ ವರ್ಷದ ಮೊದಲ ದಿನ ಬುಧವಾರದಂದೇ ಆರಂಭಗೊಂಡಿದೆ.
ಈ ಕ್ಯಾಲೆಂಡರ್ ಕಾಕತಾಳೀಯತೆಯು ಊಹಾಪೋಹಗಳಿಗೆ ಮತ್ತು ಕೆಲವರಲ್ಲಿ ಅಚ್ಚರಿ ಹಾಗೂ ಆತಂಕಕ್ಕೂ ಕಾರಣವಾಗಿದೆ. ಏಕೆಂದರೆ 1941ರ ವರ್ಷವೂ ಬಹುತೇಕ ದುರ್ಘಟನೆಗಳಿಂದಲೇ ತುಂಬಿತ್ತು. ಹಾಗೆ 2025ರ ಆರಂಭದ 6 ತಿಂಗಳು ಕೂಡ ದುರಂತಗಳು ನಡೆದಿರುವುದು ಹಲವು ರೀತಿಯ ಆತಂಕಕ್ಕೆ ಕಾರಣವಾಗಿದೆ.
ಅದ್ರಲ್ಲೂ 1941ರಲ್ಲಿ ಪರ್ಲ್ ಹಾರ್ಬರ್ ಮೇಲಿನ ದಾಳಿಯ ಬಳಿಕ ಅಮೆರಿಕ ಎರಡನೇ ಮಹಾಯುದ್ಧಕ್ಕೆ ನಾಂದಿಯಾಗಿದ್ದು ಕೂಡ ಅದೇ ವರ್ಷದಲ್ಲಿ ಹೀಗಾಗಿ 2025ರಲ್ಲಿನ ಯುದ್ಧ ಆತಂಕ ಕುರಿತು ನಿಮಗೆಲ್ಲಾ ಈಗಾಗಲೇ ತಿಳಿದಿದೆ. ರಷ್ಯಾ ಉಕ್ರೇನ್ ಒಂದು ಕಡೆಯಾದರೆ ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧಾತಂಕ ಈಗ ನಿತ್ಯ ಹೆಚ್ಚಾಗುತ್ತಿದೆ.
2025 ರ ಕ್ಯಾಲೆಂಡರ್ 1941 ರ ಕ್ಯಾಲೆಂಡರ್ ಅನ್ನು ಹೋಲುತ್ತದೆ. ದಿನಗಳು ಮತ್ತು ದಿನಾಂಕಗಳು ನಿಖರವಾಗಿ ಒಂದೇ ರೀತಿಯಲ್ಲಿವೆ. ಆದ್ರೆ ಇದರಲ್ಲಿ ಅಚ್ಚರಿ ಪಡುವ ವಿಚಾರಕ್ಕಿಂತಲೂ ನಾವು ಅನುಸರಿಸುವ ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿನ ವ್ಯವಸ್ಥೆ ಕುರಿತಾದ ವಿಚಾರಗಳು ಇದಕ್ಕೆ ಕಾರಣವಾಗಿವೆ. ಏಕೆಂದರೆ ಗ್ರೆಗೋರಿಯನ್ ಕ್ಯಾಲೆಂಡರ್‌ನ ಸ್ವರೂಪವು ಕೆಲವು ದಶಕಗಳಲ್ಲಿ ಮತ್ತೆ ಸಿಂಕ್ ಆಗುವ ದಿನಾಂಕಗಳ ನೋಡಬಹುದು. ಇದು ಅಧಿಕ ವರ್ಷದಿಂದ ಹಿಡಿದು ಹಲವು ರೀತಿಯ ವಿದ್ಯಮಾನಗಳಿಂದಾಗಿ ಪುನರಾವರ್ತೀತ ದಿನಾಂಕಗಳು ನೋಡಲು ಸಿಗುತ್ತವೆ. ಹಾಗೆ 1941 ಹಾಗೂ 2025 ಮಾತ್ರವೇ ಒಂದೇ ರೀತಿಯಾಗಿ ಹೊಂದಣಿಕೆಯಾಗಿರುವುದಲ್ಲ ಬದಲಿಗೆ ಹಲವು ವರ್ಷಗಳು ಕೂಡ ಇದೇ ರೀತಿ ಹೊಂದಾಣಿಕೆಯ ದಿನಾಂಕ ಹೊಂದಿರುವುದು ನೋಡಬಹುದು.
ಇನ್ನು ಈ ಎರಡು ಕ್ಯಾಲೆಂಡರ್‌ನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಆ ಕುರಿತಾದ ಹಲವು ರೀತಿಯ ಸಿದ್ದಾಂತಗಳ ಹೇಳಲಾಗುತ್ತಿದೆ. ಈ ಎರಡು ವರ್ಷಗಳು ಒಂದೇ ರೀತಿ ಇವೆ. ಹೀಗಾಗಿ ಇದೊಂದು ಲೂಪ್. ಪುನಃ ನಾವು ಹಳೆಯ ವರ್ಷಗಳಲ್ಲಿ ಚಲಿಸುತ್ತಿದ್ದೇವೆ ಎಂಬ ಎಲ್ಲಾ ರೀತಿಯ ಊಹೆಗಳು ಈಗ ಹುಟ್ಟಿಕೊಂಡಿವೆ.
ಹಾಗೆ ಈ ಹಿಂದೆ 2012ಕ್ಕೆ ಮಾಯನ್ ಕ್ಯಾಲೆಂಡರ್ ಕೊನೆಯಾಗುತ್ತದೆ, ಇದು ಪ್ರಪಂಚದ ಅಂತ್ಯಕ್ಕೆ ಕಾರಣವಾಗಲಿದೆ ಎಂಬ ಸುದ್ದಿ ಹರಡಿದ್ದು ಕೂಡ ನಾವು ನೆನಪು ಮಾಡಿಕೊಳ್ಳಬಹುದು. ಆದರೆ ಆ ದಿನ ಯಾವುದೇ ಘಟನೆಗಳು ಕೂಡ ನಡೆದಿಲ್ಲ. ಅದೇ ರೀತಿ ಇಲ್ಲಿ 1941 ಹಾಗೂ 2025ನೇ ವರ್ಷ ಹೊಂದಾಣಿಕೆಯ ದಿನಗಳ ಹೊಂದಿದ್ದರೂ ಆ ವರ್ಷ ಸಂಭವಿಸಿದ ದುರಂತಗಳು ಈಗಲೂ ನಡೆಯಲಿವೆ ಎಂಬ ವಿಚಾರವನ್ನು ಒಪ್ಪಿಕೊಳ್ಳಲು ಪುರಾವೆಗಳಿಲ್ಲ.



Click it and Unblock the Notifications