Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಟೀಗೆ ಈರುಳ್ಳಿ ಹಾಕಿ ಕುಡಿದಿದ್ದೀರಾ..? ಇದಕ್ಕಿಂತ ವಿಚಿತ್ರ ಕಾಂಬಿನೇಷನ್ ಮತ್ತೊಂದಿಲ್ಲ...!
ಇತ್ತೀಚಿಗೆ ಆನ್‌ಲೈನ್‌ನಲ್ಲಿ ಚಿತ್ರ ವಿಚಿತ್ರ ಘಟನೆಗಳೇ ತುಂಬಿಕೊಂಡಿರುತ್ತವೆ. ಅದರಲ್ಲೂ ನಾವು ನೀವು ಸೇವಿಸುವ ಫುಡ್ ಸಂಬಂಧ ಎಲ್ಲಾ ಕಡೆ ವಿಚಿತ್ರ ಫುಡ್‌ಗಳ ನೋಡಬಹುದು. ನೀವು ಟೀ-ಕಾಫಿ ಪ್ರಿಯರಾಗಿದ್ದರೆ ಈಗಂತು ಟೀಯಲ್ಲಿ ನೂರಾರು ವಿಧ ಬಂದು ಬಿದ್ದಿದೆ.
ಟೀಯಲ್ಲೇ ವೆರೈಟಿ ಟೀಗಳ ನಾವು ನೋಡಬಹುದು. ಅದರಲ್ಲೂ ಟೀ ನೀಡಲೆಂದೇ ಒಂದು ದೊಡ್ಡ ಮಳಿಗೆಗಳು ಸಹ ಇಂದು ಬಂದಿವೆ. ಆದ್ರೆ ಇಲ್ಲೊಂದು ಕಡೆ ನೀಡುತ್ತಿರುವ ಟೀ ನೋಡಿ ಗ್ರಾಹಕರೇ ಶಾಕ್ ಆಗಿದ್ದಾರೆ. ಅದು ಅಂತಿತ ಟೀ ಅಲ್ಲ, ಅದು ಈರುಳ್ಳಿ ಟೀ.

ಹೌದು ಇದು ಮಸಾಲ ಟೀ, ಜಿಂಜರ್ ಟೀ, ಏಲಕ್ಕಿ ಟೀ, ಗ್ರೀನ್ ಟೀ ಅಲ್ಲ ಬದಲಿಗೆ ಈರುಳ್ಳಿ ಟೀ. ನೀವು ಈರುಳ್ಳಿ ಟೀ ಎಂದಾದರು ರುಚಿ ನೋಡಿದ್ದೀರಾ? ಬಹುತೇಕ ಯಾರು ಕೂಡ ಇದರ ರುಚಿ ನೋಡಿರುವುದಿಲ್ಲ. ನೋಡುವುದಿರಲಿ ಈ ರೀತಿ ಟೀ ಇದೇ ಎಂಬುದನ್ನೇ ಕೇಳಿರುವುದಿಲ್ಲ.
ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿರುವ ಇತ್ತೀಚಿನ ವಿಡಿಯೋವು ಸಾಂಪ್ರದಾಯಿಕ ಟೀಗೆ ಸಡ್ಡು ಹೊಡೆಯುತ್ತಿದೆ. ಆದರೆ ಇದನ್ನು ಕಂಡು ನಿಜಕ್ಕೂ ಜನ ಅಚ್ಚರಿಗೆ ಒಳಗಾಗಿದ್ದಾರೆ. ಟೀ ನಿಜಕ್ಕೂ ಜನರ ಜೀವನಾಡಿ, ಬಹುಪಾಲು ಮಂದಿಯ ದಿನ ಆರಂಭವಾಗುವುದೇ ಟೀಯೊಂದಿಗೆ. ಆದ್ರೆ ಟೀ ಪ್ರೇಮಿಗಳು ಸಹ ಈ ರೀತಿಯ ವಿಚಿತ್ರ ಟೀ ಕಂಡು ಹುಬ್ಬೇರಿಸಿದ್ದಾರೆ. ಇಂತಹ ಟೀ ನಾವುಂತು ಕುಡಿದಿಲ್ಲ ಎಂದು ಶಾಕ್ ಆಗಿದ್ದಾರೆ.
ಟೀ ರುಚಿ ಮತ್ತಷ್ಟು ಹೆಚ್ಚಿಸಲು ಈಗ ಟೀ ಎಲೆಗಳ ಸಂಸ್ಕರಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಬೃಹತ್ ಕಂಪನಿಗಳು ಟೀ ಪುಡಿ ಉದ್ಯಮದಲ್ಲಿ ಕೋಟಿ ಕೋಟಿ ವ್ಯವಹಾರ ಮಾಡುತ್ತಿವೆ. ಆದರೆ ಈ ಟೀಗೆ ಈರುಳ್ಳಿ ಹಾಕಿರುವುದು ಏಕೆ ಎಂಬುದೇ ಬಹುದೊಡ್ಡ ಪ್ರಶ್ನೆಯಾಗಿದೆ. ಟೀ ರುಚಿ ಬರಲು ಅದಕ್ಕೆ ಮಸಾಲೆಗಳ ಹಾಕುತ್ತಾರೆ. ಆದರೆ ಎಂದಿಗೂ ಈರುಳ್ಳಿ ಹಾಕುವುದಿಲ್ಲ. ಕೆಲವರಿಗೆ ಈ ಟೀ ಕುಡಿಯದೆಯೇ ಅದರ ರುಚಿ ಹೇಗಿರಲಿದೆ ಎಂಬುದನ್ನು ಹೇಳಿಕೊಂಡಿದ್ದಾರೆ.
ಈರುಳ್ಳಿಯನ್ನು ಹಾಗೆಯೇ ಸೇವಿಸಲು ಹಲವರು ಇಷ್ಟಪಡುವುದಿಲ್ಲ ಇನ್ನು ಅದನ್ನು ಟೀ ಯಲ್ಲಿ ಹಾಕಿಕೊಂಡು ಸೇವಿಸಲು ಯಾರು ತಾನೆ ಇಷ್ಟಪಡುತ್ತಾರೆ. ಕ್ಯಾಲ್ವಿನ್ ಎಂಬಾತ ಈ ವಿಡಿಯೋವನ್ನು ತನ್ನ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಬಳಿಕ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜೊತೆಗೆ ಬರೋಬ್ಬರಿ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
ವೀಡಿಯೊದಲ್ಲಿ, ಮೇಜಿನ ಮೇಲೆ ಒಂದು ಕಪ್ ಕಾಫಿಯನ್ನು ನೀವು ನೋಡುತ್ತೀರಿ. ಆದರೆ ನಂತರ ಆ ಕಪ್‌ಗೆ ಕತ್ತರಿಸಿದ ಈರುಳ್ಳಿ ತುಂಡುಗಳನ್ನು ಹಾಕಲಾಗುತ್ತದೆ. ಈ ವೀಡಿಯೊವನ್ನು ಸಿಂಗಾಪುರ ಮೂಲದ ಕಂಟೆಂಟ್ ಕ್ರಿಯೇಟರ್ ಕ್ಯಾಲ್ವಿನ್ ಲೀ ಹಂಚಿಕೊಂಡಿದ್ದಾರೆ. ಅಚ್ಚರಿ ಎಂದರೆ ಈ ಟೀ ಈಗ ಚೀನಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಅಂತೆ. ಅಲ್ಲಿ ಈ ಟೀ ಕುಎಇಯಲು ಜನ ಕ್ಯೂ ನಿಲ್ಲುವ ಸ್ಥಿತಿ ಬಂದಿದೆ ಎನ್ನಲಾಗಿದೆ.
ಈರುಳ್ಳಿಯಲ್ಲಿ ಅತ್ಯಧಿಕ ರೋಗ ನಿರೋಧಕ ಶಕ್ತಿ ವೃದ್ಧಿಸುವ ಅಂಶ ಇರುವ ಕಾರಣ ಈ ಈರುಳ್ಳಿ ಟೀಗೆ ಚೀನಾದಲ್ಲಿ ಬೇಡಿಕೆ ಗಗನಕ್ಕೇರಿದೆಯಂತೆ. ಈಗ ಯುರೋಪಿಯನ್ ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲೂ ಈ ಈರುಳ್ಳಿ ಟೀ ಫೇಮಸ್ ಆಗುತ್ತಿದೆಯಂತೆ.
ಆದ್ರೆ ಈ ವಿಡಿಯೋ ನೋಡಿದ ಭಾರತದ ಮಂದಿ ಮಾತ್ರ ಅಚ್ಚರಿ ಜೊತೆ ಶಾಕ್‌ಗೂ ಒಳಗಾಗಿದ್ದಾರೆ. ಈ ರೀತಿ ಟೀಗೆ ಕೆಲವರ ಪ್ರತಿಕ್ರಿಯೆ ಇಲ್ಲಿ ನೀಡಲಾಗಿದೆ.
"ನಾನು ಈರುಳ್ಳಿಯನ್ನು ಪ್ರೀತಿಸುತ್ತೇನೆ, ಆದರೆ ಕಾಫಿಯೊಂದಿಗೆ ಅಲ್ಲ" ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇದು ಕಾಫಿಗೆ ಮಾಡಿರುವ ಧರ್ಮ ನಿಂದನೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಈ ಟೀ ಕುಡಿದ ಬಳಿಕ ನೀವು ಆರೋಗ್ಯವಾಗಿದ್ದೀರಿ ಎಂಬುದನ್ನು ಖಚಿತ ಪಡಿಸಿ ಎಂದು ಮತ್ತೊಬ್ಬರು ಕೇಳಿದ್ದಾರೆ.



Click it and Unblock the Notifications
