Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನ.23ಕ್ಕೆ ದೇವೋತ್ಥಾನ ಏಕಾದಶಿ: ಈ ಏಕಾದಶಿ ವ್ರತ ತುಂಬಾನೇ ವಿಶೇಷವಾದದ್ದು ಏಕೆ?
ಕಾರ್ತಿಕ ಮಾಸ ನಡೆಯುತ್ತಿದೆ, ಕಾರ್ತಿಕ ಮಾಸದಲ್ಲಿ ಎರಡು ಏಕಾದಶಿ ಬರುತ್ತದೆ, ಮೊದಲ ಏಕಾದಶಿಯನ್ನು ನವೆಂಬರ್ 23ರಂದು ಆಚರಿಸಲಾಗುವುದು. ಈ ಏಕಾದಶಿಯನ್ನು ದೇವ ಉತ್ಥಾನ ಏಕಾದಶಿ ಅಥವಾ ಪ್ರಬೋದಿನಿ ಏಕಾದಶಿಯೆಂದು ಆಚರಿಸಲಾಗುವುದು.
ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ, ಈ ಏಕಾದಶಿಯನ್ನು ದೇವೋತ್ಥಾನ ಏಕಾದಶಿ ಎಂದು ಕರೆಯಲಾಗುವುದು, ಅಂದರೆ ಈ ದಿನ ವಿಷ್ಣು ನಿದ್ದೆಯಿಂದ ಎದ್ದೇಳುತ್ತಾನೆ ಎಂದು ಹೇಳಲಾಗುವುದು. ಈ ಏಕಾದಶಿ ಆಚರಣೆ ಮಾಡುವುದರಿಂದ ದೊರೆಯುವ ಪ್ರಯೋಜನಗಳೇನು? ಪೂಜೆಗೆ ಶುಭ ಸಮಯ ಯಾವಾಗ ಎಂದು ನೋಡೋಣ ಬನ್ನಿ:

ದೇವೋತ್ಥಾನ ಏಕಾದಶಿ
ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಪ್ರಬೋಧಿನಿ ಅಥವಾ ದೇವೋತ್ಥಾನ ಏಕಾದಶಿಯನ್ನು ಆಚರಿಸಲಾಗುವುದು. ಶ್ರೀ ವಿಷ್ಣುವು ಚಾತುರ್ಮಾಸದಲ್ಲಿ ದೀರ್ಘ ನಿದ್ದೆಯಲ್ಲಿರುತ್ತಾನೆ, ನಾಲ್ಕು ತಿಂಗಳು ನಿದ್ದೆ ಮಾಡುವ ಶ್ರೀ ವಿಷ್ಣುವು ಕಾರ್ತಿಕ ಏಕಾದಶಿಯಂದು ನಿದ್ದೆಯಿಂದ ಎಚ್ಚರಗೊಳ್ಳುತ್ತಾನೆ, ಆದ್ದರಿಂದ ಪ್ರಭೋಧಿನಿ ಏಕಾದಶಯನ್ನು ದೇವೋತ್ಥಾನ ಏಕಾದಶಿಯೆಂದು ಕರೆಯಲಾಗುವುದು.
ದೇವೋತ್ಥಾನ ಏಕಾದಶಿ ಪೂಜಾ ಸಮಯ
ಏಕಾದಶಿ ತಿಥಿ ಪ್ರಾರಂಭ: ನವೆಂಬರ್ 22 ರಾತ್ರಿ 11:03ಕ್ಕೆ ಪ್ರಾರಂಭ
ಏಕಾದಶಿ ತಿಥಿ ಮುಕ್ತಾಯ: ನವೆಂಬರ್ 23 ರಾತ್ರಿ 0:01ರವರೆಗೆ
ಪಾರಣ ಸಮಯ
ನವೆಂಬರ್ 24 ಬೆಳಗ್ಗೆ 06:32ರಿಂದ 08:46ರವರೆಗೆ
ಪಾರಣ ಸಮಯದಲ್ಲಿ ಏಕಾದಶಿ ವ್ರತದ ಉಪವಾಸವನ್ನು ಮುರಿಯಿರಿ.
ದೇವೋತ್ಥಾನ ಏಕಾದಶಿ ಆಚರಣೆ ಮಾಡುವುದರಿಂದ ದೊರೆಯುವ ಪ್ರಯೋಜನಗಳು
* ದೇವೋತ್ಥಾನ ಏಕಾದಶಿಯಂದು ಶ್ರೀ ವಿಷ್ಣುವನ್ನು ಆರಾಧನೆ ಮಾಡುವುದರಿಂದ ನೀವು ತುಂಬಾನೇ ಶುಭ ಫಲ ಪಡೆಯುವಿರಿ.
* ಎಲ್ಲಾ ಉಪವಾಸಕ್ಕಿಂತ ಶ್ರೇಷ್ಠವಾದದ್ದು ದೇವೋತ್ಥಾನಿಯಂದು ಮಾಡುವ ಉಪವಾಸ ಎಂದು ಹೇಳಲಾಗುವುದು.
* ಈ ದಿನ ತುಳಸಿ ವಿವಾಹ ಕೂಡ ಮಾಡಲಾಗುವುದು
* ಈ ದಿನ ಏಕಾದಶಿಯನ್ನು ಆಚರಣೆ ಮಾಡುವುದರಿಂದ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಎಂದು ಹೇಳಲಾಗುವುದು.
* ಈ ಏಕಾದಶಿ ಆಚರಣೆ ಮಾಡುವುದರಿಂದ ಕಷ್ಟಗಳು ದೂರಾಗುವುದು
ದೇವೋತ್ಥಾನ ಏಕಾದಶಿಯ ಪೌರಾಣಿಕ ಕತೆ
ಒಬ್ಬ ರಾಜನಿದ್ದ, ಅವನು ಏಕಾದಶಿ ವ್ರತವನ್ನು ತಪ್ಪದೆ ಮಾಡುತ್ತಿದ್ದ, ಅಲ್ಲದೆ ತನ್ನ ರಾಜ್ಯದಲ್ಲಿರುವ ಪ್ರಜೆಗಳೆಲ್ಲರೂ ಪಾಲಿಸಬೇಕೆಂದು ಆಜ್ಞೆ ನೀಡಿದ್ದ. ಈ ದಿನ ಪ್ರಾಣಿಗಳೂ ಕೂಡ ಉಪವಾಸದಿಂದ ಇರಬೇಕಿತ್ತು. ಹೀಗಿರುವಾಗ ಪಕ್ಕದ ರಾಜ್ಯದ ವ್ಯಕ್ತಿಯೊಬ್ಬ ಆ ರಾಜ್ಯಕ್ಕೆ ಬಂದು ಕೆಲಸ ಕೇಳುತ್ತಾನೆ, ರಾಜ ಅವನಿಗೂ ಏಕಾದಶಿಯ ವ್ರತದ ಬಗ್ಗೆ ತಿಳಸಿಪಾಲಿಸಲು ಹೇಳುತ್ತಾನೆ. ಅದರಂತೆ ಆತ ಭಕ್ತಿಯಿಂದ ಉಪವಾಸ ಮಾಡಿ, ಪಾರಣ ಸಮಯದಲ್ಲಿ ಊಟ ಮಾಡುವಾಗ ದೇವರನ್ನೂ ಊಟಕ್ಕೆ ಆಹ್ವಾನ ಮಾಡುತ್ತಾನೆ, ಅದರಂತೆ ದೇವರು ಬಂದು ಆಹಾರ ಸೇವಿಸುತ್ತಾನೆ. ಇದರಿಂದ ತುಂಬಾನೇ ಖುಷಿಯಾಗಿ ಇದನ್ನು ರಾಜನ ಬಳಿ ಹೇಳುತ್ತಾನೆ. ರಾಜ ಇದನ್ನು ನಂಬುವುದಿಲ್ಲ, ಆತನನ್ನು ಪರೀಕ್ಷೆ ಮಾಡಲು ರಾಜ ಮುಂದಾಗುತ್ತಾನೆ, ಆದರೆ ಆ ದೇವರು ಊಟ ಸೇವಿಸಲು ಬರುವುದಿಲ್ಲ, ಆಗ ಭಕ್ತನು ದೇವರು ನಾನು ಕರೆದರೂ ಬರಲಿಲ್ಲ ಎಂದು ಬೇಸರವಾಗಿ ನದಿಗೆ ಹಾರಲು ಮುಂದಾಗುತ್ತಾನೆ, ಆಗ ದೇವರು ಪ್ರತ್ಯಕ್ಷವಾಗಿ ಆ ಬಡ ಭಕ್ತನ ಜೊತೆ ಊಟ ಸೇವಿಸುತ್ತಾನೆ, ಆಗ ರಾಜನಿಗೆ ತನ್ನ ತಪ್ಪಿನ ಅರಿವು ಉಂಟಾಗುತ್ತೆ. ನಂತರ ಶುದ್ಧ ಮನಸ್ಸಿನಿಂದ ವಿಷ್ಣು ಪೂಜೆ ಮಾಡುತ್ತಾನೆ.
ಆದ್ದರಿಂದ ಈ ದಿನ ಉಪವಾಸ ವ್ರತ ಮಾಡುವುದನ್ನು ಶುದ್ಧ ಮನಸ್ಸಿನಿಂದ ಮಾಡಬೇಕು.
ವ್ರತ ನಿಯಮಗಳು
* ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ
* ದೇವರ ಕೋಣೆಯನ್ನು ಪೂಜೆ ಮಾಡಿ ದೇವರಿಗೆ ಅಲಂಕರಿಸಿ
* ನಂತರ ಸಂಕಲ್ಪ ತೆಗೆದುಕೊಳ್ಳಿ
* ಇಡೀ ದಿನ ಶ್ರೀವಿಷ್ಣುವಿನ ಜಪ ಮಾಡಿ
* ವಿಷ್ಣು ಸಹಸ್ರನಾಮ ಪಠಿಸಿ
* ತುಳಸಿ ಪೂಜೆ ಮಾಡಿ.
ತುಳಸಿ ವಿವಾಹ ನ ಪೂಜೆಗೆ ಶುಭ ಮುಹೂರ್ತ
ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ತಿಥಿ ನವೆಂಬರ್ 22 ರಂದು ರಾತ್ರಿ 11.03 ರಿಂದ ಪ್ರಾರಂಭವಾಗುವುದು
ಏಕಾದಶಿ ತಿಥಿ ಮುಕ್ತಾಯ: ನವೆಂಬರ್ 23 ರಂದು ರಾತ್ರಿ 09.01 ಕ್ಕೆ ಕೊನೆಗೊಳ್ಳುತ್ತದೆ.
ಏಕಾದಶಿ ದಿನಾಂಕದಂದು ರಾತ್ರಿ ಪೂಜೆಯ ಸಮಯವು ಸಂಜೆ 05.25 ರಿಂದ 08.46 ರವರೆಗೆ ಇರುತ್ತದೆ.
ತುಳಸಿ ವಿವಾಹದ ಪ್ರಯೋಜನ
* ತುಳಸಿ ವಿವಾಹವನ್ನು ಮಾಡುವುದರಿಂದ ವ್ಯಕ್ತಿ ಮೋಕ್ಷ ಪಡೆಯುತ್ತಾನೆ
* ಕನ್ಯಾದಾನದ ಫಲ ದೊರೆಯುವುದು
* ಮಕ್ಕಳ ಅಪೇಕ್ಷಿತ ದಂಪತಿಗೆ ಮಕ್ಕಳ ಭಾಗ್ಯ ದೊರೆಯುವುದು
ತುಳಸಿ ಮತ್ತು ಶಾಲಿಗ್ರಾಮವನ್ನು ಸರಿಯಾಗಿ ಪೂಜಿಸುವುದರಿಂದ ಇಷ್ಟಾರ್ಥಗಳು ಈಡೇರುವುದು.
ತುಳಸಿ ವಿವಾಹದ ಪೂಜಾ ವಿಧಾನ
* ಎರಡು ಮರದ ಹಲಗೆ ಹಾಕಿ ತುಳಸಿ ಗಿಡ ಹಾಗೂ ಶಾಲಿಗ್ರಾಮವನ್ನು ಪ್ರತಿಷ್ಠಾಪಿಸಿ
* ಎರಡೂ ಆಸನಗಳನ್ನು ಅಲಂಕರಿಸಿ
ಈಗ ಒಂದು ಕಲಶದಲ್ಲಿ ನೀರು ತುಂಬಿಸಿ ಅದರಲ್ಲಿ ಐದು , ಏಳು ಮಾವಿನ ಎಲೆಗಳನ್ನು ಹಾಕಿ ಪೂಜೆ ಮಾಡುವ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕು.
* ನಂತರ ಶಾಲಿಗ್ರಾಮ್, ತುಳಸಿಯ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ ಕುಂಕುಮ ಹಚ್ಚಿ. *
ತುಳಸಿಯ ಮೇಲೆ ಕೆಂಪು ಬಣ್ಣದ ಚುನರಿಯನ್ನು (ಕೆಂಪು ಬಟ್ಟೆ) ಅರ್ಪಿಸಿ,
* ತುಳಸಿಗೆ ಅಲಂಕಾರಿಕ ವಸ್ತುಗಳನ್ನು ಅರ್ಪಿಸಿ
* ತುಳಸಿ, ಶಾಲಿಗ್ರಾಮಕ್ಕೆ ಆರತಿಯನ್ನು ಮಾಡಿ ನಿಮ್ಮ ಇಷ್ಟಾರ್ಥಗಳು ನೆರವೇರಲು ಪ್ರಾರ್ಥಿಸಿ



Click it and Unblock the Notifications
