ಬದಲಾಯ್ತು ಡಿಡಿ ಲೋಗೋ: ಕೇಸರಿ ಬಣ್ಣಕ್ಕೆ ತಿರುಗಿರುವುದಕ್ಕೆ ಕೆಲವರ ಮೆಚ್ಚುಗೆ, ಕೆಲವರ ಟೀಕೆ

ಈಗೀನ ಮಕ್ಕಳಿಗೆ ದೂರದರ್ಶನ ಎಂದರೆ ಬಹುಶಃ ಒಂದು ಚಾನಲ್ ಅಷ್ಟೇ, ಆದರೆ 80ರ, 90ರ ಮಕ್ಕಳಿಗೆ ದೂರದರ್ಶನ ಎಂದರೆ ಕೌತುಕದ ಪೆಟ್ಟಿಗೆ. ಕೆಲ ಮನೆಗಳಲ್ಲಿ ಟಿವಿಯಿದ್ದ ಕಾಲವದು. ಪಕ್ಕದ ಮನೆಗೆ ಹೋಗಿ ಟಿವಿ ನೋಡುತ್ತಿದ್ದ ನೆನಪು ಕೆಲವರಲ್ಲಿ ಈಗಲೂ ಇರಬಹುದು, ಈಗಾ ಅನೇಕ ಚಾನಲ್‌ಗಳು ಬಂದಿದೆ, ಇಷ್ಟೆಲ್ಲಾ ಚಾನಲ್‌ಗ: ನಡುವೆಯೂ ದೂರದರ್ಶನದ ಸುದ್ದಿಯನ್ನು ಜನ ನಂಬುತ್ತಾರೆ.

ದೂರದರ್ಶನದಲ್ಲಿ ಬರುವ ಸುದ್ದಿ ಯಾರನ್ನೂ ಮೆಚ್ಚಿಸಲು ಬರುವುದಿಲ್ಲ, ಅಲ್ಲದೆ ಅದರ ಸುದ್ದಿ ಓದುವ ಶೈಲಿಗೆ ಯಾರಿಗೂ ಮಾನಸಿಕ ಒತ್ತಡ ತರುವುದಿಲ್ಲ, ಕ್ರೌರ್ಯವನ್ನು ವರ್ಣ ರಂಜಿತವಾಗಿ ಹೇಳುವುದಿಲ್ಲ. ಹಾಗಾಗಿ ದೂರದರ್ಶನ ಈಗಲೂ ಇತರ ಎಲ್ಲಾ ಚಾನಲ್‌ಗಿಂತ ಭಿನ್ನವಾಗಿ ಕಾಣುತ್ತದೆ.

DD New Channel

ರಾಮ ನವಮಿಯ ದಿನದಂದು ದೂರದರ್ಶನ ಹೊಸ ಲೋಗೋ ಅನಾವರಣ ಮಾಡುವ ಮೂಲಕ ಗಮನ ಸೆಳೆದಿದೆ. ಹೊಸ ಲೋಗದ ಬಣ್ಣ ಭಾರಿ ಸಂಚಲನ ಸೃಷ್ಟಿಸಿದೆ. ಹೊಸ ಲೋಗೋದ ಬಗ್ಗೆ ಟ್ವಿಟರ್‌ನಲ್ಲಿ ವೀಡಿಯೋವನ್ನೂ ಪೋಸ್ಟ್‌ ಮಾಡಿ ನಮ್ಮ ಮೌಲ್ಯ ಹಾಗೆಯೇ ಇರಲಿದೆ.

ನಾವು ಈಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದೇವೆ, ಈ ಹಿಂದಿಗಿಂತ ಹೊಸ ಶೈಲಿಯ ಡಿಡಿ ಸುದ್ದಿಯನ್ನು ಅನುಭವಿಸಿ, ಎಲ್ಲಾ ಸುದ್ದಿಯನ್ನು ನೋಡಿ, ವೇಗವಾಗಿ ಸತ್ಯಸಂಧವಾಗಿ, ಸೂಕ್ಷ್ಮ ವಿಚಾರಗಳ ಬಗ್ಗೆ ಸತ್ಯವನ್ನು ತಿಳಿಸಲಿದೆ, ಏಕೆಂದರೆ ಇದು DD ನ್ಯೂಸ್ ಎಂದಿದೆ.

ಲೋಗದ ಬಣ್ಣ ಕೇಸರಿ ಬಣ್ಣ ಕೇಸರಿ ಬಣ್ಣದಲ್ಲಿ ಇರುವುದರಿಂದ ಈ ಬಣ್ಣಕ್ಕೆ ರಾಜಕೀಯ ಬಣ್ಣ ನೀಡಲಾಗುತ್ತಿದೆ. ಕೇಸರಿ ಎಂದರೆ ಹಿಂದೂ ಎಂಬಂತೆ ಮಾತ್ರ ಆಗಿದೆ, ನಮ್ಮ ರಾಷ್ಟ್ರಧ್ವಜದ ಮೂರು ಬಣ್ಣಗಳಲ್ಲಿ ಕೇಸರಿಯೂ ಒಂದು ಬಣ್ಣ. ಈಗ ಡಿಡಿ ಕೆಂಪು ಬಣ್ಣದಿಂದ ಕೇಸರಿಗೆ ಬದಲಾಗಿದೆ.

ಕೇಸರಿ ತ್ಯಾಗ, ಧೈರ್ಯದ ಸಂಕೇತ, ಆತ್ಮವಿಶ್ವಾಸದ ಸಂಕೇತ, ಆದರೆ ಈಗ ಈ ಬಣ್ಣಕ್ಕೆ ಧರ್ಮದ ಬಣ್ಣ ನೀಡುವ ಪ್ರಯತ್ನಗಳು ನಡೆಯುತ್ತಿವೆ, ಹಾಗಾಗಿ ದೂರದರ್ಶನದ ಲೋಗೋ ತೀವ್ರ ಚರ್ಚೆ ಹುಟ್ಟು ಹಾಕಿದೆ. ಕೆಲವರು ಈ ಬಣ್ಣಕ್ಕೆ ರಾಜಕೀಯ ರೂಪ ನೀಡಲು ಪ್ರಯತ್ನಿಸುತ್ತಿದೆ. ದೂರದರ್ಶನ ಯಾವ ಪಕ್ಷದ ಪರವಾಗಿಯೂ ಇಲ್ಲ ಎಂಬುವುದನ್ನು ಅದರ ನ್ಯೂಸ್‌ ಶೈಲಿಯೇ ಹೇಳುತ್ತದೆ, ಆದರೂ ಟೀಕೆಗೆ ಗುರಿಯಾಗಿದೆ.

ದೂರ ದರ್ಶನದ ಲೋಗೋ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ ಆದರೆ ಕೇವಲ ಬಣ್ಣದಲ್ಲಿ ಬದಲಾವಣೆ ಮಾಡಲಾಗಿದೆ. ಮೊದಲು ಕೆಂಪು ಬಣ್ಣದಲ್ಲಿದ್ದ ಡಿಡಿ ನ್ಯೂಸ್ ಇದೀಗ ಕೇಸರಿ ಬಣ್ಣದಲ್ಲಿ ಕಾಣಿಸಲಿದೆ. ವಾಹಿನಿಯಲ್ಲಿನ ಲೋಗೋ, ಸಾಮಾಜಿಕ ಮಾಧ್ಯಮ, ವೆಬ್‌ಸೈಟ್ ಸೇರಿದಂತೆ ಎಲ್ಲೆಡೆ ಲೋಗೋ ಬದಲಾಗಿದೆ.

ಈ ಲೋಗೋವನ್ನು ಹಲವರು ಸ್ವಾಗತಿಸಿದ್ದಾರೆ, ಇನ್ನೂ ಕೆಲವರು ಟೀಕೆ ಮಾಡುತ್ತಿದ್ದಾರೆ. ಡಿಡಿ ನ್ಯೂಸ್ ವಿಶ್ವಾಸಾರ್ಹತೆ ಗಳಿಸಿಕೊಂಡ ಸುದ್ದಿ ವಾಹನಿ. ಡಿಡಿ ನ್ಯೂಸ್‌ ಸುದ್ದಿಗೆ ತುಂಬಾನೇ ಮೌಲ್ಯವಿದೆ, ಅದರೆ ಇತರ ಚಾನಲ್‌ಗಳಂತೆ ವೇಗವಾಗಿ ಸುದ್ದಿಯನ್ನು ನೀಡುವುದಿಲ್ಲ, ಹಾಗಾಗಿ ಡಿಡಿ ವಾಹಿನಿ ಇತರ ಚಾನಲ್‌ಗಳಿಗೆ ಸ್ಪರ್ಧೆ ನೀಡುವಲ್ಲಿ ಹಿಂದಿದೆ. ಈಗ ವೇಗವಾಗಿ ನೀಡುವುದಾಗಿ ಹೇಳಿದೆ, ಅದೇ ಮೌಲ್ಯದ ಜಿತೆಗೆ ಸುದ್ದಿಯನ್ನು ವೇಗಾಗಿ ನೀಡಿದರೆ ಇತರ ಖಾಸಗಿ ನ್ಯೂಸ್‌ ಚಾನಲ್‌ಗಳಿಗೆ ಕಠಿಣ ಸ್ಪರ್ಧಿಯಾಗಬಹುದು.

ಲೋಗೋ ಬದಲಾಗಿರುವುದು ಆ ಚಾನಲ್‌ ಏನೋ ಹೊಸ ಪ್ರಯತ್ನ ಮಾಡುತ್ತಿದೆ ಎಂಬುವುದನ್ನು ಸೂಚಿಸುತ್ತಿದೆ. ಡಿಡಿ ನೀಡುವ ಸುದ್ದಿಗಳು ಇತರ ಖಾಸಗಿ ವಾಹಿನಿಗಳಿಂಗ ಹೇಗೆ ಭಿನ್ನವಾಗಿದೆ ಎಂದು ನೋಡಬೇಕಾಗಿದೆ... ಈ ಹೊಸ ಲೋಗೋ ಡಿಡಿ ವಾಹಿನಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿ ಎಂದು ಜನರು ಶುಭ ಹಾರೈಸಿದ್ದಾರೆ.

English summary

DD New Channel Replaced Red Color Logo With Saffron Color

DD New Channel : DD Logo Turned Saffron , Experience all New DD news, read on..
X
Desktop Bottom Promotion