Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಹಣ ವಸೂಲಿಗೆ ಅಪಹರಣದ ನಾಟಕ...! ತಂದೆ ಬಳಿಯೇ ₹30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮಗಳು.!
ಜನ ಈಗ ಹಣ ಮಾಡಲು ಯಾವೆಲ್ಲಾ ಕೆಲಸಕ್ಕೆ ಕೈ ಹಾಕ್ತಾರೆ ಅಂದ್ರೆ ಅದು ಬೇರೆಯವರ ಹೆದರಿಸಿ ಬೆದರಿಸಿ ಅಷ್ಟೇ ಅಲ್ಲ ಕೊಲೆಯನ್ನು ಮಾಡುತ್ತಾರೆ. ಇದಲ್ಲದೆ ಹಣಕ್ಕಾಗಿ ಯಾರನ್ನಾದರು ಅಪಹರಣ ಮಾಡಿ ಅವರ ಕುಟುಂಬಸ್ಥರಿಂದ ಹಣಕ್ಕೆ ಬೇಡಿಕೆ ಇಡುತ್ತಾರೆ. ಇಂತಹ ಸಾವಿರಾರು ಪ್ರಕರಣವನ್ನು ನಾವು ಕೇಳಿರುತ್ತೇವೆ.
ಆದರೆ ಇಲ್ಲೊಂದು ಪ್ರಕರಣ ನಿಮಗೆ ಅಚ್ಚರಿ ಹುಟ್ಟಿಸುತ್ತೆ. ಇಲ್ಲಿ ಮಗಳೇ ತಾನು ಅಪಹರಣ ಆದಂತೆ ನಾಟಕ ಆಡಿ ತಂದೆ ಬಳಿ ಹಣ ವಸೂಲಿಗೆ ನಿಂತ ಕಥೆ ಇದು. ಹೌದು ನಿಮಗೆ ಅಚ್ಚರಿಯಾಗಬಹುದು. ಆಕೆ ತನ್ನ ಕಿಡ್ನಾಪ್ ಕುರಿತು ಕಥೆ ಕಟ್ಟಿ ತಂದೆಯ ಬಳಿಯೇ ಬರೋಬ್ಬರಿ 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಳು.

ಮಧ್ಯ ಪ್ರದೇಶದಲ್ಲಿ ಘಟನೆ ನಡೆದಿದ್ದು, ಓದುಗರಲ್ಲಿ ಅಚ್ಚರಿಗೆ ಕಾರಣವಾಗಿದೆ. ಹಾಗಾದ್ರೆ ಆಕೆ ಈ ರೀತಿ ಅಪಹರಣದ ನಾಟಕ ಮಾಡಿದ್ದೇಕೆ? ಕೊನೆ ಸಿಕ್ಕಿಬಿದ್ದಿದ್ದು ಹೇಗೆ ಎಂಬುದನ್ನು ನೋಡಿ.
ಇಂದೋರ್‌ನ 21 ವರ್ಷದ ಯುವತಿ ತಾನು ವಿದೇಶಿ ಪ್ರವಾಸ ಕೈಗೊಳ್ಳಬೇಕೆಂಬದು ಆಕೆಯ ಆಸೆಯಾಗಿತ್ತಂತೆ. ಇದನ್ನು ತಂದೆ ಬಳಿ ಹಲವಾರು ಬಾರಿ ಪ್ರಸ್ತಾಒ ಮಾಡಿದ್ದಾಳೆ. ಆದ್ರೆ ತಂದೆ ಅಷ್ಟೊಂದು ಹಣವಿಲ್ಲ ಎಂದು ಆಕೆಗೆ ಹೇಳುತ್ತಿದ್ದರಂತೆ. ಆದ್ರೆ ಆಕೆಯ ವಿದೇಶ ಪ್ರವಾಸದ ಆಸೆ ಮಾತ್ರ ಹಾಗೆಯೇ ಉಳಿದುಬಿಟ್ಟಿತ್ತು.
ಸ್ನೇಹಿತರೊಂದಿಗೆ ಸೇರಿ ಮಾಡಿದ್ಲು ಕಿಡ್ನಾಪ್ ಪ್ಲಾನ್
ಆಕೆ ರಾಜಸ್ಥಾನದ ಕೋಟಾದಲ್ಲಿ ಕೋಚಿಂಗ್ ಕ್ಲಾಸ್‌ಗೆ ಹಾಜರಾಗುವುದಾಗಿ ಮನೆಯಲ್ಲಿ ಹೇಳಿ ಹೊರಟಿದ್ದಾಳೆ. ಕೋಟಾದಲ್ಲಿ ಹಾಸ್ಟೆಲ್ ರೂಮ್ ಮಾಡಿ ಉಳಿದುಕೊಂಡು ಮೂರು ದಿನದ ಕೋಚಿಂಗ್ ಕ್ಲಾಸ್‌ಗೆ ಹಾಜರಾಗಿದ್ದಾಳೆ. ಆದರೆ ಇಲ್ಲಿಯೇ ತನ್ನ ಅಪಹರಣದ ಪ್ಲಾನ್ ಮಾಡಿದ್ದಾಳೆ. ತನ್ನನ್ನು ಹಗ್ಗದಿಂದ ಕಟ್ಟಿಹಾಕಿದಂತೆ ಫೋಟೋ ತೆಗೆದು ತನ್ನದೇ ಮೊಬೈಲ್‌ನಿಂದ ತಂದೆಗೆ ಕಳುಹಿಸಿ 30 ಲಕ್ಷ ನೀಡಿದರೆ ಮಗಳನ್ನು ಬಿಡುವುದಾಗಿ ಸಂದೇಶ ಕಳುಹಿಸಿದ್ದಾಳೆ. ಇದಕ್ಕೆ ಆಕೆಯ ಇಬ್ಬರು ಸ್ನೇಹಿತರು ಸಾಥ್ ನೀಡಿದ್ದಾರೆ. ಆಕೆಯನ್ನು ಯಾವುದೋ ಮೂಲೆಯಲ್ಲಿ ಇಟ್ಟು ಬಾಯಿ, ಕೈ, ಕಾಲು ಕಟ್ಟಿ ಹಾಕಿದಂತೆ ತೋರಿಸಲಾಗಿದೆ. ಈ ಫೋಟೋವನ್ನು ತಂದೆಗೆ ಕಳುಹಿಸಿ ಹಣ ಕೇಳಲಾಗಿದೆ. ಈ ಫೋಟೋ ಬಳಿಕ ಎಲ್ಲಾ ಸಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿದೆ.
ಪೊಲೀಸರಿಗೆ ದೂರು ನೀಡಿದ ತಂದೆ
ಈ ಸಂದೇಶ ಬಂದೋಡನೆ ಭಯದಿಂದ ಪೊಲೀಸ್ ಠಾನೆಣೆ ಓಡಿದ ತಂದೆ ಅಪಹರಣದ ಕೇಸ್ ದಾಖಲಿಸಿದ್ದಾರೆ. ಆದರೆ ಆಕೆ ಎಲ್ಲಿದ್ದಾಳೆ. ಯಾವ ಸ್ಥಳದಿಂದ ಈ ಸಂದೇಶ ಬಂದಿದೆ ಎಂಬುದನ್ನು ಪತ್ತೆ ಮಾಡಲು ಕೋಟಾ ಪೊಲೀಸರ ಸಹಾಯ ಕೇಳಲಾಗಿದೆ. ಬಳಿಕ ಆಕೆಯ ಕೊನೆಯ ನೆಟ್‌ವರ್ಕಿಂಗ್ ಯಾವ ಟವರ್‌ನಿಂದ ಬಂದಿದೆ ಎಂದು ಪತ್ತೆ ಮಾಡಿ ಸ್ಥಳ ಹುಡುಕಾಟಕ್ಕೆ ಮುಂದಾಗಲಾಗಿದೆ. ಇಷ್ಟು ಹೊತ್ತಿಗಾಗಲೇ ಈ ಪ್ರಕರಣ ಕೇಂದ್ರ ಸಚಿವರ ಬಳಿಯೂ ಹೋಗಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಧ್ಯಪ್ರವೇಶಿಸಿ, ಯುವತಿಯನ್ನು ಸುರಕ್ಷಿತವಾಗಿ ವಾಪಾಸು ಕರೆತರಲಾಗುವುದು ಎಂದು ತಿಳಿಸಿದ್ದರು. ಜೊತೆಗೆ ಈ ಸುದ್ದಿ ವ್ಯಾಪಕವಾಗಿ ಹರಡತೊಡಗಿತ್ತು. ಆದರೆ ಯುವತಿ ಎಲ್ಲಿಯೂ ಹೋಗದೆ ತನ್ನ ಸ್ನೇಹಿತರೊಂದಿಗೆ ಇಂದೋರ್‌ಗೆ ಹೋಗಿ ಅವರ ಜೊತೆ ನೆಲೆಸಿದ್ದಳು.
ಆಕೆಯ ಮೊಬೈಲ್ ನೆಟ್‌ವರ್ಕ್ ಟ್ರೇಸ್ ಮಾಡಿದ ಪೊಲೀಸರು ಕೊನೆಗೂ ಆಕೆಯನ್ನು ಪತ್ತೆ ಮಾಡಿದರು. ಆಕೆಯ ಸ್ನೇಹಿತನೊಬ್ಬ ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದ ಆತನ ಜೊತೆ ವಿದೇಶಕ್ಕೆ ತೆರಳಲೆಂದು ಈ ಪ್ಲಾನ್ ಮಾಡಲಾಗಿತ್ತು ಎಂದು ಯುವತಿ ಕಾವ್ಯ ಹೇಳಿಕೊಂಡಿದ್ದಾಳೆ.



Click it and Unblock the Notifications
