Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕವಲ್ಲ ಚರಂಡಿಗೆ ಬೀಳುವ ತನಕ..! ವಿಡಿಯೋ ವೈರಲ್
ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು ಕೇಳಿರ್ತೀರ. ಹೆಚ್ಚಿನ ಜಗಳಗಳು ಹೀಗೆಯೇ ಅಂತ್ಯವಾಗಿರುತ್ತೆ. ಇದಲ್ಲದೆ ಪ್ರೀತಿ ಇರುವ ಕಡೆ ಜಗಳವೂ ಇರುತ್ತೆ ಅನ್ನೋದು ಹಿರಿಯರ ಮಾತು. ಆದ್ರೆ ಇಲ್ಲೊಂದು ಜೋಡಿ ಜಗಳವನ್ನ ಮನೆಯಿಂದ ರಸ್ತೆಗೆ ತಂದಿದೆ. ರಸ್ತೆಗೆ ತಂದರೂ ಅಡ್ಡಿಯಿಲ್ಲ ರಸ್ತೆಯಿಂದ ಚರಂಡಿಗೆ ಇಳಿದಿದೆ.
ಹೌದು ಗಂಡ-ಹೆಂಡತಿ ಜಗಳದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇಬ್ಬರು ಮನೆಯಿಂದ ಹೊರಗಡೆ ಜಗಳವಾಡಿದ್ದಾರೆ. ವಿಡಿಯೋ ನೋಡಿದರೆ ಬೈಕ್‌ನಲ್ಲಿ ತೆರಳುವಾಗ ಬೈಕ್ ಹಾಳಾಗಿಯೋ ಇಲ್ಲವೆ ಬೈಕ್ ಹಾಳಾಗಿಯೋ ಇಬ್ಬರ ನಡುವೆ ಜಗಳ ಆರಂಭವಾಗಿದೆ ಎಂದು ತೋರುತ್ತಿದೆ. ಏಕೆಂದರೆ ಗಂಡ ಬೈಕ್ ಅನ್ನು ತಳ್ಳಿಕೊಂಡು ಹೋಗುತ್ತಿದ್ದಾನೆ.

ಪತ್ನಿ ಬೈಕ್ ತಳ್ಳುತ್ತಿದ್ದ ಗಂಡನ ಬೆನ್ನಿಗೆ ಗುದ್ದುತ್ತಾಳೆ, ಇಲ್ಲಿಂದ ಜಗಳ ಆರಂಭವಾಗುತ್ತದೆ. ಇಬ್ಬರು ಕಿತ್ತಾಡಿಕೊಂಡು ಪಕ್ಕದ ಚರಂಡಿಗೆ ಬೀಳುತ್ತಾರೆ. ಅಚ್ಚರಿ ಅಂದ್ರೆ ಚರಂಡಿಗೆ ಬಿದ್ದರೂ ಜಗಳ ನಿಲ್ಲಿಸದೆ ಅಲ್ಲಿಯೂ ಕಿತ್ತಾಡಿಕೊಂಡಿದ್ದಾರೆ. ಜರಂಡಿ ನೀರಿನಲ್ಲಿ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಿಲಿಯನ್ ವೀಕ್ಷಣೆ ಕಂಡಿದೆ. ಆದರೆ ಕೆಲವರು ಇದನ್ನು ಪೂರ್ವ ನಿಯೋಜಿತ ವಿಡಿಯೋ ಎಂದು ಊಹಿಸಿದ್ದಾರೆ. ಏಕೆಂದರೆ ಇಬ್ಬರ ಜಗಳವನ್ನು ಸರಿಯಾದ ಸಮಯಕ್ಕೆ ವಿಡಿಯೋ ಮಾಡಿದ್ದು ಯಾರು? ಇಬ್ಬರು ಏಕೆ ಜಗಳ ಆರಂಭಿಸಿದರು ಎಂಬುದು ಇಲ್ಲಿ ದೊಡ್ಡ ಪ್ರಶ್ನೆಯಾಗಿದೆ.
ಹೀಗಾಗಿ ಪತಿ-ಪತ್ನಿ ಸೇರಿ ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಲು ಈ ಜಗಳ ಮಾಡುವ ರೀತಿ ವಿಡಿಯೋ ಸೃಷ್ಟಿಸಿದ್ದಾರೆ ಅಂತಲೂ ವಾದ ಮಾಡಲಾಗಿದೆ. ಆದರೆ ಇಬ್ಬರ ಜಗಳ ಮಾತ್ರ ನೆಟ್ಟಿಗರ ಚಿಂತೆಗೂ ಕಾರಣವಾಗಿದೆ. ಗಂಡ ಹೆಂಡತಿಯ ಈ ಜಗಳ ನೋಡಿದ ನೆಟ್ಟಿಗರು ಹಲವು ರೀತಿಯಲ್ಲಿ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.
ಈ ವಿಡಿಯೋವನ್ನು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಅಹ್ರಂತ್ ಶೆಲ್ಬೈ ಎಂಬುವರು ಮೊದಲು ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ಬಳಿಕ ಸಾವಿರಾರು ಬಾರಿ ಇದು ಶೇರ್ ಆಗಿದೆ. ಜೊತೆಗೆ ಎಲ್ಲಾ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.
ಒಬ್ಬರು 'ಇಂತಹ ಆದರ್ಶ ದಂಪತಿ ಎಲ್ಲಿಯೂ ಸಿಗುವುದಿಲ್ಲ' ಎಂದಿದ್ದರೆ ಮತ್ತೊಬ್ಬರು 'ಆ ಗಂಡನ ಪರಿಸ್ಥಿತಿ ಯಾರಿಗೂ ಬಾರದಿರಲಿ' ಎಂದು ಪ್ರಾರ್ಥಿಸಿದ್ದಾರೆ. ಜೊತೆಗೆ 'ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬುದೆಲ್ಲ ಸುಳ್ಳು ಇಲ್ಲಿ ನೋಡಿ ಗಂಡ ಹೆಂಡತಿ ಜಗಳ ಚರಂಡಿಗೆ ಬೀಳುವ ತನಕ' ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಈ ವಿಡಿಯೋದ ಕೆಳಗಿನ ಕೆಲವು ಕಮೆಂಟ್‌ಗಳನ್ನು ಇಲ್ಲಿ ನೀಡಲಾಗಿದೆ. ಅದರಲ್ಲಿ ಒಬ್ಬ ಈ ವಿಡಿಯೋದಲ್ಲಿರುವ ಸೌಂಡ್ ಯಾವ ಹಾಲಿವುಡ್ ಸಿನಿಮಾಗಿಂತಲೂ ಕಡಿಮೆಯಿಲ್ಲ ಎಂದಿದ್ದಾನೆ. ಮತ್ತೊಬ್ಬ ಇದು ಪೂರ್ವ ಯೋಚಿತ ವಿಡಿಯೋ ಅಲ್ಲದೇ ಇದ್ದರೆ ತುಂಬಾನೆ ಚೆನ್ನಾಗಿರುತ್ತಿತ್ತು ಎಂದಿದ್ದಾರೆ.
ಮತ್ತೆ ಕೆಲವರು ಇಂತಹ ವಿಡಿಯೋವನ್ನು ಹಂಚಿಕೊಳ್ಳದಂತೆಯೂ ಸಲಹೆ ನೀಡಿದ್ದಾರೆ. ಇದರಲ್ಲಿ ಯಾವ ಅರ್ಥವೂ ಇಲ್ಲ. ಇದರಿಂದ ಸಮಾಜಕ್ಕೆ ಯಾವ ಸಂದೇಶವೂ ಇಲ್ಲ. ಇದೊಂದು ಹುಚ್ಚುತನ ಎಂದು ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಇಷ್ಟಾದರು ಈ ಪತಿ-ಪತ್ನಿ ಈ ರೀತಿಯ ವಿಡಿಯೋ ಮಾಡಿದ್ದೇಕೆ? ಇದರಿಂದ ಅವರಿಗೆ ಏನು ಲಾಭವಾಗಿದೆ? ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಕೇವಲ ಗಮನ ಸೆಳೆಯಲು ಇಂತಹ ವಿಡಿಯೋ ಮಾಡುವುದಾದರೆ, ಅಷ್ಟು ಗಬ್ಬು ನಾರುವ ಚರಂಡಿಗೆ ಬೀಳುವ ಸಾಹಸ ಏಕೆ ಮಾಡಬೇಕು? ಬೇರೆ ಯಾವುದಾದರು ಮಾರ್ಗ ಹುಡುಕಿಕೊಳ್ಳಬಹುದಿತ್ತು ಎಂದು ಹಲವರು ಕಮೆಂಟ್ ಮೂಲಕ ಹೇಳಿದ್ದಾರೆ.



Click it and Unblock the Notifications
