Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಕ್ರಿಸ್ಮಸ್ ಕೇಕ್ ಕತ್ತರಿಸಿದ್ದ ರಣಬೀರ್ ಕಪೂರ್‌ಗೆ ಸಂಕಷ್ಟ..ದೂರು ದಾಖಲು..ಯಾಕೆ ಗೊತ್ತಾ?
ಕ್ರಿಸ್‌ಮಸ್ ಸಮಯದಲ್ಲಿ ಕೇಕ್ ಕತ್ತರಿಸಿ ಹಬ್ಬ ಆಚರಿಸೋದು ಕಾಮನ್, ಹಾಗೆ ವಿಭಿನ್ನ ಕೇಕ್‌ಗಳು ಈ ಸಮಯದಲ್ಲಿ ಕಣ್ಣಿಗೆ ಬೀಳುತ್ತವೆ. ಆದರೆ ಇದೇ ಕೇಕ್‌ನಿಂದ ನಟ ರಣಬೀರ್ ಕಪೂರ್ ವಿರುದ್ಧ ದೂರು ದಾಖಲಾಗುವಂತೆ ಆಗಿದೆ. ಹಾಗಾದ್ರೆ ಆ ಕೇಕ್‌ನಲ್ಲಿ ಏನಿತ್ತು.? ನಟನ ಮೇಲೆ ಕೇಸ್ ಹಾಕಿದ್ಯಾಕೆ? ಇದಕ್ಕೆಲ್ಲ ಇಲ್ಲಿದೆ ಉತ್ತರ..
ಬಾಲಿವುಡ್ ನಟ ರಣಬೀರ್ ಕಪೂರ್ ಕ್ರಿಸ್‌ಮಸ್ ಆಚರಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅವರು ಮತ್ತು ಅವರ ಕುಟುಂಬದವರು "ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ" ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಮುಂಬೈನಲ್ಲಿ ದೂರು ನೀಡಿದ್ದಾರೆ.

ವೀಡಿಯೊದಲ್ಲಿ, ರಣಬೀರ್ ಕಪೂರ್ ಕ್ರಿಸ್‌ಮಸ್ ಸಂಪ್ರದಾಯದಂತೆ ಫ್ಲಾಂಬೆ ಕೇಕ್ ಇಟ್ಟಿರುವುದನ್ನು ಕಾಣಬಹುದು. ಇಲ್ಲಿ ಕೇಕ್ ಮೇಲೆ ಮದ್ಯ ಸುರಿದು ಬಳಿಕ ಅದಕ್ಕೆ ಬೆಂಕಿ ಹಚ್ಚಲಾಗುತ್ತದೆ. ಮದ್ಯವೆಲ್ಲಾ ಬೆಂಕಿಯಲ್ಲಿ ಆವಿಯಾದ ಬಳಿಕ ಆ ಕೇಕ್ ಅನ್ನು ಸೇವಿಸಲಾಗುತ್ತದೆ. ಆದ್ರೆ ಇಷ್ಟಕ್ಕೆ ಈ ಪಾರ್ಟಿ ಮುಗಿದಿದ್ದರೆ ನಟನ ಮೇಲೆ ಕೇಸ್ ದಾಖಲಾಗುತ್ತಿರಲಿಲ್ಲ. ಆದ್ರೆ ಈ ಕೇಕ್ ಕಟ್ ಮಾಡುವ ವೇಲೆ ಅವರು, 'ಜೈ ಮಾತಾ ದಿ' ಎಂದು ಕೂಗಿದ್ದಾರೆ.
ತಮ್ಮ ವಕೀಲರಾದ ಆಶಿಶ್ ರಾಯ್ ಮತ್ತು ಪಂಕಜ್ ಮಿಶ್ರಾ ಅವರ ಮೂಲಕ ಘಾಟ್‌ಕೋಪರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಸಂಜಯ್ ತಿವಾರಿ, ನಟ "ಜೈ ಮಾತಾ ದಿ" ಎಂದು ಹೇಳುವಾಗ ಕೇಕ್ ಮೇಲೆ ಮದ್ಯವನ್ನು ಸುರಿದು ಬೆಂಕಿ ಹಚ್ಚುತ್ತಿರುವುದು ಕಂಡುಬಂದಿದೆ, ಇದರಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
"ಹಿಂದೂ ಧರ್ಮದಲ್ಲಿ, ಇತರ ದೇವತೆಗಳನ್ನು ಆವಾಹನೆ ಮಾಡುವ ಮೊದಲು ಅಗ್ನಿ ದೇವರನ್ನು ಆವಾಹನೆ ಮಾಡಲಾಗುತ್ತದೆ, ಆದರೆ ರಣಬೀರ್ ಕಪೂರ್ ಮತ್ತು ಅವರ ಕುಟುಂಬ ಸದಸ್ಯರು ಉದ್ದೇಶಪೂರ್ವಕವಾಗಿ ಮತ್ತೊಂದು ಧರ್ಮದ ಹಬ್ಬವನ್ನು ಆಚರಿಸುವಾಗ ಅಮಲು ಪದಾರ್ಥಗಳನ್ನು ಬಳಸಿದರು ಮತ್ತು ಜೈ ಮಾತಾ ದಿ ಎಂದು ಘೋಷಣೆ ಕೂಗಿದರು" ಎಂದು ದೂರಿನಲ್ಲಿ ಹೇಳಲಾಗಿದೆ.
ಕುನಾಲ್ ಕಪೂರ್ ಆಯೋಜಿಸಿದ್ದ ಪಾರ್ಟಿ
ಕ್ರಿಸ್‌ಮಸ್ ವೇಳೆ ಕುನಾಲ್ ಕಪೂರ್ ತಮ್ಮ ಕುಟುಂಬಸ್ಥರೊಂದಿಗೆ ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ನಟ ರಣಬೀರ್ ಜೊತೆ ಪತ್ನಿ ಆಲಿಯಾ, ಮಗಳು ಹಾಗೂ ಭಟ್ ಫ್ಯಾಮಿಲಿಯೂ ಇದೆ. ಆದರೆ ಕೇಕ್ ಕತ್ತರಿಸುವ ವೇಳೆ ನಟ ಯಡವಟ್ಟು ಮಾಡಿಕೊಂಡಿದ್ದಾರೆ.
ಏನಿದು ಫ್ಲಾಂಬೆ ಕೇಕ್ ಮಾಡುವುದೇಗೆ?
1 ಕಪ್ ಸಕ್ಕರೆ
1 ಕಪ್ ಹಾಲು
1 ಟೀಸ್ಪೂನ್ ವಿನೆಗರ್
6 ಚಮಚ ಎಣ್ಣೆ
1 ಟೀಸ್ಪೂನ್ ಅಡಿಗೆ ಸೋಡಾ
1.5 ಕಪ್ ಮೈದಾ
0.25 ಕಪ್ ಕೋಕೋ ಪೌಡರ್
ಸಕ್ಕರೆ ಮತ್ತು ಹಾಲು ಮಿಶ್ರಣ ಮಾಡಿ, ಎಣ್ಣೆ, ವೆನಿಲ್ಲಾ, ವಿನೆಗರ್ ಮತ್ತು ನಂತರ ಎಲ್ಲಾ ಒಣ ಪದಾರ್ಥಗಳನ್ನು ಸೇರಿಸಿ. 180 ಡಿಗ್ರಿಯಲ್ಲಿ 30-40 ನಿಮಿಷಗಳ ಕಾಲ ಕುದಿಸಿ, ಅದು ತಣ್ಣಗಾದ ನಂತರ, ಡಿ-ಮೌಲ್ಡ್ ಮಾಡಿ. ನಂತರ ಎರಡೂ ಚಾಕೋಲೆಟ್ ಸೇರಿರುವ ಪದಾರ್ಥವನ್ನು ಮೈಕ್ರೋವೇವ್‌ನಲ್ಲಿಡಿ, ನೀವು ಈ ವೇಳೆ 50 ಎಂ.ಎಲ್‌ನಷ್ಟು ವಿಸ್ಕಿ ಸೇರಿಸಬಹುದು. ಬಳಿಕ ಕೇಕ್ ಅನ್ನು ಚಾಕೊಲೆಟ್‌ನಿಂದ ಕವರ್ ಮಾಡಿ, ಅಥವಾ ನೀವು ಕೇಕ್ ಅನ್ನು ಕತ್ತರಿಸಿ ಮಧ್ಯದಲ್ಲಿಯೂ ಚಾಕೊಲೇಟ್ ಸೇರಿಸಬಹುದು ಹೀಗೆ ಮಾಡುವುದರಿಂದ ಡಬಲ್ ಲೇಯರ್ ಕೇಕ್ ತಯಾರಾಗುತ್ತದೆ. ಇಲ್ಲಿದಿದ್ದರೆ ಒಂದೇ ಲೇಯರ್ ಕೇಕ್ ತಯಾರಾಗಲಿದೆ. ಬಳಿಕ ನಿಮ್ಮ ಮುಂದಿರುವ ಕೇಕ್ ಮೇಲೆ ವಿಸ್ಕಿಯನ್ನು ಸುರಿಯಿರಿ ಬಳಿಕ ಬೆಂಕಿ ಹಚ್ಚಿದರೆ ಆಯಿತು. ಬೆಂಕಿ ಆರಿದ ಮೇಲೆ ಫ್ಲಾಂಬೆ ಕೇಕ್ ಸವಿಯಲು ಸಿದ್ಧವಾಗುತ್ತದೆ.



Click it and Unblock the Notifications