Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ರೈಲಿನಲ್ಲಿ ಓಡಾಡುತ್ತಲೇ 1 ಲಕ್ಷ ರೂ. ಉಳಿಸಿದ ಯುವಕ..! ಆತನ ಟ್ರಿಕ್ಸ್ ಗೊತ್ತಾಗಿಯೂ ಕ್ರಮಕ್ಕೆ ಮುಂದಾಗದ ರೈಲ್ವೆ..!!
ರೈಲ್ವೆ ಇಂದಿಗೂ ವಿಶ್ವದ ಯಾವುದೇ ಮೂಲೆಗೆ ಹೋದರು ಅತ್ಯಂತ ಸುಲಭ ಹಾಗೆ ಕಡಿಮೆ ದರದಲ್ಲಿ ಓಡಾಡಬಹುದಾದ ಸಂಪರ್ಕ ಸೇತುವೆಯಾಗಿಯೇ ಉಳಿದಿದೆ. ಹಾಗೆ ಭಾರತ ಅತ್ಯಂತ ದೊಡ್ಡ ಸಂಪರ್ಕ ಜಾಲ ಹೊಂದಿದೆ. ಅಲ್ಲದೆ ಬಹುತೇಕ ಮುಂದುವರೆದ ರಾಷ್ಟ್ರಗಳಲ್ಲೂ ರೈಲ್ವೆ ಸಂಪರ್ಕ ಬಹಳ ಮುಖ್ಯ ಪಾತ್ರ ವಹಿಸಿದೆ. ಯಾವ ದೇಶದಲ್ಲಿ ರೈಲ್ವ ಸಂಪರ್ಕ ಉತ್ತಮವಾಗಿರಲಿದೆಯೋ ಆ ದೇಶದನ ಸಂಪರ್ಕ ಉತ್ತಮವಾಗಿದೆ ಎಂದರ್ಥ.
ಹಾಗೆ ರೈಲ್ವೆ ಸಂಪರ್ಕವಿಲ್ಲದೆ ಇರುವ ದೇಶಗಳು ಬಹಳ ಕಡಿಮೆ ಎನ್ನಬಹುದು ಇನ್ನು ಈಗ ಬುಲೆಟ್ ಟ್ರೈನ್, ಹೈಪರ್ ಲೂಪ್‌ನಂತಹ ಫಾಸ್ಟ್ ಟ್ರೈನ್ ಕೂಡ ಈಗ ಬಂದಿವೆ. ಹೀಗಾಗಿ ಬಹುತೇಕ ಮಂದಿ ಒಂದು ಕಡೆಯಿಂದ ಇನ್ನೊಂದು ಕಡೆ ಚಲಿಸುವ ಉದ್ದೇಶದಿಂದ ಅವರು ಟ್ರೈನ್ ಬಳಸುವುದು ಸಾಮಾನ್ಯ. ಹಾಗೆ ರೈಲ್ವೆ ಪ್ರಯಾಣ ದುಬಾರಿ ಅಲ್ಲದಿದ್ದರೂ ಹಲವರು ಈಗ ಟಿಕೆಟ್ ಬಳಸದೆಯೂ ಪ್ರಯಾಣಿಸುವುದು ನೋಡಬಹುದು.

ಟಿಕೆಟ್ ಇಲ್ಲದೆ ಪ್ರಯಾಣ ಮಾಡುವವರನ್ನು ತಡೆಯುವ ಉದ್ದೇಶದಿಂದ ದಂಡ ವಿಧಿಸುವುದು ನೋಡಬಹುದು. ಆದ್ರೆ ಇಲ್ಲೊಬ್ಬ ವ್ಯಕ್ತಿ ಫ್ರೀ ಆಗಿ ವರ್ಷವಿಡೀ ರೈಲಿನಲ್ಲಿ ಪ್ರಯಾಣಿಸಿದ್ದಾನೆ. ಅದರಲ್ಲೂ ಆತ ಬಳಸಿದ ಟ್ರಿಕ್ಸ್ ರೈಲ್ವೆ ಇಲಾಖೆಗೆ ತಿಳಿದಿದ್ದರೂ ಏನು ಮಾಡಲಾಗದೆ ಸುಮ್ಮನಾಗಿದೆ. ಆತ ರೈಲ್ವೆ ಪ್ರಯಾಣದಲ್ಲಿ 1 ಲಕ್ಷ ರೂಪಾಯಿಗೂ ಹೆಚ್ಚು ಹಣ ಉಳಿಸಿದ್ದಾನೆ.
ರೈಲಿನಲ್ಲಿ ಟಿಕೆಟ್ ಪಡೆಯದಿದ್ದರೆ ದಂಡ ವಿಧಿಸಲಾಗುತ್ತದೆ, ಆದ್ರೆ ಈ ಯುವಕ ಟಿಕೆಟ್ ಪಡೆದುಕೊಂಡೇ ಲಕ್ಷ ಲಕ್ಷ ಉಳಿಸಿದ್ದಾನೆ. ಆತ ಮಾಡಿದ ಒಂದು ಟ್ರಿಕ್ಸ್‌ನಿಂದಾಗಿ ಹಣ ಉಳಿಸಲು ಸಹಾಯಕವಾಗಿದೆ. ಆದ್ರೆ ಈ ಟ್ರಿಕ್ಸ್ ರೈಲ್ವೆ ಇಲಾಖೆಗೂ ತಿಳಿಸಿದಿದ್ದರೂ ಏನು ಮಾಡಲಾದ ಸ್ಥಿತಿಯಲ್ಲಿದೆ. ಹಾಗಾದ್ರೆ ಆ ಯುವಕ ಮಾಡಿದ ಟ್ರಿಕ್ಸ್ ಏನು? ಹೇಗೆ ಲಕ್ಷ ಲಕ್ಷ ರೂಪಾಯಿ ಹಣ ಉಳಿಸಿದ್ದಾನೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆತ ಬ್ರಿಟನ್‌ನ 29 ವರ್ಷದ ಎಡ್ ವೈಸ್ ಎಂಬ ವ್ಯಕ್ತಿ ಇಡೀ ವರ್ಷ ಹಣವನ್ನೇ ವ್ಯಯಿಸದೆ ರೈಲಿನಲ್ಲಿ ಪ್ರಯಾಣಿಸಿದ್ದಾನೆ. ಆತ ನಿಗಧಿತ ಟಿಕೆಟ್ ಖರೀದಿಸಿದ್ದರು ಕೂಡ ವಾರ್ಷಿಕವಾಗಿ 1.06 ಲಕ್ಷ ರೂಪಾಯಿ ಉಳಿಸಿದ್ದಾನೆ. ಇದು ರೈಲ್ವೆಗೆ ತಿಳಿದಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬುದನ್ನು ಕೂಡ ಇಲ್ಲಿ ಗಮನಿಸಬಹುದು.
ಆತ ತಾನು ಬುಕ್ ಮಾಡುತ್ತಿದ್ದ ಎಲ್ಲಾ ಟಿಕೆಟ್‌ಗೂ ರಿಫಂಡ್ ಪಡೆಯುವ ಮೂಲಕ ಹಣ ಉಳಿಸಿದ್ದಾನೆ. ಬ್ರಿಟನ್‌ನಲ್ಲಿ ಟಿಕೆಟ್ ದರದ ಶೇ.100ರಷ್ಟು ರಿಫಂಡ್ ನಿಯಮಗಳಿವೆ, ಇದನ್ನೇ ಆತ ಬಳಸಿಕೊಂಡು ಈ ರೀತಿ ಮಾಡಿದ್ದಾನೆ.
ತಡವಾಗಿ ಬರುವ ರೈಲಿನ ಟಿಕೆಟ್ ಬುಕ್ ಮಾಡುವ ಭೂಪ
29 ವರ್ಷದ ಎಡ್ ವೈಸ್ ಎಂಬ ಯುವಕ ಯವಾಗಲು ರೈಲಿನಲ್ಲಿ ಪ್ರಯಾಣಿಸುವ ಮುನ್ನ ಆ ಪ್ರದೇಶದಲ್ಲಿನ ಹವಾಮಾನ ಹಾಗೂ ರೈಲ್ವೆ ಸಿಗ್ನಲಿಂಗ್, ಮಳೆ ಇಂತಹ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಆ ರೈಲಿನ ಟಿಕೆಟ್ ಬುಕ್ ಮಾಡಿಕೊಳ್ಳುತ್ತಿದ್ದನಂತೆ. ಆತನಿಗೆ ಯಾವ ರೈಲು ಯಾವಾಗ ತಡವಾಗಿ ಬರಲಿದೆ ಎಂಬ ಕುರಿತು ಸಂಪೂರ್ಣ ಮಾಹಿತಿ ಇತ್ತಂತೆ. ಹೀಗಾಗಿ ಅಂತಹ ಸಮಯದಲ್ಲಿ, ಅಂತಹ ರೈಲಿನ ಟಿಕೆಟ್ ಬುಕ್ ಮಾಡಿಕೊಂಡು ತಾನು ತಲುಪಬೇಕಿದ್ದ ಸ್ಥಳ ತಲುಪುತ್ತಿದ್ದನಂತೆ. ಆದ್ರೆ ಇದರಿಂದ ಹಣ ಹೇಗೆ ಉಳಿಸಿದ ಎಂಬ ಅನುಮಾನ ನಿಮಗೆ ಕಾಡಬಹುದು. ಇಲ್ಲಿಯೇ ಆ ಯುವಕ ತನ್ನ ಜಾಣತನ ಮೆರೆದಿದ್ದಾನೆ.
ಬ್ರಿಟನ್‌ನಲ್ಲಿ ರೈಲುಗಳು ತಡವಾಗಿ ಬಂದರೆ ನಿಮ್ಮ ಟಿಕೆಟ್‌ನ ಹಣ ವಾಪಾಸು ನೀಡಲಾಗುತ್ತದೆ. ಆದ್ರೆ ಅಲ್ಲಿನ ರೈಲುಗಳು ತಡವಾಗಿ ಬರುವುದು ಬಹಳ ವಿರಳ ಪ್ರಕರಣ ಎಂದು ಪರಿಗಣಿಸಲಾಗಿದೆ. ಅಲ್ಲಿನ ರೈಲ್ವೆ ನಿಯಮಗಳ ಪ್ರಕಾರ, ಪ್ರಯಾಣಿಕರು 15 ನಿಮಿಷಗಳ ವಿಳಂಬಕ್ಕೆ ಶೇ. 15 ರಷ್ಟು, 30 ನಿಮಿಷಗಳ ವಿಳಂಬಕ್ಕೆ 50 ರಷ್ಟು ಮತ್ತು ಒಂದು ಗಂಟೆ ಮೀರಿದರೆ ಪೂರ್ಣ ಮರುಪಾವತಿ ಪಡೆಯಲು ಅರ್ಹರಾಗಿರುತ್ತಾರೆ.
ಇದೇ ನಿಯಮದ ಲಾಭ ಪಡೆಯುವ ಯುವಕ ಯಾವ ರೈಲು ತಡವಾಗಿ ಬರಲಿದೆ ಎಂಬುದನ್ನು ಮೊದಲೇ ಅಧ್ಯಯನ ಮಾಡುತ್ತಿದ್ದ, ಆ ಮಾರ್ಗದಲ್ಲಿ ಹವಾಮಾನ ವೈಪರಿತ್ಯ, ಮುಷ್ಕರ ಇಂತಹ ಪ್ರಕರಣಗಳಿದ್ದರೆ ಆತ ಪ್ರಯಾಣಕ್ಕಾಗಿ ಹೊರಡುತ್ತಿದ್ದ. ಬಹುತೇಕ ಸಮಯದಲ್ಲಿ ಇದರಲ್ಲಿ ಆತ ಯಶಸ್ವಿಯೂ ಆಗಿದ್ದಾನೆ. ಹೀಗಾಗಿಯೇ 1.06 ಲಕ್ಷ ರೂಪಾಯಿ ಮರುಪಾವತಿ ಪಡೆದಿದ್ದಾನೆ ಎಂದು ತಿಳಿದುಬಂದಿದೆ.



Click it and Unblock the Notifications
