Latest Updates
-
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್!
ಫೇಸ್‌ಬುಕ್‌ನಲ್ಲಿ ಒಬ್ಬರಿಗೆ ವೇತನ ಎಷ್ಟಿದೆ ಗೊತ್ತಾ? ಸಿಇಓ ವೇತನ ಕೇಳಿದ್ರೆ ಶಾಕ್ ಆಗ್ತಿರಾ..!
ಫೇಸ್‌ಬುಕ್ ಈಗ ಮೆಟಾ ಕಂಪನಿಯಾಗಿ ಬದಲಾಗಿದೆ. ಫೋಟೋ ಶೇರಿಂಗ್ ಪ್ಲಾಟ್‌ಫಾರ್ಮ್ ಆಗಿ ಆರಂಭಗೊಂಡ ಫೇಸ್‌ಬುಕ್ ಬಹುಬೇಗ ಯಶಸ್ಸಿನ ಉತ್ತುಂಗಕ್ಕೆ ಏರಿದ ಕಂಪನಿಯಾಗಿದೆ. ಒಂದು ಕಾಲದಲ್ಲಿ ವಿಶದ ಶ್ರೀಮಂತ ಅಮೇಜಾನ್ ಸಂಸ್ಥಾಪಕ ಜೆಫ್ ಬೆಜೋಸ್‌ಗೆ ಸಡ್ಡು ಹೊಡೆದು ಮಾರ್ಕ್ ಜುಕರ್ ಬರ್ಗ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೇಲೆರಿದ್ದರು. ಇದಕ್ಕೆ ಕಾರಣವಾಗಿದ್ದು ಇದೇ ಫೇಸ್‌ಬುಕ್.
ಫೇಸ್‌ಬುಕ್ ಸದ್ಯ ಅತ್ಯಂತ ಲಾಭದಾಯಕ ಕಂಪನಿಯಾಗಿ ಬೆಳೆದಿದೆ. ಮಾತ್ರವಲ್ಲ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಬಹುತೇಕ ಗೆಜೆಟ್‌ಗಳು, ಹೊಸ ಹೊಸ ತಂತ್ರಜ್ಞಾನದ ಮೂಲಕ ಮತ್ತಷ್ಟು ದೊಡ್ಡದಾಗುತ್ತಾ ಸಾಗಿದೆ. ಹಾಗಾದ್ರೆ ಈ ಫೇಸ್‌ಬುಕ್‌ನಲ್ಲಿ ಕೆಲಸ ಮಾಡುವವರ ವೇತನ ಎಷ್ಟು? ಮೆಟಾ ಕಂಪನಿಯಲ್ಲಿ ಕೆಲಸ ಗಿಟ್ಟಿಸಲು ಜನ ಹೋರಾಡೋದು ಏಕೆ.?

ಹೌದು ನಿಮ್ಮಲ್ಲೂ ಯಾರಾದರು ಮೆಟಾದಲ್ಲಿ ಕೆಲಸ ಪಡೆಯಬೇಕು ಎಂಬ ಕನಸು ಹೊತ್ತುಕೊಂಡಿರಬಹುದು. ವಿಶ್ವದ ಬಹುತೇಕ ಯುವಕ ಯುವತಿಯರ ಕನಸು ಇದಾಗಿದೆ. ಏಕೆಂದರೆ ಮೆಟಾದಲ್ಲಿ ಬೇರೆ ಯಾವುದೇ ಸಂಸ್ಥೆ ನೀಡದಷ್ಟು ವೇತನವಿದೆ. ಅಲ್ಲದೆ ಅಲ್ಲಿ ಕೆಲಸ ಪಡೆಯೋದು ಅಂದ್ರೆ ತಪಸ್ಸು ಮಾಡಿದಂತೆ.
ಅದರಲ್ಲೂ ಟೆಕ್ಕಿಗಳಿಗೆ ಮೆಟಾ ಕೇಳಿದಷ್ಟು ವೇತನ ನೀಡುತ್ತಿದೆ. ಇತ್ತೀಚಿನ SEC ಫೈಲಿಂಗ್ ಪ್ರಕಾರ, ಮೆಟಾದ ಸರಾಸರಿ ವೇತನ ಬರೋಬ್ಬರಿ $379,000 (Rs 3.1 ಕೋಟಿ) ಆಗಿದೆ. ಸರಿಸುಮಾರು 67,000 ಉದ್ಯೋಗಿಗಳನ್ನು ಹೊಂದಿರುವ ಮೆಟಾದಲ್ಲಿ ಓರ್ವ ಟೆಕ್ಕಿ ವಾರ್ಷಿಕವಾಗಿ 3 ಕೋಟಿಗೂ ಹೆಚ್ಚಿನ ವೇತನ ಪಡೆಯುತ್ತಾನೆ. ಕಡಿಮೆ ಎಂದರೆ ಮೆಟಾದಲ್ಲಿ ಒಬ್ಬ ಉದ್ಯೋಗಿ 29 ಲಕ್ಷ ವೇತನ ಪಡೆಯಬಹುದು. ಇದು ಇತ್ತೀಚಿನ 2023ರ ವರದಿಯಾಗಿದೆ.
ಟೆಕ್ ಸ್ಥಾನಗಳಿಗೆ ವಿಶಿಷ್ಟವಾದ ವೇತನ ಶ್ರೇಣಿಯು $35,000 ರಿಂದ $120,000 ವರೆಗೆ ನೀಡಲಾಗುತ್ತದೆ, ಇದು ದೈತ್ಯ ಕಂಪನಿಗಳಾದ ಟೆಸ್ಲಾ, ಅಮೇಜಾನ್ ಸೇರಿ ಬಹುತೇಕ ದೊಡ್ಡ ಕಂಪನಿಗಳಿಗೆ ಸರಿ ಸಮನಾದ ವೇತನ ಶ್ರೇಣಿಯಾಗಿದೆ. ಮೆಟಾದಲ್ಲಿ ಹಿರಿಯ ಇಂಜಿನಿಯರ್‌ಗಳು ಅತೀ ಹೆಚ್ಚು ವೇತನ ಪಡೆಯುವವಾಗಿದ್ದು, ಇದರಲ್ಲಿ ಹುದ್ದೆಗೆ ಅನುಸಾರವಾಗಿ ವೇತನ ಹಂಚಿಕೆಯಾಗುತ್ತದೆ ಎಂದು ವರದಿಯಾಗಿದೆ.
ಜುಕರ್‌ಬರ್ಗ್ ವೇತನ ಎಷ್ಟಿದೆ ಗೊತ್ತಾ?
ಇನ್ನು ಫೇಸ್‌ಬುಕ್‌ನಲ್ಲಿ ಕೆಲಸ ಮಾಡುವವರ ವೇತನವೇ ಕೋಟಿ ಕೋಟಿ ಇದ್ದು, ಸಂಸ್ಥೆಯ ಸಿಇಓ ಮಾರ್ಕ್ ಬುಕರ್‌ಬರ್ಗ್ ವೇತನ ಎಷ್ಟಿದೆ ಎಂದು ತಿಳಿದರೆ ನೀವು ಶಾಕ್ ಆಗುತ್ತೀರಿ. ಹೌದು ಸಿಇಒ ಮಾರ್ಕ್ ಜುಕರ್‌ಬರ್ಗ್ ಈ ವರ್ಷದ ಆರಂಭದಲ್ಲಿ ತಮ್ಮ ವೇತನ ಪರಿಷ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದರ ಪ್ರಕಾರ ಅವರು $24.4 ಮಿಲಿಯನ್ (ಅಂದಾಜು ರೂ 199 ಕೋಟಿ) ವೇತನ ಪಡೆಯುತ್ತಾರೆ. ಇದಿಷ್ಟೇ ಅಲ್ಲ ಅವರಿಗಾಗಿ ಪ್ರೈವೇಟ್ ಜೆಟ್ ಸಹ ಇದೆ. 2023ರಲ್ಲಿ ಅವರು ಕೇವಲ 1 ಡಾಲರ್ ನಾಮಕಾವಸ್ಥೆ ವೇತನ ಪಡೆದಿದ್ದಾರೆ, ಆದರೆ ಅದೇ ವರ್ಷ ಅವರ ಸಂಪತ್ತು ಬರೋಬ್ಬರಿ $47 ಶತಕೋಟಿಯಷ್ಟು ಹೆಚ್ಚಾಗಿದೆ.
ವರದಿಗಳ ಪ್ರಕಾರ, ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಮೆಟಾದ ನಿವ್ವಳ ಲಾಭವು $12.4 ಶತಕೋಟಿಗೆ ಏರಿಕೆಯಾಗಿದೆ, ಒಟ್ಟು ಆದಾಯದಲ್ಲಿ ಶೇ. 27 ರಷ್ಟು ಏರಿಕೆ ಕಂಡಿದೆ. ಬೇರೆ ಕಂಪನಿಗಳಿಗೆ ಹೋಲಿಸಿದರೆ ಈ ಪ್ರಮಾಣ ಅತ್ಯಧಿಕವಾಗಿದೆ. ಜೊತೆಗೆ ಫೇಸ್‌ಬುಕ್ ಬಳಕೆದಾರರ ಪ್ರಮಾಣವು ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಇದರ ಜೊತೆ ಇನ್ಸ್‌ಸ್ಟಾಗ್ರಾಮ್ ಹಾಗೂ ವಾಟ್ಸಾಪ್ ಸಹ ಈಗ ಮೆಟಾದ ಕೆಳಗೆ ಕಾರ್ಯ ನಿರ್ವಹಿಸುತ್ತಿವೆ. ಈಗ ಮೆಟಾದಲ್ಲಿ ಭಾರತೀಯ ಮೂಲಕ ಟೆಕ್ಕಿಗಳ ಪ್ರಮಾಣವು ಹೆಚ್ಚಾಗಿದ್ದು, ಭಾರತದಲ್ಲಿಯೂ ಸೇರಿ ಹಲವು ಕಡೆಗಳಲ್ಲಿ ಮೆಟಾಗೆ ಭಾರತೀಯ ಟೆಕ್ಕಿಗಳು ದುಡಿಯುತ್ತಿದ್ದಾರೆ.



Click it and Unblock the Notifications
