Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಪಾತಿ ಹುಟ್ಟಿಕೊಂಡಿದ್ಹೇಗೆ? ಹರಪ್ಪಾ ನಾಗರೀಕತೆಗೂ ಚಪಾತಿಗೂ ಏನು ಸಂಬಂಧ?
ಚಪಾತಿ ಭಾರತದಲ್ಲಿ ಲಭ್ಯವಾಗುವ ಒಂದು ಸಾಮಾನ್ಯ ಆಹಾರ. ದಕ್ಷಿಣ ಭಾರತದಲ್ಲಿ ಜನ ಅನ್ನವನ್ನು ಹೆಚ್ಚಾಗಿ ಸೇವನೆ ಮಾಡಿದ್ರೆ, ಇತ್ತ ಉತ್ತರ ಭಾರತದಲ್ಲಿ ಚಪಾತಿಯನ್ನು ಹೆಚ್ಚಾಗಿ ಸೇವಿಸುತ್ತಾರೆ. ಹೆಚ್ಚಿನ ಭಾಗಗಳಲಂತೂ ಮೂರು ಹೊತ್ತು ಚಪಾತಿ ತಿಂದು ಜೀವನ ಸಾಗಿಸ್ತಾರೆ. ಅಷ್ಟರ ಮಟ್ಟಿಗೆ ಚಪಾತಿ ಇಲ್ಲಿನ ಜನರ ಜೀವನದ ಅವಿಭಾಜ್ಯ ಅಂಗವೇ ಆಗಿದೆ.
ಭಾರತದಲ್ಲಿ ಅತಿಯಾಗಿ ಗೋಧಿಯನ್ನು ಉತ್ಪಾದನೆ ಮಾಡೋದ್ರಿಂದ ಚಪಾತಿ ಇಲ್ಲಿ ಮುಖ್ಯವಾದ ಆಹಾರ ಆಗಿರೋದ್ರಲ್ಲಿ ಅತಿಶಯೋಕ್ತಿ ಇಲ್ಲ. ಇನ್ನೂ ಚಪಾತಿ ಒಂದು ರೀತಿಯ ಡಯೇಟ್ ಫುಡ್. ಅನ್ನದ ಬದಲಾಗಿ ಚಪಾತಿಯನ್ನು ತಿಂದು ತೂಕ ಇಳಿಸೋದಕ್ಕೆ ಡಯೆಟೀಷಿಯನ್ ಗಳು ಸಲಹೆ ನೀಡುತ್ತಾರೆ. ಇಂತಹ ಚಪಾತಿ ಮೊದಲಿಗೆ ತಯಾರಾಗಿದ್ದು ಎಲ್ಲಿ ಗೊತ್ತಾ? ಇದನ್ನು ತಯಾರು ಮಾಡಿದ್ಯಾರು ಅನ್ನೋದನ್ನು ತಿಳಿಯೋಣ.

ಹರಪ್ಪ ನಾಗರಿಕತೆಯಲ್ಲಿ ಚಪಾತಿ ಕುರಿತಾಗಿ ಪುರಾವೆಗಳಿದ್ಯಾ?
ಚಪಾತಿ ಇಂದು ಭಾರತ ಮಾತ್ರವಲ್ಲದೇ ವಿಶ್ವದ ಅನೇಕ ಕಡೆಗಳಲ್ಲಿ ಇದನ್ನು ಮುಖ್ಯ ಆಹಾರವಾಗಿ ಸೇವನೆ ಮಾಡಲಾಗುತ್ತದೆ. ಹೀಗಾಗಿ ಇದು ಮೊದಲಿಗೆ ಎಲ್ಲಿ ಹುಟ್ಟಿಕೊಂಡಿದ್ದು ಅನ್ನೋದ್ರ ಬಗ್ಗೆ ಕೆಲವೊಂದು ಗೊಂದಲಗಳಿದೆ. ಆದರೆ ನಮ್ಮ ಇತಿಹಾಸಗಳು ಹೇಳುವ ಪ್ರಕಾರ ಹರಪ್ಪಾ ನಾಗರೀಕತೆಯಲ್ಲಿ ಈ ಬಗ್ಗೆ ಉಲ್ಲೇಖ ಆಗಿತ್ತಂತೆ. ಹರಪ್ಪಾ ನಾಗರೀಕತೆಯ ಸಂದರ್ಭದಲ್ಲಿ ಜನ ಗೋಧಿ, ರಾಗಿ, ಬಾರ್ಲಿಯನ್ನು ಬೆಳೆಯುತ್ತಿದ್ದರು. ಹೀಗಾಗಿ ಇದನ್ನೇ ಅವರು ಮುಖ್ಯ ಆಹಾರವನ್ನಾಗಿ ಸೇವನೆ ಮಾಡುತ್ತಿದ್ದರೂ ಅಂತಾನೂ ಹೇಳಲಾಗುತ್ತದೆ.
ಅಕ್ಬರನ ಪ್ರಿಯವಾದ ಆಹಾರ ಚಪಾತಿ!
16 ನೇ ಶತಮಾನದಲ್ಲಿ ಅಬುಲ್-ಫಜಲ್ ತನ್ನ ಐನ್-ಇ-ಅಕ್ಬರಿ ದಾಖಲೆಯಲ್ಲಿ ಉಲ್ಲೇಖಿಸಿರುವಂತೆ ಚಪಾತಿಯೂ ಚಕ್ರವರ್ತಿ ಅಕ್ಬರನ ಪ್ರಮುಖ ಆಹಾರಗಳಲ್ಲಿ ಒಂದು ಅಂತ ಹೇಳಲಾಗುತ್ತದೆ. ಚಪಾತಿಯನ್ನು ತುಂಬಾನೇ ಇಷ್ಟ ಪಟ್ಟಿದ್ದ ಅಕ್ಬರನು ತುಪ್ಪ ಮತ್ತು ಸಕ್ಕರೆಯೊಂದಿಗೆ ತಿನ್ನುತ್ತಿದ್ದರು ಅಂತ ಹೇಳಲಾಗುತ್ತದೆ. ಇನ್ನೂ ಅಕ್ಬರ್ ಮಾತ್ರವಲ್ಲ ಔರಂಗಜೇಬ್ ಕೂಡ ಚಪಾತಿಯನ್ನು ಇಷ್ಟ ಪಟ್ಟು ತಿನ್ನುತ್ತಿದ್ದರಂತೆ. ಕುತೂಹಲಕಾರಿ ಸಂಗತಿಯೆಂದರೆ 1857ರ ಮೊದಲು ಸ್ವಾತಂತ್ರ್ಯ ಹೋರಾಟದಲ್ಲಿ ಸ್ವಾತಂತ್ರ್ಯ ಹೋರಾಟಗಾರರೂ ಕೂಡ ಇದೇ ರೊಟ್ಟಿಯನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರಂತೆ.
ಬೇರೆ ದೇಶಗಳಲ್ಲಿ ಚಪಾತಿ ಫೇಮಸ್ ಆಗಿದ್ಹೇಗೆ?
ಚಪಾತಿಯೂ ತುಂಬಾ ಪೌಷ್ಠಿಕಾಂಶವನ್ನು ಹೊಂದಿರುವ ಆಹಾರ. ಜೊತೆಗೆ ಇದನ್ನು ಒಂದೆರಡು ದಿನಗಳ ಕಾಲ ಇಟ್ಟುಕೊಂಡು ತಿಂದರೂ ಕೂಡ ಏನೂ ಆಗೋದಿಲ್ಲ. ಹೀಗಾಗಿ ಟ್ರಾವೆಲ್ ಮಾಡುವ ಸಂದರ್ಭದಲ್ಲಿ ಜನ ಇದನ್ನು ತೆಗೆದುಕೊಂಡು ಹೋಗ್ತಾರೆ. ಇನ್ನೂ ಭಾರತದಿಂದ ಬೇರೆ ಬೇರೆ ದೇಶಕ್ಕೆ ವಲಸೆ ಹೋದ ಭಾರತೀಯರು ಅಲ್ಲಿ ಹೋಗಿ ಚಪಾತಿಯನ್ನು ಪ್ರಮುಖ ಆಹಾರವಾಗಿ ತಿನ್ನುತ್ತಿದ್ದರು. ಈ ರೀತಿ ಚಪಾತಿ ವಿಶ್ವವಿಖ್ಯಾತಿ ಆಯ್ತು ಅಂತಾನೂ ಹೇಳಲಾಗುತ್ತದೆ.
ರೋಲ್ ಗಳಲ್ಲೂ ಕೂಡ ಚಪಾತಿಯನ್ನು ಬಳಕೆ ಮಾಡಲಾಗುತ್ತದೆ. ಇನ್ನೂ ಔರಂಗಜೇಬನ ಕಾಲದಲ್ಲಿ ಚಿಕ್ಕ ಚಿಕ್ಕದಾಗಿ ಚಪಾತಿಯನ್ನು ಮಾಡಲಾಗ್ತಿತ್ತು, ಇದೀಗ ಅದರ ಗಾತ್ರ ಕೂಡ ದೊಡ್ಡದಾಗಿದೆ.
ಚಪಾತಿಯಲ್ಲಿ ವಿಟಮಿನ್ ಹಾಗೂ ಖನಿಜಗಳು ಸಮೃದ್ಧವಾಗಿದೆ!
ಬೇರ್ಯಾವುದೇ ಆಹಾರಗಳಲ್ಲಿ ಇಲ್ಲದಷ್ಟು ವಿಶೇಷ ಪೋಷಕಾಂಶಗಳು ಚಪಾತಿಯಲ್ಲಿದೆ. ಚಪಾತಿಯಲ್ಲಿ ವಿಟಮಿನ್ ಬಿ, ಇ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣ ಅಧಿಕ ಪ್ರಮಾಣದಲ್ಲಿದೆ. ಕಬ್ಬಿಣದ ಉಪಸ್ಥಿತಿಯಿಂದಾಗಿ ಇದು ನಮ್ಮ ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟಕ್ಕೆ ಉತ್ತಮವೆಂದು ಪರಿಗಣಿಸಲಾಗಿದೆ. ಇನ್ನೂ ಇದರಲ್ಲಿ ಕ್ಯಾಲೋರಿ ಕಡಿಮೆ ಇರೋದ್ರಿಂದ ಇದು ಸ್ಥೂಲಕಾಯವನ್ನೂ ನಿಯಂತ್ರಿಸುತ್ತದೆ.
ಇನ್ನೂ ಚಪಾತಿಯಲ್ಲಿ ಸಕ್ಕರೆಯ ಅಂಶ ಕಡಿಮೆ ಇರೋದ್ರಿಂದ ತೂಕ ಹೆಚ್ಚಾಗುವ ಭಯವಿಲ್ಲ. ಇನ್ನೂ ಇದು ಆ್ಯಂಟಿ ಆಕ್ಸಿಡೆಂಟ್ ಕೂಡ ಆಗಿದ್ದು, ಇದು ದೇಹದ ಜೀವಕೋಶಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ. ಇನ್ನೂ ಇದರಲ್ಲಿ ನಾರಿನಂಶವಿದ್ದು ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಿ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಅಷ್ಟೇ ಅಲ್ಲದೇ, ಹಸಿವನ್ನು ಶಾಂತಗೊಳಿಸುತ್ತದೆ ಮತ್ತು ನಮ್ಮನ್ನು ದಿನವಿಡೀ ಸಕ್ರಿಯವಾಗಿರುತ್ತದೆ.
ಸಾವಿರಾರು ವರ್ಷಗಳ ಇತಿಹಾಸ ಇರುವ ಚಪಾತಿಯನ್ನು ಜನ ಇಂದಿಗೂ ಸೇವಿಸ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದಲೂ ಕೂಡ ಚಪಾತಿ ತುಂಬಾನೇ ಒಳ್ಳೆಯದು.



Click it and Unblock the Notifications


