Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
99% ಜನರಿಗೆ ಗೊತ್ತಿಲ್ಲ! ಈ 3 ರಹಸ್ಯಗಳು ನಿಮಗೆ ರಾತ್ರೋರಾತ್ರಿ ಸಕ್ಸಸ್ ನೀಡುತ್ತವೆ
ನೀವು ಜೀವನದಲ್ಲಿ ಸಕ್ಸಸ್ ನೋಡೇ ಇಲ್ವಾ? ಖಂಡಿತವಾಗಿಯೂ 99% ಜನರಿಗೆ ಇದು ಗೊತ್ತಿಲ್ಲ. ಚಾಣಕ್ಯ ನೀತಿಯ ಈ 3 ರಹಸ್ಯಗಳು ನಿಮಗೆ ರಾತ್ರೋರಾತ್ರಿ ಯಶಸ್ಸು ನೀಡುತ್ತವೆ. ಹೌದು, ಈ 3 ವಿಷಯಗಳನ್ನು ತಿಳಿದ ವ್ಯಕ್ತಿಯನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ. ನಾವಿಂದು ನಿಮಗೆ ಚಾಣಕ್ಯ ನೀತಿಯ 3 ಅಮೂಲ್ಯ ರಹಸ್ಯಗಳ ಬಗ್ಗೆ ತಿಳಿಸುತ್ತೇವೆ. ನೀವು ಇವುಗಳನ್ನು ಅಳವಡಿಸಿಕೊಂಡರೆ, ನಿಮ್ಮ ಅದೃಷ್ಟ ರಾತ್ರೋರಾತ್ರಿ (Overnight Success) ಬದಲಾಗಬಹುದು. ಕೆಲವು ವಿಷಯಗಳನ್ನು ಅರ್ಥಮಾಡಿಕೊಂಡ ವ್ಯಕ್ತಿ ಜೀವನದಲ್ಲಿ ಸಾಧನೆ ಮಾಡುತ್ತಾನೆ ಎಂದು ಚಾಣಕ್ಯ ಹೇಳಿದ್ದಾರೆ. ಆ ಮೂರು ಪ್ರಮುಖ ವಿಷಯಗಳು ಇಲ್ಲಿವೆ ನೋಡಿ.
ಚಾಣಕ್ಯ ಭಾರತದ ಶ್ರೇಷ್ಠ ತಂತ್ರಜ್ಞ, ಅರ್ಥಶಾಸ್ತ್ರಜ್ಞ ಮತ್ತು ವಿದ್ವಾಂಸ. ಈತನನ್ನು ಕೌಟಿಲ್ಯ ಮತ್ತು ವಿಷ್ಣುಗುಪ್ತ ಎಂದೂ ಕರೆಯುವರು. ತನ್ನ ನೀತಿಗಳು ಮತ್ತು ಜ್ಞಾನದಿಂದ, ಇವನು ಚಂದ್ರಗುಪ್ತ ಮೌರ್ಯ ಚಕ್ರವರ್ತಿಯನ್ನು ಸಿಂಹಾಸನಾರೋಹಣ ಮಾಡಿದ್ದನು. ಚಾಣಕ್ಯನ ಮಾತುಗಳು ಆ ಕಾಲದಷ್ಟೇ ಇಂದಿಗೂ ಪ್ರಸ್ತುತ. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಚಾಣಕ್ಯ ಅನೇಕ ಪ್ರಮುಖ ಸಲಹೆ ನೀಡಿದ್ದಾನೆ. ಚಾಣಕ್ಯ ನೀತಿಯು (Chanakya Niti) ಯಶಸ್ಸನ್ನು ಸಾಧಿಸುವ ಅನೇಕ ಆಳವಾದ ರಹಸ್ಯಗಳನ್ನು ಒಳಗೊಂಡಿದೆ. ಇದು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಬಹುದು. ಪ್ರತಿಯೊಬ್ಬರೂ ಯಶಸ್ಸನ್ನು ಸಾಧಿಸಲು ಬಯಸುತ್ತಾರೆ. ಆದರೆ, ಅದರ ಹಿಂದೆ ಸರಿಯಾದ ಚಿಂತನೆ ಮತ್ತು ಸರಿಯಾದ ತಂತ್ರ ಅಗತ್ಯ ಎಂಬುದು ಹಲವು ಜನರಿಗೆ ತಿಳಿದಿಲ್ಲ. ಅವರು ಈ ಮೂರು ರಹಸ್ಯಗಳನ್ನು (3 important Secrets) ತಿಳಿಯಲೇಬೇಕು.

1. ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು
ಸಮಯವು ಜೀವನದ ಅತಿ ದೊಡ್ಡ ಅಸ್ತ್ರ ಎಂದು ಚಾಣಕ್ಯ ಹೇಳಿದ್ದಾರೆ. ಸರಿಯಾದ ಸಮಯದಲ್ಲಿ, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿ ಯಶಸ್ಸಿನ ಉತ್ತುಂಗವನ್ನು ಮುಟ್ಟುತ್ತಾನೆ. ಅನೇಕ ಬಾರಿ ದೊಡ್ಡ ಅವಕಾಶಗಳು ನಮ್ಮ ಮುಂದೆ ಬರುತ್ತವೆ. ಆದರೆ, ನಾವು ಅವುಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ನೀವು ಅವಕಾಶವನ್ನು ಗುರುತಿಸಿ, ತಕ್ಷಣ ನಿರ್ಧಾರ ತೆಗೆದುಕೊಳ್ಳಬೇಕು. ಆಗ ಯಶಸ್ಸು ನಿಮ್ಮ ಪಾದಗಳಿಗೆ ಮುತ್ತಿಡುತ್ತದೆ ಎಂದು ಚಾಣಕ್ಯ ಹೇಳಿದ್ದಾನೆ.
2. ನಿಮ್ಮ ರಹಸ್ಯಗಳನ್ನು ಮುಚ್ಚಿಡಬೇಕು
ನೀವು ಮಾಡಬೇಕಾದ ಮೊದಲ ಕೆಲಸ ನಿಮ್ಮ ರಹಸ್ಯಗಳನ್ನು ರಹಸ್ಯವಾಗಿಡಿ. ಚಾಣಕ್ಯನ ಪ್ರಕಾರ, ನೀವು ನಿಮ್ಮ ರಹಸ್ಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬಾರದು. ನೀವು ನಿಮ್ಮ ಯೋಜನೆಗಳನ್ನು ಎಲ್ಲರಿಗೂ ಬಹಿರಂಗಪಡಿಸಿದಾಗ, ಜನರು ನಿಮ್ಮ ಸಾಧನೆಯ ಹಾದಿಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸಬಹುದು. ನಿಮ್ಮ ಗುರಿಗಳನ್ನು ಸಾಧಿಸುವವರೆಗೆ, ನೀವು ಅವುಗಳನ್ನು ಮುಚ್ಚಿಡಬೇಕು. ಆ ರಹಸ್ಯವು ನಿಮ್ಮನ್ನು ಪ್ರತಿಯೊಂದು ಸನ್ನಿವೇಶದಲ್ಲೂ ಬಲಶಾಲಿಯನ್ನಾಗಿ ರೂಪಿಸುತ್ತದೆ.
3. ವ್ಯಕ್ತಿಯ ದೊಡ್ಡ ದೌರ್ಬಲ್ಯವೇ ಆಸೆಗಳು
ನೀವು ಮೊದಲು ದೌರ್ಬಲ್ಯಗಳನ್ನು ನಿವಾರಿಸಬೇಕು. ಸ್ವಯಂ ನಿಯಂತ್ರಣವೇ ನಿಮ್ಮ ದೊಡ್ಡ ಶಕ್ತಿ. ವ್ಯಕ್ತಿಯ ದೊಡ್ಡ ದೌರ್ಬಲ್ಯ ಅಂದರೆ ಅವನ ಆಸೆಗಳು ಎಂದು ಚಾಣಕ್ಯ ಹೇಳಿದ್ದಾನೆ. ತನ್ನ ದುರಾಸೆ, ಕೋಪ ಮತ್ತು ಅಹಂಕಾರವನ್ನು ನಿಯಂತ್ರಿಸುವ ವ್ಯಕ್ತಿ ಮಾತ್ರ ನಿಜವಾದ ಯಶಸ್ಸನ್ನು ಸಾಧಿಸುತ್ತಾನೆ ಎನ್ನುವುದು ಅವನ ನಂಬಿಕೆ. ನಿಮ್ಮ ದೌರ್ಬಲ್ಯಗಳನ್ನು ನೀವು ಜಯಿಸಲು ಸಾಧ್ಯವಾದರೆ, ಯಾರೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ.
ಇದರ ಜೊತೆಗೆ, ನಿಮ್ಮ ಗುರಿ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ತನ್ನ ಜೀವನದ ಗುರಿಯನ್ನು ಸ್ಪಷ್ಟವಾಗಿ ತಿಳಿದಿರುವ ವ್ಯಕ್ತಿ ಎಂದಿಗೂ ದಾರಿ ತಪ್ಪುವುದಿಲ್ಲ. ಅವನು ಎಲ್ಲಾ ಸಂದರ್ಭಗಳಲ್ಲಿಯೂ ಆ ದಿಕ್ಕಿನಲ್ಲಿ ಕೆಲಸ ಮಾಡುತ್ತಾನೆ. ಗುರಿಯ ಬಗ್ಗೆ ಅವನ ಚಿಂತನೆ ಬಲವಾಗಿರುತ್ತದೆ. ಸರಿಯಾದ ಸಮಯದಲ್ಲಿ ಮಾತನಾಡಿ ಮತ್ತು ಮೌನವಾಗಿರಿ. ಇಂತಹ ಜನರು ಸಮಯ ಮತ್ತು ಕಠಿಣ ಪರಿಶ್ರಮ ಎರಡನ್ನೂ ಸರಿಯಾಗಿ ಬಳಸುತ್ತಾರೆ ಎಂದು ಚಾಣಕ್ಯ ಹೇಳಿದ್ದಾನೆ.



Click it and Unblock the Notifications












