Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಚಿತ್ರದಲ್ಲಿ ಮೂರು 8 ಗುರುತಿಸಬಲ್ಲಿರಾ? ಎಲ್ಲಿದೆ ಗೊತ್ತಾ?
ನಮ್ಮ ಸುತ್ತಲಿನ ಅದೆಷ್ಟೋ ವಸ್ತುಗಳ ಬಗೆಗಿನ ಅಚ್ಚರಿ ವಿಚಾರಗಳು ನಮಗೆ ತಿಳಿದಿವುದೇ ಇಲ್ಲ. ಇಂತಹ ವಿಚಾರಗಳ ನಮ್ಮ ಗಮನಕ್ಕೆ ಬಂದಾಗಲೇ ಅದರ ಕುರಿತು ಮತ್ತಷ್ಟು ಕುತೂಹಲ ಮೂಡುತ್ತದೆ. ಇದೀಗ ಇಲ್ಲೊಂದು ಫೋಟೋ ಸಹ ಇತಹದ್ದೆ ಅಚ್ಚರಿಗೆ ಕಾರಣವಾಗಿದೆ.
ನೀವು ಇಸ್ಪೀಟ್ ಎಲೆಗಳ ನೋಡಿರಬಹುದು. ಜಾದುಗಾರರ ಅತ್ಯಂತ ಪ್ರಿಯವಾದ ವಸ್ತು ಈ ಇಸ್ಪೀಟ್ ಕಾರ್ಡ್‌ಗಳು, ಇದನ್ನೇ ಬಳಸಿ ಅವರು ಜನರಿಗೆ ಅಚ್ಚರಿ ಹುಟ್ಟಿಸುವ ಜಾದು ಮಾಡುತ್ತಾರೆ. ಇನ್ನೊಂದು ಕಡೆ ಇದೇ ಕಾರ್ಡ್‌ಗಳು ಜೂಜಿಗೂ ಬಳಕೆಯಾಗುತ್ತವೆ.

ಆದ್ರೆ ನೀವು ಈ ಎಲೆಗಳ ಹಿಂದೆ ಅಡಗಿರುವ ಕುತೂಹಲಕಾರಿ ಅಂಶಗಳನ್ನು ಎಂದಿಗೂ ಕೇಳಿರುವುದಿಲ್ಲ. ಜೊತೆಗೆ ಅದನ್ನು ನೋಡಿದ್ದರೂ ಗುರುತಿಸಲು ಸಾಧ್ಯವಾಗುವುದಿಲ್ಲ. ಹೀಗೆ ಇಲ್ಲೊಂದು ಡೈಮಂಡ್ 8ರ ಕಾರ್ಡ್ ಸಹ ಇಂತಹ ಅಚ್ಚರಿಗೆ ಕಾರಣವಾಗಿದೆ.
ಈ 8ರ ಸಂಖ್ಯೆ ಹೊಂದಿರುವ ಡೈಮಂಡ್ ಕಾರ್ಡ್‌ನಲ್ಲಿ ಎಷ್ಟು 8 ಬರೆಯಲಾಗಿದೆ ಎಂದು ಪ್ರಶ್ನಿಸುವ ಪೋಸ್ಟ್‌ವೊಂದು ಫೇಸ್‌ಬುಕ್, ಟ್ವಿಟರ್ ಸೇರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲಿದೆ. ಈ ಪೋಸ್ಟ್ ನೋಡಿದ ಮಂದಿ ಈ ಚಿತ್ರದಲ್ಲಿ ಎರಡು 8 ಬರೆಯಲಾಗಿದೆ ಎಂಬ ಉತ್ತರ ನೀಡಿದ್ದಾರೆ.
ನೀವು ಸಹ ಈ ಪೋಸ್ಟ್ ನೋಡಿ ಅದರಲ್ಲಿ ಎರಡು 8 ಗಳಿವೆ. ಮೇಲೆ ಒಂದು ಕೆಳಗೆ ಬಲಗಡೆಯಲ್ಲಿ ಒಂದು 8 ಬರೆಯಲಾಗಿದೆ ಎಂದು ಉತ್ತರಿಸುತ್ತೀರಿ. ಆದರೆ ನಿಮ್ಮ ಈ ಊಹೆ ತಪ್ಪಾಗಿದೆ. ಈ 8ರ ಡೈಮಂಡ್ ಎಲೆಯಲ್ಲಿ ಮೂರು 8 ಇವೆ. ಹೌದು ಗಮನವಿಟ್ಟು ನೋಡಿದಾಗ ಮಾತ್ರ ಆ ಮೂರನೇ 8 ನಿಮ್ಮ ಕಣ್ಣಿಗೆ ಬೀಳುತ್ತದೆ.
ಅಚ್ಚರಿ ಎನಿಸಿದರೆ ಒಮ್ಮೆ ನೀವು 3ನೇ ಎಂಟು ಗುರುತಿಸಿದರೆ ಮತ್ತೆ ಅದು ನಿಮ್ಮ ದೃಷ್ಟಿಯಿಂದ ದೂರ ಮಾಡಲು ಸಾಧ್ಯವಾಗುವುದಿಲ್ಲ. ಮೇಲೆ ಹಾಗೂ ಕೆಳಗೆ ಒಂದೊಂದು 8 ಕಂಡುಬಂದರೆ, ಈ ಎಲೆಯ ಮಧ್ಯದಲ್ಲಿ 8 ಅಕ್ಷರದ ಆಕೃತಿಯೊಂದು ಕಾಣುತ್ತದೆ. ಸರಿಯಾಗಿ ಗಮನವಿಟ್ಟು ನೋಡಿದಾಗ ಮಾತ್ರ ಆ 8 ನಿಮಗೆ ಕಾಣಿಸುತ್ತದೆ.
ಈ ಪೋಸ್ಟ್ ಹಂಚಿಕೊಂಡ ಬಳಿಕ ವೈರಲ್ ಆಗಿದ್ದು, ಇಷ್ಟು ವರ್ಷದಿಂದ ಈ ಕಾರ್ಡ್ ನೋಡಿದ್ದರೂ ಈ ಡೈಮಂಡ್ ಎಲೆಯಲ್ಲಿ ಅಡಗಿದ್ದ 8ನ್ನು ಕಂಡುಹಿಡಿಯಲು ಸಾಧ್ಯವಾಗಿರಲಿಲ್ಲ ಬಹುಶಃ ನಾವೆಲ್ಲರೂ ಒಟ್ಟಿಗೆ ಈ 3ನೇ ಎಂಟನ್ನು ಕಂಡುಹಿಡಿದಿದ್ದೇವೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಇಂತಹ ನೂರಾರು ಅಚ್ಚರಿ ನಮ್ಮ ನಡುವೆ ಇದ್ದರೂ ನಮಗ್ಯಾಕೆ ತಿಳಿಯೋದಿಲ್ಲ. ಯಾರಾದರು ಹೇಳಿದಾಗ ನಮಗೆ ಅಚ್ಚರಿ ಹುಟ್ಟಿಸುತ್ತೆ, ನಾವ್ಯಾಕೆ ಇಷ್ಟು ದಿನ ಇದನ್ನು ಗುರುತಿಸಲಿಲ್ಲ ಎಂಬ ಪ್ರಶ್ನೆ ನಮಗೆ ಕಾಡುತ್ತೆ ಎಂದು ಬರೆದುಕೊಂಡಿದ್ದಾರೆ.
ಇದೊಂದು ಆಪ್ಟಿಕಲ್ ಇಲ್ಯೂಷನ್‌ಗೆ ಸಂಬಂಧಿಸಿದ ಫೋಟೋ ಆಗಿರುವುದರಿಂದ ಕೆಲವರಿಗೆ ಚಿತ್ರದಲ್ಲಿರುವ 3ನೇ ಎಂಟನ್ನು ಹುಡುಕುವುದು ನಿಜವಾಗಲು ಕಷ್ಟವಾಗಿದೆ. ಏಕೆಂದರೆ ಗಮನವಿಟ್ಟು ನೋಡಿದಾಗ ಮಾತ್ರ ಇದು ಕಾನಿಸುತ್ತೆ. ಜೊತೆಗೆ ಫಿಸಿಕಲ್ ನಂಬರ್ ಅಲ್ಲಿ ಕಾಣಿಸುವುದಿಲ್ಲ ಆ ಚಿತ್ರದೊಳಗೆ 3ನೇ 8 ಅಡಗಿರುವುದು ಇಲ್ಲಿ ನೋಡುಗರು ಹುಡುಕಲು ಕಷ್ಟ ಪಡುವಂತೆ ಮಾಡಲಿದೆ.
ಆದರೆ ಮತ್ತೆ ಕೆಲವರಿಗೆ ಇದು ಸುಲಭವಾಗಬಹುದು. ಅದರ ದೃಷ್ಟಿಗೆ ಕೆಲವೇ ಸೆಕೆಂಡುಗಳಲ್ಲಿ 3ನೇ ಎಂಟು ಕಾಣಿಸಬಹುದು. ಆದರೆ ಈ ಪೋಸ್ಟ್ ನೋಡಿದ ಮಂದಿಗೆ ಅಚ್ಚರಿಯಂತು ಕಾದಿತ್ತು. ಏಕೆಂದರೆ ಅವರಿಗೆ ಇಷ್ಟು ವರ್ಷದಲ್ಲಿ ಈ ರೀತಿ ಡೈಮಂಡ್ 8ರ ಕಾರ್ಡ್‌ನಲ್ಲಿ ಮೂರನೇ 8 ಅಡಗಿರುವ ಅಂಶ ತಿಳಿದಿರುವುದಿಲ್ಲ. ನಿತ್ಯವೂ ಈ ಕಾರ್ಡ್‌ಗಳ ನೋಡಿದ್ದವರಿಗೂ ಈ ರೀತಿಯ ಅಚ್ಚರಿ ತಿಳಿದಿರುವುದಿಲ್ಲ.



Click it and Unblock the Notifications
