Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
₹200 ಕೋಟಿ ಮೌಲ್ಯದ ಆಸ್ತಿ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ ದಂಪತಿ..! ಹಣ, ಸಂಪತ್ತು ದಾರಿಗೆ ಚೆಲ್ಲಿದ ಉದ್ಯಮಿ..!
ಮಾನವ ಜೀವನ ಅಂತ್ಯದ ಗುರಿ ಮೋಕ್ಷ ಪಡೆಯಬೇಕು ಎನ್ನುವುದೇ ಆಗಿರುತ್ತೆ. ಒಂದೊಂದು ಧರ್ಮಾನುಸಾರ ಈ ಮೋಕ್ಷಕ್ಕೆ ಬೇರೆ ಅರ್ಥ ಬೇರೆ ಬೇರೆ ದಾರಿಗಳಿವೆ. ಆದರೆ ಮೋಕ್ಷ ಪಡೆಯೋದು ಅಂದ್ರೆ ಅದೇನು ಸುಲಭದ ಮಾತಲ್ಲ. ತನ್ನ ಆಸೆ ಆಕಾಂಕ್ಷೆ, ಸರ್ವ ಸಂಪತ್ತು, ತ್ಯಜಿಸೋದು. ಇದು ಎಲ್ಲರಿಂದಲೂ ಸಾಧ್ಯವಿಲ್ಲ ಅನ್ನೋದು ತಿಳಿದೆಯಿದೆ.
ಮೋಕ್ಷ ಪಡೆದ ನಂತರ ದೇವರನ್ನು ಸೇರುವ ದಾರಿ ಮುಕ್ತವಾಗಿ ತೆರೆಯುತ್ತದೆ ಎಂಬ ನಂಬಿಕೆಯಿದೆ. ಈ ರೀತಿ ಮೋಕ್ಷ ಪಡೆಯಲು ಸನ್ಯಾಸತ್ವ ಸ್ವೀಕರಿಸಿ ನಿರಂತರ ದೇವರ ಧ್ಯಾನದಲ್ಲಿ ಮಗ್ನರಾಗಿ ಮುಕ್ತಿ ಪಡೆದ ಸಾವಿರಾರು ಸಂತರು ನಮ್ಮ ನಡುವೆ ಇದ್ದಾರೆ. ಆದ್ರೆ ಇಂದಿನ ಜಗತ್ತಿನಲ್ಲಿ ಮಾನವ ಆಸೆ ಮತ್ತು ಮೋಕ್ಷದ ನಡುವೆ ಸಿಲುಕಿ ಪರದಾಡುತ್ತಿದ್ದಾನೆ.

ಅಂದ್ರೆ ಆತನಿಗೆ ಆಸೆ ತ್ಯಜಿಸಿ ಮೋಕ್ಷ ಪಡೆಯುವುದು ಅತ್ಯಂತ ಕಷ್ಟದ ಮಾರ್ಗ, ಹೀಗಾಗಿಯೇ ನಾವೊಂದು ಖಾವಿ ಧರಿಸಿರುವವರಲ್ಲಿಯೂ ಕಪಟಿಗಳ ನೋಡುತ್ತಿದ್ದೇವೆ. ಆದ್ರೆ ಇಲ್ಲೊಬ್ಬ ತನ್ನ 200 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತ್ಯಜಿಸಿ ಮೋಕ್ಷ ಮಾರ್ಗವಾದ ಸನ್ಯಾಸತ್ವ ಪಡೆದಿದ್ದಾನೆ. ಆತ ಬಗ್ಗೆ ಕೇಳಿದರೆ ನಿಮಗೂ ಅಚ್ಚರಿಯಾಗಬಹುದು.
ಹಲವಾರು ಕೋಟಿ ಮೌಲ್ಯದ ಸಂಪತ್ತನ್ನು ತ್ಯಜಿಸುವುದು ಮತ್ತು ಸನ್ಯಾಸವನ್ನು ಸ್ವೀಕರಿಸುವುದು ಅಂದರೆ ನಾವು, ನೀವು ಅಂದುಕೊಂಡಷ್ಟು ಸುಲಭವಲ್ಲ. ತಮ್ಮ ಭೌತಿಕ ಐಷಾರಾಮಿಗಳನ್ನು ತ್ಯಜಿಸುವುದು. ಗುಜರಾತ್‌ನ ಈ ಶ್ರೀಮಂತ ಉದ್ಯಮಿ ಮತ್ತು ಅವರ ಪತ್ನಿ ತಮ್ಮ ಗಳಿಕೆ ಮತ್ತು 200 ಕೋಟಿ ಮೌಲ್ಯದ ಆಸ್ತಿಯನ್ನು ತ್ಯಜಿಸಿ ಸನ್ಯಾಸಿತ್ವವನ್ನು ಸ್ವೀಕರಿಸಿದ್ದಾರೆ.
ಭವೇಶ್ ಭಾಯ್ ಭಂಡಾರಿ ಒಬ್ಬ ಉದ್ಯಮಿಯಾಗಿದ್ದು, ಸಬರ್ಕಾಂತ ಮತ್ತು ಅಹಮದಾಬಾದ್‌ನಲ್ಲಿ ವ್ಯವಹಾರಗಳನ್ನು ನಡೆಸುತ್ತಿದ್ದರು. ಭಂಡಾರಿ ಮತ್ತು ಅವರ ಪತ್ನಿ ಫೆಬ್ರವರಿಯಲ್ಲಿ ಕಠಿಣ ಆಧ್ಯಾತ್ಮಿಕತೆಯ ಜೀವನಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡರು. ಅಲ್ಲದ ಸನ್ಯಾಸತ್ವ ಸ್ವೀಕರಿಸುವುದಾಗಿ ನಿರ್ಧರಿಸಿದರು.
ದೀಕ್ಷಾ ಸಮಾರಂಭದಲ್ಲಿ ಎಲ್ಲವನ್ನೂ ತ್ಯಜಿಸಿದ ದಂಪತಿ
ಕುಟುಂಬಸ್ಥರ ಸಮ್ಮುಖದಲ್ಲಿ ತಮ್ಮ ಆಸ್ತಿಗಳ ತ್ಯಜಿಸಲು ಮುಂದಾದರು. ಅವರು 4 ಕಿ.ಮೀ ಮೆರವಣಿಗೆ ಮೂಲಕ ಹಣ, ಐಷಾರಾಮಿ ವಸ್ತುಗಳನ್ನು ತ್ಯಜಿಸಿದರು. ಏಪ್ರಿಲ್ 22 ರ ನಂತರ, ದಂಪತಿಗಳು ಎಲ್ಲಾ ಕುಟುಂಬ ಸಂಬಂಧಗಳನ್ನು ತ್ಯಜಿಸಬೇಕಾಗುತ್ತದೆ ಮತ್ತು ಆಸ್ತಿಯನ್ನು ತ್ಯಜಿಸಿ ಅವರು ಬ್ರಹ್ಮಚರ್ಯವನ್ನು ಅಳವಡಿಸಿಕೊಳ್ಳಬೇಕು, ಬರಿಗಾಲಿನಲ್ಲಿ ನಡೆಯಬೇಕು ಮತ್ತು ಭಿಕ್ಷೆ ಬೇಡಿಕೊಂಡು ಬದುಕಬೇಕು.
ವರದಿಯ ಪ್ರಕಾರ, ದಂಪತಿ ತಮ್ಮ ಮಕ್ಕಳ ಸಮ್ಮುಖದಲ್ಲಿ ಸನ್ಯಾಸತ್ವವನ್ನು ಸೇರಲಿದ್ದಾರೆ. ಅವರ 19 ವರ್ಷದ ಮಗಳು ಮತ್ತು 16 ವರ್ಷದ ಮಗ 2022ರಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದ್ದಾರೆ. ಮಕ್ಕಳಿಂದಲೇ ಸ್ಪೂರ್ತಿ ಪಡೆದು ದಂಪತಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಮೆರವಣಿಗೆಯಲ್ಲಿ ಹಣ, ಮೊಬೈಲ್ ದಾನ
ಮೆರವಣಿಗೆ ಮೂಲಕ ಸಾಗಿದ ದಂಪತಿ ದಾರಿಯುದ್ದಕ್ಕೂ ನೆರೆದಿದ್ದ ಜನರಿಗೆ ಹಣ ಎಸೆದಿದ್ದಾರೆ. ಅಲ್ಲದೆ ಐಷಾರಾಮಿ ಫೋನ್‌ಗಳನ್ನು ಸಹ ಜನರಿಗೆ ನೀಡಿದ್ದಾರೆ. ದಾರಿಯಲ್ಲಿ ಜನ ಅವರ ಎಸೆದಿದ್ದ ಹಣ ಎತ್ತಿಕೊಂಡಿದ್ದಾರೆ. ದಂಪತಿ ಈ ರೀತಿ ಹಣ ಎಸೆಯುತ್ತಿರುವುದನ್ನು ಕಂಡ ಜನ ಅಚ್ಚರಿಗೆ ಒಳಗಾಗಿದ್ದರು.
ಇನ್ನು ಇತ್ತೀಚಿಗೆ ಗುಜರಾತ್‌ನ ಉದ್ಯಮಿಗಳು ಸನ್ಯಾಸತ್ವ ಸ್ವೀಕರಿಸುತ್ತಿರುವ ಪ್ರಸಂಗಗಳು ಹೆಚ್ಚಾಗುತ್ತಿವೆ. ಈ ಮೊದಲು 2015ರಲ್ಲಿ ಪ್ಲಾಸ್ಟಿಕ್ ಉದ್ಯಮದಲ್ಲಿ ಕೋಟಿ ಕೋಟಿ ಸಂಪತ್ತು ಹೊಂದಿದ್ದ ಭವರ್‌ಲಾಲ್ ದೋಶಿ ಸನ್ಯಾಸತ್ವ ಸ್ವೀಕರಿಸಿ ಇಡೀ ದೇಶದಲ್ಲಿ ಸುದ್ದಿಯಾಗಿದ್ದರು. ಅವರು ಸನ್ಯಾಸ ಪಡೆಯುತ್ತಿದ್ದರೆ ಇಡೀ ಆಸ್ತಿ ತ್ಯಜಿಸಿದ್ದಲ್ಲದೆ ಸಾವಿರಾರು ಮಂದಿ ಬೆಳ್ಳಿ ನಾಣ್ಯಗಳ ದಾನವಾಗಿ ನೀಡಿ ಸುದ್ದಿಯಾಗಿದ್ದರು.



Click it and Unblock the Notifications