Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
₹25 ಸಾವಿರದಿಂದ ಆರಂಭಗೊಂಡ ಉದ್ಯಮ ಈಗ ₹5,947 ಕೋಟಿ ವ್ಯವಹಾರ
ಯಾರು ಶ್ರಮ ಹಾಕಿ ತಮ್ಮ ಜೀವನದಲ್ಲಿ ಮುಂದೆ ಬರಬೇಕು ಎಂದು ಕೆಲಸ ಆರಂಭಿಸಿರುತ್ತಾರೋ ಅಂತವರು ತಮ್ಮ ಕೆಲಸದಲ್ಲಿ ಯಶಸ್ಸು ಸಾಧಿಸಿಯೇ ಸಾಧಿಸುತ್ತಾರೆ. ಮತ್ತೆ ಕೆಲವರು ಹಣವಿದ್ದರೂ ಅದೆಷ್ಟೇ ದೊಡ್ಡ ಮಟ್ಟದ ಉದ್ಯಮ ಆರಂಭಿಸಿದರೂ ಸಹ ಯಶಸ್ಸು ಅನ್ನೋದು ಮರಿಚಿಕೆಯಾಗುತ್ತದೆ. ಅದ್ರಲ್ಲೂ ಆರಂಭದ ದಿನದಲ್ಲಿ ಕಷ್ಟಪಟ್ಟು ಜೀವನ ನಡೆಸಿ ಬಳಿಕ ಕೋಟಿ ಕೋಟಿ ಆದಾಯದ ಕಂಪನಿ ಕಟ್ಟಿದವರನ್ನು ಸಹ ನಾವು ನೋಡಬಹುದು.
ಇದಕ್ಕೆ ಸಣ್ಣ ಉದಾಹರಣೆ ಅಂದರೆ ವಿಆರ್‌ಎಲ್ ಕಂಪನಿ, ನಮ್ಮ ರಾಜ್ಯದ ವಿಜಯಾನಂದ ರೋಡ್‌ಲೈನ್ಸ್ ಲಿಮಿಟೆಡ್ ಈ ಸಾಲಿಗೆ ಸೇರಿಸಬಹುದು. ಒಂದು ಲಾರಿಯಿಂದ ಆರಂಭಗೊಂಡಿದ್ದ ಸಂಸ್ಥೆ ಬಳಿಕ ದೊಡ್ಡ ಹೆಮ್ಮರವಾಗಿ ಕೋಟಿ ಕೋಟಿ ಆದಾಯದ ಬೃಹತ್ ಕಂಪನಿಯಾಗಿ ಬೆಳೆದಿತ್ತು. ಇದೇ ಸಾಲಿಗೆ ಮತ್ತೊಂದು ಕಂಪನಿಯನ್ನು ಸಹ ನಾವು ನೆನೆಯಬಹುದು.

ಈ ಸಂಸ್ಥೆ ಕೇವಲ 25 ಸಾವಿರ ರೂಪಾಯಿ ಹೂಡಿಕೆಯೊಂದಿಗೆ ಆರಂಭಗೊಂಡು ಬರೋಬ್ಬರಿ 5,947 ಕೋಟಿ ರೂಪಾಯಿಯ ಬೃಹತ್ ಕಂಪನಿಯಾಗಿ ಈಗ ಮಾರ್ಪಟ್ಟಿದೆ. ಹಾಗೆ ವ್ಯಾಪಾರ ಈಗ ವಿದೇಶಕ್ಕೂ ಹರಡಿದೆ. ಹಾಗಾದ್ರೆ ಯಾರು ಈ ಉದ್ಯಮಿ ಅವರು ಆರಂಭಿಸಿದ ಉದ್ಯಮ ಏನು ಎಂಬುದನ್ನು ನಾವಿಂದು ನೋಡೋಣ.
ರಾಜ್ಯದ ಶಶಿ ಕಿರಣ್ ಶೆಟ್ಟಿ ಎಂಬಾತ 1957ರಲ್ಲಿ ಜನಿಸಿದ್ದರು. ಅವರು ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ವಾಣಿಜ್ಯ ಶಿಕ್ಷಣವನ್ನು ಪಡೆದರು ಮತ್ತು ನಂತರ 1978 ರಲ್ಲಿ ಉದ್ಯೋಗಾವಕಾಗಿ ಊರು ಬಿಟ್ಟಿದ್ದರು. ಮುಂಬೈಗೆ ಬಂದಿಳಿದಿದ್ದ ಅವರು ಇಂಟರ್‌ಮೋಡಲ್ ಟ್ರಾನ್ಸ್‌ಪೋರ್ಟ್ ಮತ್ತು ಟ್ರೇಡಿಂಗ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಮತ್ತು ನಂತರ ಫೋರ್ಬ್ಸ್ ಗೋಕಾಕ್‌ನಲ್ಲಿ ಕೆಲಸ ಮಾಡಿದರು.
ಕೇವಲ 29 ನೇ ವಯಸ್ಸಿನಲ್ಲಿ, ಅವರು ಬೇರೆ ಕಂಪನಿಯ ಕೆಳಗೆ ದುಡಿಯುವುದನ್ನು ನಿಲ್ಲಿಸಲು ನಿರ್ಧರಿಸಿದರು. ಹೀಗಾಗಿ ತಮ್ಮ ಸ್ವಂತ ಉದ್ಯಮ ಕಟ್ಟಲು ಮುಂದಾದ ಅವರು 1994ರಲ್ಲಿ ಆಲ್ಕಾರ್ಗೋ ಲಾಜಿಸ್ಟಿಕ್ಸ್ ಲಿಮಿಟೆಡ್ ಎಂಬ ಕಂಪನಿ ಆರಂಭಿಸಿಯೇ ಬಿಟ್ಟರು. ಇದಕ್ಕೆ ಕೇವಲ 25 ಸಾವಿರ ರೂಪಾಯಿ ಬಂಡವಾಳ ಹೂಡಿದ್ದರು.
ಇಂದು, 4,500 ಜನರ ಕ್ರಿಯಾತ್ಮಕ ತಂಡವನ್ನು ನೇಮಿಸಿಕೊಂಡಿರುವ ಆಲ್‌ಕಾರ್ಗೋ ಗ್ರೂಪ್, ಜಗತ್ತಿನಾದ್ಯಂತ 180 ಕ್ಕೂ ಹೆಚ್ಚು ದೇಶಗಳಲ್ಲಿ ಮಹತ್ವದ ಅಸ್ತಿತ್ವವನ್ನು ಇಟ್ಟುಕೊಂಡಿದೆ. ಕಂಪನಿಯು ವಿಶ್ವದ ಅತಿದೊಡ್ಡ LCL ಕನ್ಸಾಲಿಡೇಟರ್ ಆಗಿದೆ. LCL ಎಂದರೆ 'ಕಂಟೇನರ್ ಲೋಡ್ ಗಿಂತ ಕಡಿಮೆ ತೂಕ' ಅಂದರೆ ಸಂಪೂರ್ಣ ಕಂಟೇನರ್ ಅನ್ನು ತುಂಬಲು ಸರಕುಗಳು ಸಾಕಾಗದೇ ಇದ್ದಾಗ ಬಳಕೆಯಾಗುವ ಕಂಟೇನರ್‌ನಳಾಗಿವೆ.
ಪ್ರಸ್ತುತ, ಆಲ್‌ಕಾರ್ಗೋ ಲಾಜಿಸ್ಟಿಕ್ಸ್ 5,947 ಕೋಟಿ ರೂ.ಗಳ ದೊಡ್ಡ ಮಾರುಕಟ್ಟೆ ಹೊಂದಿದೆ. ಜೊತೆಗೆ ವಿದೇಶದಲ್ಲಿ ಈ ಕಂಪನಿ ಬಂಡವಾಳ ಹೂಡಿಕೆಯನ್ನು ತನ್ನತ್ತ ಸೆಳೆಯುತ್ತಿದೆ. ಭಾರತದಲ್ಲೂ ಈ ಸಂಸ್ಥೆ ಈಗ ದೊಡ್ಡದಾಗಿ ಬೆಳೆದಿದೆ. ಕೇವಲ 25 ಸಾವಿರ ರೂಪಾಯಿಯಿಂದ ಆರಂಭಗೊಂಡ ಅವರ ಉದ್ಯಮ ಈಗ ಸಾವಿರಾರು ಮಂದಿಗೆ ಉದ್ಯೋಗ ನೀಡುವ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ.



Click it and Unblock the Notifications
