Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಬಜೆಟ್‌ಗೂ ಮುನ್ನ ಹಲ್ವಾ ಸಮಾರಂಭ ನಡೆಸುವುದೇಕೆ.? ಏನಿದರ ಮಹತ್ವ ಗೊತ್ತಾ?
ಕೇಂದ್ರ ಸರ್ಕಾರವು 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಲು ತಯಾರಿ ನಡೆಸಿದೆ. ನಾಳೆ ಅಂದರೆ ಫೆಬ್ರುವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭರ್ಜರಿ 6ನೇ ಬಾರಿ ಬಜೆಟ್ ಮಂಡಿಸಲಿದ್ದಾರೆ. ಹೀಗಾಗಿ ಈ ಬಜೆಟ್‌ನಲ್ಲಿ ದೇಶದ ಜನರಿಗೆ ಯಾವೆಲ್ಲಾ ಉಡುಗೊರೆ ಸಿಗಲಿದೆ ಎಂಬ ಕಾತರದಲ್ಲಿ ಜನ ಕಾಯುತ್ತಿದ್ದಾರೆ.
ಅಲ್ಲದೆ ಇದೇ ವರ್ಷ ಲೋಕಸಭಾ ಚುನಾವಣೆಯೂ ಘೋಷಣೆಯಾಗುವುದರಿಂದ ಈ ಬಜೆಟ್ ಮೇಲೆ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಆದರೆ ಚುನಾವಣೆ ಅಂತ್ಯಗೊಂಡು ಬರುವ ಸರ್ಕಾರ ಸಹ ಮತ್ತೊಂದು ಬಜೆಟ್ ಮಂಡಿಸಲಿದೆ. ಹೀಗಾಗಿ ಇದು ಮಧ್ಯಂತರ ಬಜೆಟ್ ಆಗಿದೆ.

ಇನ್ನು ಈ ಬಜೆಟ್ ಮಂಡನೆಗೂ ಮುನ್ನ ನಡೆಯುವ ಕೆಲವು ಘಟನಾವಳಿಗಳು ಅಚ್ಚರಿಗೆ ಕಾರಣವಾಗುತ್ತದೆ. ಅದರಲ್ಲೂ ಬಜೆಟ್‌ಗೂ ಮುನ್ನ 'ಹಲ್ವಾ ಸಮಾರಂಭ' ನಡೆಸುವುದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಖುದ್ದು ಹಣಕಾಸು ಮಂತ್ರಿಗಳೇ ಹಲ್ವಾ ತಯಾರಿಸಿ ಹಂಚಿ ಸಂಭ್ರಮಿಸುವ ಒಂದು ವಿಭಿನ್ನ ಆಚರಣೆಯಾಗಿದೆ.
ಹಾಗಾದರೆ ಈ ಸಂಪ್ರದಾಯ ಏಕೆ ಆರಂಭಿಸಿದ್ದಾರೆ. ಇದರ ಹಿಂದಿರುವ ಕಥೆ ಏನು?, ಈ ರೀತಿ ಹಲ್ವಾ ಹಂಚುವ ಸಂಭ್ರಮ ಆರಂಭಿಸಿದ್ದು ಯಾರು? ಹೀಗೆ ನಿಮ್ಮಲ್ಲಿರುವ ಹತ್ತಾರು ಪ್ರಶ್ನೆಗಳಿಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ.
ಬಜೆಟ್ ಮಂಡಿಸುವುದು ಮತ್ತು ತಯಾರಿ ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಬಜೆಟ್ ಮಂಡನೆಯಾಗುತ್ತಿರುವ ವರ್ಷದಲ್ಲಿ ಪ್ರತಿಯೊಂದು ಸಚಿವಾಲಯದ ಅಧಿಕಾರಿಗಳು ಹಗಲು ರಾತ್ರಿ ಎನ್ನದೆ ಕೆಲಸ ಮಾಡಬೇಕಾಗುತ್ತದೆ. ಸತತ 6ರಿಂದ 7 ತಿಂಗಳ ಕಠಿಣ ಪರಿಶ್ರಮದ ಬಳಿಕ ಬಜೆಟ್ ಪುಸ್ತಕ ತಯಾರಾಗುತ್ತದೆ. ಈ ಬಜೆಟ್ ಪುಸ್ತಕ ತಯಾರಾಗುವ ಮುನ್ನ ಸಚಿವಾಲಯಗಳ ಪರಿಶ್ರಮವನ್ನು ಸ್ಮರಿಸಲು ಹಲ್ವಾ ತಯಾರಿಸಲಾಗುತ್ತದೆ.
ದೊಡ್ಡ ಖಡಾಯಿಯಲ್ಲಿ ಹಲ್ವಾವನ್ನು ತಯಾರಿಸಲಾಗುತ್ತದೆ. ಇದಕ್ಕೆ ಎಲ್ಲಾ ಸಚಿವಾಲಯದ ಅಧಿಕಾರಿಗಳು ಸಾಥ್ ನೀಡಿರುತ್ತಾರೆ. ಅಲ್ಲದೆ ಖುದ್ದು ಹಣಕಾಸು ಸಚಿವರು ಸಹ ಭಾಗಿಯಾಗುತ್ತಾರೆ. ಬಜೆಟ್ ಮಂಡನೆಗೂ ಮುನ್ನ ಸಿಹಿ ಹಂಚಿ ಸಂಭ್ರಮಿಸುತ್ತಾರೆ. ಈ ಸಂಪ್ರದಾಯ ಬಹಳ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ.
ಪ್ರಸಿದ್ಧ ಭಾರತೀಯ ಸಿಹಿತಿಂಡಿಯಾದ ಹಲ್ವಾವನ್ನು ಬೃಹತ್ ಭಕ್ಷ್ಯದಲ್ಲಿ ತಯಾರಿಸಲಾಗುತ್ತದೆ ಮತ್ತು ಹಣಕಾಸು ಸಚಿವಾಲಯದ ಸದಸ್ಯರಿಗೆ ಬಡಿಸಲಾಗುತ್ತದೆ. ಹಣಕಾಸು ಸಚಿವರು ಖಾದ್ಯವನ್ನು ಬೆರೆಸಿ ತಮ್ಮ ತಂಡದ ಸದಸ್ಯರಿಗೆ ನೀಡುತ್ತಾರೆ, ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ಗುರುತಿಸುತ್ತಾರೆ. ಬಜೆಟ್ ಪೂರ್ವ ಹಲ್ವಾ ಸಮಾರಂಭವು ಬಜೆಟ್ ಅನ್ನು ಘೋಷಿಸುವ ಮೊದಲು 9-10 ದಿನಗಳವರೆಗೆ ಬಜೆಟ್ ತಯಾರಿಕೆಯಲ್ಲಿ ತೊಡಗಿರುವ ತಂಡದ ಪ್ರತ್ಯೇಕತೆಯನ್ನು ಪ್ರಾರಂಭಿಸುತ್ತದೆ.
ಬಜೆಟ್ ಪ್ರತಿಗಳಿರುವ ಹಣಕಾಸು ಸಚಿವಾಲಯದ ಉತ್ತರ ಬ್ಲಾಕ್ ಅನ್ನು ಸಾರ್ವಜನಿಕರಿಗೆ ಕಾಣದಂತೆ ಸಂಪೂರ್ಣವಾಗಿ ಮುಚ್ಚಲಾಗುತ್ತದೆ. 1950 ರಲ್ಲಿ ಬಜೆಟ್ ಸೋರಿಕೆಯಾಗಿ ಭಾರೀ ಸುದ್ದಿಯಾಗಿತ್ತು. ಇದಾದ ಬಳಿಕ ತುಂಬ ಭದ್ರತೆಯಲ್ಲಿ ಈ ಕೆಲಸ ಕಾರ್ಯಗಳಯ ನಡೆಯುತ್ತವೆ.
ಭಾರತದ ಮೊಟ್ಟ ಮೊದಲ ಬಜೆಟ್ ಮಂಡಿಸಿದ್ದು ಯಾರು?
ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಕೆಲಸ ಮಾಡುವ ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಜೇಮ್ಸ್ ವಿಲ್ಸನ್ 1860 ರಲ್ಲಿ ಬ್ರಿಟಿಷರ ಕಾಲದಲ್ಲಿ ಭಾರತದ ಮೊದಲ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದ.
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಗರಿಷ್ಠ ಹತ್ತು ಬಜೆಟ್‌ಗಳನ್ನು ಮಂಡಿಸಿದ ದಾಖಲೆ ಹೊಂದಿದ್ದಾರೆ. ಆದಾಗ್ಯೂ, ಮುಂಬರುವ ಮಧ್ಯಂತರ ಬಜೆಟ್ ನಂತರ, ನಿರ್ಮಲಾ ಸೀತಾರಾಮನ್ ಅವರು ಗರಿಷ್ಠ ಕೇಂದ್ರ ಬಜೆಟ್‌ಗಳನ್ನು ಮಂಡಿಸಿರುವ ಸಾಲಿಗೆ ಸೇರಲಿದ್ದಾರೆ.



Click it and Unblock the Notifications
