Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪತಿಯ ಕಿರುಕುಳಕ್ಕೆ ಬೇಸತ್ತು ಮದುವೆಯಾದ ಮಹಿಳೆಯರು! ಇನ್ಸ್‌ಸ್ಟಾಗ್ರಾಮ್‌ನಿಂದ ಹುಟ್ಟಿಕೊಂಡ ಪ್ರೀತಿಯಂತೆ..!
ಇತ್ತೀಚಿನ ದಿನಗಳಲ್ಲಿ ನಾವು ಚಿತ್ರ ವಿಚಿತ್ರ ಮದುವೆ ಘಟನೆಗಳ ನೋಡುತ್ತಿದ್ದೇವೆ. ಈಗ ಇದೇ ಸಾಲಿಗೆ ಇಬ್ಬರು ಮಹಿಳೆಯರು ಪರಸ್ಪರ ಒಪ್ಪಿ ಮದುವೆಯಾಗಿರುವ ಅಪರೂಪದ ಘಟನೆ ನಡೆದಿದೆ. ಪತಿ ಮದ್ಯ ಸೇವಿಸಿ ಹಿಂಸೆ ನೀಡುತ್ತಿದ್ದ ಎಂಬ ಕಾರಣದಿಂದ ಇಬ್ಬರು ಮಹಿಳೆಯರು ಮದುವೆಯಾಗಿದ್ದಾರೆ. ಉತ್ತರ ಪ್ರದೇಶದ ಗೋರಖ್‌ಪುರ್‌ನ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.
ಕವಿತಾ ಮತ್ತು ಗುಂಜಾ ಎಂಬ ಇಬ್ಬರು ಮನೆ ಬಿಟ್ಟು ಬಂದು ಮದುವೆಯಾಗಲು ನಿರ್ಧರಿಸಿ, ಬಳಿಕ ಶಿವನ ದೇವಾಲಯದಲ್ಲಿ ಹಾರ ಬದಲಾಯಿಸಿಕೊಂಡಿದ್ದಾರೆ. ಹಾಗೆ ಈ ವೇಳೆ ಹಿಂಸೆ ರಹಿತ, ಸುಖ ಜೀವನ ನಡೆಸುವುದಾಗಿ ಇಬ್ಬರೂ ಪ್ರತಿಜ್ಞೆ ಮಾಡಿದ್ದಾರೆ. ಸದ್ಯ ಇಬ್ಬರ ಮದುವೆ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗೆ ಹಲವು ರೀತಿಯ ಅಭಿಪ್ರಾಯಗಳು ಕೂಡ ಕೇಳಿಬರುತ್ತಿವೆ.

ಇಬ್ಬರ ಮನೆಯಲ್ಲೂ ಪತಿ ಮದ್ಯವ್ಯಸನಿಯಾಗಿದ್ದು, ಯಾವಾಗಲು ಕುಡಿದು ಬಂದು ಗಲಾಟೆ ಮಾಡುವುದು ಮಾಡುತ್ತಿದ್ದನಂತೆ. ಆದರೆ ಈ ಇಬ್ಬರಿಗೂ ಇನ್ಸ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿತ್ತು. ನಂತರ ಮಾತುಕತೆಯ ಹಂತ ತಲುಪಿತ್ತು. ಇದಾಗಿ ಹಲವು ತಿಂಗಳುಗಳ ಕಾಲ ಮನೆ ಬಿಟ್ಟು ಬರುವ ನಿರ್ಧಾರ ಕುರಿತು ಇಬ್ಬರು ಆಲೋಚಿಸಿದ್ದರು. ಹಾಗೆ ಕೊನೆಯಲ್ಲಿ ಪತಿಯ ಬಿಟ್ಟು ಬಂದು ಮದುವೆಯಾಗಿದ್ದಾರೆ.
ನಮ್ಮ ಗಂಡಂದಿರ ಮದ್ಯಪಾನ ಮತ್ತು ನಿಂದನೆಯಿಂದ ಮುಕ್ತಿ ಪಡೆಯಲು ನಾವು ಬಯಸಿದ್ದೆವು. ಶಾಂತಿ, ಪ್ರೀತಿಯ ಜೀವನದ ಕನಸು ಕಂಡಿದ್ದೆವು. ಹೀಗಾಗಿ ಗೋರಖ್‌ಪುರ್‌ನಲ್ಲಿ ನಾವು ದಂಪತಿಯಾಗಿ ಜೀವಿಸಲು ಮುಂದಾಗಿದ್ದೇವೆ ಎಂದು ಇಬ್ಬರು ಹೇಳಿಕೊಂಡಿದ್ದಾರೆ.
ಭಾರತದಲ್ಲಿ ಸಲಿಂಗ ವಿವಾಹ ಕಾನೂನು ಏನು ಹೇಳುತ್ತೆ?
ಭಾರತದಲ್ಲಿ ಸಲಿಂಗ ವಿವಾಹ ಎಂಬುದು ಇನ್ನೂ ಕಾನೂನು ಬದ್ದವಾಗಿಲ್ಲ. ಸದ್ಯಕ್ಕೆ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕೇ ಬೇಡವೇ ಎಂಬ ವಾದ ಇನ್ನೂ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಆದರೆ ಸಲಿಂಗಕಾಮಕ್ಕೆ ಭಾರತದಲ್ಲಿ ಕಾನೂನಿನಿಂದ ಅಡ್ಡಿಯಿಲ್ಲ ಆದರೆ ವಿವಾಹಕ್ಕೆ ಇನ್ನು ಮಾನ್ಯತೆ ಸಿಕ್ಕಿಲ್ಲ. ಸಲಿಂಗ ವಿವಾಹಕ್ಕೆ ಅವಕಾಶ ಕಲ್ಪಿಸಲು ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಬದಲಾವಣೆ ಕುರಿತು ಸಂಸತ್ತು ನಿರ್ಧರಿಸಬೇಕಿದೆ. ಆದ್ರೆ ಕೇಂದ್ರ ಸರ್ಕಾರ ಈ ಸಲಿಂಗ ವಿವಾಹದ ವಿರುದ್ಧ ವಾದ ಮಾಡುತ್ತಾ ಬಂದಿದೆ. ಹಾಗೆ ಸಂವಿಧಾನದಲ್ಲಿಯೂ ಕೂಡ ಈ ಕುರಿತ ಹಕ್ಕುಗಳ ಉಲ್ಲೇಖವಿಲ್ಲ. ಹೀಗಾಗಿ ಭಾರತದಲ್ಲಿ ಇಂದಿಗೂ ಸಲಿಂಗ ವಿವಾಹ ಕುರಿತು ಕಾನೂನು ಜಾರಿಯಾಗಿಲ್ಲ.
ಆದ್ರೆ ಸಲಿಂಗ ವಿವಾಹ ಆಗುವ ಮಂದಿಗೆ ಕಾನೂನಿನಿಂದ ಅಡ್ಡಿಯಾಗುತ್ತಿದ್ದರೂ ಭಾರತದಲ್ಲಿಯೂ ಕೂಡ ಸಲಿಂಗ ವಿವಾಹ ಸಂಖ್ಯೆ ಏರುಗತಿಯಲ್ಲಿದೆ. ಆದರೆ ಅವರಿಗೆ ಸಂವಿಧಾನಾತ್ಮಕವಾಗಿ ಸಿಗುವಂತಹ ಹಲವು ಹಕ್ಕುಗಳು ಮಾತ್ರ ಸಿಗುತ್ತಿಲ್ಲ. ಜೋಡಿಯು ಮಕ್ಕಳನ್ನು ದತ್ತು ಪಡೆಯುವ ಹಕ್ಕಿಲ್ಲ. ಹಾಗೆ ವಿಮೆ, ವಿವಾಹನಂತರದ ಹಕ್ಕುಗಳ ಪಡೆಯುವಲ್ಲಿ ಅವರು ವಿಫಲರಾಗುತ್ತಾರೆ.
ಭಾರತದ ಸೇರಿದಂತೆ ಕೆಲವೊಂದು ರಾಷ್ಟ್ರಗಳನ್ನು ಹೊರತುಪಡಿಸಿ ವಿಶ್ವದ ಸುಮಾರು 30ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸಲಿಂಗ ವಿವಾಹ ಕಾನೂನು ಬದ್ಧವಾಗಿದೆ. ಅದರಲ್ಲೂ ಹಲವು ದೇಶಗಳಲ್ಲಿ ಜನರ ಅಭಿಪ್ರಾಯ ಪಡೆದುಕೊಂಡು ಈ ಕಾನೂನು ಜಾರಿ ಮಾಡಲಾಗಿದೆ. ಇನ್ನು ಕೆಲವು ದೇಶಗಳಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆಯೂ ಇಲ್ಲ ಜೊತೆಗೆ ಅದನ್ನು ನಿಷೇಧಿಸಿಯೂ ಇಲ್ಲ. ಮೊಟ್ಟ ಮೊದಲ ಬಾರಿಗೆ ಸಲಿಂಗ ಮದುವೆಯನ್ನು ಕಾನೂನು ಮಾಡಿ ಅದನ್ನು ಒಪ್ಪಿಕೊಂಡಿದ್ದ ನೆದರ್ಲ್ಯಾಂಡ್ ದೇಶವಾಗಿದೆ. 2000ನೇ ಇಸವಿಯಲ್ಲಿಯೇ ಈ ಪುಟ್ಟ ದೇಶ ಈ ರೀತಿ ಕಾನೂನು ಜಾರಿ ಮಾಡಿತ್ತು.



Click it and Unblock the Notifications
