Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬ್ರೆಡ್ ತಯಾರಿಸುವ ವೀಡಿಯೋ ವೈರಲ್: ನೋಡಿದರೆ ಮತ್ತೆ ಬ್ರೆಡ್ ತಿನ್ನೋಕೆ ಮನಸ್ಸು ಬರಲ್ಲ
ಬ್ರೆಡ್ ಟೇಸ್ಟ್ ಮಾಡದವರು ಇರಲ್ಲ ಅಂತ ಹೇಳಬಹುದು. ಜ್ವರ ಬಂದರೆ ತಿನ್ನುವುದೇ ಬ್ರೆಡ್, ಇನ್ನು ಕೆಲವರಿಗೆ ಬೆಳಗ್ಗಿನ ಬ್ರೇಕ್‌ಫಾಸ್ಟೇ ಬ್ರೆಡ್ ಜಾಮೂನು ಆಗಿರುತ್ತದೆ. ಆದರೆ ಇದನ್ನು ಕೆಲವು ಕಡೆ ತಯಾರಿಸುವ ರೀತಿ ನೋಡಿದರೆ ಇದೆಯೆಲ್ಲಾ ವಾಕರಿಕೆ ಬರುತ್ತದೆ, ಹೌದು ಅಂಥದ್ದೊಂದು ವೀಡಿಯೋ ವೈರಲ್ ಆಗುತ್ತಿದೆ.

ಈ ವೀಡಿಯೋ ಉತ್ತರ ಪ್ರದೇಶದ ಕಾನ್ಪುರದ ಫ್ಯಾಕ್ಟರಿಯ ವೀಡಿಯೋ ಎಂದು ಹೇಳಲಾಗುವುದು, ಒಂದಿಷ್ಟೂ ಶುಚಿತ್ವಯಿಲ್ಲದೆ ಬ್ರೆಡ್ ಅನ್ನು ಹೀಗೆ ತಯಾರಿಸುತ್ತಿದ್ದಾರಲ್ಲಾ ಎಂದು ಅನಿಸುವುದು. ಈ ಫ್ಯಾಕ್ಟರಿಯಲ್ಲಿ ತುಂಬಾ ಜನ ಕೆಲಸಗಾರರು ಇದ್ದಾರೆ ಆದರೆ ಅವರಲ್ಲಿ ಅ ಒಬ್ಬರೂ ಶುಚಿತ್ವದ ಕಡೆಗೆ ಸ್ವಲ್ಪವೂ ಗಮನ ಕೊಟ್ಟಂತೆ ಇಲ್ಲ.
ಹಿಟ್ಟನ್ನು ಮೆಷಿನ್‌ನಲ್ಲಿ ಕಲಿಸಲಾಗುವುದು ನಂತರ ಅದನ್ನು ಬ್ರೆಡ್ ಟ್ರೇಗೆ ಹಾಕಿ ಬೇಯಿಸಲಾಗುವುದು, ನಂತರ ಕತ್ತರಿಸಲಾಗುವುದು ಅದಾಗಿ ಅದರ ಬಿಸಿ ಕಡಿಮೆಯಾಗಲಿ ಚಾಪೆ ಮೇಲೆ ಹರಡಲಾಗುವುದು, ನಂತರ ಪ್ಲಾಸ್ಟಿಕ್ ಕವರ್‌ನಲ್ಲಿ ತುಂಬಲಾಗುವುದು, ಆದರೆ ಇಷ್ಟು ಪ್ರೊಸೆಸ್‌ನಲ್ಲಿ ಎಲ್ಲಿಯೂ ಶುಚಿತ್ವಕ್ಕೆ ಕಿಂಚಿತ್ತೂ ಬೆಲೆ ನೀಡಲಿಲ್ಲ, ಈ ವೀಡಿಯೋ ನೋಡಿದವರೂ ಒಂದಿಷ್ಟೂ ಶುಚಿತ್ವ ಕಾಪಾಡಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಬ್ರೆಡ್‌ಸ್ನ್ಯಾಕ್ಸ್, ಸ್ಯಾಂಡ್‌ವಿಚ್ ಅಂತ ಸವಿಯುತ್ತೇವೆ, ಅದನ್ನು ಮಾಡಿರುವ ರೀತಿ ನೋಡಿದರೆ ಅಬ್ಬಾ, ಈಗ ಹಿಟ್ಟು ಕಲೆಸಲು ಮಿಷನ್ ಇದೆ, ಕೆಲವು ಕಡೆ ಆ ಹಿಟ್ಟನ್ನು ಹೇಗೆ ಕಲೆಸುತ್ತಾರೋ ದೇವರಿಗೇ ಗೊತ್ತು... ಕಾಲಿನಲ್ಲಿ ಬ್ರೆಡ್ ಹಿಟ್ಟು ಕಲೆಸುತ್ತಾರೆ ಎಂದು ಕೂಡ ಕೇಳಿದ್ದೇನೆ, ಇದು ಬರೀ ಬ್ರೆಡ್ ಕತೆಯಲ್ಲ, ಪಾನಿಪುರಿ ಕತೆ ಕೂಡ ಇದೆಯೇ, ತೀರಾ ಶುಚಿತ್ವ ಇಲ್ಲದೆ ತಯಾರಿಸುವ ಎಷ್ಟೋ ವೀಡಿಯೋಗಳು ಬಂದಿವೆ.
' ಮತ್ತೊಂದು ವೀಡಿಯೋದಲ್ಲಿ ಬ್ರೆಡ್ ತಯಾರಕರ ವೀಡಿಯೋವೊಂದನ್ನು ಹಾಕಿ ಅವರನ್ನು unsung heroes ಎಂದು ಕರೆದಿದ್ದಾರೆ, ಅದರಲ್ಲಿ ಬ್ರೆಡ್, ಬನ್‌ಗಳನ್ನು ಹೇಗೆ ತಯಾರಿಸಲಾಗುವುದು, ಪ್ರತಿನಿತ್ಯ ಜನರ ಹಸಿವು ನೀಗಿಸಲು ತಾವು ಬೆಂಕಿ ಸಮೀಪ ಗಂಟೆ ಗಟ್ಟಲೆ ನಿಂತು ಬೆಂದು ಹೇಗೆ ಕಷ್ಟಪಡುತ್ತಿದ್ದಾರೆ ಎಂದು ತೋರಿಸಲಾಗಿದೆ. ಇದು ಗೋವಾದ ಪ್ರಸಿದ್ಧ ಬೇಕರಿಯ ವೀಡಿಯೋ ಆಗಿದೆ.
ಒಟ್ಟಿನಲ್ಲಿ ಈ ವೀಡಿಯೋಗಳನ್ನು ನೋಡಿದಾಗ ನಿಮಗೆ ಏನು ಅನಿಸುತ್ತೆ ಕಮೆಂಟ್ ಮಾಡಿ..



Click it and Unblock the Notifications
