Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬ್ರೈನ್ ಡೆತ್ ಆಗಿದ್ದ ವ್ಯಕ್ತಿ ಅಂಗಾಂಗ ತೆಗೆಯಲು ಆಪರೇಷನ್ ಮಾಡುವಾಗ ಎದ್ದು ಕುಳಿತ: ಈಗ ಆ ವೈದ್ಯರಲ್ಲಾ ಸಸ್ಪೆಂಡ್ ಆಗಿದ್ದಾರೆ
ಆತ ದೊಡ್ಡ ಮಾದಕ ವ್ಯಸನಿಯಾಗಿದ್ದ, ಡ್ರಗ್ಸ್, ಕುಡಿತ ಚಟದಿಂದಾಗಿ ಆತನ ಆರೋಗ್ಯ ಸಂಪೂರ್ಣ ಹದಗೆಡುತ್ತಾ ಬಂತು, ಆತನ ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ಘೋಷಿಸಿದರು, ಆದರೆ ಆತ ವೈದ್ಯಕೀಯ ಲೋಕವನ್ನೇ ಅಚ್ಚರಿಗೊಳಿಸಿ ಬದುಕಿಗೆ ಮರಳಿದ್ದಾನೆ, ಬ್ರೈನ್ ಡೆಡ್ ಆಗಿದ್ದ ವ್ಯಕ್ತಿ ಮತ್ತೆ ಬದುಕಿಳಿಯಲ್ಲ ಎಂದು ಹೇಳಲಾಗುವುದು. ಆದರೆ ಈತ ಹೊಸದೊಂದು ದಾಖಲೆ ಬರೆದಿದ್ದಾನೆ.
ಇನ್ನೊಬ್ಬರಿಗೆ ಜೀವದಾನವಾಗುತ್ತಿದ್ದ ವ್ಯಕ್ತಿ ತಾನೇ ಜೀವ ಪಡೆದಿದ್ದಾನೆ
ಬ್ರೈನ್ ಡೆಡ್ ಆದರೆ ವೈದ್ಯರು ಆ ರೋಗಿಯ ಕುಟುಂಬಸ್ಥರಲ್ಲಿ ನೀವು ರೋಗಿಯ ಅಂಗಾಂಗ ದಾನ ಮಾಡಲು ಇಚ್ಛಿಸಿದರೆ ಇತರ ಕೆಲ ಜೀವಗಳನ್ನು ಉಳಿಸಬಹುದು ಎಂದು ಸಲಹೆ ನೀಡುತ್ತಾರೆ. ಬ್ರೈನ್ ಡೆಡ್ ಆದ ವ್ಯಕ್ತಿ ಬದುಕಿಗೆ ಮರಳುವ ಸಾಧ್ಯತೆಯಂತೂ ಇಲ್ವೇ ಇಲ್ಲ ಎಂಬ ಖಾತರಿಯಲ್ಲಿಯೇ ವೈದ್ಯರು ಇಂಥದ್ದೊಂದು ಮಾತು ಹೇಳುತ್ತಾರೆ.

ಬ್ರೈನ್ ಡೆಡ್ ಆಗಿರುವ ಈ ವ್ಯಕ್ತಿ ಬದುಕುವುದಿಲ್ಲ, ಈತನ ಅಂಗಾಂಗಳಿಂದ ಇತರ ವ್ಯಕ್ತಿಗಳ ಜೀವವಾದರೂ ಉಳಿಯುತ್ತೆ ಎಂದು ಈ ರೀತಿ ಹೇಳುತ್ತಾರೆ. ಇಂಥವರ ಹೃದಯ, ಲಿವರ್, ಕಿಡ್ನಿ, ಕಣ್ಣು ಇವುಗಳನ್ನು ಕಸಿ ಮಾಡಿದರೆ 6-7 ಜನರಿಗೆ ಹೊಸ ಬದುಕು ಸಿಗುತ್ತದೆ, ಹಾಗಾಗಿ ಅಂಗಾಂಗ ದನದ ಮಹತ್ವ ಹೇಳುತ್ತಾರೆ, ಆದರೆ ಈ ಘಟನೆಯ ಬಳಿಕ ಪಾಪ ವೈದ್ಯರು ಈ ರೀತಿ ಹೇಳಲು ಯೋಚನೆ ಮಾಡುತ್ತಾರೆ. ಏಕೆಂದರೆ ಬ್ರೈನ್ ಡೆಡ್ ಆಗಿದ್ದ ಕುಡುಕ ಆತನ ಹೃದಯ ತೆಗೆಯಲು ಆಪರೇಷನ್ ಮಾಡುವಾಗ ಎದ್ದು ಕೂತಿದ್ದಾನೆ, ಇಂಥ ಘಟನೆ ವೈದ್ಯ ಲೋಕಕ್ಕೇ ಹೊಸ ಸವಾಲು ಹಾಕಿದೆ.
ವೈದ್ಯ ಲೋಕದಲ್ಲಿ ಇಂಥ ಹಲವಾರು ಘಟನೆಯೂ ಆಗಾಗ ನಡೆಯುತ್ತಲೇ ಇರುತ್ತದೆ
ಇಂಥ ವಿಚಿತ್ರ ಘಟನೆಗಳು ಅಪರೂಪಕ್ಕೆ ಸಂಭವಿಸುತ್ತದೆ, ಸತ್ತ ಎಂದು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದ ವ್ಯಕ್ತಿ ಬದುಕಿರುವ ಹೀಗೆ ಅನೇಕ ವಿಸ್ಮಯಗಳು ನಡೆದಿದೆ. ಒಂದು ಎರಡರಿಂದ ಮೂರು ವರ್ಷಗಳ ಹಿಂದೆ ಕೂಡ ಇಂಥ ಘಟನೆ ನಡೆದಿತ್ತು. ಈಗ ಈತನ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
ಆ ಪೋಸ್ಟ್‌ನಲ್ಲಿ ಈ ವ್ಯಕ್ತಿಯನ್ನು ಓವರ್‌ಡೋಸ್ ಕಾರಣ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು, ಅಲ್ಲಿ ವೈದ್ಯರು ಬ್ರೈಡ್ ಡೆಡ್ ಆಗಿದೆ ಎಂದು ಘೋಷಿಸಿದರು. ನಂತರ ಅಂಗಾಂಗ ದಾನಕ್ಕೆ ಸಿದ್ಧತೆ ಮಾಡಲಾಯಿತು, ಆದರೆ ಆಪರೇಷನ್ ಮಾಡುವಾಗ ಆತ ಅಳಲಾರಂಭಿಸುತ್ತಾನೆ, ಟೇಬಲ್‌ಗೆ ಬಡೆಯುತ್ತಾನೆ. ಆದರೂ ಆಪರೇಷನ್‌ಗೆ ಮುಂದಾಗಿದ್ದರು. ಆದರೆ ನಂತರ ಆಪರೇಷನ್ ನಿಲ್ಲಿಸಲಾಯ್ತು. ಈ ಕಾರಣದಿಂದ ತುಂಬಾ ವೈದ್ಯರನ್ನು ಸಸ್ಪೆಂಡ್ ಮಾಡಲಾಗಲಿದೆ ಎಂದು ಆ ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಬ್ರೈನ್ ಡೆಡ್ ಎಂದರೇನು?
ಮೆದುಳು ತನ್ನ ಕಾರ್ಯ ಸಂಪೂರ್ಣ ನಿಲ್ಲಿಸಿದಾಗ ಬ್ರೈನ್ ಡೆಡ್ ಆಗುತ್ತದೆ. ಮೆದುಳಿಗೆ ತುಂಬಾ ಹಾನಿಯುಂಟಾದಾಗ ಮೆದುಳಿನ ಚಟುವಟಿಕೆ ಸಂಪೂರ್ಣ ನಿಂತು ಹೋಗುತ್ತದೆ. ರೋಡ್ ಅಪಘಾತವಾದಾಗ, ತಲೆಗೆ ಪೆಟ್ಟಾದಾಗ, ಮೆದುಳಿನಲ್ಲಿ ರಕ್ತಸ್ರಾವ ಉಂಟಾದಾಗ ಈ ರೀತಿ ಉಂಟಾಗುವುದು. ಮೆದುಳಿಗೆ ಹೃದಯ ರಕ್ತಸಂಚಾರ ಮಾಡಲು ಸಾಧ್ಯವಾಗುವುದಿಲ್ಲ, ಮೆದುಳಿಗೆ ಆಮ್ಲಜನಕದ ಪೂರೈಕೆಯಾಗದೆ ಮೆದುಳು ಸತ್ತು ಹೋಗುವುದು.
ಬ್ರೈನ್ ಡೆಡ್ ಆಗಿದೆ ಎಂದು ತಿಳಿಯುವುದು ಹೇಗೆ?
ಬ್ರೈನ್ ಡೆಡ್ ಆದರೆ ವ್ಯಕ್ತಿಯನ್ನು ಸತ್ತಂತೆ ಪರಿಗಣಿಸಲಾಗುವುದು. ಈ ವ್ಯಕ್ತಿಯ ಮೆದುಳಿಗೆ ಆಮ್ಲಜನಕ ಪೂರೈಕೆಯಾಗುವುದಿಲ್ಲ, ಪ್ರಜ್ಞೆ ಇರಲ್ಲ, ಉಸಿರಾಟವಿಲ್ಲ, ನುಂಗಲು ಸಾಧ್ಯವಿಲ್ಲ, ಕಣ್ಣಿನಲ್ಲಿ ಚಲನೆ ಇರುವುದಿಲ್ಲ. ಇಂಥ ವ್ಯಕ್ತಿಗಳು ವೆಂಟಿಲೇಟರ್‌ನಿಂದ ತೆಗೆದ ತಕ್ಷಣ ಸತ್ತು ಹೋಗುತ್ತಾರೆ. ಬ್ರೈನ್ ಡೆಡ್ ಆದ ವ್ಯಕ್ತಿ ಬದುಕುವುದೇ ಇಲ್ಲ ಎಂದು ಹೇಳಲಾಗುವುದು. ಆದರೆ ಈತ ಬದುಕಿದ್ದಾನೆ ಎಂದ ಮೇಲೆ ಆಯುಸ್ಸು ತುಂಬಾ ಗಟ್ಟಿ ಇದೆ ಅಲ್ವಾ?



Click it and Unblock the Notifications
