Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಬೆಂಕಿಯ ಸಹಾಯವಿಲ್ಲದೆ ಕೈ ಬೆರಳಲ್ಲೇ ಗ್ಯಾಸ್ ಸ್ಟೌವ್ ಹೊತ್ತಿಸಿದ ಯುವಕ..! ವಿಡಿಯೋ ವೈರಲ್
ಇಂಟರ್‌ನೆಟ್‌ನಲ್ಲಿ ಒಮ್ಮೊಮ್ಮೆ ಯಾವೆಲ್ಲಾ ವಿಷಯಗಳಯ ಹರಿದಾಡುತ್ತೆ ಅಂದ್ರೆ ನೀವು ನಂಬಲು ಅಸಾಧ್ಯವಾಗುವಂತಹ ಕೆಲವು ಅಚ್ಚರಿ ವಿಚಾರಗಳೂ ಎದುರಾಗುತ್ತವೆ. ನಿತ್ಯ ನೀವು ಇಂತಹ ವಿಚಾರಗಳನ್ನ ಆನ್‌ಲೈನ್‌ನಲ್ಲಿ ನೋಡಿರುತ್ತೀರಿ. ಆದ್ರೆ ಇಲ್ಲೊಂದು ವಿಡಿಯೋ ನೋಡುಗರಿಗೆ ಅಚ್ಚರಿ ಹುಟ್ಟಿಸಿದೆ.
ಕೆಲವು ವಿಜ್ಞಾನದ ಪ್ರಯೋಗಗಳು ಎಲ್ಲರನ್ನು ಅಚ್ಚರಿಗೊಳಿಸುತ್ತೆ. ಹಾಗೆ ಇಲ್ಲೊಬ್ಬ ಕೈಯಲ್ಲಿ ಯಾವುದೇ ವಸ್ತು ಇಲ್ಲದೆ ಕೇವಲ ಕೈ ಬೆರಳ ಸಹಾಯದಿಂದ ಗ್ಯಾಸ್ ಸ್ಟೊವ್ ಹೊತ್ತಿಸಿರುವುದು ಅಚ್ಚರಿಯ ಜೊತೆ ಎಲ್ಲರ ಗಮನಸೆಳೆದಿದೆ.
ಮೈಕ್ರೋ ಬ್ಲಾಗಿಂಗ್ ಎಕ್ಸ್ (ಟ್ವಿಟರ್) ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬ ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕುಳಿತು ಯಾವ ಲೈಟರ್, ಬೆಂಕಿ ಕಡ್ಡಿಯ ಸಹಾಯವಿಲ್ಲದೆ ಸ್ಟೊವ್ ಹೊತ್ತಿಸಿದ್ದಾನೆ. ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಹಾಗಾದರೆ ಇದು ಹೇಗೆ ಸಾಧ್ಯ? ಇದರಲ್ಲಿ ಅಡಗಿರುವ ವಿಜ್ಞಾನವೇನು? ಈ ಕುರಿತ ಉತ್ತರ ಇಲ್ಲಿದೆ.

ವಿಡಿಯೋದಲ್ಲಿ ಯುವಕ ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕುಳಿತಿದ್ದಾನೆ ಗ್ಯಾಸ್ ಆನ್ ಮಾಡಿದ್ದಾರೆ ಬಳಿಕ ಮತ್ತೊಬ್ಬ ಆತನ ತಲೆಯ ಮೇಲೆ ಪಾಲಿಸ್ಟರ್ ಬಟ್ಟೆ ಹಾಕಿ ಅದನ್ನು ಎಳೆಯುತ್ತಾನೆ. ಈ ವೇಳೆ ಗ್ಯಾಸ್ ಸ್ಟೊವ್ ಹೊತ್ತಿಕೊಳ್ಳುತ್ತದೆ. ಹಾಗಾದರೆ ಇದು ಸಾಧ್ಯವಾಗಿದ್ದು ಹೇಗೆ?
ಮಾನವ ದೇಹ ವಿದ್ಯುತ್ ಉತ್ಪಾದಿಸುತ್ತಾ..?
ಇದರಲ್ಲಿ ಅಚ್ಚರಿಯ ವಿಚಾರಗಳು ಯಾವುದಿಲ್ಲ. ಗಾಳಿಯಲ್ಲಿ ತೇವಾಂಶ ಕೊರೆತೆಯಾದಾಗ ಅದರಲ್ಲು ಚಳಿಗಾಲದಲ್ಲಿ ಗಾಳಿಯು ಶುಷ್ಕವಾದಾಗ ಈ ರೀತಿಯ ವಿದ್ಯುತ್ ಶಾಕ್ ರೀತಿಯ ಅನುಭವವಾಗುತ್ತದೆ.
ಗಾಳಿಯು ಶುಷ್ಕವಾಗಿರುತ್ತದೆ ಮತ್ತು ಎಲೆಕ್ಟ್ರಾನ್ಗಳು ನಮ್ಮ ಚರ್ಮದ ಮೇಲ್ಮೈಯಲ್ಲಿ ಸುಲಭವಾಗಿ ರೂಪಗೊಳ್ಳುತ್ತವೆ. ಬೇಸಿಗೆಯಲ್ಲಿ, ಗಾಳೀಯ ತೇವಾಂಶವು ಋಣಾತ್ಮಕ ವಿದ್ಯುದಾವೇಶದ ಎಲೆಕ್ಟ್ರಾನ್ಗಳನ್ನು ನಿರ್ಮೂಲನೆ ಮಾಡುತ್ತದೆ. ಈ ಎಲ್ಲಾ ವಿದ್ಯಮಾನಗಳಿಂದ ಜನರಿಗೆ ಕರೆಂಟ್ ಶಾಕ್ ಅನುಭವ ಸಾಮಾನ್ಯವಾಗಿ ಆಗುತ್ತದೆ.
ಪಾಲಿಸ್ಟರ್ ಮತ್ತು ನೈಲಾನ್‌ನಂತಹ ಸಿಂಥೆಟಿಕ್ ಬಟ್ಟೆಗಳು ಪರಸ್ಪರ ವಿರುದ್ಧವಾಗಿ ಉಜ್ಜಿದಾಗ ಸ್ಥಿರ ವಿದ್ಯುತ್ ಉತ್ಪಾದಿಸುವ ಅವಾಹಕಗಳಾಗುತ್ತವೆ. ನೀವು ಲೋಹದ ವಸ್ತುಗಳನ್ನು ಸ್ಪರ್ಶಿಸಿದಾಗ, ಬೆಟ್‌ಶೀಟ್, ಕೆಲ ಬಟ್ಟೆಗಳನ್ನು ಮುಟ್ಟಿದರೆ ಚಟ್ ಎಂಬ ಶಬ್ದದೊಂದಿಗೆ ನಿಮಗೆ ಶಾಕ್ ಹೊಡೆದ ಅನುಭವ ಆಗುತ್ತದೆ.
ಅಲ್ಲದೆ ನೀವು ಪ್ಲಾಸ್ಟಿಕ್ ವಸ್ತುಗಳ ಮುಟ್ಟುವಾಗ, ಈ ರೀತಿಯ ಅನುಭವವಾಗುತ್ತದೆ. ಈ ವಿಡಿಯೋದಲ್ಲಿಯೂ ಇದೇ ಆಗಿದೆ. ಯುವಕ ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕುಳಿತು ನೈಲಾನ್ ನಂತಹ ಬಟ್ಟೆಯನ್ನು ಆತನ ಮೇಲೆ ಎಳೆದಾಗ ಆತನ ದೇಹದಿಂದ ಉತ್ಪತ್ತಿಯಾದ ವಿದ್ಯುತ್ ಹೊರ ಹೋಗುತ್ತದೆ. ಆದರೆ ಆತನ ಕಾಲು ನೆಲಕ್ಕೆ ತಾಕಿರದ ಕಾರಣ ವಿದ್ಯುತ್ ಆತನ ಕೈ ಬೆರಳ ಮೂಲಕ ಸಂಚರಿಸಿದೆ. ಇದು ಗ್ಯಾಸ್ ಸ್ಟೊವ್ ಹೊತ್ತಿಕೊಳ್ಳುವಂತೆ ಮಾಡಿದೆ.
ಈ ಮೊದಲು ಬೆಂಗಳೂರಲ್ಲೂ ಈ ರೀತಿ ವಿದ್ಯಮಾನ ನಡೆದಿತ್ತು
ಬೆಂಗಳೂರಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ಈ ರೀತಿ ವಿದ್ಯಮಾನಗಳು ನಡೆದಿತ್ತು, ಯಾವುದೇ ವಸ್ತುವನ್ನು ಮುಟ್ಟುವಾಗಲೂ ವಿದ್ಯುತ್ ಶಾಕ್ ಹೊಡೆದ ಅನುಭವಾಗುತ್ತಿತ್ತು. ಇದು ಸಹ ಅಲ್ಲಿನ ಶುಷ್ಕ ವಾತಾವರಣದ ಕಾರಣಕ್ಕೆ ಸಂಭವಿಸುತ್ತಿತ್ತು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದರು.



Click it and Unblock the Notifications
