Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
ನೀವು ಜಗತ್ತಿನಲ್ಲಿ ಚಿತ್ರ ವಿಚಿತ್ರ ಕಾಯಿಲೆಯಿಂದ ಬಳಲುವವರು, ಅಂಗವೈಕಲ್ಯದಿಂದ ಬಳಲುವವರನ್ನು ನೋಡಿರುತ್ತೀರಿ. ಕೆಲವರ ಜೀವನ ಅದರಿಂದ ಕಷ್ಟಕ್ಕೆ ಬಿದ್ದಿರುತ್ತೆ. ಇನ್ನೂ ಕೆಲವರಿಗೆ ಅಂಗವೈಕಲ್ಯ ವರವಾಗಿಯೂ ಪರಿಣಮಿಸುವ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬಾಕೆ ಹೊಟ್ಟೆಯೇ ಇಲ್ಲದೆ ಜೀವಿಸಿದ್ದ ಆಹಾರದ ಪ್ರೇಮಿ ಈಗ ಕೊನೆಯುಸಿರೆಳೆದಿದ್ದಾರೆ.
ನಿಮಗಿದು ಅಚ್ಚರಿ ಎನಿಸಬಹುದು ಆಕೆ ಹೊಟ್ಟೆಯೇ ಇಲ್ಲದೆ ವರ್ಷಗಳ ಕಾಲ ಬದುಕಿದ್ದಳು ಆದರೆ ಕ್ಯಾನ್ಸರ್ ಮಹಾಮಾರಿ ಆಕೆಯನ್ನು ಬಲಿ ಪಡೆದಿದೆ. ಆಕೆ ಮಹಾರಾಷ್ಟ್ರದ ಪುಣೆಯ ನತಾಶಾ ದಿಡ್ಡಿ, ಉದರವಿಲ್ಲದ ಆಹಾರ ಪ್ರಿಯೆ ಎಂದೇ ಆಕೆ ಖ್ಯಾತಿ ಗಳಿಸಿದ್ದಳು. ಆಕೆ ಇತ್ತೀಚಿಗೆ ಪುಣೆಯಲ್ಲಿ ನಿಧನರಾಗಿದ್ದಾರೆ.

ಆಕೆ ಮೃತಪಟ್ಟ ಸುದ್ದಿಯನ್ನು ಪತಿ ಇನ್ಸ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಬಹಿರಂಗಪಡಿಸಿದ್ದು, ಅಭಿಮಾನಿಗಳು ಹಾಗೂ ಆಕೆಯ ಫಾಲೋವರ್ಸ್ ಶಾಕ್ ಆಗಿದ್ದಾರೆ. "ಆ ಹೃದಯವಿದ್ರಾವಕ ಘೋಷಣೆ..." ನನ್ನ ಹೆಂಡತಿ ನತಾಶಾ ದಿಡ್ಡಿ, ಅಕಾ ದಿ ಗಟ್‌ಲೆಸ್ ಫುಡೀ ಅವರ ದುಃಖ ಮತ್ತು ಹೃದಯವಿದ್ರಾವಕ ಮರಣವನ್ನು ತುಂಬಾ ನೋವು ಮತ್ತು ದುಃಖದಿಂದ ತಿಳಿಸುತ್ತಿದ್ದೇನೆ ಎಂದು Ms ದಿಡ್ಡಿ ಅವರ ಪತಿ ಬರೆದುಕೊಂಡಿದ್ದಾರೆ.
ನತಾಶಾ ದಿಡ್ಡಿಯ ಸಾವಿಗೆ ಕಾರಣವೇನು?
ನತಾಶಾ ದಿಡ್ಡಿ ಅವರ ಸಾವಿನ ಕಾರಣವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ ಆದರೆ ಅವರು ಈ ಹಿಂದೆ ತಮ್ಮ ಸಂದರ್ಶನಗಳಲ್ಲಿ ಅವರು ಅತಿಸಾರ, ವಾಕರಿಕೆ ಮತ್ತು ಊಟದ ನಂತರ ಲಘುವಾದ ಅಥವಾ ದಣಿದಂತಹ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದರು. ಇದು ಅವರ ಕ್ಯಾನ್ಸರ್ ಬಳಿಕ ಕಾಣಿಸಿಕೊಂಡಿರುವ ಅನಾರೋಗ್ಯ ಸಮಸ್ಯೆಗಳಾಗಿವೆ. ಆಕೆ ಕೆಲ ವರ್ಷದ ಹಿಂದೆ ಉದರ ಕ್ಯಾನ್ಸರ್‌ಗೆ ಒಳಗಯಾಗಿದ್ದಳು.
ಕ್ಯಾನ್ಸರ್‌ನಿಂದಾಗಿ ಹೊಟ್ಟೆ ಕಳೆದುಕೊಂಡಳು
ಕೆಲವು ವರ್ಷದ ಹಿಂದೆ ಆಕೆಗೆ ಉದರ ಕ್ಯಾನ್ಸರ್ ಇರುವುದು ದೃಢವಾಗಿತ್ತು. ಆದರೆ ಆಕೆಗೆ ಇದು ತಿಳಿಯುವ ಮುನ್ನವೇ ಕಾಲ ಮಿಂಚಿ ಹೋಗಿತ್ತು. ಆಕೆ ಉಳಿಯಬೇಕಾದರೆ ಆಕೆಯ ಹೊಟ್ಟೆಯನ್ನು ಕರುಳನ್ನು ಬಿಟ್ಟು ತೆಗೆಯಲೇಬೇಕಿತ್ತು. ಹೀಗಾಗಿ ವೈದರು ಆಕೆಯನ್ನು ಕ್ಯಾನ್ಸರ್‌ನಿಂದ ಉಳಿಸಲು ಹೊಟ್ಟೆಯ ಶಸ್ತ್ರ ಚಿಕಿತ್ಸೆ ನೆರವೇರಿಸಿದರು.
ಈ ಚಿಕಿತ್ಸೆಯ ಬಳಿಕ ಆಕೆ ಗುಣಮುಖಳಾದಳು. ಆದರೆ ಅನಾರೋಗ್ಯ ಸಮಸ್ಯೆಗಳು ಮುಂದುವರೆದಿದ್ದವು. ಈ ಚಿಕಿತ್ಸೆಯ ಬಳಿಕ ಆಕೆ ಇನ್ಸ್ಲೂಯನ್ಸರ್ ಆಗಿ ಮಾರ್ಪಟ್ಟಳು, ತಾನು ಮಾಡುತ್ತಿದ್ದ ಅಡುಗೆಯ ಎಲ್ಲಾ ವಿಡಿಯೋಗಳನ್ನು ಹಂಚಿಕೊಳ್ಳಲು ಮುಂದಾದಳು. ಆಕೆ ಸಾವಿರಾರು ಮಂದಿಗೆ ಸ್ಪೂರ್ತಿಯಾದಳು, ತನ್ನಂತೆ ಕ್ಯಾನ್ಸರ್ ಗೆದ್ದ ಬಳಿಕವೂ ಸಂಸತದ ಜೀವನ ನಮಗಾಗಿದೆ ಎಂದು ತೋರಿಸಿದ್ದಳು. ಹೀಗಾಗಿ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಆಕೆಯ ಖ್ಯಾತಿ ಬೆಳೆಯುತ್ತಲೇ ಹೋಗಿತ್ತು.
ಅಂತಿಮ ದಿನಗಳಲ್ಲಿ ಆಕೆಯ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಿದ್ದವು. ಆದರೆ ಈಗ ಆಕೆ ಮೃತಪಟ್ಟಿದ್ದಾಳೆ. ಈ ಸುದ್ದಿ ಆಕೆಯ ಅಭಿಮಾನಿಗಳು ದಿಗಿಲು ಹುಟ್ಟಿಸಿದೆ.
ಇನ್‌ಸ್ಟಾಗ್ರಾಮ್ ಬಳಕೆದಾರರು ದಿಡ್ಡಿ ಅವರ ಪತಿಯ ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. "ನಾನು ಇನ್‌ಸ್ಟಾಗ್ರಾಮ್‌ಗೆ ಸೇರಿದಾಗ ನಾನು ಅನುಸರಿಸಿದ ಮೊದಲ ಉತ್ತಮ ಖಾತೆಗಳಲ್ಲಿ ಅವಳು ಒಬ್ಬಳು, ಅದು ಅಷ್ಟು ದೊಡ್ಡ ವಿಷಯವಲ್ಲ. ಪರಿಸ್ಥಿತಿಯೊಂದಿಗೆ ಹೋರಾಡುವ ಅವಳ ಕಥೆಯನ್ನು ತಿಳಿದ ನಂತರ, ನಾನು ಇನ್ನಷ್ಟು ಸ್ಫೂರ್ತಿ ಪಡೆದೆ. ಇದು ತುಂಬಾ ಹೃದಯವಿದ್ರಾವಕವಾಗಿದೆ. ಈ ದುರಂತ ನಷ್ಟವನ್ನು ಎದುರಿಸಲು ನೀವು ಮತ್ತು ಕುಟುಂಬವು ಶಕ್ತಿಯನ್ನು ಪಡೆಯುತ್ತದೆ ಎಂದು ಭಾವಿಸುತ್ತೇವೆ" ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
ಆಕೆಯ ಮರಣದ ನಂತರವು ಆಕೆಯ ಪತಿ ಇನ್ಸ್‌ಸ್ಟಾಗ್ರಾಮ್ ಸಕ್ರೀಯವಾಗಿರಲಿದೆ. ಆಕೆಯ ಎಲ್ಲಾ ಚಿಂತನೆಗಳು ಇನ್ನು ಮುಂದೆಯೂ ನಿಮಗೆ ಸಿಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.



Click it and Unblock the Notifications
