Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕಪ್ಪು ಕರಿದ ಜಿಲೀಬಿ ನೋಡಿದ್ದೀರಾ..? ಇಲ್ಲಿದೆ ಶಾಕಿಂಗ್ ವಿಡಿಯೋ
ಸಿಹಿ ತಿಂಡಿ ಪ್ರಿಯರು ಜಿಲೇಬಿ ಅಂದ್ರೆ ಬಾಯಲ್ಲಿ ನೀರು ಸುರಿಸುತ್ತಾರೆ. ಬಾಯಲ್ಲಿ ನೀರೂರಿಸುವ ಸಿಹಿ ತಿಂಡಿಗಳೆಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಅದರಲ್ಲೂ ಜಿಲೇಬಿ ತನ್ನ ಆಕರ್ಷಕ ಹಳದಿ ಬಣ್ಣ ಮತ್ತು ಅದರಲ್ಲಿ ತೇಲುವ ಸಕ್ಕರೆ ಪಾಕದಿಂದ ಬಾಯಿಯ ರುಚಿಯನ್ನು ದುಪ್ಪಟ್ಟು ಹೆಚ್ಚಿಸುತ್ತದೆ.
ರಸ್ತೆ ಬದಿಯಲ್ಲಿ ನೀಡುವ ಜಿಲೇಬಿ ಸವಿಯಲು ಸಾಲಲ್ಲಿ ನಿಂತಿರುತ್ತಾರೆ. ಹಬ್ಬ ಹರಿದಿನಗಳಲ್ಲಿ ಮನೆಯಲ್ಲೂ ಈ ರುಚಿಕರ ಜಿಲೇಬಿ ಮಾಡಿ ಸವಿಯುತ್ತಾರೆ. ಈ ಹಬ್ಬದ ಸಮಯದಲ್ಲಿ ಸಿಹಿಯನ್ನು ನಾವು ತಯಾರಿಸಲೇಬೇಕಾಗುತ್ತದೆ. ಆಗ ಮಾತ್ರವೇ ಹಬ್ಬಕ್ಕೆ ಕಳೆ ಬರಲು ಸಾಧ್ಯ ಅಲ್ಲವೇ..?

ದೇಸಿ ಸಿಹಿತಿಂಡಿಗಳ ವಿಷಯಕ್ಕೆ ಬಂದಾಗ, ಗುಲಾಬ್ ಜಾಮೂನ್, ಜಿಲೇಬಿ ಎಲ್ಲರ ಮನೆಯಲ್ಲೂ ಸಹಜವಾಗಿ ಕಾಣಸಿಗುವ ಸಿಹಿ ತಿಂಡಿಗಳು. ಏಕೆಂದ್ರೆ ಈ ಜಿಲೇಬಿ ಮತ್ತು ಜಾಮೂನ್ ಸುಲಭವಾಗಿ ಮಾಡಬಹುದು. ಕೆಲವೇ ವಸ್ತು ಬಳಸಿ ಮಾಡಬಹುದಾದ ತಿಂಡಿ ಇದಾಗಿವೆ.
ನೀವು ಜಿಲೇಬಿಯಲ್ಲಿ ಕೇಸರಿ, ಹಳದಿ ಬಣ್ಣದ ಜಿಲೀಬೆ ನೋಡಿರುತ್ತೀರಿ. ಅದರ ರುಚಿಯಂತು ನೆನಪು ಮಾಡಿಕೊಂಡರೆ ಬಾಯಲ್ಲಿ ನೀರು ಬರುತ್ತದೆ. ಆದ್ರೆ ನೀವು ಎಂದಾದರು ಕಪ್ಪು ಬಣ್ಣದ ಜಿಲೀಬಿ ಸವಿದಿದ್ದೀರಾ? ಸವಿಯೋದು ಬೇಡ ನೋಡಿದ್ದೀರಾ? ಹೌದು ಇಲ್ಲೊಂದು ವಿಡಿಯೋದಲ್ಲಿ ಕಪ್ಪು ಬಣ್ಣದ ಜಿಲೀಬಿ ಮಾಡುತ್ತಿರುವುದು ಕಂಡುಬಂದಿದ್ದು ವಿಡಿಯೋ ಈಗ ವೈರಲ್ ಆಗ್ತಿದೆ.
ಈ ವಿಡಿಯೋದಲ್ಲಿ ಅಂಗಡಿಯಾತ ಕಪ್ಪು ಬಣ್ಣದ ಜಿಲೇಬಿ ಮಾಡುತ್ತಿರುವುದು ಕಂಡುಬಂದಿದೆ. ಜಿಲೀಬಿ ಮಾಡುವ ಪ್ರಕ್ರಿಯೇ ಒಂದೇ ರೀತಿ ಆಗಿದ್ದರೂ ಅದರ ಬಣ್ಣ ಮಾತ್ರ ಕಪ್ಪಾಗಿದೆ. ಬಿಸಿ ಎಣ್ಣೆ ತುಂಬಿರುವ ಪಾತ್ರೆಯಿಂದ ಕಪ್ಪು ಬಣ್ಣದ ಜಿಲೇಬಿಯನ್ನು ಆತ ತೆಗೆಯುತ್ತಿರುವುದು ವಿಡಿಯೋದಲ್ಲಿ ನೋಡಬಹುದು.
ಈ ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ಅಕ್ಷರಶಃ ಶಾಕ್‌ಗೆ ಒಳಗಾಗಿದ್ದಾರೆ. ಜಿಲೀಬಿ ಈ ಬಣ್ಣದಲ್ಲಿರುವುದ ಕಂಡು ಇದು ಯಾವ ರೀತಿಯ ಸಿಹಿ ತಿಂಡಿ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವರು ಇದು ಜಿಲೇಬಿಯೇ ಅಲ್ಲ ಎಂದು ವಾದಿಸಿದ್ದಾರೆ. ಏಕೆಂದ್ರೆ ಜಿಲೇಬಿ ಅಂದ್ರೆ ಅದು ಕೇಸರಿ ಬಣ್ಣದಲ್ಲಿರಬೇಕು ಎಂಬ ಅಲಿಖಿತ ನಿಯಮವಿದೆ.
ಇದು ಅಂಗಡಿಯಾತನ ತಪ್ಪಿನಿಂದ ಬಂದಿರುವ ಬಣ್ಣ ಎಂದು ಕೆಲವರು ಹೇಳುತ್ತಿದ್ದಾರೆ. ಆತ ಹಿಟ್ಟಿಗೆ ಕೇಸರಿ ಬಣ್ಣ ಹಾಕದೇ ಎಣ್ಣೆಗೆ ಹಾಕಿ ಸುಟ್ಟಿದ್ದಾನೆ ಹಾಗಾಗಿ ಜಿಲೇಬಿ ಕಪ್ಪು ಬಣ್ಣಕ್ಕೆ ತಿರುಗಿದೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಈ ರೀತಿ ಜಿಲೇಬಿ ಮಾಡುವ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ. ಯಾರೇ ಆದರು ಸಿಹಿ ತಿಂಡಿಗಳು ಒಳ್ಳೆಯ ಬಣ್ಣದಲ್ಲಿರಬೇಕು ಎಂದು ಬಯಸುತ್ತಾರೆ, ಯಾರು ಸಹ ಕಪ್ಪು ಬಣ್ಣದ ಸಿಹಿ ತಿಂಡಿ ಸವಿಯಲು ಇಷ್ಟಪಡುವುದಿಲ್ಲ ಎನ್ನುತ್ತಿದ್ದಾರೆ.
ಆದರೆ ಈ ರೀತಿಯ ಕಪ್ಪು ಜಿಲೇಬಿಯನ್ನು ಸಹ ಮಾಡುತ್ತಾರೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ಇದು ಪನೀರ್ ಹಾಕಿ ಮಾಡುವ ಜಿಲೇಬಿ ಇದರ ಬಣ್ಣ ಕಪ್ಪಾಗಿಯೇ ಇರುತ್ತದೆ. ಇದನ್ನು ಸಕ್ಕರೆ ಪಾಕದಲ್ಲಿ ಹಾಕಿ ಸವಿಯಲು ನೀಡುತ್ತಾರೆ ಎಂದು ಆತ ಹೇಳಿದ್ದಾನೆ.
ಮತ್ತೊಬ್ಬ ಇದು ಮಾವಾ ಜಿಲೇಬಿ ಎಂದಿದ್ದಾನೆ. ಇದು ತಿಂಬಾ ಹಳೆಯ ಜಿಲೇಬಿ ಪದ್ಧತಿ ಎಂದಿದ್ದಾರೆ. ಇದು ಸುಟ್ಟಿರುವ ಜಿಲೇಬಿ ಅಲ್ಲ ಮಾವಾ ಜಿಲೇಬಿ ಹಿಂದಿನಿಂದಲೂ ಇದನ್ನು ಮಾಡುತ್ತಿದ್ದರು. ಆದರೆ ಇತ್ತೀಚಿಗೆ ಕಡಿಮೆಯಾಗಿತ್ತು. ನಾನು ಅದನ್ನು ಸವಿದ ನೆನಪಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಹಲವರಿಗೆ ಇದೊಂದು ವಿಚಿತ್ರ ಖಾದ್ಯ ಎನಿಸಿರುವುದು ಮಾತ್ರ ಸುಳ್ಳಲ್ಲ.



Click it and Unblock the Notifications
