Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ಭೀಷ್ಮಾರ ತತ್ವಗಳನ್ನು ಪಾಲಿಸಿದರೆ ಜೀವನದಲ್ಲಿ ಸೋಲೋದಕ್ಕೆ ಸಾಧ್ಯವೇ ಇಲ್ಲ !
ಭೀಷ್ಮಾಚಾರ್ಯರು ಮಹಾಭಾರತದ ಕಾಲದ ಮಹಾನ್ ಮುನಿ. ಭೀಷ್ಮಾಚಾರ್ಯರ ತತ್ವಗಳನ್ನು ಇಂದಿಗೂ ಜನ ಪಾಲನೆ ಮಾಡುತ್ತಿದ್ದಾರೆ. ಭೀಷ್ಮಾಚಾರ್ಯರು ಸಾಯುವ ಕೊನೆಯ ಗಳಿಗೆಯಲ್ಲಿ ಯುದ್ಧಿಷ್ಠಿರನಿಗೆ ಜೀವನದಲ್ಲಿ ಯಶಸ್ಸು ಸಾಧಿಸೋದು ಹೇಗೆ ಅನ್ನೋದಕ್ಕೆ 36 ಸೂತ್ರಗಳನ್ನು ನೀಡಿದ್ದಾರೆ. ಅಷ್ಟಕ್ಕು ಭೀಷ್ಮಾಚಾರ್ಯರು ಯುದ್ಧಿಷ್ಠಿರನಿಗೆ ಹೇಳಿ ಕೊಟ್ಟಿರುವ ಆ ಜೀವನ ಪಾಠಗಳೇನು ಅನ್ನೋದನ್ನು ತಿಳಿಯೋಣ.
ನಮಗೆಲ್ಲಾ ಗೊತ್ತಿರುವ ಹಾಗೆ ಭೀಷ್ಮನ ಹೊರತಾಗಿ ಮಹಾಭಾರತ ಪೂರ್ಣಗೊಳ್ಳೋದಕ್ಕೆ ಸಾಧ್ಯವೇ ಇರಲಿಲ್ಲ. ಮಹಾಭಾರತದಲ್ಲಿ ಭೀಷ್ಮರ ಪಾತ್ರ ಎಷ್ಟು ದೊಡ್ಡದಿತ್ತು ಅನ್ನೋದು ಪ್ರತಿಯೊಬ್ಬರಿಗೂ ಗೊತ್ತೇ ಇದೆ. ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಭೀಷ್ಮಾಚಾರ್ಯರು ಕೌರವರ ಸೇನೆಗೆ ಬಲವಾಗಿ ನಿಂತಿದ್ರು. ಯುದ್ಧ ಮಾಡುತ್ತಿರುವ ಸಂದರ್ಭದಲ್ಲಿ ಅವರನ್ನು ಬಂಧನ ಮಾಡಲಾಗುತ್ತದೆ. ಸಾಯೋ ಕೊನೆಯ ಗಳಿಗೆಯಲ್ಲೂ ಕೂಡ ಅವರ ತತ್ವಗಳನ್ನು ಬಿಟ್ಟು ಕೊಟ್ಟಿರಲಿಲ್ಲ. ಅವರು ನ್ಯಾಯ ಮಾರ್ಗದಲ್ಲೇ ನಡೆದುಕೊಂಡಿದ್ದರು.

ಯುದ್ಧಿಷ್ಠಿರನಿಗೆ ಭೀಷ್ಮಾ ಹೇಳಿದ ಕಿವಿ ಮಾತುಗಳೇನು?
ನಮ್ಮ ಆತ್ಮ ದೇಹವನ್ನು ಬಿಟ್ಟು ಹೋಗಬೇಕು ಎಂದು ನಿರ್ಧಾರ ಮಾಡಿದ ನಂತರ ನಾವು ಏನು ಮಾಡಿದರೂ ಕೂಡ ವಾಪಾಸ್ಸ್ ಬರೋದಕ್ಕೆ ಸಾಧ್ಯವಾಗೋದಿಲ್ಲ. ಅದೇ ರೀತಿ ಭೀಷ್ಮಾಚಾರ್ಯರು ಇನ್ನೇನು ತಮ್ಮ ದೇಹವನ್ನು ಬಿಟ್ಟು ಹೋಗಬೇಕು ಅಂದುಕೊಂಡಾಗ ಯುದ್ಧಿಷ್ಠಿರನ್ನು ಕರೆದು ಅದೊಂದು ಮಾತನ್ನು ಹೇಳುತ್ತಾರೆ. ಆ ಮಾತುಗಳನ್ನು ಪಾಲಿಸಿದರೆ ಜೀವನದಲ್ಲಿ ಸೋಲೋದಕ್ಕೆ ಸಾಧ್ಯವೇ ಇಲ್ಲ.
ಭೀಷ್ಮನ 36 ತತ್ವಗಳು ಯಾವುದು?
* ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಇರಲಿ. ಆದರೆ ಸ್ವಂತ ಹೊಗಳಿಕೆ ಬೇಡ
* ಅನ್ಯ ಮಹಿಳೆಯರ ಜೊತೆಗೆ ಅತಿಯಾದ ಸಂಪರ್ಕ ಒಳ್ಳೆಯದಲ್ಲ
* ಯಾರ ಮೇಲೆಯೂ ಧ್ವೇಷ ಬೇಡ. ಎಂತಹ ಪರಿಸ್ಥಿತಿಯಲ್ಲಿ ಮಹಿಳೆಯರಿಗೆ ಗೌರವ ಕೊಡೋದನ್ನು ಮರೀಬೇಡಿ
* ಯಾರು ನಿಯಮಗಳನ್ನು ಪಾಲನೆ ಮಾಡುವುದಿಲ್ಲವೋ ಅವರ ಮೇಲೆ ಮೃದು ಭಾವನೆ ಬೇಡವೇ ಬೇಡ
* ಸುಖಾ ಸುಮ್ಮನೇ ತೆರಿಗೆ ವಿಧಿಸಿ ರಾಜನಾದವನು ತನ್ನ ಖಜಾನೆಯನ್ನು ತುಂಬಿಸಿಕೊಳ್ಳೋದು ಸರಿಯಲ್ಲ
* ನೀವು ಸಂತೋಷವಾಗಿರಬೇಕು ಅನ್ನೋ ಕಾರಣಕ್ಕೆ ನಮ್ಮ ಗೌರವವನ್ನು ಕಳೆದುಕೊಳ್ಳೋದಕ್ಕೆ ಹೋಗಬಾರದು
* ನಿಮ್ಮ ಮಾತಿನಲ್ಲಿ ನಮ್ರತೆ ಅನ್ನೋದು ಇರಬೇಕು
* ನೀವು ಪ್ರತಿಯೊಂದು ವಿಚಾರದಲ್ಲೂ ಪ್ರಾಮಾಣಿಕರಾಗಿರಬೇಕು. ನಿಮ್ಮಲ್ಲಿ ಮಾನವೀಯತೆ ಅನ್ನೋದು ಇದ್ದಾಗ ಕಷ್ಟಪಡಬೇಕಾದ ಅವಶ್ಯಕತೆ ಇರೋದಿಲ್ಲ.
* ರಾಜನಾದವನು ದುಷ್ಟರ ಸಹವಾಸ ಮಾಡಬಾರದು
* ನಿಮ್ಮ ಒಡಹುಟ್ಟಿದವರ ಜೊತೆಗೆ ಜಗಳವಾಡಬೇಡಿ
* ದೇಶದ್ರೋಹಿಯಿಂದ ಯಾವುದೇ ಕೆಲಸ ಮಾಡಿಸಬೇಡಿ
* ನೀವು ಮಾಡುವ ಅತ್ಯತ್ತಮ ಕೆಲಸದಿಂದ ಬೇರೆ ಯಾರಿಗೂ ನೋವಾಗಬಾರದು
* ರಾಜನು ತನ್ನ ಯೋಜನೆಗಳ ಬಗ್ಗೆ ಜಾಗರೂಕನಾಗಿರಬೇಕು. ಯಾಕಂದ್ರೆ ದುಷ್ಟರಿಗೆ ಈ ಯೋಜನೆಗಳು ತಿಳಿಯದ ಹಾಗೆ ಮುಚ್ಚಿಡಬೇಕು
* ತಮ್ಮಲ್ಲಿರುವ ಗುಣಗಳನ್ನು ಉತ್ಪ್ರೇಕ್ಷೇ ಎನ್ನುವಂತೆ ಹೇಳಿಕೊಳ್ಳಬಾರದು
* ಋಷಿ ಮುನಿಗಳನ್ನು ಗೌರವದಿಂದ ಕಾಣಬೇಕು
* ರಾಜನಾದವನು ತಮ್ಮ ಧರ್ಮವನ್ನು ಪಾಲನೆ ಮಾಡಬೇಕು. ಆತ ಅಧರ್ಮದ ಹಾದಿಯನ್ನು ಎಂದಿಗೂ ತುಳಿಯಬಾರದು
* ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣಬೇಕು
* ದಾನ ಮಾಡುವಾಗ ಜಾಗರೂಕರಾಗಿರಿ. ಅಯೋಗ್ಯರಿಗೆ ಎಂದಿಗೂ ದಾನ ಮಾಡದಿರಿ
* ರಾಜನಾದವನು ದುರಾಸೆಯಿಂದ ದೂರವಿರಬೇಕು
* ತಪ್ಪಾಗಿ ನಡೆದುಕೊಳ್ಳುವವರನ್ನು ನಂಬಲು ಹೋಗಲೇಬೇಡಿ
* ರಾಜನ ಮನಸ್ಸು ಪರಿಶುದ್ಧವಾಗಿರಬೇಕು. ಅವನ್ನು ಯಾರನ್ನೂ ಧ್ವೇಷಿಸಬಾರದು
* ಕೆಟ್ಟ ಗುಣವಿರುವವರಿಗೆ ಆಶ್ರಯ ನೀಡಲೇಬಾರದು
* ರಾಜ ಶಿಕ್ಷೆಯನ್ನು ನೀಡುವಾಗ ಜಾಗರೂಕತೆಯಿಂದ ಇರಬೇಕು. ನಿರಪರಾಧಿಗೆ ಶಿಕ್ಷೆ ಆಗದಂತೆ ನೋಡಿಕೊಳ್ಳಬೇಕು
* ನಿಸ್ವಾರ್ಥ ಭಾವದಿಂದ ಸೇವೆ ಮಾಡಬೇಕು
* ಎಲ್ಲಿ ನಷ್ಟ ಇರುವುದಿಲ್ಲವೋ ಅಲ್ಲಿಂದ ಹಣ ಪಡೆದುಕೊಳ್ಳಬೇಕು
* ಒಬ್ಬ ವ್ಯಕ್ತಿಯನ್ನು ಬಂಧನ ಮಾಡುವುದಕ್ಕಿಂತ ಮೊದಲು ಆತನ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು. ಖಾತರಿಯಿಲ್ಲದೇ ಯಾರನ್ನೂ ಬಂಧಿಸುವಂತಿಲ್ಲ
* ದಕ್ಷತೆ ರಾಜನ ಸಧ್ಗುಣವಾಗಿರಬೇಕು
* ನೀವು ಯಾವುದಾದರೂ ವ್ಯಕ್ತಿಯನ್ನು ನಿಯಂತ್ರಿಸಬೇಕು ಎಂದುಕೊಂಡರೆ ಆತನಲ್ಲಿ ಮೃದುವಾಗಿ ಮಾತನಾಡಲೇಬೇಡಿ
* ರಾಜ ಒಬ್ಬ ವ್ಯಕ್ತಿಯ ಮೇಲೆ ದಯೆ ತೋರಿದರೆ, ಆತನಲ್ಲಿ ತಪ್ಪು ಹುಡುಕಬೇಡಿ
* ರಾಜ ತನ್ನ ಹಿರಿಯರ ಸೇವೆಯನ್ನು ಭಕ್ತಿ ಹಾಗೂ ಪ್ರೀತಿಯಿಂದ ಮಾಡಬೇಕು
* ಶತ್ರುಗಳನ್ನು ಕೊಂದ ಮೇಲೆ ದುಃಖ ಪಡಬೇಡಿ
* ಕೋಪ ನಿಯಂತ್ರಣದಲ್ಲಿರಬೇಕು
* ಆರೋಗ್ಯವಾಗಿರುವ ಆಹಾರವನ್ನೇ ಸೇವಿಸಬೇಕು. ಆಹಾರ ನಮ್ಮ ದೇಹಕ್ಕೆ ಹಾನಿ ಮಾಡುವ ಹಾಗಿರಬಾರದು.
ಯಾವ ವ್ಯಕ್ತಿ ಭೀಷ್ಮನ ಈ ತತ್ವಗಳನ್ನು ಪಾಲನೆ ಮಾಡುತ್ತಾನೋ ಆತ ಜೀವನದಲ್ಲಿ ಎಂದಿಗೂ ಸೋಲೋ ಮಾತೇ ಇಲ್ಲ.



Click it and Unblock the Notifications

