ಬಿಗ್‌ಬಾಸ್‌: ತನ್ನ ಸೋಲಿಗೆ ತಾನೇ ಹಳ್ಳ ತೋಡುತ್ತಿರುವ ಸಂಗೀತಾ ಮಾನವೀಯತೆ ಮರೆತರಾ?

ಬಿಗ್‌ಬಾಸ್‌ ವೀಕ್ಷಕರಿಗೆ ಫೇವರೆಟ್‌ ಆಗಿದ್ದ ಸಂಗೀತಾ ಶೃಂಗೇರಿಯ ಬದಲಾದ ಆಟದ ವೈಖರಿ ನೋಡಿ ಸಂಗೀತಾ ತಮ್ಮ ಸೋಲಿಗೆ ತಾವೇ ಹಳ್ಳ ತೋಡುತ್ತಿದ್ದಾರಾ? ಎಂಬ ಸಂಶಯ ಮೂಡುತ್ತಿದೆ, ಅವರ ಆಟ ಭೇಷ್‌ ಎಂದವರು ಇದೀಗ ಇಷ್ಟು ಕಳಪೆ ಮಟ್ಟಕ್ಕೆ ಆಡಬಾರದಿತ್ತು ಎಂದು ಹೇಳುತ್ತಿದ್ದಾರೆ. ಸಾಮಾಜಿಕ ತಾಣದಲ್ಲಿ ಇವರ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಸಂಗೀತಾ ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.....

Biggboss Season 10,

ಸುದೀಪ್‌ರವರು ಬುದ್ಧಿವಾದ ಹೇಳಿದಾಗಲೂ ಅಹಂಕಾರ ತೋರಿದ ಸಂಗೀತ
ಫ್ರೆಂಡ್‌ಶಿಪ್‌ ಬಗ್ಗೆ ಸುದೀಪ್‌ರವರು ಸಂಗೀತಾ ಅವರಿಗೆ ತುಂಬಾ ಚೆನ್ನಾಗಿಯೇ ಕ್ಲಾಸ್‌ ತೆಗೆದುಕೊಂಡಿದ್ದರು, ನೀವು ತಪ್ಪು ಮಾಡುತ್ತಿದ್ದೀರಿ ಎಂಬುವುದನ್ನು ಎಚ್ಚರಿಸಿದರು, ಆದರೆ ಸಂಗೀತಾ ಸುದೀಪ್‌ರವರ ಮಾತನ್ನು ಕೇಳುವ ಬದಲಿಗೆ ವಾದ ಮಾಡಿ ತಾನೇ ಸರಿ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ನೋಡಿ ವೀಕ್ಷಕರು ಎಷ್ಟೊಂದು ದುರಂಕಾರದ ವರ್ತನೆ ಎಂದು ಟೀಕಿಸಿದರು.

ಸ್ವಾರ್ಥದ ಆಟಕ್ಕೆ ಫ್ರೆಂಡ್‌ಶಿಪ್ ಲೇಬಲ್
ಬಿಗ್‌ಬಾಸ್‌ನಲ್ಲಿ ಪ್ರತಿಯೊಬ್ಬರು ಬಂದಿರುವುದು ಅವರವರ ಆಟ ಆಡುವುದಕ್ಕೆ, ಆದರೆ ಕಳೆದ ವಾರದ ಲುಡೋ ಆಟದಲ್ಲಿ ಗ್ರೂಪ್‌ ಚೇಂಜ್‌ ಮಾಡುವಾಗ ಸೇಫ್‌ ಆಗಿರುವ ಗ್ರೂಪ್‌ಗೆ ಸಂಗೀತಾ ಹೋಗುವ ಇಚ್ಚೇ ಪಡಿಸಿದಾಗ ಕಾರ್ತಿಕ್, ತನೀಷಾ ಒಪ್ಪಿದರು, ಆದರೆ ಆ ನಂತರ ಸಂಗೀತಾ ಫುಲ್ ಬದಲಾದರು, ತನೀಷಾ, ಕಾರ್ತಿಕ್‌ ನನಗೆ ಮೋಸ ಮಾಡಿದರು ಎಂದು ದೊಡ್ಡ ರಂಪಾಟ ಮಾಡಿದರು. ತಾನು ನಾಮಿನೇಷನ್‌ನಿಂದ ಪಾರಾದ ಮೇಲೂ ಸಂಗೀತಾ ಈ ರೀತಿ ಕಿತ್ತಾಡಿದ್ದು ಪ್ರೇಕ್ಷಕರಿಗೆ ಸರಿ ಕಂಡಿರಲಿಲ್ಲ, ಅದನ್ನೇ ಸುದೀಪ್‌ ಅವರು ಸೂಕ್ಷ್ಮವಾಗಿ ತಿಳಿಸಲು ಪ್ರಯತ್ನಿಸಿದರು. ಅಹಂಕಾರದಿಂದ ವರ್ತಿಸುವವರಿಗೆ ಯಾವ ಬುದ್ಧಿವಾದವೂ ಕೇಳಿಸಿಲ್ಲ ಎಂಬುವುದು ಸಂಗೀತಾ ಅವರ ವಿಷಯದಲ್ಲಿ ನಿಜವಾಗಿದೆ. ಸಂಗೀತಾ ಅವರಿಗೆ ಸುದೀಪ್ ಅವರು ಸೂಕ್ಷ್ಮವಾಗಿ ಬುದ್ಧಿವಾದ ಹೇಳಿದರೂ ಅದನ್ನು ಕೇಳುವ ಮನಸ್ಥಿತಿಯಿಲ್ಲಿ ಸಂಗೀತಾ ಇಲ್ಲ, ಅದರ ಮುಂದುವರೆದ ಭಾಗ ಈ ವಾರದಲ್ಲಿ ಕಾಣುತ್ತಿದೆ.

ಮಾನವೀಯತೆ ಮರೆತು ವರ್ತಿಸಿದ ಸಂಗೀತಾ
ಬಿಗ್‌ಬಾಸ್‌ ಸವಾಲನ್ನು ಒಪ್ಪಿಕೊಳ್ಳುವ ಗೇಮ್ ನೀಡಿತ್ತು, ಅದರಲ್ಲಿ ಒಂದು ತಂಡ ಮತ್ತೊಂದು ತಂಡಕ್ಕೆ ಸವಾಲ್ ಹಾಕುತ್ತೆ, ಅದನ್ನು ಅವರು ಒಪ್ಪದಿದ್ದರೆ ಈ ತಂಡಕ್ಕೆ ಪ್ಲಸ್ ಆಗುತ್ತೆ, ಸಂಗೀತಾ ಟೀಂ ನೀಡುವ ಸವಾಲುಗಳು ತುಂಬಾನೇ ಅಮಾನವೀಯವಾಗಿತ್ತು.
ತಲೆಬೋಳಿಸುವ ಟಾಸ್ಕ್ ನೀಡಿದ ಸಂಗೀತಾ ಟೀಂ
ಎದುರಾಳಿ ಸಂಪತ್ತಿಗೆ ಸವಾಲ್ ತಂಡಕ್ಕೆ ತಲೆಬೋಳಿಸುವ ಟಾಸ್ಕ್ ನೀಡಿತ್ತು, ಅದನ್ನು ಕಾರ್ತಿಕ್‌ ಹಾಗೂ ತುಕಾಲಿಯವರು ಸ್ವೀಕರಿಸಿದರು, ಆದರೆ ಈ ಟಾಸ್ಕ್‌ ಅಮಾನವೀಯ ಎಂದು ವೀಕ್ಷಕರು ಹೇಳುತ್ತಿದ್ದಾರೆ, ಗಜಕೇಸರಿ ಟೀಂನ ಪ್ರತಾಪ್‌ ಕೂಡ ಅವರ ತಂಡದ ಆಟದ ಶೈಲಿಯನ್ನು ಖಂಡಿಸಿದ್ದಾರೆ.

ಒಂದು ಬೌಲ್‌ ಮೆಣಸು ತಿನ್ನಲು ಟಾಸ್ಕ್ ನೀಡಿದ ಸಂಗೀತಾ
ಆಟದ ಬರದಲ್ಲಿ ಹಸಿಮೆಣಸು ತಿನ್ನಲು ಟಾಸ್ಕ್ ನೀಡಿದ ಸಂಗೀತಾ-ವಿನಯ್ ಟೀಂ. ಆದರೆ ಅಷ್ಟೊಂದು ಮೆಣಸು ತಿಂದರೆ ಮನುಷ್ಯ ಬದುಕಿರುತ್ತಾರಾ ಎಂದು ವರ್ತೂರ್ ಸಂತೋಷ್ ಪ್ರಶ್ನೆ ಮಾಡಿದ್ದರು, ಆಗ ಬಿಗ್‌ಬಾಸ್‌ ಕೂಡ, ಮಾನವೀಯತೆ ಮೀರದಂತೆ ಸೂಚನೆ ನೀಡಿತ್ತು, ಈ ಟಾಸ್ಕ್ ಬಳಿಕ ಸಂಗೀತಾ ಅವರ ಬಗ್ಗೆ ಇರುವ ಅಭಿಪ್ರಾಯ ಸಂಪೂರ್ಣ ಬದಲಾಗಿದೆ.

ತನ್ನ ತಪ್ಪಿಗೆ ಪಶ್ಚಾತಾಪ ಪಡುತ್ತಿದ್ದಾರೆಯೇ ಸಂಗೀತಾ?
ಸಂಗೀತಾ ವರ್ತನೆ ಸಂಪೂರ್ಣ ಬದಲಾಗಿದೆ, ಅವರಿಗೆ ತಾನು ಮಾಡುತ್ತಿರುವುದು ತಪ್ಪು ಎಂದು ಗೊತ್ತಾಗಿದೆ, ಆದರೆ ಅದನ್ನು ಒಪ್ಪಿಕೊಂಡು ಕ್ಷಮೆ ಕೇಳಲು ಅಹಂ ಅಡ್ಡ ಬರುತ್ತಿದೆ, ಕಾರ್ತಿಕ್, ತನೀಷಾ ಜೊತೆ ಕ್ಷಮೆ ಕೇಳಿದರೆ ಎಲ್ಲವೂ ಸರಿಹೋಗುತ್ತೆ, ಆದರೆ ಅಷ್ಟು ಮಾಡದೆ ಆಟದ ಕಡೆ ಸರಿಯಾಗಿ ಗಮನ ನೀಡಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ.

ತನ್ನ ಹಾಗೂ ಕಾರ್ತಿಕ್ ಫ್ರೆಂಡ್‌ಶಿಪ್‌ನಲ್ಲಿನ ಬಿರುಕು ಸಂಗೀತಾ ಅವರನ್ನು ಕುಗ್ಗಿಸುತ್ತಿದೆಯೇ?

ಸಂಗೀತಾ ಹಾಗೂ ಕಾರ್ತಿಕ್ ಫ್ರೆಂಡ್‌ಶಿಪ್‌ ತುಂಬಾನೇ ಕ್ಯೂಟ್ ಆಗಿತ್ತು,ಆದರೆ ಅನೇಕ ಬಾರಿ ಸಂಗೀತಾ ತುಂಬಾನೇ ಡಾಮಿನೇಟ್‌ ಅನಿಸುತ್ತಿದ್ದರು, ಇದೇ ವಿಷಯ ಕಾರ್ತಿಕ್ ಅವರಿಗೆ ಬೇಸರವನ್ನು ಉಂಟು ಮಾಡುತ್ತಿತ್ತು, ಇದೇ ವಿಷಯಕ್ಕೆ ಒಬ್ಬರಿಗೆ ಆಗಾಗ ಜಗಳವಾಗುತ್ತಿತ್ತು. ಅಲ್ಲದೆ ಕಾರ್ತಿಕ್ ತನೀಷಾ ಅವರ ಜೊತೆ ಸ್ನೇಹದಿಂದ ಇರುವುದು, ನನಗೆ ನೀಡಿದ ಪ್ರಾಮುಖ್ಯತೆ ತನೀಷಾ ಅವರಿಗೂ ನೀಡುತ್ತಿದ್ದಾರೆ ಎಂಬುವುದು ಸಂಗೀತಾ ಅವರಲ್ಲಿ ಅಸಮದಾನ ಹೆಚ್ಚು ಮಾಡುತ್ತಿದೆ. ಅಲ್ಲದೆ ಚಿಕ್ಕ ವಿಷಯವನ್ನು ದೊಡ್ಡ ಮಾಡುತ್ತಾ ಹೋಗುತ್ತಿದ್ದಾರೆ, ಇದರಿಂದ ಜಗಳಗಳು ಹೆಚ್ಚಾಗುತ್ತಿದೆ, ಈಗ ತನಗೆ ಇಷ್ಟವಿಲ್ಲದ ಗುಂಪಿನ ಜೊತೆಯೇ ಸಂಗೀತಾ ಆಟ ಆಡುತ್ತಿದ್ದಾರೆ.

ತನ್ನ ತಂಡ ಸೋತಿದ್ದು ಅವರ ನೋವು ಹೆಚ್ಚಿಸಿದೆ
ಬಹುಶಃ ಗಜಕೇಸರಿ ಗೆದ್ದಿದ್ದರೆ ಸಂಗೀತಾ ವರ್ತನೆ ಬೇರೆ ರೀತಿ ಇರ್ತಿತ್ತಿತ್ತೇನೋ ಆದರೆ ಟೀಂ ಗೆಲ್ಲಲಿಲ್ಲ, ತಾನೂ ಕೆಟ್ಟವಳು ಆದೆ ಎಂಬುವುದು ಅವರನ್ನು ತುಂಬಾನೇ ಕಾಡುತ್ತಿದೆ ಹಾಗಾಗಿ ಇಂದಿನ ಪ್ರೊಮೋದಲ್ಲಿ ಸಂಗೀತಾ ತುಂಬಾ ಕುಗ್ಗಿ ಹೋದಂತೆ ಕಾಣುತ್ತಿದ್ದಾರೆ, ಕಾಲ ಮಿಂಚಿಲ್ಲ, ಇನ್ನಾದರೂ ಸಂಗೀತಾ ಸರಿಯಾದ ರೀತಿಯಲ್ಲಿ ಆಟ ಆರಂಭಿಸಿದರೆ ಫಿನಾಲೆಗೆ ತಲುಪಬಹುದು.

ಸವಾಲ್‌ನ ಆಟವನ್ನು ಚೆನ್ನಾಗಿ ಆಡಬಹುದಿತ್ತು
ಎದುರಾಳಿ ಟೀಂನವರು ತಾವು ನೀಡಿದ ಸವಾಲು ಸ್ವೀಕರಿಸಬಾರದು ಎಂಬ ಕಾರಣಕ್ಕೆ ಅಮಾನವೀಯ ಟಾಸ್ಕ್ ನಿಡುವ ಬದಲಿಗೆ ನಂತರ ನೀಡಿದ ಪುಶ್‌ ಅಪ್ ಟಾಸ್ಕ್, ಈಜು ಟಾಸ್ಕ್, ಇನ್ನಿತರ ಕ್ರಿಯೇಟಿವ್ ಟಾಸ್ಕ್ ನೀಡಬಹುದಿತ್ತು, ಯಾರಿಗೂ ನೋವಾಗದೆ ಸಕತ್ ಫನ್‌ ಗೇಮ್ ನೀಡಬಹುದಿತ್ತು, ಆದರೆ ಇಲ್ಲಿ ತಂಡಗಳು ಸೋತಿವೆ, ಮನರಂಜನೆ ಆಗಬೇಕಾಗಿದ್ದ ಟಾಸ್ಕ್‌ ವೀಕ್ಷಕರಿಗೆ ಟೆನ್ಷನ್‌ ತಂದಿದೆ.

ಎಲ್ಲಾ ಸೀಸನ್‌ಗಿಂತ ಭಿನ್ನ ಬಿಗ್‌ಬಾಸ್‌ 10ರ ಸ್ಪರ್ಧಿಗಳು
ಉಳಿದೆಲ್ಲಾ ಸೀಸನ್‌ನಲ್ಲಿ ಮನರಂಜನೆಗೆ ಯಾವುದೇ ಕೊರತೆ ಇರಲಿಲ್ಲ, ಆದರೆ ಈಗ ಬರೀ ದ್ವೇಷ ಸಾಧನೆ ಮಾತ್ರ ಎದ್ದು ಕಾಣುತ್ತೆ, ವೀಕ್ಷಕರನ್ನು ರಂಜಿಸುವಲ್ಲಿ ಬಹುತೇಕರು ಹಿಂದೆಯಿದ್ದಾರೆ. ಪ್ರತಾಪ್, ವರ್ತೂರ್ ಸಂತೋಷ್ ಪಂಚ್ ಮಾತುಗಳಷ್ಟೇ ಮನರಂಜನೆ ಉಂಟು ಮಾಡುತ್ತಿದೆ. ವಿನಯ್, ಸಂಗೀತಾ, ಕಾರ್ತಿಕ್ ಎಲ್ಲರೂ ಒಳ್ಳೆಯ ಸ್ಪರ್ಧಿಗಳೇ ಆದರೆ ತಮ್ಮ ಆಟದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಈ ಗೇಮ್ ತುಂಬಾ ಸೂಪರ್ ಅನಿಸುವುದು.

English summary

Biggboss Season 10: Sangeetha Forgot Humanity In Game?

Biggboss Season 10: Sangeetha game changed, it affecting her winning goal, does she forgot humanity in tha name of game, read on.....
X
Desktop Bottom Promotion