Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸೀಸನ್ 10ರ ಕಡೆಯ ಪಂಚಾಯಿತಿಯಲ್ಲಿ ಮಾತಿನ ಛಡಿಯೇಟು: ರಕ್ಷಕ್ ಅಲ್ಲ ಕಂಟೆಸ್ಟೆಂಟ್ ಹೆಸರು .... ಸೂಪರ್ ಕಿಚ್ಚ ಸೂಪರ್!
ಬಿಗ್‌ಬಾಸ್ ಸೀಸನ್ 10 ಕಟ್ಟಕಡೆಯ ಕಿಚ್ಚನ ಪಂಚಾಯಿತಿ ಬಗ್ಗೆ ವೀಕ್ಷಕರು ತುಂಬಾನೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ, ಬಳೆ ವಿಚಾರ ಬಂದಾಗ ಕಿಚ್ಚನ ಪಂಚಾಯಿತಿಯನ್ನು ಹೇಗೆ ಎದುರು ನೋಡುತ್ತಿದ್ದರೋ ಅದೇ ರೀತಿ ಈ ವಾರದ ಪಂಚಾಯಿತಿಯನ್ನು ವೀಕ್ಷಕರು ಎದುರು ನೋಡುತ್ತಿದ್ದಾರೆ, ಅದಕ್ಕೆ ಕಾರಣ ಬಿಗ್‌ಬಾಸ್ 10 ಸೀಸನ್‌ನಿಂದ ಎಲಿಮಿನೇಟ್ ಆದ ಸ್ಪರ್ಧಿಗಳ ವರ್ತನೆ, ಅದರಲ್ಲೂ ಇಶಾನಿ ವರ್ತನೆ. ಒಬ್ಬ ವ್ಯಕ್ತಿ ಇಷ್ಟೊಂದು ಬಾಲಿಶವಾಗಿ ಇರಲು ಸಾಧ್ಯವೇ, ಸೆಲೆಬ್ರಿಟಿ ಸ್ಟೇಟಸ್‌ನಲ್ಲಿರುವ ಇರುವ ಇವರು ಇಷ್ಟು ಕೆಳಮಟ್ಟದಲ್ಲಿಯೂ ವರ್ತಿಸಬಹುದೇ ಎಂಬಂತೆ ಅವರು ವರ್ತಿಸಿದ್ದರು.

Everything Fair enough In Game ಎಂಬ ಮಾತಿದೆ, ಬಿಗ್‌ಬಾಸ್ ಆಟದಲ್ಲಿ ಆ ಮನೆಯೊಳಗಡೆ ಇದ್ದಾಗ ಉಂಟಾದ ದ್ವೇಷವಾಗಲಿ, ಅಸಮಧಾನವಾಗಲಿ ಅಲ್ಲೇ ಬಿಟ್ಟು ಹೊರಬರಬೇಕು, ಅದು ಸಾಧ್ಯವಿಲ್ಲದಿದ್ದರೆ ಒಳ್ಳೆಯ ಮಾತುಗಳಿಂದ ಟಾಂಗ್ ಕೊಡಬೇಕು, ಹೇಗೆ ಟಾಂಗ್ ಕೊಡಬೇಕು ಎಂಬುವುದನ್ನು ಸುದೀಪ್ ಅವರು ಹಲವಾರು ಬಾರಿ ಹೇಳಿರುವ ಮಾತುಗಳಿಂದಲೇ ಕಲಿಯಬಹುದು.
ಆದರೆ ಇಶಾನಿ ಕಾಗೆ ಕಕ್ಕ ಮಾಡಿ ಇಲ್ಲೆಲ್ಲ ಓಡಾಡಿ ಸಿಂಪತಿಯಿಂದ ಗೆದ್ದು ಬಂದಿದೆ, ಎಂಬ ಮಾತನಾಡುತ್ತಾರೆ, ಅದನ್ನು ಹೇಳಿದಾಗಲೇ ಮನೆಯಲ್ಲಿದ್ದ ಸಂಗೀತಾ ಹಾಗೂ ವಿನಯ್‌ಗೆ ಇರುಸು ಮುರುಸಾಗುತ್ತದೆ, ಇದನ್ನು ಎಪಿಸೋಡ್‌ನಲ್ಲಿ ವೀಕ್ಷಿಸಿದ ಜನರು ಇಶಾನಿಗೆ ಇಗ್ಗಾಮುಗ್ಗ ಜಡಿಯುತ್ತಿದ್ದಾರೆ. ಇನ್ನು ಸ್ನೇಹಿತ್ ನಮ್ರತಾ ಬಳಿ ಹೇಳಿದ ಮಾತುಗಳು, ರಕ್ಷಕ್ ತಾನೊಬ್ಬ ದೊಡ್ಡ ಮೇಧಾವಿ ಎಂಬಂತೆ ವರ್ತಿಸಿದ ರೀತಿಗೆ ಸುದೀಪ್ ಅವರು ಸರಿಯಾಗಿ ಜಾಡಿಸಿದ್ದಾರೆ.
ಇಶಾನ್‌ಗೆ ಸಕತ್ ಕ್ಲಾಸ್
ಹೊರಗಡೆ ಹೋದ ಮೇಲೂ ಇಶಾನಿಗೆ ಬುದ್ಧಿ ಬಂದಿಲ್ಲ ಎಂಬುವುದನ್ನು ತುಂಬಾನೇ ಚೆನ್ನಾಗಿ ಹೇಳಿದ್ದಾರೆ. ಇಶಾನಿ ಕುರಿತು ಸುದೀಪ್ ಅವರು ಹೇಳಿದ ಮಾತುಗಳು ತುಂಬಾನೇ ಚೆನ್ನಾಗಿದೆ, ಇಶಾನಿಯವರು ಈ ಮಾತುಗಳನ್ನು ಕೇಳಿದ ಮೇಲಾದರೂ ಇನ್ನೊಬ್ಬರಿಗೆ ಟಾಂಗ್ ಕೊಡುವುದನ್ನು ಸಭ್ಯ ಭಾಷೆಯಿಂದಲೂ ಹೇಳಬಹುದು ಎಂದು ಕಲಿತರೆ ಒಳ್ಳೆಯದು.
ಸ್ನೇಹಿತ್‌ಗೂ ಮಾತಿನೇಟು
ಸ್ನೇಹಿತ್ ಮನೆಯೊಳಗೆ ಬಂದು ನಮ್ರತಾ ಅವರ ಇಮೇಜ್‌ಗೆ ಡ್ಯಾಮೇಜ್ ಆಗಿದೆ ಎಂಬಂತೆ ಮಾತನಾಡಿದ್ದರು, ಅಲ್ಲದೆ ಪ್ರತಿದಿನ ನಿಮಗೋಸ್ಕರಾ ಫೈಟ್ ಮಾಡ್ತಾ ಇದ್ದೀನಿ ಎಂದು ಹೇಳಿ ಹೀರೋ ಆಗಲು ಹೋದರು. ಹೊರಗಡೆ ಏನಾಗುತ್ತಿದೆ ಎಂದು ಹೇಳುವ ಅವಶ್ಯಕತೆ ಸ್ನೇಹಿತ್ ಅವರಿಗೆ ಇರಲಿಲ್ಲ, ನಮ್ರತಾ ಅವರನ್ನು ಹುರಿದುಂಬಿಸುವ ಬದಲಿಗೆ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ. ನಮ್ರತಾ ಅವರಿಗೆ ಹೊರಗಡೆ ಅಂಥದ್ದೇನು ನಡೆದಿಲ್ಲ ಎಂದು ತಿಳಿಸಿದ್ದಾರೆ.
ಎಲ್ಲದಕ್ಕಿಂತಲೂ ಸೂಪರ್ ಆ ಕಂಟೆಸ್ಟೆಂಟ್ ಹೆಸರೇನು ರಕ್ಷಕ್ ಅಲ್ವಾ?
ರಕ್ಷಕ್ ನೀನ್ಯಾರು ಎಂಬುವುದು ಗೊತ್ತೇ ಇಲ್ಲ ಎಂಬಂತೆ ಸುದೀಪ್ ಅವರು ಮಾತನಾಡಿದ ರೀತಿ ಸೂಪರ್ ಆಗಿತ್ತು, ಬಿಗ್‌ಬಾಸ್‌ನಿಂದ ಹೊರಗಡೆ ಬಂದ ಸುದೀಪ್ ಅವರ ವಿರುದ್ದವೇ ಬಾಯಿಹರಿಬಿಟ್ಟಿದ್ದರು, ನಂತರ ಕ್ಷಮೆ ಕೂಡ ಹೇಳಿದ್ದರು, ಆದರೆ ಕಿಚ್ಚನ ಪಂಚಾತಿಯಲ್ಲಿ ಆ ಕಂಟೆಸ್ಟೆಂಟ್ ಹೆಸರೇನು? ಎಂದು ಕೇಳುವ ಮೂಲಕ ನಿನ್ನಂಥವರು ನನ್ನ ನೆನಪಲ್ಲೂ ಉಳಿಯಲ್ಲ ಎಂಬಂತೆ ಸರಿಯಾಗಿಯೇ ಮಾತಿನೇಟು ಕೊಟ್ಟಿದ್ದಾರೆ.
ಭಾರತದ ಎಲ್ಲಾ ಬಿಗ್‌ಬಾಸ್‌ಗಳಿಗೆ ಹೋಲಿಸಿದರೆ ಸುದೀಪ್‌ನಷ್ಟೂ ಚೆನ್ನಾಗಿ ಕ್ಲಾಸ್ ತೆಗೆದುಕೊಳ್ಳುವ ಮತ್ತೊಬ್ಬರು ಇಲ್ಲ ಎಂಬುವುದನ್ನು ಇತರ ಭಾಷೆಗಳ ಬಿಗ್‌ಬಾಸ್ ಹಾಗೂ ಕನ್ನಡ ಬಿಗ್‌ಬಾಸ್ ನೋಡುತ್ತಿರುವವರು ಖಂಡಿತ ಒಪ್ಪಿಕೊಳ್ಳುತ್ತಾರೆ.
ಸೀಸನ್ 10ರ ಟ್ರೋಫಿ ಯಾರ ಪಾಲಾಗುತ್ತದೆ ಎಂದು ಹೇಳಲು ನಿಜಕ್ಕೂ ಕಷ್ಟವಾಗುತ್ತಿದೆ, ಅದರಲ್ಲೂ ಸಂಗೀತಾ, ವಿನಯ್, ಡ್ರೋನ್ ಪ್ರತಾಪ್, ಕಾರ್ತಿಕ್ ನಡುವೆ ಟಫ್ ಫೈಟ್ ಇದೆ. ಬಿಗ್‌ಬಾಸ್ ವಿನ್ನರ್ ನಿಮಗೆ ಯಾರಾಗಬೇಕು, ಕಮೆಂಟ್ ಮಾಡಿ..



Click it and Unblock the Notifications
