Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಎಲಿಮಿನೇಷನ್ ಭಯದಲ್ಲಿ ಸಂಗೀತಾ, ಸ್ನೇಹಿತ್ ಹೀಗ್ಯಾಕೆ ವರ್ತಿಸಿದರು? ವೀಕ್ಷಕರಿಗಂತೂ ಫುಲ್ ಮಜಾ
ಕನ್ನಡ ಬಿಗ್‌ಬಾಸ್ ಸೀಸನ್ 10ರ ಈ ವಾರದ ಸೂಪರ್ ಸಂಡೇ ಸಕತ್ ಫನ್ ಜೊತೆಗೆ ಹಲವಾರು ವಿಷಯಗಳಿಂದ ತುಂಬಾನೇ ವಿಶೇಷವಾಗಿತ್ತು. ಎಲಿಮಿನೇಷನ್ ಕುಳಿತಿದ್ದ ಸ್ಪರ್ಧಿಗಳು ತಾವು ಹೋಗಬಹುದು ಎಂಬ ಭಯದಲ್ಲಿ ವರ್ತಿಸಿದ ರೀತಿ ವೀಕ್ಷಕರಿಗೆ ಸಕತ್ ಫನ್ ನೀಡಿತ್ತು, ಇಷ್ಟು ವಾರಗಳಲ್ಲಿ ಬಿಗ್‌ಬಾಸ್ ಸ್ಪರ್ಧಿಗಳಿಗೆ ಹಾಗೂ ವೀಕ್ಷಕರಿಗೆ ಸಕತ್ ಖುಷಿಯ ಸಂಡೇ ಆಗಿತ್ತು.

ಅದರಲ್ಲೂ ಎಲಿಮಿನೇಷನ್ ಎಂಬ ಹಾಟ್ ಸೀಟ್‌ನಲ್ಲಿ ಕುಳಿತಿದ್ದ ಸಂಗೀತಾ, ಸ್ನೇಹಿತ್‌ರ ವಿಚಿತ್ರ ವರ್ತನೆ
ಒಂದು ವೇಳೆ ಹೊರಗಡೆ ಹೋದರೆ ವಿಕ್ಟಿಮ್ ಕಾರ್ಡ್ ಹಿಡಿದು ಹೊರಡಲು ನಿಂತ ಸಂಗೀತಾ.
ಹೊರಗಡೆ ಹೋಗಿ ಕಾರ್ತಿಕ್‌ಗೆ ಸಪೋರ್ಟ್ ಮಾಡಲು ತನ್ನ ಅಭಿಮಾನಿಗಳಿಗೆ ಹೇಳುತ್ತೇನೆ ಈ ವಾರ ನಾನು ಹೊರಗಡೆ ಹೋಗುತ್ತೇನೆ ಎಂದು ಅಳಲಾರಂಭಿಸಿದರು, ಅಲ್ಲದೆ ಇಲ್ಲಿ ಇರಲು ನನಗೆ ಇಷ್ಟವಿಲ್ಲ ಎಂದು ಅನ್ನದ ವಿಷಯದಲ್ಲಿ ಆದ ಗಲಾಟೆ ಬಗ್ಗೆ ಹೇಳಿ ವಿಕ್ಟಿಮ್ ಕಾರ್ಡ್ ಪ್ಲೇ ಮಾಡಿದರು ಎಂದರೆ ತಪ್ಪಾಗಲಾರದು.
ಎಂತಂಥ ಜಗಳವನ್ನು ಎದುರಿಸಿದ ಸಂಗೀತಾ, ಕಾರ್ತಿಕ್ ಜೊತೆ ಮನಸ್ತಾಪ ಮಾಡಿಕೊಂಡು ಪಕ್ಷ ಬದಲಾಯಿಸಿ, ನಿನ್ನನ್ನು ಎತ್ತುಕೊಂಡು ಬಂದಿದ್ದಕ್ಕೆ ಕಾರ್ತಿಕ್‌ಗೆ ಹುರಿಯಾಗಿದೆ ಎಂದು ವಿನಯ್ ಹೇಳಿದಾಗ ಖುಷಿಯಿಂದ ಕುಣಿದಾಡಿದ ಸಂಗೀತಾ ತುಕಾಲಿ ಜೊತೆ ಜಗಳವಾಡಿದ್ದಕ್ಕೆ ಮನೆ ಬಿಟ್ಟು ಹೋಗುತ್ತಿದ್ದೇನೆ ಎಂದು ಹೇಳಿದರೆ ಅದನ್ನು ನಂಬಲು ವೀಕ್ಷಕರಿಗೆ ಸಾಧ್ಯವೇ?
ಈ ಬಾರಿ ಎಲಿಮಿನೇಷನ್ ಕೂತಿರುವವರು ಯಾರೂ ನನಗಿಂತ ಕಡಿಮೆಯಿಲ್ಲ, ಒಂದು ವೇಳೆ ತಾನು ಹೊರಗಡೆ ಹೋದರೆ ಅಲ್ಲಿಂದ ಬರಲು ನಾನೇ ಬಯಸಿದೆ ಎಂಬುವುದನ್ನು ಬಿಂಬಿಸಿಕೊಳ್ಳಲು ಸಂಗೀತಾ ಕಣ್ಣೀರು ಹಾಕಿರಬಹುದೇ? ಎಂಬ ಸಂಶಯ ಖಂಡಿತ ಕಾಡುತ್ತೆ.
ಮೈಕಲ್ ಹೋಗಬಹುದು ಎಂದು ಸ್ನೇಹಿತ್ ಕಣ್ಣೀರು
ಸ್ನೇಹಿತ್ ಅವರಿಗೆ ಮೈಕಲ್ ನನಗಿಂತ ಬೆಟರ್ ಆಗಿ ಆಟ ಆಡಿಕೊಂಡು ಬರುತ್ತಿದ್ದಾರೆ ಎಂಬುವುದು ಗೊತ್ತಿದೆ. ನಾನು ಈ ವಾರವಷ್ಟೇ ಚೆನ್ನಾಗಿ ಆಡಿದ್ದೇನೆ, ಇಬ್ಬರ ಗ್ರಾಫ್ ನೋಡಿದರೆ ಮೈಕಲ್ ನನಗಿಂತ ಬೆಟರ್ ಎಂಬುವುದು ಸ್ವತಃ ಸ್ನೇಹಿತ್ ಅವರಿಗೆ ಗೊತ್ತಿದೆ. ಆದರೂ ಮೈಕಲ್ ಹೊರಗಡೆ ಹೋಗುತ್ತಾನೆ ಎಂದು ಇವರು ಅತ್ತಿದ್ದು ನೋಡುತ್ತಿದ್ದರೆ ವೀಕ್ಷಕರಿಗೆ ಅಯ್ಯೋ ಹೀಗೂ ಇರ್ತಾರಾ ಅಂತ ಅನಿಸಿದ್ದು ಸುಳ್ಳಲ್ಲ.
ಸೂಪರ್ ಆಗಿತ್ತು ಕಿಚ್ಚನ ನಿರ್ಧಾರ
ಈ ಬಾರಿ ಕೊನೆಗೆ ಮೈಕಲ್ ಹಾಗೂ ಸ್ನೇಹಿತ್ ಎಲಿಮಿನೇಷನ್ ರೌಂಡ್‌ನಲ್ಲಿ ಉಳಿದುಕೊಂಡಾಗ ಇಬ್ಬರು ಈಗ ಹೋಗಲು ಸೂಕ್ತವಲ್ಲ... ಮೈಕಲ್ ಆಟದ ಜೊತೆಗೆ ಕನ್ನಡ ಮಾತನಾಡುತ್ತಾ ಕನ್ನಡಿಗರ ಮನರಂಜಿಸುತ್ತಿದ್ದಾರೆ, ಸ್ನೇಹಿತ್ ಈ ಬಾರಿ ಉತ್ತಮವಾಗಿ ಆಡಿದ್ದಾರೆ, ಅದ್ದರಿಂದ ಈ ಬಾರಿ ಹೊರ ಹೋಗಬಾರದು, ಒಂದು ವೇಳೆ ಎಲಿಮಿನೇಟ್ ಅಂದರೂ ಅವರನ್ನು ಸೀಕ್ರೆಟ್ ರೂಂನಲ್ಲಿಡಬೇಕು ಎಂದು ವೀಕ್ಷಕರಿಗೆ ಅನಿಸಿತ್ತು. ಆದರೆ ಕಿಚ್ಚ ಸುದೀಪ್ ಇದುವರೆಗೆ ಬಿಗ್‌ಬಾಸ್‌ನಲ್ಇ ಬಳಸದೇ ಇರುವ ತಮ್ಮ ವಿಶೇಷ ಅಧಿಕಾರ ಬಳಸಿ ಈ ವಾರ ಇಬ್ಬರನ್ನೂ ಉಳಿಸಿದ್ದಾರೆ.



Click it and Unblock the Notifications