Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಮತ್ತೆ ಆಸ್ಪತ್ರೆ ಸೇರಿದ ಡ್ರೋನ್ ಪ್ರತಾಪ್, ಆರೋಗ್ಯಸ್ಥಿತಿ ಅಷ್ಟೊಂದು ಗಂಭೀರವಾಗಲು ಕಾರಣವೇನು?
ಡ್ರೋನ್ ಪ್ರತಾಪ್... ಬಿಗ್‌ಬಾಸ್ ಸ್ಪರ್ಧಿಗಳಲ್ಲಿ ತುಂಬಾನೇ ಸುದ್ದಿಯಲ್ಲಿರುವ ಸ್ಪರ್ಧಿ. ಡ್ರೋನ್ ಪ್ರತಾಪ್ ಅವರನ್ನು ಜನ ಎಷ್ಟು ದ್ವೇಷ ಮಾಡುತ್ತಿದ್ದರೋ ಬಿಗ್‌ಬಾಸ್ ಮನೆಗೆ ಬಂದ ಮೇಲೆ ಅವರ ಮೇಲಿನ ಅಭಿಪ್ರಾಯ ಫುಲ್ ಬದಲಾಗಿ ಫ್ಯಾನ್ ಸಂಖ್ಯೆ ಹೆಚ್ಚಿದೆ, ಇದೀಗ ಪ್ರತಾಪ್ ಅವರು ಹುಷಾರಿಲ್ಲದೆ ಆಸ್ಪತ್ರೆ ಸೇರಿಕೊಂಡರು ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಅವರ ಅಭಿಮಾನಿಗಳ ಆತಂಕ ಹೆಚ್ಚಿದೆ.

ಅವರು ಯಾವ ಕಾರಣಕ್ಕೆ ಆಸ್ಪತ್ರೆಗೆ ಸೇರಿದರು ಎಂಬುವುದು ಇಂದಿನ ಎಪಿಸೋಡ್ ನೋಡಿದರೆ ತಿಳಿಯುತ್ತದೆ, ಆದರೆ ಅವರು ಆಸ್ಪತ್ರೆಗೆ ಸೇರಲು ಕಾರಣವೇನು ಎಂಬುವುದರ ಬಗ್ಗೆ ಹಲವಾರು ಊಹಾಪೋಹಗಳು ಕೇಳಿಬರುತ್ತಿದೆ, ಕೆಲವರು ಡ್ರೋನ್ ಪ್ರತಾಪ್ ಆತ್ಮಹತ್ಯೆಗೆ ಪ್ರಯತ್ನಿಸಿದರು, ಹ್ಯಾಂಡ್‌ವಾಶ್ ಲಿಕ್ವಿಡ್ ಕುಡಿದರು ಎಂದು ಸುದ್ದಿ ಹಬ್ಬಿಸಿದ್ದಾರೆ.
ಆದರೆ ಖಾಸಗಿ ಚಾನಲ್‌ಗೆ ಕಲರ್ಸ್ ಕನ್ನಡ ಪಿಆರ್ ಡ್ರೋನ್ ಪ್ರತಾಪ್‌ಗೆ ಅವರಿಗೆ ಫುಡ್ ಪಾಯಿಸನ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.ಈ ವಿಷಯ ಹೊರ ಬರುತ್ತಿದ್ದಂತೆ ಸಾಮಾಜಿಕ ತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯೇ ನಡೆಯುತ್ತಿದೆ.
ಬದಲಾದ ಡ್ರೋನ್ ಪ್ರತಾಪ್ ಲಕ್
ಡ್ರೋನ್ ಪ್ರತಾಪ್ ಬಿಗ್‌ಬಾಸ್‌ಗೆ ಬರುವಾಗ ಅವರನ್ನು ಒಬ್ಬ ಸುಳ್ಳುಗಾರ ಎಂದು ದ್ವೇಷಿಸುತ್ತಿದ್ದರು, ಈ ಮೊದಲು ಹೇಳಿದ ಕೆಲವು ಸುಳ್ಳುಗಳಿಂದ ನಂತರ ಅವರು ತನ್ನದೇ ಆಫೀಸ್ ಓಪನ್ ಮಾಡಿ ರೈತರ ಗದ್ದೆ, ತೋಟಗಳಿಗೆ ಔಷಧಿ ಸಿಂಪಡಿಸುವ ಡ್ರೋನ್ ತಯಾರಿಸಿ , ಆ ಡ್ರೋನ್ ರೈತರಿಗೆ ನೆರವಾಗುತ್ತಿದ್ದರೂ ಜನರಿಗೆ ಪ್ರತಾಪ್ ಮೇಲಿದ್ದ ಅಭಿಪ್ರಾಯ ಬದಲಾಗಿರಲಿಲ್ಲ, ಅವರು ಏನೇ ಹೇಳಲಿ ಅದು ಸುಳ್ಳು ಎಂದೇ ಹೇಳುತ್ತಿದ್ದರು. ಆದರೆ ಬಿಗ್‌ಬಾಸ್‌ಗೆ ಬಂದಾಗ ಅವರ ಲಕ್ ಬದಲಾಯ್ತು, ಪ್ರತಾಪ್ ಅವರನ್ನು ದ್ವೇಷ ಮಾಡುತ್ತಿದ್ದವರು ಅನೇಕರು ಇಷ್ಟಪಡಲಾರಂಭಿಸಿದರು, ಬಿಗ್‌ಬಾಸ್ ಮನೆಯಲ್ಲಿ ಕೂಲಾಗಿ, ಮೈಂಡ್ ಗೇಮ್ ಮೂಲಕ ಗಮನ ಸೆಳೆಯುತ್ತಿರುವುದರಿಂದ ಫಿನಾಲೆ ಟಾಪ್ ಸ್ಪರ್ಧಿಗಳಲ್ಲಿ ಪ್ರತಾಪ್ ಇರುತ್ತಾರೆ ಎಂದು ಬಿಗ್‌ಬಾಸ್ ವೀಕ್ಷಕರು ಹೇಳುತ್ತಿದ್ದಾರೆ.
ಅಪಹಾಸ್ಯ ಮಾಡಿದವರೇ ಭೇಷ್ ಎನ್ನುವಂಥ ಆಟದ ವೈಖರಿ
ಪ್ರಾರಂಭದಲ್ಲಿ ಪ್ರತಾಪ್ ಅವರನ್ನು ಅಪಹಾಸ್ಯ ಮಾಡಿದವರೇ ಹೆಚ್ಚು, ಇದರಿಂದ ಮನನೊಂದು ಬಾತ್‌ರೂಂನಲ್ಲಿ ಅತ್ತಾಗ ವೀಕ್ಷಕರಿಗೆ ಅವರ ಮೇಲೆ ಅನುಕಂಪ ಬಂತು. ಆದರೆ ಬರೀ ಅನುಕಂಪದಿಂದಲೇ ಇಷ್ಟುವಾರ ಇದ್ದಾರೆಯೇ? ಖಂಡಿತ ಇಲ್ಲ, ಬರೀ ಅನುಕಂಪದಿಂದ ಇಷ್ಟು ವಾರ ಬಿಗ್‌ಬಾಸ್ ಮನೆಯಲ್ಲಿ ಇರಲು ಸಾಧ್ಯವಿಲ್ಲ, ಪ್ರತಾಪ್ ಆಡುತ್ತಿರುವ ಆಟ ವೀಕ್ಷಕರಿಗೆ ಇಷ್ಟವಾಗಿದೆ.
ಒಂದಾದ ಕುಟುಂಬ'
ಕುಟುಂಬದೊಂದಿಗೆ ಮಾತುಬಿಟ್ಟು ದೂರ ಇದ್ದ ಪ್ರತಾಪ್‌ಗೆ ಬಿಗ್‌ಬಾಸ್ ಕಾರಣದಿಂದ ಮತ್ತೆ ಕುಟುಂಬದೊಂದಿಗೆ ಒಂದಾಗುವ ಒಳ್ಳೆಯ ಸಮಯ ಬಂತು, ಪ್ರತಾಪ್ ಅವರು ಆ ನಂತರ ತುಂಬಾನೇ ಖುಷಿಯಲ್ಲಿದ್ದರು.
ಖುಷಿಗೆ ಕಲ್ಲು ಬಿತ್ತು
ಬಿಗ್‌ಬಾಸ್ ಮನೆಗೆ ಬಂದ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಪ್ರತಾಪ್ ಅವರಿಗೆ ಮನೆಯಿಂದ ದೂರವಿದ್ದು ಧೂಪವಾಗುತ್ತೀಯೋ, ಹತ್ತಿರವಾಗಿ ಹೇಸಿಗೆಯಾಗುತ್ತೀಯೋ ನಿನಗೆ ಬಿಟ್ಟದ್ದು ಎಂದು ಹೇಳಿದ ಮೇಲೆ ಪ್ರತಾಪ್ ತುಂಬಾನೇ ಡಲ್ ಆದರು, ಅಲ್ಲದೆ ಬಿಗ್‌ಬಾಸ್ ಮನೆಯ ಈ ವಾರದ ಚಟುವಟಿಕೆಗಳು ಅವರ ಮನಸ್ಸನ್ನು ಮತ್ತಷ್ಟು ಕುಗ್ಗಿಸಿದಂತೆ ಕಾಣುತ್ತಿತ್ತು. ಮನಸ್ಸು ಸರಿಯಿಲ್ಲ ಅಂದರೆ ಅದು ಆರೋಗ್ಯದ ಮೇಲೆ ಖಂಡಿತ ಪ್ರಭಾವ ಬೀರುತ್ತೆ. ಅಲ್ಲದೆ ಬಿಗ್‌ಬಾಸ್ ಮನೆಯಲಲ್ಇ ಊಟ ಕೂಡ ಕಡಿಮೆ ಇದೆ ಎಂದು ಸ್ಪರ್ಧಿಗಳು ಹೇಳುತ್ತಿರುತ್ತಾರೆ, ಅವರನ್ನು ಪರೀಕ್ಷೆ ಮಾಡಿದ ವೈದ್ಯರು ಗ್ಯಾಸ್ಟ್ರಿಕ್ ಆಗಿತ್ತು ಎಂದು ಮಾಧ್ಯಮದವರಿಗೆ ಹೇಳಿದ್ದಾರೆ, ಈವಾಗ ಸ್ಟೇಬಲ್ ಎಂದು ತಿಳಿಸಿದ್ದಾರೆ.
ಪೊಲೀಸ್ ಕಂಪ್ಲೇಂಟ್, ಆಸ್ಪತ್ರೆ ಎಂದು ಈ ಬಾರಿಯ ಬಿಗ್‌ಬಾಸ್ ಆಗಾಗ ಗಮನ ಸೆಳೆಯುತ್ತಿದೆ.



Click it and Unblock the Notifications