Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಂಗೀತಾ, ಪ್ರತಾಪ್ ಕಣ್ಣಿಗೆ ಅಷ್ಟೊಂದು ಪೆಟ್ಟಾಯ್ತೇ:ಅತಿರೇಕದ ಆಟವನ್ನು ತಡೆಯಬಹುದಿತ್ತಲ್ಲ ಬಿಗ್‌ಬಾಸ್?
ಇಂದಿನ ಪ್ರೊಮೋದಲ್ಲಿ ಸಂಗೀತಾ ಹಾಗೂ ಪ್ರತಾಪ್ ಅವರನ್ನು ನೋಡಿದರೇ ಅಯ್ಯೋ ಪಾಪ ಅನಿಸದೆ ಇರಲ್ಲ... ಆಟದ ಹೆಸರಿನಲ್ಲಿ ಮನುಷ್ಯತ್ವ ಮರೆಯುತ್ತಿದ್ದಾರೆಯೇ? ಇದನ್ನು ಬರೀ ವಿನಯ್ ಟೀಂನವರೆಗೆ ಮಾತ್ರ ಕೇಳಿದರೆ ಸಾಲದು, ಸಂಗೀತಾನೂ ಸೇರಿಸಿ ಅಲ್ಲಿರುವ ಒಂದಿಷ್ಟು ಮಂದಿ ವರ್ತಿಸುವ ರೀತಿ ಆಗಿದೆ.
ಆಟ ಇಷ್ಟೆಲ್ಲಾ ಅತಿರೇಕಕ್ಕೆ ಹೋಗುತ್ತಿದ್ದಾಗ ಎಲ್ಲಾ ಅನಾಹುತ ಆದ ಮೇಲೆ 'ಆಟ ರದ್ದಾಗಿದೆ' ಎಂದು ಬಿಗ್‌ಬಾಸ್ ಹೇಳುವ ಮೊದಲಿಗೆ ಏಕೋ ಇವರ ಆಡುತ್ತಿರುವ ಆಟ ಸರಿಯಿಲ್ಲ ಎಂದಾಗಲೇ ಬಿಗ್‌ಬಾಸ್ ವಾರ್ನ್ ಮಾಡಬಹುದಿತ್ತು. ಇದನ್ನು ನೋಡುವಾಗ ಮಗುವಿಗೆ ಚಿವುಟಿ ತೊಟ್ಟಿಲು ತೂಗುವ ಕೆಲಸ ಮಾಡುತ್ತಿದ್ದಾರೆಯೇ ಬಿಗ್‌ಬಾಸ್ ?

ಬರೀ ಹೊಡೆದರಷ್ಟೇ ಶಿಕ್ಷೆಯಲ್ಲ, ಇಂಥ ನಡವಳಿಕೆಗೂ ಅವಕಾಶ ಮಾಡಿಕೊಡಬಾರದು
ಬಿಗ್‌ಬಾಸ್ ಮನೆಯಲ್ಲಿ ಹುಚ್ಚ ವೆಂಕಟ್ ಅವರನ್ನು ಹೇಗೆ ಹೊರಗೆ ಹಾಕಿದ್ದರು ಎಂದು ನೋಡಿದ್ದೀರಿ. ಬರೀ ಕೈಯಿಂದ ಹೊಡೆದರೆ ಮಾತ್ರವಲ್ಲ ಬೇಕೂ ಅಂತ ಒಬ್ಬ ವ್ಯಕ್ತಿಗೆ ದೈಹಿಕವಾಗಿ ಹಾನಿ ಮಾಡಲು ಮುಂದಾದರೆ ಅಂಥವರ ಮೇಲೂ ಕಠಿಣ ಕ್ರಮಕೈಗೊಳ್ಳಬೇಕು, ಆದರೆ ಏಕೆ ಈ ಬಾರಿ ಇಷ್ಟೆಲ್ಲಾ ಅವಾಂತರ ನಡೆಯಲು ಅವಕಾಶ ನೀಡಿತು ಎಂಬ ಪ್ರಶ್ನೆಯನ್ನು ಬಿಗ್‌ಬಾಸ್ ವೀಕ್ಷಕರು ಕೇಳುತ್ತಿದ್ದಾರೆ.
ಗಂಧರ್ವ ರಾಕ್ಷಸರ ಆಟದಲಲ್ಲಿ ರಾಕ್ಷಸರಿಗಿಂತಲೂ ಕ್ರೂರವಾಗಿ ವರ್ತಿಸಿದರು
ಗಂಧರ್ವ-ರಾಕ್ಷಸರನ್ನು ಹೇಗೆ ಆಟಬೇಕು ಎಂಬುವುದನ್ನು ಅವಿನಾಶ್, ಸಿರಿ ಅವರನ್ನು ನೋಡಿ ಇತರರು ಕಲಿಯಬೇಕಿತ್ತು. ಗಂಧರ್ವ-ರಾಕ್ಷಸರ ಟೀಂ ಅನ್ನು ವೀಕ್ಷಕರಿಗೆ ತುಂಬಾ ಮನರಂಜನೆ ನೀಡುವಂತೆ ಮಾಡಬಹುದಿತ್ತು, ಆದರೆ ನೋಡುತ್ತಿದ್ದ ವೀಕ್ಷಕರ ಬಿಪಿ ಹೆಚ್ಚಾಗುವಂತೆ ಕೆಟ್ಟದಾಗಿ ಆಡಿದ್ದಾರೆ ಸ್ಪರ್ಧಿಗಳು. ರಾಕ್ಷಸ ಆಟದಲ್ಲಿ ತಾವು ನಿಜವಾಗಲೂ ರಾಕ್ಷಸರೇ ಎಂಬಂತೆ ವರ್ತಿಸಿದರೆ.
ಇಷ್ಟೆಲ್ಲ ನಡೆದಿರುವುದಕ್ಕೆ ಮೂಲ ಕಾರಣ ಸಂಗೀತಾ?
ಸಂಗೀತಾ ಅವರು ಎದುರಾಳಿಯ ಆಟದಿಂದಾಗಿ ಉಸಿರಾಟದ ತೊಂದರೆ ಅನುಭವಿಸಿ ಆಸ್ಪತ್ರೆಗೆ ದಾಖಲಾಗಿದ್ದು ಬೇಸರದ ಸಂಗತಿ, ಆದರೆ ಈ ವಾರದ ಆಟ ಇಷ್ಟೆಂದು ಹದಗೆಡಲು ಸಂಗೀತಾ ಅವರು ಕೂಡ ಒಂದು ರೀತಿಯಲ್ಲಿ ಕಾರಣವಾಗಿದ್ದರೆ. ಅತೀ ಹೆಚ್ಚು ಕಪ್ಪು ರೋಸ್ ಪಡೆದ ಸಂಗೀತಾ ಅವರು ರಾಕ್ಷಸರ ಟೀಂನ ಕ್ಯಾಪ್ಟನ್ ಆದಾಗ ಎದುರಾಳಿಯನ್ನು ಸೋಲಿಸುವ ಒಂದೇ ಗುರಿಯಿಂದ ಆಟ ಆಡಲಾರಂಭಿಸಿದರು. ತಮ್ಮ ಟೀಂನವರೆಗೂ ಅದೇ ಸೂಚಿಸಿದ್ದರು.
ಬದಲಾದ ಸಂಗೀತಾ
ತಮ್ಮ ಟೀಂ ರಾಕ್ಷಸರು ಆದಾಗ ಎದುರಾಳಿ ಟೀಂಗೆ ತುಂಬಾ ಕಾಡಿದ್ದ ಸಂಗೀತಾ ಗಂಧರ್ವ ಟೀಂ ಆದಾಗ ಗಂಧರ್ವರು ಎಂದರೆ ನಾವು ಸೇವಕರಲ್ಲ ಎಂದು ಅವರು ಹೇಳಿದ ಟಾಸ್ಕ್‌ಗಳನ್ನು ಮಾಡದೆ ಅವರನ್ನು ಜಗಳಕ್ಕೆ ಕಾಲೆಳೆದರು. ವಿನಯ್-ಕಾರ್ತಿಕ್ ಜಗಳದಲ್ಲಿಯೂ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ವಿನಯ್ ಬಳಿ ಕಾರ್ತಿಕ್‌ಗೆ ಹೊಡಿ ನೋಡೋಣ ಎಂದು ವಿನಯ್ ಕೋಪವನ್ನು ಮತ್ತಷ್ಟು ಹೆಚ್ಚಿಸುವ ಕಾರ್ಯ ಮಾಡಿದ್ದರು. ಬಹುಶಃ ಸಂಗೀತಾ ಟೀಂ ಗಂಧರ್ವರು ರಾಕ್ಷಸರ ಆಜ್ಞೆ ಪಾಲಿಸಿದ್ದರೆ ಆಟ ಆಟ ರೀತಿಯಲ್ಲೇ ನಡೆದಿತ್ತೇನೋ....
ಅಷ್ಟೊಂದು ಡಿಟರ್ಜೆಂಟ್ ಕಲಿಸುವಾಗ ಒಂದಿಷ್ಟೂ ಸಾಮಾನ್ಯ ಬುದ್ಧಿ ಇರಲಿಲ್ಲವೇ?
ಪ್ಯಾಕೆಟ್ ಲೆಕ್ಕದಲ್ಲಿ ಡಿಟರ್ಜೆಂಟ್ ಕಲಿಸಿ ಹೊಡೆಯುವಾಗ ಒಂದಿಷ್ಟೂ ಸಾಮಾನ್ಯ ಜ್ಞಾನ ಎಂಬುವುದು ಅಲ್ಲಿದ್ದ ರಾಕ್ಷಸರಿಗೆ ಇಲ್ಲವಾಯ್ತೇ? ರಾಕ್ಷಸರ ಕ್ಯಾಪ್ಟನ್ ವರ್ತೂರು, ಮನೆ ಕ್ಯಾಪ್ಟನ್ ಸ್ನೇಹಿತ್ ತಮ್ಮ ಜವಾಬ್ದಾರಿಯಲ್ಲಿ ಅಸಮರ್ಥರಾದಾಗ ಅವರು ಆಟವಾಡುತ್ತಿರುವ ರೀತಿಯನ್ನು ನೋಡಿ ಬಿಗ್‌ಬಾಸ್ ಏಕೆ ಸುಮ್ಮನಾಯ್ತು? ಒಂದು ವೇಳೆ ಹೆಚ್ಚು ಕಡಿಮೆಯಾಗಿದ್ದರೆ ಯಾರು ಹೊಣೆ?
ಬಿಗ್‌ಬಾಸ್ ಎಂಬುವುದು ವ್ಯಕ್ತಿತ್ವ ತೋರಿಸುವ ಆಟ, ಇನ್ನಾದರೂ ಬಿಗ್‌ಬಾಸ್ ಸ್ಪರ್ಧಿಗಳ ಇಂಥ ಹುಚ್ಚಾಟಕ್ಕೆ ಕಡಿವಾಣ ಹಾಕಬೇಕಾಗಿದೆ.



Click it and Unblock the Notifications
