Latest Updates
-
ಪಾರ್ಸಿ ಹೊಸ ವರ್ಷದ ಸಂಭ್ರಮ: ನಿಮ್ಮ ಪಾರ್ಸಿ ಸಂಬಂಧಿಕರ ಮನೆಗೆ ಹೋಗುವಾಗ ಈ ಶಿಷ್ಟಾಚಾರಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ ನಂತರದ ಕ್ಲೀನಪ್: ಬಾಲ್ಕನಿ ಸ್ವಚ್ಛತೆ ಮತ್ತು ರಾಷ್ಟ್ರಧ್ವಜದ ಗೌರವಯುತ ನಿರ್ವಹಣೆ -
ಸ್ವಾತಂತ್ರ್ಯ ದಿನದ ಸಂಭ್ರಮ: ಟೆರೇಸ್ ಮೇಲೆ ಗಾಳಿಪಟ ಹಾರಿಸುವ ಮುನ್ನ ಈ ಸುರಕ್ಷತಾ ಕ್ರಮಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ: ಸಿಹಿ ತಿನಿಸುಗಳ ಸವಿಯ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಿ, ಇಲ್ಲಿದೆ ಸಿಂಪಲ್ ಟಿಪ್ಸ್! -
ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಆರೋಗ್ಯದ ಜಾಗೃತಿ: ಮಳೆಗಾಲದಲ್ಲಿ ಯಾವ ಆಹಾರ ಸೇವಿಸುವುದು ಸುರಕ್ಷಿತ? -
ಸ್ವಾತಂತ್ರ್ಯ ದಿನಾಚರಣೆ: ಮಳೆಯಲ್ಲೂ ಮಿಂಚಲು ಇಲ್ಲಿದೆ ಸಿಂಪಲ್ ಟ್ರೈಕಲರ್ ಫ್ಯಾಷನ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: 10 ನಿಮಿಷದಲ್ಲಿ ತ್ರಿರಂಗ ಲುಕ್ನಲ್ಲಿ ಮಿಂಚುವುದು ಹೇಗೆ? -
ಸ್ವಾತಂತ್ರ್ಯ ದಿನದ 'ತಿರಂಗಾ ರೈಡ್': ಮಳೆಗಾಲದಲ್ಲಿ ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿವೆ ಬೆಸ್ಟ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: ಪರೇಡ್ ವೀಕ್ಷಿಸುವ ಮುನ್ನ ಈ 10 ನಿಮಿಷದ ವ್ಯಾಯಾಮ ಮರೆಯದಿರಿ! -
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು!
ಬಿಗ್‌ಬಾಸ್‌ನಿಂದಲೇ ತಪ್ಪಾಯ್ತೇ ಎಂದು ಕಿಚ್ಚ ಹೇಳಿದ್ದೇಕೆ? ಜಗದೀಶ್ ರೀ ಎಂಟ್ರಿಯಾಗಲಿದ್ದಾರಾ?
ಬಿಗ್‌ಬಾಸ್ ಸೀಸನ್ 11 ಶುರುವಾಗಿ ಮೂರನೇಯ ವಾರಕ್ಕೆ ಫಿನಾಲೆ ಹತ್ರ ಬರ್ತಾ ಇರುವಾಗ ಬಿಗ್‌ಬಾಸ್‌ನಲ್ಲಿ ಯಾವಾಗ ಕಚ್ಚಾಟ ನಡೆಯುತ್ತಿತ್ತು ಅದೇ ರೀತಿ ಕಚ್ಚಾಟ ಜೋರಾಗಿದೆ, ಈ ಬಾರಿ ಬಿಗ್‌ಬಾಸ್‌ನಲ್ಲಿ ಕಿರುಚಾಟವೇ ಎಂಟರ್ಟೈನ್ಮೆಂಟ್‌ಗಿಂತ ಜಾಸ್ತಿಯಾಗಿದೆ ಎಂದು ವೀಕ್ಷಕರಿಗೆ ಅನಿಸಲಾರಂಭಿಸಿದೆ.
ಜೋರಾಗಿ ಕಿರುಚಾಡಿದರೆ ಫೈನಲ್‌ಗೆ ತಲುಪಬಹುದು ಎಂದು ಬಹುತೇಕ ಸ್ಪರ್ಧಿಗಳು ಅಂದುಕಕೊಂಡಂತೆ ಇದೆ, ವೆರೈಟಿ ಕೊಡುವ ಬದಲಿಗೆ ಕಿರಿಚಾಟದ ಕಡೆಯೇ ಹೆಚ್ಚು ಗಮನಹರಿಸುತ್ತಿದ್ದಾರೆ. ಇದರ ನಡುವೆ ಜಗದೀಶ್ ಮತ್ತು ರಂಜಿತ್ ಮನೆಯ ಮುಖ್ಯದ್ವಾರದಿಂದ ಹೊರ ಬಂದಿದ್ದಾರೆ, ಎಲಿಮಿನೇಟ್ ಆದ್ರಾ ಅಥವಾ ಮರು ಎಂಟ್ರಿ ನೀಡಲಿದ್ದಾರಾ? ಎಂಬುವುದಕ್ಕೆ ಈ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

ಜಗದೀಶ್ ಈ ಬಾರಿಯ ಬಿಗ್‌ಬಾಸ್‌ಗೆ ಅಷ್ಟೊಂದು ಅನಿವಾರ್ಯ ಎಂಬಂತೆ ಆಗಿದೆಯೇ?
ಬಿಗ್‌ಬಾಸ್ ಶುರುವಾಗಿ ಒಂದೇ ವಾರದಲ್ಲಿ ವಿಟಿ ಹಾಕಿಸಿಕೊಂಡ ಸ್ಪರ್ಧಿ ಜಗದೀಶ್, ಮನರಂಜನೆ, ಜಗಳ, ಕಾದಾಟ, ಮುಗ್ಧತೆ ಹೀಗೆ ಎಲ್ಲಾ ರೀತಿಯಿಂದಲೂ ಜಗದೀಶ್ ವೀಕ್ಷಕರ ಮನ ಗೆದ್ದಿದ್ದರು, ಬಿಗ್‌ಬಾಸ್‌ನಲ್ಲಿ ಇತರ ಎಲ್ಲಾ ಸ್ಪರ್ಧಿಗಳಿಗಿಂತ ಭಿನ್ನವಾಗಿ ಕಂಡರು. ಜಗದೀಶ್ ಇತರ ಸ್ಪರ್ಧಿಗಳಿಗಿಂತ ಸ್ವಲ್ಪ ಮುಂದಿದ್ದಾರೆ ಎಂಬುವುದು ಜಗದೀಶ್ ಸೇರಿ ಇತರ ಸ್ಪರ್ಧಿಗಳಿಗೆ ಗೊತ್ತಾಯ್ತು.
ಹೊಗಳಿಕೆಯೇ ಜಗದೀಶ್ ಪಾಲಿಗೆ ಮುಳುವಾಯ್ತೇ?
ಜಗದೀಶ್‌ಗೆ ತನ್ನ ಆಟವನ್ನು ಜನರು ಮೆಚ್ಚಿಕೊಂಡಿದ್ದಾರೆ ಎಂಬ ಕ್ಲೂ ಸಿಕ್ಕ ತಕ್ಷಣ ಅವರ ವರ್ತನೆ ಬದಲಾಗಲಾರಂಭಿಸಿತು, ಇತರ ಸ್ಪರ್ಧಿಗಳಿಗೆ ಜಗದೀಶ್ ನಮಗಿಂತ ಮುಂದಿದ್ದಾರೆ ಎಂಬುವುದೇ ಅವರನ್ನು ಟಾರ್ಗೆಟ್ ಮಾಡಲಾರಂಭಿಸಿದರು. ಜಗದೀಶ್ ಜಗಳ ಮಾಡುತ್ತಿದ್ದರು, ರೂಲ್ಸ್ ಬ್ರೇಕ್ ಮಾಡುತ್ತಿದ್ದರು, ಆದರೆ ಬಳಸುತ್ತಿದ್ದ ಪದಗಳಿಗೆ ಬಿಗ್‌ಬಾಸ್ ಟೀಂ ಬೀಪ್ ಸೌಂಡ್ ಹಾಕಿ ಪ್ರಸಾರ ಮಾಡಿದರು. ಜಗದೀಶ್ ಬಾಯಿಗೆ ಬಂದಂತೆ ಮಾತನಾಡದೆ ಇದ್ದಿದ್ದರೆ ಆಟ ಇನ್ನು ಸ್ವಲ್ಪ ರಂಗೇರುತ್ತಿತ್ತು...
ಕೆಟ್ಟ ಪದಗಳನ್ನು ಹೆಣ್ಮಕ್ಕಳೂ ಬಳಸಲಿಲ್ಲವೇ?
ಈ ಬಗ್ಗೆ ಕೂಡ ಈ ಬಾರಿ ಕಿಚ್ಚನ ಪಂಚಾಯಿತಿಯಲ್ಲಿ ಮಾತನಾಡಲಾಗಿದೆ. ಜಗದೀಶ್ ತಮ್ಮ ನಾಲಗೆಯನ್ನು ಹೇಗೆ ಹಿಡಿತದಲ್ಲಿ ಇಟ್ಟುಕೊಳ್ಳಲಿಲ್ಲವೋ ಅದೇ ರೀತಿ ಮಾನಸ, ಚೈತ್ರ ಆಡಿರುವ ಪದಗಳೂ ಅಷ್ಟೇ ಕೆಟ್ಟದಾಗಿತ್ತು. ಇನ್ನು ಜಗದೀಶ್ ಅವರನ್ನು ಆ ಮನೆಯಲ್ಲಿ ಜಗಳಕ್ಕೆ ಆಹ್ವಾನ ನೀಡುತ್ತಿರುವವೇನೂ ಕಡಿಮೆ ಇರಲಿಲ್ಲ. ಇದೆಲ್ಲರ ಪರಿಣಾಮ ಜಗದೀಶ್ ಬಿಗ್‌ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.
ಸರ್ಕಾಸಿಸ್ಟಿಕ್ ಆಗಿ ಕೇಕ್ ಕಟ್ ಮಾಡಿಸಿದ ಕಿಚ್ಚ
ಸ್ಪರ್ಧಿಗಳಿಗೆ ಏಕೆ ಕೇಕ್ ಕಟ್ ಮಾಡ್ತಾ ಇದ್ದೀವಿ ಎಂಬುವುದು ಕೂಡ ಗೊತ್ತಿರಲಿಲ್ಲ, ಆದರೆ ಕೇಕ್ ಕಟ್ ಮಾಡಿದ ಮೇಲೆ ಸುದೀಪ್‌ರು ನೀಡಿದ ಮಾತಿನೇಟಿಗೆ ಬೆಪ್ಪಾದರು.
ಟಿಆರ್‌ಪಿ ಕಾರಣಕ್ಕೆ ಜಗದೀಶ್ ಅನಿವಾರ್ಯ ಆಗಿದ್ದಾರಾ ಬಿಗ್‌ಬಾಸ್‌ಗೆ?
ಈ ರೀತಿ ಹೊರಗಡೆ ದೊಡ್ಡ ಸದ್ದು ಕೇಳ ಬರ್ತಾಇದೆ, ಜಗದೀಶ್ ಇಲ್ಲಾಂದ್ರೆ ನಾವು ಬಿಗ್‌ಬಾಸ್ ನೋಡಲ್ಲ ಎಂದು ತುಂಬಾ ಜನ ಕಮೆಂಟ್ ಮಾಡ್ತಾ ಇದ್ದಾರೆ, ಈ ಬಾರಿ ಸ್ಪರ್ಧಿಗಳಲ್ಲಿ ತುಂಬಾ ಹೈಲೈಟ್ಸ್ ಆಗಿ ಕಾಣುತ್ತಿದ್ದರಿಂದ ಬಿಗ್‌ಬಾಸ್‌ಗೂ ಜಗದೀಶ್ ತುಂಬಾನೇ ಅನಿವಾರ್ಯವಾಗಿತ್ತು, ಫೈನಲಿಸ್ಟ್‌ನಲ್ಲಿ ಇದ್ದೇ ಇರ್ತಾರೆ ಎಂದು ಎಲ್ಲರೂ ಭಾವಿಸಿದ್ದರು, ಆದರೆ ತಮ್ಮ ನಡವಳಿಕೆಯಿಂದಾಗಿ ಬಿಗ್‌ಬಾಸ್‌ನಿಂದ ಹೊರ ಬಂದಿದ್ದಾರೆ ರೀಎಂಟ್ರಿ ಕೊಡಲಿದ್ದಾರಾ?
ಬಿಗ್‌ಬಾಸ್‌ನಂಥ ದೊಡ್ಡ ಶೋ ಒಬ್ಬ ವ್ಯಕ್ತಿ ಮೇಲೆ ಡಿಪೆಂಡ್ ಆಗಿರುತ್ತದೆ ಎಂದು ಹೇಳುವುದೇ ಭ್ರಮೆ. ಜಗದೀಶ್ ಇದ್ದರೂ, ಇಲ್ಲದಿದ್ದರೂ ಶೋ ನಡೆಸುವುದು ಹೇಗೆ ಎಂಬುವುದು ಗೊತ್ತಿರುತ್ತದೆ, ಆದರೆ ಜನರನ್ನು ತುಂಬಾ ಆವರಿಸಿದ್ದ ಜಗದೀಶ್ ಮನೆಯಲ್ಲಿ ಇಲ್ಲದಿದ್ದಾಗ ವೀಕ್ಷಕರು ಮಿಸ್ ಮಾಡಿಕೊಂಡಿದ್ದು ನಿಜ, ಆದರೆ ಬಿಗ್‌ಬಾಸ್‌ಗೆ ಜಗದೀಶ್ ಇಲ್ಲದೆ ಶೋ ನಡೆಸುವುದು ಕಷ್ಟ ಎಂದು ಹೇಳುವುದು ಮಾತ್ರ ದೊಡ್ಡ ಭ್ರಮೆ....



Click it and Unblock the Notifications