Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಕರ್ನಾಟಕದಲ್ಲಿ ಭಾದ್ರಪದ ಮಾಸ ಯಾವಾಗಿನಿಂದ ಶುರು, ಈ ತಿಂಗಳ ಮಹತ್ವವೇನು?
ಹಿಂದೂ ಕ್ಯಾಲೆಂಡರ್ ಪ್ರಕಾರ 6 ನೇ ತಿಂಗಳು ಭಾದ್ರಪದಮಾಸ. ಭಾದ್ರಪದ ಮಾಸದಲ್ಲಿ ಗಣೇಶ ಚತುರ್ಥಿ ಮುಂತಾದ ಪ್ರಮುಖ ಹಬ್ಬಗಳನ್ನು ಆಚರಿಸಲಾಗುವುದು. ಈ ವರ್ಷ ಭಾದ್ರಪದ ಮಾಸ ಆಗಸ್ಟ್ 31ರಿಂದ ಸೆಪ್ಟೆಂಬರ್ 29ರವರೆಗೆ ಇರಲಿದೆ.
ಭಾದ್ರಪದ ಮಾಸ ಧಾರ್ಮಿಕ ಕಾರ್ಯಗಳಿಗೆ ತುಂಬಾ ಪ್ರಮುಖವಾಗಿದೆ. ಈ ಅವಧಿಯಲ್ಲಿ ಗಣೇಶೋತ್ಸವ, ಅನಂತ ಚತುರ್ದಶಿ ಹೀಗೆ ಪ್ರಮುಖ ಆಚರಣೆಗಳನ್ನು ಮಾಡಲಾಗುವುದು. ಭಾದ್ರಪದ ಮಾಸದ ಪ್ರಾಮುಖ್ಯತೆಯೇನು? ಈ ಅವಧಿಯಲ್ಲಿ ಪಾಲಿಸಬೇಕಾದ ನಿಯಮಗಳೇನು ಎಂದು ನೋಡೋಣ ಬನ್ನಿ:
ಭಾದ್ರಪದ ಮಾಸದ ಮಹತ್ವ
ಶ್ರಾವಣ ಮಾಸವೆಂದರೆ ಹಬ್ಬಗಳ ಸಡಗರದ ಪ್ರಾರಂಭ, ಶ್ರಾವಣ ಮುಗಿಯುತ್ತಿದ್ದಂತೆ ಭಾದ್ರಪದ ಮಾಸ ಪ್ರಾರಂಭ, ಭಾದ್ರಪದ ಮಾಸದಲ್ಲಿಯೂ ಅನೇಕ ಪ್ರಮುಖ ಆಚರಣೆಗಳಿವೆ, ಹಬ್ಬದ ಸಡಗರಗಳಿವೆ. ನಮ್ಮ ಕರ್ನಾಟಕದಲ್ಲಿ ಬಾದ್ರಪದ ಮಾಸ ಸೆಪ್ಟೆಂಬರ್ 16ರಿಂದ ಶುರುವಾಗುವುದು. ಈ ಮಾಸದಲ್ಲಿ ಶ್ರೀ ವಿಷ್ಣುವನ್ನು ಆರಾಧಿಸಲಾಗುವುದು, ಶ್ರೀ ಕೃಷ್ಣ ಆರಾಧನೆ ಮಾಡಲಾಗುವುದು. ಪ್ರತಿದಿನ ವಿಷ್ಣುವಿನ ಪೂಜೆ ಮಾಡುವಾಗ ತುಳಸಿಯನ್ನು ಅರ್ಪಿಸಿ ಪೂಜಿಸಿದರೆ ಒಳ್ಳೆಯದು.

ಭಾದ್ರಪದ ಮಾಸದಲ್ಲಿ ಇರುವ ಹಬ್ಬಗಳು
ಉತ್ತರ ಭಾರತದ ಕಡೆ ಭಾದ್ರಪದ ಮಾಸ ಆಗಸ್ಟ್ 31ರಿಂದ ಪ್ರಾರಂಭ
ಸೆಪ್ಟೆಂಬರ್ 3: ಬಹುಳ ಚತುರ್ಥಿ, ಸಂಕಷ್ಟಿ ಚತುರ್ಥಿ
ಸೆಪ್ಟೆಂಬರ್ 6: ಕೃಷ್ಣ ಜನ್ಮಾಷ್ಟಮಿ, ಕಾಲಾಷ್ಟಮಿ
ಸೆಪ್ಟೆಂಬರ್ 10: ಅಜ ಏಕಾದಶಿ ವ್ರತ
ಸೆಪ್ಟೆಂಬರ್ 12: ಪ್ರದೋಷ ವ್ರತ
ಸೆಪ್ಟೆಂಬರ್ 13: ಮಾಸಿಕ ಶಿವರಾತ್ರಿ
ಸೆಪ್ಟೆಂಬರ್ 14: ಭಾದ್ರಪದ ಅಮವಾಸ್ಯೆ
ದಕ್ಷಿಣ ಭಾರತದ ಕಡೆ ಭಾದ್ರಪದ ಮಾಸ ಸೆಪ್ಟೆಂಬರ್ 16ರಿಂದ ಅಕ್ಟೋಬರ್ 14ರವರೆಗೆ ಇರಲಿದೆ
ಸೆಪ್ಟೆಂಬರ್ 17: ವಿಶ್ವಕರ್ಮ ಪೂಜಾ, ಕನ್ಯಾ ಸಂಕ್ರಾಂತಿ, ಬಲರಾಮ ಜಯಂತಿ
ಧನ್ವಂತಿ ಜಯಂತಿ
ಸೆಪ್ಟೆಂಬರ್ 18: ಸ್ವರ್ಣ ಗೌರಿ ವ್ರತ
ಸೆಪ್ಟೆಂಬರ್ 19: ಗಣೇಶ ಚತುರ್ಥಿ
ಸೆಪ್ಟೆಂಬರ್ 20:ರಿಷಿ ಪಂಚಮಿ
ಸೆಪ್ಟೆಂಬರ್ 23: ರಾಧಾ ಅಷ್ಟಮಿ
ಸೆಪ್ಟೆಂಬರ್ 25: ಪರಿವರ್ತಿನಿ ಏಕಾದಶಿ
ಸೆಪ್ಟೆಂಬರ್ 26: ವಾಮನ ಜಯಂತಿ
ಸೆಪ್ಟೆಂಬರ್ 27: ಬುಧ ಪ್ರದೋಷ ವ್ರತ
ಸೆಪ್ಟೆಂಬರ್ 28: ಗಣೇಶ ವಿಸರ್ಜನೆ, ಅನಂತ ಚತುರ್ದಶಿ
ಸೆಪ್ಟೆಂಬರ್ 29: ಪಿತೃಪಕ್ಷ ಶ್ರಾದ್ಧ (ಸೆಪ್ಟೆಂಬರ್ 29ರಿಂದ ಅಕ್ಟೋಬರ್ 14)
ಅಕ್ಟೋಬರ್ 6: ಕಾಲಾಷ್ಟಮಿ
ಅಕ್ಟೋಬರ್ 14: ಮಹಾಲಯ ಶ್ರಾದ್ಧ
ಭಾದ್ರಪದ ಮಾಸದಲ್ಲಿ ಈ ನಿಯಮಗಳನ್ನು ಪಾಲಿಸಲಾಗುವುದು
* ಭಾದ್ರಪದ ಮಾಸದಲ್ಲಿ ಈ 2 ವಸ್ತುಗಳನ್ನು ದಾನವಾಗಿ ಪಡೆಯಬಾರದು
ಭಾದ್ರಪದ ಮಾಸದಲ್ಲಿ ನಿಮಗೆ ಯಾರಾದರೂ ಅಕ್ಕಿ, ತೆಂಗಿನೆಣ್ಣೆಯನ್ನು ದಾನ ನೀಡಿದರೆ ಪಡೆದು ಬಳಸಬೇಡಿ, ಇದರಿಂದ ಹಣಕಾಸಿನ ತೊಂದರೆ ಉಂಟಾಗುವುದು.
* ಈ ಬಗೆಯ ಆಹಾರಗಳನ್ನು ಸೇವಿಸಬಾರದು
ಆರೋಗ್ಯದ ದೃಷ್ಟಿಯಿಂದ ಭಾದ್ರಪದ ಮಾಸದಲ್ಲಿ ಬೆಲ್ಲ ಅಥವಾ ಮೊಸರಿನ ಪದಾರ್ಥಗಳನ್ನು ಸೇವಿಸಬಾರದು ಎಂದು ಹೇಳಲಾಗುವುದು. ಮೂಲಂಗಿ, ಬದನೆ, ಮಾಂಸಾಹಾರ, ಮೀನು, ಈರುಳ್ಳಿ, ಬೆಳ್ಳುಳ್ಳಿ, ಮದ್ಯ ಈ ಬಗೆಯ ಆಹಾರಗಳನ್ನು ಸೇವಿಸಬಾರದೆಂದು ಹೇಳಲಾಗುವುದು. ಆದರೆ ಹಾಲು ಮತ್ತಿತರ ಹಾಲಿನ ಉತ್ಪನ್ನಗಳನ್ನು ಬಳಸಬಹುದು.
* ಭಾದ್ರಪದ ಮಾಸದಲ್ಲಿ ಗಡ್ಡ ತೆಗಿಯಬಾರದು, ಉಗುರು, ಕೂದಲು ಕತ್ತರಿಸಬಾರದು ಎಂದು ಹೇಳಲಾಗುವುದು.



Click it and Unblock the Notifications
