Latest Updates
-
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ
ಭಾದ್ರಪದ ಮಾಸದಲ್ಲಿದೆ ಗೌರಿ ಗಣೇಶ ಹಬ್ಬ ಸೇರಿ ಈ ಪ್ರಮುಖ ಹಬ್ಬಗಳು, ವ್ರತಗಳಿವೆ
ಕನ್ನಡ ಮಾಸದ 6ನೇ ತಿಂಗಳು ಭಾದ್ರಪದ ಮಾಸ. ಈ ಮಾಸ ಹಿಂದೂಗಳ ಪಾಲಿಗೆ ಸಂಭ್ರಮದ ಮಾಸ, ಗೌರಿ-ಗಣೇಶ ಬಂದು ಜನರನ್ನು ಆಶೀರ್ವಾದ ಮಾಡಲು ಭೂಮಿಗೆ ಬರುತ್ತಾರೆ ಎಂಬ ನಂಬಿಕೆ, ದೇಶದೆಲ್ಲಡೆ ಗೌರಿ-ಗಣೇಶ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುವುದು.

ಕರ್ನಾಕದಲ್ಲಿ ಸೆಪ್ಟೆಂಬರ್ 4ರಿಂದ ಅಕ್ಟೋಬರ್ 2ರವರೆಗೆ ಭಾದ್ರಪದ ಮಾಸ.
ಭಾದ್ರಪದ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳ ಬಗ್ಗೆ ಮಹಿತಿ ಇಲ್ಲಿದೆ:
ಭಾದ್ರಪದ ಮಾಸ ಸೆಪ್ಟೆಂಬರ್ 4-ಅಕ್ಟೋಬರ್ 2
ಈ ಭಾದ್ರಪದ ಮಾಸದಲ್ಲಿ ಮಹಾಲಯ ಶ್ರಾದ್ಧವಿದೆ, ಸ್ವರ್ಣಗೌರಿ ವ್ರತವಿದೆ,ಗಣೇಶ ಚತುರ್ಥಿಯಿದೆ, ಅಲ್ಲದೆ ವಾಮನ ಜಯಂತಿ, ಅನಂತ ಚತುರ್ದಶಿ, ಗಜ ಗೌರಿ ವ್ರತ ಹೀಗೆ ಅನೇಕ ಶುಭ ದಿನಗಳಿವೆ.
ಭಾದ್ರಪದ ಮಾಸದಲ್ಲಿ ಪ್ರದೋಷ ಉಪವಾಸ ವ್ರತ
ಪ್ರದೋಷ ವ್ರತ: ಸೆಪ್ಟೆಂಬರ್ 15
ಪ್ರದೋಷ ವ್ರತ:ಸೆಪ್ಟೆಂಬರ್ 30
ಏಕಾದಶಿ ಉಪವಾಸ
ಪರಿರ್ತಿನಿ ಏಕಾದಶಿ: ಸೆಪ್ಟೆಂಬರ್ 14
ಇಂದಿರಾ ಏಕಾದಶಿ: ಸೆಪ್ಟೆಂಬರ್ 28
ಸಂಕಷ್ಟಹರ ಚತುರ್ಥಿ ವ್ರತ
ಸೆಪ್ಟೆಂಬರ 21ಕ್ಕೆ ಸಂಕಷ್ಟಹರ ಚತುರ್ಥಿ ವ್ರತ
ಮಹಾಲಯ ಶ್ರಾದ್ಧ ಸಮಯ
ಸೆಪ್ಟೆಂಬರ್ 19ರಿಂದ ಅಕ್ಟೋಬರ್ 2
ಈ ಸಮಯದಲ್ಲಿ ಪಿತೃದೋಷಕ್ಕೆ ಪರಿಹಾರ ಮಾಡಲಾಗುವುದು. ಈ ಸಮಯದಲ್ಲಿ ಶ್ರಾದ್ಧ ಮಾಡಿದರೆ ಗತಿಸಿದ ಪಿತೃಗಳಿಗೆ ಮೋಕ್ಷ ಸಿಗುವುದು.ಅವರ ಆಶೀರ್ವಾದಿಂದ ಕಷ್ಟಗಳೆಲ್ಲಾ ದೂರಾಗುವುದು, ಬದುಕಿನಲ್ಲಿ, ವೃತ್ತಿ ಬದುಕಿನಲ್ಲಿನ ಅಡೆತಡೆಗಳು ದೂರಾಗುವುದು. ಹಾಗಾಗಿ ಮಹಾಲಯ ಶ್ರಾದ್ಧಕ್ಕೆ ತುಂಬಾನೇ ಮಹತ್ವವಿದೆ.
ಈ ಮಹಾಲಯ ಶ್ರಾದ್ಧದಲ್ಲಿ ಪಿತೃ ತರ್ಪಣ ನೀಡಿದರೆ ಪಿತೃದೋಷ ನಿವಾರಣೆ ಜೊತೆಗೆ ಜಾತಕದಲ್ಲಿನ ದೋಷ ಕೂಡ ದೂರಾಗುವುದು. ಇನ್ನು ವ್ಯಕ್ತಿ ಮರಣವೊಂದಿದ ತಿಥಿ ನೆನಪಿಲ್ಲ ಅಂದರೆ ಈ ಸಮಯದಲ್ಲಿ ತರ್ಪಣ ಅರ್ಪಿಸಬಹುದು.
ಹುಣ್ಣಿಮೆ
ಸೆಪ್ಟೆಂಬರ್ 18ಕ್ಕೆ ಹುಣ್ಣಿಮೆ ಆಚರಿಸಲಾಗುವುದು.
ಪೂರ್ಣಿಮಾ ತಿಥಿ ಸೆಪ್ಟೆಂಬರ್ 17 ಬೆಳಗ್ಗೆ 11:44ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 18, ಬೆಳಗ್ಗೆ 08:03ಕ್ಕೆ ಮುಕ್ತಾಯವಾಗಲಿದೆ.
ಪೂರ್ಣಿಮೆ ಶ್ರಾದ್ಧವನ್ನು ಸೆಪ್ಟೆಂಬರ್ 18ರಂದು ಆಚರಿಸಲಾಗುವುದು.
ಭಾದ್ರಪದ ಮಾಸದಲ್ಲಿ ಅಮವಾಸ್ಯೆ
ಅಕ್ಟೋಬರ್ 2ಕ್ಕೆ ಭಾದ್ರಪದ ಅಮವಾಸ್ಯೆ ಆಚರಿಸಲಾಗುವುದು.
ಭಾದ್ರಪದ ಮಾಸದಲ್ಲಿ ಬರುವ ಹಬ್ಬಗಳು, ಶುಭಗಳು
ಬಲರಾಮ ಜಯಂತಿ: ಸೆಪ್ಟೆಂಬರ್ 5
ಧನ್ವಂತರಿ ಜಯಂತಿ: ಸೆಪ್ಟೆಂಬರ್ 5
ವರಹಾ ಜಯಂತಿ: ಸೆಪ್ಟಂಬರ್ 6
ಸ್ವರ್ಣ ಗೌರಿ ವ್ರತ: ಸೆಪ್ಟೆಂಬರ್ 6
ಗಣೇಶ ಚತುರ್ಥಿ: ಸೆಪ್ಟೆಂಬ್ 7
ರಿಷಿ ಪಂಚಮಿ: ಸೆಪ್ಟೆಂಬರ್ 8
ವಾಮನ ಜಯಂತಿ: ಸೆಪ್ಟೆಂಬರ್ 15
ಅನಂತ ಚತುರ್ದಶಿ: ಸೆಪ್ಟೆಂಬರ್ 17
ಪಿತೃಪಕ್ಷ ಶ್ರಾದ್ಧ: ಸೆಪ್ಟೆಂರ್ 18-ಅಕ್ಟೋಬರ್ 2
ಸ್ವರ್ಣ ಗೌರಿ ವ್ರತ
ಸ್ವರ್ಣಗೌರಿ ವ್ರತವನ್ನು ಮಹಿಳೆಯರು ಸಡಗರ-ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನ ಮುತ್ತೈದೆಯರು ಉಪವಾಸವಿದ್ದು ಗೌರಿಯನ್ನು ಆರಾಧನೆ ಮಾಡುತ್ತಾರೆ. ಮಹಿಳೆಯರು ಗೌರಿ ವ್ರತವನ್ನು ಮಾಡುವುದರಿಂದ ಮನೆಗೆ ಒಳಿತಾಗುತ್ತದೆ, ಗಂಡ-ಮಕ್ಕಲಿಗೆ ಶ್ರೇಯಸ್ಸು ನೀಡು ತಾಯಿ ಎಂದು ಬೇಡಿ ಸ್ವರ್ಣಗೌರಿ ವ್ರತವನ್ನು ಆಚರಿಸಲಾಗುವುದು.
ಈ ದಿನ 16 ಗಂಟುಗಳ ಪವಿತ್ರ ದಾರವನ್ನು ಕೈಗೆ ಕಟ್ಟಲಾಗುವುದು, ಅವಾಹಿತ ಹೆಣ್ಮಕ್ಕಳು ಉತ್ತಮ ಬಾಳ ಸಂಗಾತಿ ಸಿಲಿ ಎಂದು ಪ್ರಾರ್ಥಿಸಿ ಸ್ವರ್ಣಗೌರಿ ವ್ರತವನ್ನು ಮಾಡುತ್ತಾರೆ.
ಸ್ವರ್ಣಗೌರಿ ದಿನದಂದು ಬಾಗಿನ ನೀಡುವುದೇ ವಿಶೇಷ
ಈ ದಿನ ಬಾಗಿನ ನೀಡುವುದೇ ಸಂಭ್ರಮ, ತವರು ಮನೆಗೆ ಬಂದ ಹೆಣ್ಣು ಮಕ್ಕಳಿಗೆ ಬಾಗಿನ ನೀಡಿ ಕಳುಹಿಸಲಾಗುವುದು. ಬಾಗಿನದಲ್ಲಿ ಅರಿಶಿಣ, ಕುಂಕುಮ, ನವದಾನ್ಯಗಳು, ತೆಂಗಿನಕಾಯಿ, ಓಲೆ, ಕನ್ನಡಿ, ಬಳೆ, ಅಕ್ಕಿ, ಗೋಧಿ, ಬೆಲ್ಲ, ರವಿಕೆ, ಅಲಂಕರ ವಸ್ತುಗಳು,ಕೆಲವರು ಸೀರೆ ಕೂಡ ಇಡುತ್ತಾರೆ ಹೀಗೆ ಎಲ್ಲಾ ವಸ್ತುಗಳನ್ನು ಇಟ್ಟು ಹೆಣ್ಮಕ್ಕಳಿಗೆ ನೀಡುತ್ತಾರೆ. ಇನ್ನು ಪೂಜೆಗೆ ಬಂದ ಮುತ್ತೈದೆಯರಿಗೂ ಬಾಗಿನ ನೀಡುವ ಪ್ಧತಿ ಇದೆ.



Click it and Unblock the Notifications











