Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪರಪಂಚದ 3 ಫೇಮಸ್ ಇಂಡಿಯನ್ ಟಿಫಿನ್‌ಗಳು! ಒಮ್ಮೆ ರುಚಿ ನೋಡಿದ್ರೆ, ವಾವ್ ಅಂತೀರಾ
ನೀವು ತಿಂಡಿ ಪ್ರಿಯರಾಗಿದ್ದರೆ ಈ ಸ್ಟೋರಿ ನಿಮಗಾಗಿ. ಸಾಮಾನ್ಯವಾಗಿ ಎಲ್ಲರೂ ಟಾಪ್ 3 ಬೆಸ್ಟ್ ಉಪಹಾರ, ಟಾಪ್ 5 ಮತ್ತು ಟಾಪ್ 10 ಅತ್ಯುತ್ತಮ ಉಪಹಾರಗಳ ಬಗ್ಗೆ ಹುಡುಕುತ್ತಲೇ ಇರುತ್ತೇವೆ. ನಾವಿಂದು ನಿಮಗೆ ವಿಶ್ವದ ಅತ್ಯುತ್ತಮ ಉಪಹಾರಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಹೌದು, ವಿಶ್ವದ 3 ಅತ್ಯುತ್ತಮ ಭಾರತೀಯ ಉಪಹಾರಗಳು ಇಲ್ಲಿವೆ. ಇವುಗಳ ರುಚಿ ನೋಡಿದರೆ, ನೀವು ಆಶ್ಚರ್ಯಚಕಿತರಾಗುತ್ತೀರಿ. ಟೇಸ್ಟ್ ಅಟ್ಲಾಸ್ ವಿಶ್ವದ 50 ಅತ್ಯುತ್ತಮ ಉಪಹಾರಗಳ ಪಟ್ಟಿಯನ್ನು (Best Breakfasts In The World) ಪ್ರಕಟಿಸಿದೆ. ಈ ಪಟ್ಟಿಯಲ್ಲಿ 3 ಭಾರತೀಯ ಉಪಹಾರ (ಖಾದ್ಯಗಳು) ಸ್ಥಾನ ಪಡೆದಿವೆ.
ಭಾರತದಲ್ಲಿ ಆರೋಗ್ಯಕರ ಮತ್ತು ರುಚಿಕರವಾದ ಉಪಹಾರ ಖಾದ್ಯಗಳು ವೈವಿಧ್ಯಮಯವಾಗಿವೆ. ಸಾಮಾನ್ಯವಾಗಿ ಜನರು ತಮ್ಮ ನೆಚ್ಚಿನ ಆಹಾರಗಳೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಇವು ನಮ್ಮ ಸ್ಥಳೀಯ ಸಂಸ್ಕೃತಿಗಳು ಮತ್ತು ಸಮಾಜಗಳಲ್ಲಿ ಆಳವಾಗಿ ಬೇರೂರುತ್ತವೆ. ಇತ್ತೀಚೆಗೆ ಟೇಸ್ಟ್ ಅಟ್ಲಾಸ್, ವಿಶ್ವದ 50 ಅತ್ಯುತ್ತಮ ಟಿಫಿನ್‌ಗಳ (ಉಪಹಾರಗಳು) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 3 ಭಾರತೀಯ ಭಕ್ಷ್ಯಗಳು (ಟಿಫಿನ್) ಸಹ ಸೇರಿವೆ ಎಂಬುದು ಒಂದು ದೊಡ್ಡ ವಿಷಯವಾಗಿದೆ.

ಹೌದು, ಟೇಸ್ಟ್ ಅಟ್ಲಾಸ್ ಇತ್ತೀಚೆಗೆ ಜೂನ್ 2025ರ ಪ್ರಕಾರ, ವಿಶ್ವದ ಅತ್ಯುತ್ತಮ ಟಿಫಿನ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ, ಮಹಾರಾಷ್ಟ್ರದ ಮಿಸಲ್ ಪಾವ್ 18 ನೇ ಸ್ಥಾನದಲ್ಲಿದೆ. ಹಾಗೆಯೇ ಪರಾಠ 23 ನೇ ಸ್ಥಾನದಲ್ಲಿದೆ. ದೆಹಲಿಯ ಪ್ರಸಿದ್ಧ ಚೋಲೆ ಭಾತುರೆ 32 ನೇ ಸ್ಥಾನವನ್ನು ಅಲಂಕರಿಸಿದೆ. ಮಹಾರಾಷ್ಟ್ರದ ಉಪಹಾರಗಳಲ್ಲಿ (ಆಹಾರ ಪದ್ಧತಿಯಲ್ಲಿ) ಅತ್ಯಂತ ಜನಪ್ರಿಯ ಭಕ್ಷ್ಯಗಳಲ್ಲಿ ಮಿಸಲ್ ಪಾವ್ ಒಂದಾಗಿದೆ. ನಿಜವಾದ ಮಿಸಲ್ ಪಾವ್ ಖಾರವಾಗಿರಬೇಕು. ಇದರ ಜೊತೆಯಲ್ಲಿ, ಅದು ಗರಿಗರಿಯಾಗಿರಬೇಕು. ದೃಷ್ಟಿಗೋಚರವಾಗಿ, ಅದು ಕಲಾಕೃತಿಯಾಗಿರಬೇಕು. ಸಾಮಾನ್ಯವಾಗಿ ಕೆಂಪು, ಕಂದು, ಕಿತ್ತಳೆ, ಹಸಿರು ಬಣ್ಣಗಳಲ್ಲಿ ಹಲವು ಬಣ್ಣಗಳನ್ನು ಹೊಂದಿರುತ್ತದೆ ಎಂದು ಟೇಸ್ಟ್ ಅಟ್ಲಾಸ್ ಹೇಳಿದೆ.
ಪರಾಠ ಮತ್ತು ಚೋಲೆ ಪಟ್ಟೂರ್
ಪಟ್ಟಿಯಲ್ಲಿರುವ ಇತರ ಎರಡು ಉಪಹಾರಗಳೆಂದರೆ ಪರಾಠ ಮತ್ತು ಚೋಲೆ ಪಟ್ಟೂರ್. ಇವು ಸಾಂಪ್ರದಾಯಿಕ ಉತ್ತರ ಭಾರತೀಯ ಭಕ್ಷ್ಯಗಳು. ಆದರೂ, ಇವು ದೇಶದ ಇತರೆ ಭಾಗಗಳಲ್ಲಿಯೂ ಜನಪ್ರಿಯವಾಗಿವೆ. ಇವುಗಳು ತಮ್ಮದೇ ಆದ ಪ್ರಾದೇಶಿಕ ವ್ಯತ್ಯಾಸಗಳನ್ನು ಹೊಂದಿವೆ. ಚೋಲೆ ಪಟ್ಟೂರ್ ದೆಹಲಿಯಲ್ಲಿ ನೀವು ಪ್ರಯತ್ನಿಸಬಹುದಾದ ಅತ್ಯಂತ ಆಕರ್ಷಕ ರಸ್ತೆ ಬದಿಯ ಆಹಾರಗಳಲ್ಲಿ ಒಂದಾಗಿದೆ.
ಈ ಪಟ್ಟಿಯಲ್ಲಿನ ಭಾರತೀಯ ಉಪಹಾರಗಳು
ಟೇಸ್ಟ್ ಅಟ್ಲಾಸ್ ಇನ್‌ಸ್ಟಾಗ್ರಾಮ್‌ನಲ್ಲಿ ಟಾಪ್ 50 ಬ್ರೇಕ್‌ಫಾಸ್ಟ್‌ಗಳ (ಟಿಫಿನ್) ಹೆಸರನ್ನು ಬಿಡುಗಡೆ ಮಾಡಿದೆ. ವೆಬ್‌ಸೈಟ್ ತನ್ನ ಇತ್ತೀಚಿನ ಪಟ್ಟಿಯಲ್ಲಿ 51 ರಿಂದ 100 ರವರೆಗಿನ ಸ್ಥಾನಗಳನ್ನು ಸೇರಿಸಿದೆ. ಈ ಪಟ್ಟಿಯಲ್ಲಿ ನಿಹಾರಿ, ಶ್ರೀಕಂಡ್ ಮತ್ತು ಪಾಲಕ್ ಪನ್ನೀರ್ ಸೇರಿದಂತೆ ಹಲವು ಭಾರತೀಯ ಉಪಹಾರಗಳು ಸೇರಿವೆ. ಈ ಹಿಂದೆ, ಹಲವು ಭಾರತೀಯ ಉಪಹಾರಗಳು ಟೇಸ್ಟ್ ಅಟ್ಲಾಸ್‌ನ ವಿಶ್ವದ ಅತ್ಯುತ್ತಮ ರೊಟ್ಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎನ್ನುವುದು ವಿಶೇಷ.
ರುಚಿಯಾದ ಪಾಲಕ್ ಪನ್ನೀರ್
ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಪಾಲಕ್ ಸೊಪ್ಪಿನಿಂದ ಅನೇಕ ರೀತಿಯ ಅಡುಗೆಯನ್ನು ತಯಾರಿಸಬಹುದು. ಅದರಲ್ಲಿ ಪಾಲಕ್ ಪನ್ನೀರ್ ಕೂಡ ಒಂದಾಗಿದೆ. ರುಚಿಕರವಾದ ಈ ಪಾಲಕ್ ಪನ್ನೀರ್ ಮಾಡುವ ವಿಧಾನ ಸಹ ಸುಲಭವಾಗಿದೆ.
ಬೇಕಾಗುವ ಸಾಮಾಗ್ರಗಳು
• ಪನ್ನೀರ್ - 200 ಗ್ರಾಂ
• ಪಾಲಾಕ್ ಸೊಪ್ಪು - 2 ಕಟ್ಟು
• ಈರುಳ್ಳಿ - 1 (ಕತ್ತರಿಸಿದ)
• ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ - 1 ಚಮಚ
• ಹಸಿ ಮೆಣಸಿನಕಾಯಿ - 4
• ಕರಿಮೆಣಸು - 5
• ಪಲಾವ್ ಎಲೆ - 1
• ಜೀರಿಗೆ - 1 ಚಮಚ
• ಮೆಣಸು - 1 ಚಮಚ
• ಗರಂ ಮಸಾಲ (ಏಲಕ್ಕಿ, ಚಕ್ಕೆ, ಲವಂಗ, ಬೆಳ್ಳುಳ್ಳಿಯಿಂದ ಮಾಡಿದ್ದು)
• ತುಪ್ಪ - 1 ಚಮಚ
• ಎಣ್ಣೆ - 1 ಚಮಚ
• ಹಾಲಿನ ಕೆನೆ - 1/2 ಕಪ್
• ಉಪ್ಪು ರುಚಿಗೆ ತಕ್ಕಷ್ಟು
ಪಾಲಕ್ ಪನ್ನೀರ್ ಮಾಡುವ ವಿಧಾನ
ಮೊದಲು, ಕುದಿಸಿದ ನೀರಿಗೆ ಪಾಲಕ್ ಸೊಪ್ಪು ಹಾಕಿ ಎರಡು ನಿಮಿಷ ಬೇಯಿಸಬೇಕು. ಆ ನೀರನ್ನು ಚೆಲ್ಲಿ ಸೊಪ್ಪನ್ನು ತಣ್ಣೀರಿನಲ್ಲಿ ಇಡಬೇಕು. ಬಳಿಕ ಬಾಣಲೆಗೆ ಎಣ್ಣೆ ಹಾಕಿ, ಅದಕ್ಕೆ ಪನ್ನೀರ್ ಹಾಕಿ. ಎರಡು ನಿಮಿಷ ಕಾಲ ಹುರಿಯಬೇಕು. ಈಗ ಪಾಲಾಕ್ ಸೊಪ್ಪನ್ನು ಹಸಿಮೆಣಸು, ಮತ್ತು ಶುಂಠಿ ಮಿಶ್ರಣದೊಂದಿಗೆ ಅರೆಯಬೇಕು.
ಇದಾದ ಬಳಿಕ, ಪಲಾವ್ ಎಲೆ ಮತ್ತು ಜೀರಿಗೆಯನ್ನು ಎಣ್ಣೆಯಲ್ಲಿ ಬಿಸಿ ಮಾಡಬೇಕು. ಕತ್ತರಿಸಿದ ಈರುಳ್ಳಿಯನ್ನು ಕಂದು ಬಣ್ಣಕ್ಕೆ ಬರುವ ಹಾಗೆ ಹುರಿಯಿರಿ. ಅದಕ್ಕೆ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಹಾಕಿ. ಬಳಿಕ ಅರೆದ ಪಾಲಕ್ ಸೊಪ್ಪು ಮಿಶ್ರಣವನ್ನು ಈರುಳ್ಳಿಯೊಂದಿಗೆ ಮಿಕ್ಸ್ ಮಾಡಿ. ಅದಕ್ಕೆ ಉಪ್ಪು, ಮೆಣಸು, ಜೀರಿಗೆ ಪುಡಿ ಹಾಕಿ 3 ನಿಮಿಷ ಬೇಯಿಸಿ. ಬಳಿಕ ಅದಕ್ಕೆ ಪನ್ನೀರ್ ಹಾಕಿ. ಹಾಗೆಯೇ ಸ್ವಲ್ಪ ಬೇಯಿಸಿ. ಹಸಿರಾದ ಗ್ರೇವಿಯ ಮೇಲೆ ಎಣ್ಣೆ ಕಾಣುತ್ತದೆ. ಇಷ್ಟು ಮಾಡಿದರೆ ಪಾಲಾಕ್ ಪನ್ನೀರ್ ಸಿದ್ಧವಾಗುತ್ತದೆ.



Click it and Unblock the Notifications












