Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಆನ್‌ಲೈನ್ ಸ್ಕ್ಯಾಮ್‌ನಲ್ಲಿ ಮೋಸ ಹೋದ ಬೆಂಗಳೂರಿನ ಮಹಿಳೆ: 2 ಕೋಟಿ ಹಣ ಮರಳಿ ಬಂತು ಹೇಗೆ? ಕಳೆದುಕೊಂಡ ಹಣವೆಷ್ಟು?
ಸಾಕಷ್ಟು ಆನ್‌ಲೈನ್ ಸ್ಕ್ಯಾಮ್ ಬಗ್ಗೆ ಕೇಳುತ್ತೇವೆ, ಎಷ್ಟೇ ಇದರ ಬಗ್ಗೆ ವರದಿ ಬಂದರೂ ಮೋಸ ಹೋಗುವವರಿಗೇನೂ ಕಡಿಮೆಯಿಲ್ಲ, ಅದರಲ್ಲಿ ವಿಪರ್ಯಾಸವೆಂದರೆ ಹೆಚ್ಚು ಓದಿಲ್ಲದವರಿಗಿಂತ ಚೆನ್ನಾಗಿ ಓದಿಕೊಂಡವರೇ ಮೋಸ ಹೋಗುತ್ತಾರೆ, ಒಂದಿಷ್ಟು ಹಣ ಹಾಕಿದ ಮೇಲೆ ಗೊತ್ತಾಗುತ್ತೆ ನಾನು ಮೋಸ ಎಂದೆ.
ಆನ್‌ಲೈನ್ ಸ್ಕ್ಯಾಮ್‌ನಲ್ಲಿ ಹಣ ಕಳೆದುಕೊಂಡರೆ ಮರಳಿ ಸಿಗಲ್ಲ, ಆದರೆ ಬೆಂಗಳೂರಿನ ಮಹಿಳೆ 2 ಕೋಟಿ ಹಣ ವಾಪಾಸ್ಸು ಪಡೆದಿದ್ದಾರೆ... ಇವರು ಬಕರ ಆಕದ ಕತೆ ನೋಡುವುದಾದರೆ.....

ಉದ್ಯಮಿ ಮಹಿಳೆ ಇವರು, ಆದರೂ ಮೋಸದ ಜಾಲಕ್ಕೆ ಸುಲಭದಲ್ಲಿ ಬಿದ್ದರು
ಈ ಮಹಿಳೆ ಸಾಧಾರಣ ಮಹಿಳೆಯಲ್ಲ, ಉದ್ಯಮಿ, ಚೆನ್ನಾಗಿ ಓದಿಕೊಂಡಿರುವ ಈಕೆಗೆ ತಾನು ಮೋಸ ಹೋಗಬಹುದೆಂದ ಕಲ್ಪನೆ ಇರಲಿಲ್ಲ, ಆದರೆ ಉದ್ಯಮಿಯಾದರೆ ಏನಂತೆ ಆಕೆಗೂ ಹಣದ ದುರಾಸೆ, ಹಾಗಾಗಿ ಈಗ 2 ಕೋಟಿ ಹಣ ವಾಪಾಸ್ಸು ಬಂದರೂ ಇನ್ನೂ 70 ಲಕ್ಷ ಹಣ ಕಳೆದುಕೊಂಡಿದ್ದಾಳೆ. ಒಂದ ದಿನ ಆ ಮಹಿಳೆಗ ಒಂದು ಮೆಸೇಜ್ ಬರುತ್ತದೆ, ಅದರಲ್ಲಿ ನೀವು ಆನ್‌ಲೈನ್ ಮೂಲಕ ಪಾರ್ಟ್‌ಟೈಂ ಕೆಲಸ ಮಾಡಿ ಸುಲಭವಾಗಿ ಹಣ ಗಳಿಸಬಹುದು ಎಂದಿರುತ್ತದೆ.
ಈಕೆಗೂ ಆ ಲಿಂಕ್ ನೋಡಿ ಆಸಕ್ತಿ ಹೆಚ್ಚಾಗುತ್ತದೆ, ಅವರು ಕೇಳಿದ ಕೆಲ ಮಾಹಿತಿ ನೀಡುತ್ತಾರೆ, ಅವರು ತಾವು ನಿಮ್ಮ ಅಕೌಂಟ್‌ಗೆ ಹಣ ಕಳುಹಿಸುತ್ತೀವಿ ಅಕೌಂಟ್ ನಂಬರ್ ಕೊಡಿ ಅಂತಾರೆ, ಇವರು ಕೂಡ ಕೊಡುತ್ತಾರೆ ನೋಡಿದರೆ ಹತ್ತು ಸಾವಿರ ರುಪಾಯಿ ಬಂದಿರುತ್ತದೆ. ಏನೂ ಕಷ್ಟ ಪಡದೆ ದುಡ್ಡು ಬರುವುದು ನೋಡಿ ಖುಷಿಯಾಗುತ್ತದೆ, ಅದರಲ್ಲಿ ಈ ದಿನಾಂಕಕ್ಕೆ ನಿಮ್ಮ ಹಣ ದುಪ್ಪಟ್ಟು ಆಗುತ್ತೆ ಎಂದಿರುತ್ತದೆ. ನೋಡಿದರೆ ಅವರು ಹೇಳಿದ ದಿನಾಂಕದಂದು 10 ಸಾವಿರ ಹಣ ದುಪ್ಪಟ್ಟು ಆಗುತ್ತೆ.
2.ಕೋಟಿ 70 ಲಕ್ಷ ಮೋಸ ಹೋಗುತ್ತಿದ್ದ ಮಹಿಳೆ
ಹಣ ದುಪ್ಪಟ್ಟು ಆಗುವುದು ನೋಡಿ ಇವರಿಗೂ ಖುಷಿ, ಆವಾಗ ನನ್ನ ಬಳಿ ಇರುವ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿದರೂ ಡಬಲ್ ಮಾಡಬಹುದಲ್ವಾ ಎಂಬ ಯೋಚನೆ ಬಂದಿದ್ದೇ ಸುಮಾರು 2 ಕೋಟಿ 70 ಲಕ್ಷ ಹೂಡಿಕೆ ಮಾಡುತ್ತಾರೆ. ಇವರು ಪ್ರತಿಬಾರಿ ಒಂದಿಷ್ಟು ಹಣ ಹಾಕಿದಾಗ ಇವರ ಮೊಬೈಲ್‌ಗೆ ಮೆಸೇಜ್ ಬರುತ್ತಿತ್ತು... ಮೋಸದ ಜಾಲದ ವಾಸನೆ ಮೂಗಿಗೆ ಬಡಿಯಲೇ ಇಲ್ಲ, ಹಣ ಹಾಕುತ್ತಲೇ ಹೋಗುತ್ತಾರೆ, ಇಷ್ಟೆಲ್ಲಾ ಕೋಟಿ ಹಣ ಹಾಕಿದ ಮೇಲೆ ಎಲ್ಲೋ ನಾನು ಮೋಸ ಹೋದೆ ಎಂದು ಅನಿಸಿಲಾರಂಭಿಸುತ್ತದೆ.
ಕೂಡಲೇ ತನ್ನ ಆಪ್ತರಿಗೆ ಈ ಕುರಿತು ತಿಳಿಸುತ್ತಾರೆ, ಆವಾಗ ಅವರು ನೀವು ಮೋಸದ ಜಾಲದಲ್ಲಿ ಸಿಕ್ಕಾಕಿಕೊಂಡಿದ್ದೀರಿ ಎಂದು ಎಚ್ಚರಿಸುತ್ತಾರೆ, ಕೂಡಲೇ ಸೈಬರ್ ಕ್ರೈಂ ಬಗ್ಗೆ ದೂರು ನೀಡುತ್ತಾರೆ. ಪೊಲೀಸರು ತಕ್ಷಣ ಅಲರ್ಟ್ ಆಗುತ್ತಾರೆ, ಇವರು ದುಡ್ಡು ಹಾಕಿರುವ ಹಣ ಫ್ರೀಝ್ ಮಾಡುತ್ತಾರೆ. ಅದರಲ್ಲಿ 2 ಕೋಟಿ ಮರಳಿ ಸಿಗುತ್ತದೆ, ಆದರೆ 70 ಲಕ್ಷ ಕಳೆದುಕೊಳ್ಳುತ್ತಾರೆ.
ಇವರು ಎಚ್ಚೆತ್ತುಕೊಂಡಿರುವ ವಿಷಯ ಆ ಆರೋಪಿಗಳಿಗೂ ಗೊತ್ತಾಗಿರಲ್ಲ, ಇವರ ಹಣ ಹಾಕುತ್ತಾರೆ ಎಂದು ಅವರು ಕಾಯುತ್ತಿದ್ದರು ಕಾಣುತ್ತೆ, ಹಾಗಾಗಿ ಅವರು ಇವರ ಮೊಬೈಲ್ ಕಾಂಟ್ಯಾಕ್ಟ್‌ನಲ್ಲಿಯೇ ಇದ್ದರು. ಈ ಮಹಿಳೆ ತಾನು ಮೋಸ ಹೋದಾಗ ಅವರಿಗೆ ಮೆಸೇಜ್ ಕಳುಹಿಸುವುದು ಮಾಡಿದ್ದರೆ ಖಂಡಿತ ಎಚ್ಚೆತ್ತುಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಪೊಲೀಸರು ಬುದ್ಧಿವಂತಿಕೆಯಿಂದ 2 ಕೋಟಿ ಬಂದಿದೆ.
ಈ ಆನ್‌ಲೈಮ್ ಸ್ಕ್ಯಾಮ್ ಬಗ್ಗೆ ಎಷ್ಟೇ ಎಚ್ಚರಿಸಿದರೂ ಜನ ಮೋಸ ಹೋಗುವುದು ನಿಲ್ಲುವುದಿಲ್ಲ. ಹಣದ ಅತಿಯಾಸೆಯಿಂದಲೇ ಜನರು ಮೋಸ ಹೋಗುವುದು ಕುಡ, ಹಣ ಡಬಲ್ ಆಗುತ್ತೆ ಎಂದರೆ ಕೂಡಲೇ ಹಿಂದೆ ಮುಂದೆ ಯೋಚಿಸಿದೆ ಹಣ ಹಾಕುವುದು ನಂತರ ನನ್ನ ಹಣ ಹೋಯ್ತು ಎಂದು ಗೋಳಾಡುವುದು...



Click it and Unblock the Notifications
