Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
Zero Shadow Day: ಬೆಂಗಳೂರಿಗರೇ ಈ ದಿನ ನಿಮ್ಮ ನೆರಳು ಕಾಣಿಸಲ್ಲ!
ಬೆಂಗಳೂರಿಗರೇ ಈ ದಿನ ನಿಮ್ಮ ನೆರಳು ನಿಮಗೆ ಕಾಣಿಸುವುದಿಲ್ಲ, ಯಾರೂ ಬಿಟ್ಟು ನಮ್ಮ ನೆರಳು ನಮ್ಮನ್ನು ಹಿಂಬಾಲಿಸುತ್ತದೆ ಎಂದು ಹೇಳುತ್ತೇವೆ, ಆದರೆ ಇಂದು ನೀವು ನೋಡಿದರೆ ನಿಮ್ಮ ನೆರಳು ನಿಮಗೆ ಕಾಆಣಿಸುವುದಿಲ್ಲ, ಹೌದು ಆಗಸ್ಟ್ 18 ಶೂನ್ಯ ನೆರಳಿನ ದಿನ. ಈ ದಿನ ಬಿಸಿಲಿಗೆ ಹೋಗಿ ನಿಂತರೆ ನಿಮ್ಮ ನೆರಳು ಕಾಣಿಸುವುದಿಲ್ಲ. ಇಂಥದ್ದೊಂದು ಅಪರೂಪದ ಘಟನೆಗೆ ಉದ್ಯಾನನಗರಿ ಬೆಂಗಳೂರು ಸಾಕ್ಷಿಯಾಗಲಿದೆ. ಈ ಹಿಂದೆ ಏಪ್ರಿಲ್ 25ಕ್ಕೆ ಶೂನ್ಯ ನೆರಳು ದಿನ ಉಂಟಾಗಿತ್ತು.
ಸಮಯ: 12:24

ಶೂನ್ಯ ನೆರಳಿನ ದಿನ ಎಂದರೇನು?
ಶೂನ್ಯ ನೆರಳಿನ ದಿನದಲ್ಲಿ ಮಧ್ಯಾಹ್ನ ಬಿಸಿಲಿನಲ್ಲಿ ನಿಂತರೆ ನಿಮ್ಮ ನೆರಳು ನಿಮಗೆ ಕಾಣಿಸುವುದಿಲ್ಲ, ಯಾವುದೇ ವಸ್ತುಗಳ ನೆರಳು ಕೂಡ ಕಾಣಿಸುವುದಿಲ್ಲ, ಇಂಥದ್ದೊಮದು ಅದ್ಭುತ ಅನುಭವವನ್ನು ಈ ದಿನ ಮಿಸ್ ಮಾಡದಿರಿ.
ಶೂನ್ಯ ನೆರಳು ಉಂಟಾಗಲು ಕಾರಣವೇನು?
ಈ ದಿನ ಸೂರ್ಯನು ನೇರವಾಗಿ ನಮ್ಮ ನೆತ್ತಿಯ ಮೇಲೆ ಇರುವುದರಿಂದ ಯಾವುದೇ ಲಂಭವಾದ ವಸ್ತುವಿನ ನೆರಳು ಬೀಳುವುದಿಲ್ಲ. ಈ ವಿಶೇಷ ಅನುಭವ ಪಡೆಯಲು ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ನಾವು ಬಿಸಿಲಿನಲ್ಲಿ ಹೋದಾಗ ನಮ್ಮ ನೆರಳನ್ನು ಗಮನಿಸುತ್ತೇವೆ, ಆದರೆ ನಮ್ಮ ನೆರಳು ಕಾಣುತ್ತಿಲ್ಲ ಎಂದಾದರೆ ಒಂಥರಾ ವಿಶೇಷ ಅನಿಸುವುದು ಅಲ್ವಾ?
ಈ ದಿನವನ್ನು ಆಚರಿಸಲು ಶಾಲಾ ಕ್ಯಾಂಪಸ್‌ನಲ್ಲಿ ಪ್ರಾಯೋಗಿಕ ಚಟುವಟಿಕೆಗಳನ್ನು ಕೂಡ ಮಾಡಲಾಗುವುದು.ಭಾರತೀಯ ಖಭೌತಶಾಸ್ತ್ರ ಸಂಸ್ಥೆಯ ಪ್ರಕಾರ ಶೂನ್ಯ ನೆರಳಿನ ದಿನ ಸೂಯ +23.5 ಮತ್ತು -23.5 ಡಿಗ್ರಿ ಕಕ್ಷೆಯಲ್ಲಿ ಸಾಗಿದಾಗ ಉಂಟಾಗುವುದು. ಇದು ಉತ್ತರಾಯಣ ಹಾಗೂ ದಕ್ಷಿಣಾಯನ ಕಾಲದಲ್ಲಿ ಸಂಭವಿಸುವುದು. ಇದೊಂದು ಅಪರೂಪದ ವಿದ್ಯಾಮಾನವಾಗಿದೆ. ಇದೀಗ ದಕ್ಷಿಣಾಯನವಾಗಿದೆ.
ಶೂನ್ಯ ನೆರಳು ವೀಕ್ಷಣೆಗೆ ಏನಾದರೂ ಉಪಕರಣ ಬೇಕೆ?
ಶೂನ್ಯ ನೆರಳನ್ನು ವೀಕ್ಷಿಸಲು ಯಾವುದೇ ಉಪಕರಣ ಬೇಕಾಗಿಲ್ಲ, ನೀವು ಬಿಸಿಲಿನಲ್ಲಿ ಹೋಗಿ ನಿಂತರೆ ಸಾಕು, ಈ ದಿನ ಬಿಸಿಲಿನಲ್ಲಿ ಹೋಗಬಾರದು ಎಂಬ ಯಾವ ಕತೆಗಳು, ಮೂಢ ನಂಬಿಕೆಗಳಿಲ್ಲ. ಅನೇಕ ಖಗೋಳ ವಿಸ್ಮಯದಲ್ಲಿ ಇದೂ ಒಂದು. ಆದ್ದರಿಂದ ಶೂನ್ಯ ನೆರಳಿನ ಈ ದಿನ ನೀವು ಸ್ವಲ್ಪ ಹೊತ್ತು ಹೊರ ಬಂದು ನಿಂತು ನಿಮ್ಮ ನೆರಳು ಕಾಣುತ್ತಿದೆಯೇ ಎಂದು ಪರೀಕ್ಷಿಸಿ.



Click it and Unblock the Notifications
