Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಬೆಂಗಳೂರಿನಲ್ಲಿ ನಾಯಿ ಮಾಂಸದ ವದಂತಿ: ಕೊನೆಗೂ ಲ್ಯಾಬ್‌ನಲ್ಲಿ ಸತ್ಯ ಬದಲಾಯ್ತು
ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಮೆಜೆಸ್ಟಿಕ್ ಸಮೀಪ ಆಡ ಮಾಂಸ ಸವಿದ ಹಲವರಿಗೆ ತಾನು ಸವಿದ ಮಾಂಸ ಯಾವುದು ಎಂದು ಸಿಕ್ಕಾಪಟ್ಟೆ ಚಿಂತೆಯಾಗಿತ್ತು, ಅಯ್ಯೋ ಅದು ನಾಯಿ ಮಾಂಸವಾಗಿದ್ದರೆ ಅದನ್ನು ಊಹಿಸಿಕೊಳ್ಳುವುದು ಕೂಡ ಕಷ್ಟವಾಗಿತ್ತು, ಆದರೆ ಬಯಪಟ್ಟವರು ನಿರಾಳವಾಗುವ ಸುದ್ದಿ ಹೈದರಾಬಾದ್ ಲ್ಯಾಬ್‌ನಿಂದ ದೊರೆತಿದೆ.

ನಾಯಿ ಮಾಂಸ ಎಂದು ದೊಡ್ಡ ಗದ್ದಲ, ಆತಂಕ ಉಂಟಾಗಿತ್ತು
ರಾಜಾಸ್ಥಾನದಿಂದ ಅಬ್ದುಲ್ ರಜಾಕ್ ತರಿಸುತ್ತಿದ್ದ ಕುರಿ ಮಾಂಸದ ಜೊತೆಗೆ ನಾಯಿ ಮಾಂಸವೂ ಇದೆ ಎಂಬ ಸಂಶಯ ಮೇಲೆ ಒಂದು ಗುಂಪು ಅಲ್ಲಿಂದ ಟ್ರೈನ್‌ನಲ್ಲಿ ಮೆಜೆಸ್ಟಿಕ್ ತಲುಪಿದ ಮಾಂಸದ ಪೆಟ್ಟಿಗೆಗಳನ್ನು ತೆರೆದು ತೋರಿಸುವಂತೆ ಆಗ್ರಹ ಪಡಿಸಿತು, ಇದಕ್ಕೆ ವ್ಯಾಪಾರಿಯಿಂದ ವಿರೋಧವೂ ಎದುರಾಯ್ತು, ಆದರೆ ಪಟ್ಟು ಹಿಡಿದು ಕೆಲ ಬಾಕ್ಸ್ ಓಪನ್ ಮಾಡಿದಾಗ ಅದರಲ್ಲಿ ಉದ್ದ ಬಾಲವೂ ಪತ್ತೆಯಾದಾಗ ಕುರಿಮಾಂಸದ ಜೊತೆಗೆ ನಾಯಿ ಮಾಂಸವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ವದಂತಿ ಹರಡಿತು.
ಮಾಧ್ಯಮದಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಕಾಡ್ಗಚ್ಚಿನಂತೆ ಹರಡಿತು ಈ ಸುದ್ದಿ
ಎಲ್ಲಿ ನೋಡಿದರು ಬೆಂಗಳೂರಿನಲ್ಲಿ ನಾಯಿ ಮಾಂಸ ಮಾರಾ ಮಾಡುತ್ತಾರಂತೆ, ಮೆಜೆಸ್ಟಿಕ್ , ಅದರ ಅಕ್ಕ-ಪಕ್ಕ ಹೋಟೆಲ್‌ಗಳಲ್ಲಿ ಮಟನ್ ಬದಲಿಗೆ ನಾಯಿ ಮಾಂಸ ನೀಡಲಾಗುತ್ತಿದೆ ಎಂದು ಸುದ್ದಿಗಳು ಬರಲಾರಮಭಿಸಿದರು, ಇದನ್ನು ಕೇಳಿದವರಿಗೆ ತುಂಬಾನೇ ಆತಂಕವಾಯ್ತು, ಏಕೆಂದರೆ ಇದು ಒಬ್ಬ ವ್ಯಕ್ತಿಯ ನಂಬಿಕೆಗೆ ದ್ರೋಹ ಮಾಡಿದಂತೆ. ಮಾಂಸಾಹಾರ ಸೇವಿಸುತ್ತಾರೆ ಎಂದರೆ ಯಾವುದು ಕೊಟ್ಟರು ತಿನ್ನುತ್ತಾರೆ ಎಂದಲ್ಲ, ಕೆಲವೊಂದು ಮಾಂಸವನ್ನು ಮಾತ್ರ ಸೇವಿಸುತ್ತಾರೆ, ಎಲ್ಲಾ ಮಾಂಸ ಮಾಂಸಾಹಾರಿಗಳು ಸೇವಿಸುವುದಿಲ್ಲ.
ಇನ್ನು ಕೆಲವರಿಗೆ ಕೆಲವೊಂದು ಮಾಂಸ ತಿಂದಾಗ ತುರಿಕೆ ಬರುತ್ತದೆ, ಅಲರ್ಜಿ ಸಮಸ್ಯೆಯಿಂದ ತ್ವಚೆಯಲ್ಲಿ ಗುಳ್ಳೆಗಳು ಕಂಡು ಬರುವುದು, ಆದ್ದರಿಂದ ಮಟನ್ ತಿನ್ನುವವರಿಗೆ ಹೋಗಿ ನಾಯಿ ಮಾಂಸ ಕೊಟ್ಟರ ತಿನ್ನಲು ಸಾಧ್ಯವಿಲ್ಲ. ಅಲ್ಲದೆ ಮಾಂಸಾಹಾರಿಗಳಿಗೆ ತಾವು ತಿಂದು ಟೇಸ್ಟ್ ಮಾಡಿರುವ ಮಾಂಸವನ್ನು ಸವಿದಾಗ ಅದರ ರುಚಿ ಗೊತ್ತಿರುವುದರಿಂದ ಅದು ನಾವು ಅಂದುಕೊಂಡ ಮಾಂಸವೇ, ಅಲ್ಲವೇ ಎಂದು ಕೂಡ ತಿಳಿಯಬಹುದು. ಇಷ್ಟೆಲ್ಲಾ ಲಾಜಿಕ್ ಇದ್ದರೂ ಮಟನ್ ಹಾಗೂ ನಾಯಿಮಾಂಸ ಒಂದೇ ಆಗಲು ಸಾಧ್ಯವೇ ಎಂಬ ತರ್ಕ ಕೂಡ ಎದ್ದಿತು.
ಉದ್ದ ಬಾಲದ ಕುರಿಗಳ ವೀಡಿಯೋಗಳೂ ವೈರಲ್ ಆಯ್ತು
ಕೆಲವೊಂದು ಸತ್ಯಗಳು ಸೋಷಿಯಲ್ ಮೀಡಿಯಾದಿಂದಲೇ ತಿಳಿಯುವ ಕಾಲ, ರಾಜಾಸ್ಥಾನದಲ್ಲಿರುವ ಉದ್ದ ಬಾಲದ ತಳಿಯ ಕುರಿಗಳ ವೀಡಿಯೋಗಳು ವೈರಲ್ ಆಯ್ತು, ಈ ವೀಡಿಯೋಗಳನ್ನು ನೋಡಿದ ಮೇಲೆ ಜನರಿಗೆ ಸ್ವಲ್ಪ ಸಮಧಾನವಾಯ್ತು.
ಅಧಿಕೃತ ವರದಿಯೂ ಬಂದಿದೆ
ಮಾಂಸದ ಸ್ಯಾಂಪಲ್ ಅನ್ನು ಹೈದರಾಬಾದ್‌ನ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಇದೀಗ ಅದು ಕುರಿ ಮಾಂಸವೇ ಆಗಿತ್ತು ಎಂಬುವುದು ದೃಢ ಪಟ್ಟಿದೆ.
ಆಹಾರದ ವಿಷಯದಲ್ಲಿ ತಮಾಷೆ ಸಲ್ಲದು
ಆಹಾರದ ವಿಷಯದಲ್ಲಿ ಮೋಸ ಮಾಡಬಾರದು ಅದೇ ರೀತಿ ತಪ್ಪಾಗಿ ವದಂತಿಯೂ ಹರಡಬಾರದು, ಏಕೆಂದರೆ ಇದರಿಂದ ಹೆಚ್ಚು ಬಾಧಿಸಲ್ಪಡುವ ವ್ಯಕ್ತಿ ಎಂದರೆ ಆ ಆಹಾರ ಖರೀದಿಸಿದ ಗ್ರಾಹಕ.
ಯಾವುದೇ ಸಂಶಯ ಬಂದರೆ ಮೊದಲಿಗೆ ಲ್ಯಾಬ್‌ಗೆ ಕಳುಹಿಸಿ ಪರಿಶಶೀಲಿಸಿದ ಬಳಿಕವೇ ಇದನ್ನು ಸುದ್ದಿ ಮಾಡುವುದು ಆರೋಗ್ಯಕರ ಸಮಾಜಕ್ಕೆ ನಾವು ಮಾಡುವ ಒಳಿತಾಗಿದೆ.



Click it and Unblock the Notifications
