Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಜೈನ ದೀಕ್ಷೆ ಪಡೆದ ಬೆಂಗಳೂರಿನ ಉದ್ಯಮಿ ಪತ್ನಿ-ಪುತ್ರ..! ವಿಡಿಯೋ ವೈರಲ್
ಮನುಷ್ಯ ದೇಹದ ಅಂತಿಮ ಗುರಿ ಮೋಕ್ಷ ಹೊಂದುವುದು ಅಥವಾ ಆತ್ಮಕ್ಕೆ ಶಾಂತಿ ನೀಡುವುದು ಎಂಬುದಾಗಿದೆ. ಈ ಮೋಕ್ಷ ಪಡೆಯುವ ಮಾರ್ಗಗಳು ಮಾತ್ರ ಬೇರೆ ಬೇರೆ ರೂಪದಲ್ಲಿರುತ್ತದೆ. ಮೋಕ್ಷ ಪಡೆಯುವುದು ಎಂದರೆ ಸರ್ವಸ್ವ ತ್ಯಾಗ, ಎಲ್ಲ ಬಂಧಗಳಿಂದ ಮುಕ್ತಿ ಪಡೆದು ಆತ್ಮಾವಲೋಕನ.
ಈ ಮೋಕ್ಷ ಪಡೆಯುವ ಹಾದಿ ಅಷ್ಟೊಂದು ಸುಲಭವಾಗಿರುವುದಿಲ್ಲ. ಈ ದಾರಿಯ ಮೊದಲ ಹಂತವಾಗಿ ದೀಕ್ಷೆ ಪಡೆಯುವುದು ಎನ್ನಲಾಗುತ್ತದೆ. ಈಗ ಜೈನ ಧರ್ಮ ಸ್ವೀಕರಿಸಿ ಮೋಕ್ಷದ ಹಾದಿ ಹಿಡಿಯುವವರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಬೆಂಗಳೂರಿನ ತಾಯಿ ಹಾಗೂ ಆಕೆಯ ಮಗ ಜೈನ ದೀಕ್ಷೆ ಸ್ವೀಕರಿಸಿ ಸುದ್ದಿಯಾಗಿದ್ದಾರೆ.

30 ವರ್ಷದ ಸ್ವೀಟಿ ಮತ್ತು ಆಕೆಯ ಪುತ್ರ 11 ವರ್ಷದ ಹೃದನ್ ಈಗ ಸನ್ಯಾಸತ್ವ ಪಡೆದಿದ್ದಾರೆ. ಸ್ವೀಟಿ ಗರ್ಭಿಣಿಯಾಗಿದ್ದಾಗಲೇ ದೀಕ್ಷೆ ಪಡೆಯಬೇಕು ಎಂದುಕೊಂಡಿದ್ದರಂತೆ ಈಗ ಪುತ್ರನಿಗೆ 11 ವರ್ಷ ತುಂಬಿದ ವೇಳೆ ದೀಕ್ಷೆ ಪಡೆಯಲು ನಿರ್ಧರಿಸಿ ನೂರಾರು ಜೈನ ಮುನಿಗಳ ಸಾರತ್ಯದಲ್ಲಿ ಅವರು ದೀಕ್ಷೆ ಪಡೆದಿದ್ದಾರೆ.
ಉದ್ಯಮಿಯ ಪತ್ನಿಯಾಗಿರುವ ಸ್ವೀಟಿ ಈ ದೀಕ್ಷೆ ಬಳಿಕ ಬವಶುದ್ದಿ ರೇಖಾ ಶ್ರೀ ಎಂದು ಮರುನಾಮಕರಣ ಹೊಂದಿದ್ದಾರೆ. ಇತ್ತರ ಪುತ್ರ ಹೃದನ್ ಹಿತಷ್ಯ ರತನ್ವಿಜಯ್ ಜಿ ಆಗಿ ಬದಲಾಗಿದ್ದಾರೆ. ಅವರು ನೂರಾರು ಜೈನ ಸಂತರ ನಡುವೆ ದೀಕ್ಷೆ ಪಡೆಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ವಿಡಿಯೋದಲ್ಲಿ ಪುತ್ರನಿಗೆ ತಾಯಿ ಭಾವನಾತ್ಮಕ ಬೀಳ್ಕೊಡುಗೆ ನೀಡುತ್ತಿರುವುದನ್ನು ನಾವು ನೋಡಬಹುದು. ಆಕೆ ಕೊನೆಯದಾಗಿ ತನ್ನ ಪುತ್ರನ ತಬ್ಬಿಕೊಂಡು ಆತ ತಲೆ ಸವರಿ ಬೀಳ್ಕುಡುತ್ತಿರುವುದು ನೋಡುಗರ ಕಣ್ಣಲ್ಲೂ ನೀರು ತರಿಸುವಂತಿದೆ. ಒಮ್ಮೆ ಜೈನ ದೀಕ್ಷೆ ಪಡೆದರೆ ಆತ/ಆಕೆ ಮನೆ, ಕುಟುಂಬ, ಆಸ್ತಿ, ಆಸೆ, ಬಯಕೆ, ಬೇಡಿಕೆ ಎಲ್ಲವನ್ನೂ ತ್ಯಜಿಸಬೇಕಾಗುತ್ತದೆ. ಕೇವಲ ಧ್ಯಾನ ಹಾಗೂ ಸಮಾಜ ಸೇವೆಯಂತಹ ಕಾರ್ಯದಲ್ಲಿ ತೊಡಗಬೇಕಾಗುತ್ತದೆ.
200 ಕೋಟಿ ಆಸ್ತಿ ತ್ಯಜಿಸಿದ್ದ ಉದ್ಯಮಿ
ಇದಕ್ಕೂ ಮೊದಲು ಉದ್ಯಮಿಯೊಬ್ಬರು ದೀಕ್ಷೆ ಪಡೆದು ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು, ಅವರು ತಮ್ಮ 200 ಕೋಟಿ ರೂಪಾಯಿ ಆಸ್ತಿಯನ್ನೇ ತ್ಯಜಿಸಿ ಇಡೀ ಕುಟುಂಬ ಸನ್ಯಾಸತ್ವ ಪಡೆದಿತ್ತು. ಗುಜರಾತ್‌ನ ಈ ಶ್ರೀಮಂತ ಉದ್ಯಮಿ ಮತ್ತು ಅವರ ಪತ್ನಿ ತಮ್ಮ ಗಳಿಕೆ ಮತ್ತು 200 ಕೋಟಿ ಮೌಲ್ಯದ ಆಸ್ತಿಯನ್ನು ತ್ಯಜಿಸಿ ಸನ್ಯಾಸಿತ್ವವನ್ನು ಸ್ವೀಕರಿಸಿದ್ದಾರೆ.
ಭವೇಶ್ ಭಾಯ್ ಬಂಡಾರಿ ಹಾಗೂ ಅವರ ಪತ್ನಿ ಇಬ್ಬರು ಮಕ್ಕಳು ಜೈನ ಸನ್ಯಾಸತ್ವ ಸ್ವಕರಿಸಿದ್ದರು. ಜೊತೆಗೆ ಮೆರವಣಿಗೆ ಮೂಲಕ ತಮ್ಮ ಆಸ್ತಿಯನ್ನು ಜನರಿಗೆ ಹಂಚಿದರು. ಅವರು ಸಾಗಿದ ದಾರಿಯಲ್ಲಿ ನೋಟುಗಳ ಹಂಚಿದರು, ಮೊಬೈಲ್, ಬಂಗಾರದ ಆಭರಣ ಸೇರಿ ಎಲ್ಲವನ್ನು ತ್ಯಜಿಸಿದ್ದರು.
ಮಕ್ಕಳ ಆಸೆಯಂತೆ ದಂಪತಿ ಇಲ್ಲಿ ಸನ್ಯಾಸತ್ವ ಪಡೆದಿದ್ದರು. ಮಕ್ಕಳು ಮೊದಲು ದೀಕ್ಷೆ ಪಡೆದು ತಂದೆ ತಾಯಿ ಸಹ ನಮ್ಮಂತೆ ದೀಕ್ಷೆ ಪಡೆಯಬೇಕು ಎಂದು ಆಸೆ ವ್ಯಕ್ತಪಡಿಸಿದ್ದರು. ಮಕ್ಕಳ ಆಸೆಗಿಂತ ಆಸ್ತಿ ಪಾಸ್ತಿ ಹೊಂದುವುದು ದೊಡ್ಡದಲ್ಲ ಎಂದು ಭಾವಿಸಿದ ದಂಪತಿ ತಮ್ಮ 200 ಕೋಟಿಗೂ ಅಧಿಕ ಆಸ್ತಿ ತ್ಯಜಿಸಿ ದೀಕ್ಷೆ ಪಡೆದಿದ್ದರು.
ಗುಜರಾತ್‌ನಲ್ಲಿ ವಜ್ರದ ವ್ಯಾಪಾರಿಯಾಗಿದ್ದ ಭವೇಶ್ ಭಾಯ್ ಬಂಡಾರಿ ನೂರಾರು ಜೈನ ಸನ್ಯಾಸಿಗಳ ಸಮ್ಮುಖದಲ್ಲೇ ದೀಕ್ಷೆ ಪಡೆದಿದ್ದರು. 19 ವರ್ಷದ ಮಗಳು ಮತ್ತು 16 ವರ್ಷದ ಮಗ 2022ರಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದ್ದಾರೆ. ಮಕ್ಕಳಿಂದಲೇ ಸ್ಪೂರ್ತಿ ಪಡೆದು ದಂಪತಿ ಈ ಕಾರ್ಯಕ್ಕೆ ಮುಂದಾಗಿರುವುದಾಗಿ ಅವರು ಹೇಳಿದ್ದರು.



Click it and Unblock the Notifications
