Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಬೆಳ್ಳಿ ಧರಿಸುವುದರಿಂದ ಈ ಪ್ರಮುಖ ಪ್ರಯೋಜನಗಳು ಸಿಗಲಿವೆ
ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬೆಳ್ಳಿ ಆಭರಣಗಳನ್ನು ಬಳಸುತ್ತೇವೆ. ಬೆಳ್ಳಿಯನ್ನು ಬರೀ ಅಲಂಕಾರಿಕ ವಸ್ತು ಎಂಬ ಕಾರಣಕ್ಕೆ ಮಾತ್ರವಲ್ಲ, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬ ಕಾರಣಕ್ಕೆ ಬಳಸುತ್ತಾರೆ. ಬೆಳ್ಳಿ ಅನೇಕ ಬಗೆಯ ಬ್ಯಾಕ್ಟಿರಿಯಾಗಳನ್ನು ನಾಶಪಡಿಸುವುದರಿಂದ ಸೋಂಕು ತಡೆಗಟ್ಟಲು ತುಂಬಾನೇ ಸಹಕಾರಿಯಾಗಿದೆ. ಬೆಳ್ಳಿ ಧರಿಸುವುದರಿಂದ ದೊರೆಯುವ ಆರೋಗ್ಯಕರ ಪ್ರಯೋಜನಗಳೇನು, ವೈದಿಕ ಶಾಸ್ತ್ರದಲ್ಲಿ ಇದರ ಗುಣಗಳ ಬಗ್ಗೆ ಏನು ಹೇಳಲಾಗಿದೆ ಎಂದು ನೋಡೋಣ ಬನ್ನಿ:
ಆರೋಗ್ಯಕರ ಗುಣಗಳು
ಸೋಂಕು ತಡೆಗಟ್ಟಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಬೆಳ್ಳಿಗೆ ಸೂಕ್ಷ್ಮಾಣುಗಳನ್ನು ನಾಶ ಪಡಿಸುವ ಗುಣವಿದೆ, ಆದ್ದರಿಂದ ಮಕ್ಕಳಿಗೆ ಬೆಳ್ಳಿ ಹಾಗೂ ಬೆಳ್ಳಿ ಲೋಟದಲ್ಲಿ ಆಹಾರ ಕೊಡುವುದು ಒಳ್ಳೆಯದು ಎಂದು ಹೇಳಲಾಗುವುದು. ಬೆಳ್ಳಿಯನ್ನು ಆಭರಣವಾಗಿ ಧರಿಸುವುದರಿಂದ ಒಟ್ಟು ಮೊತ್ತ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ರಕ್ತ ಸಂಚಾರಕ್ಕೆ ತುಂಬಾನೇ ಒಳ್ಳೆಯದು: ಸಂಧಿವಾತ, ಮೈ ಕೈ ನೋವು ಸಮಸ್ಯೆ ಇರುವವರು ಬೆಳ್ಳಿಯ ಆಭರಣಗಳನ್ನು ಧರಿಸುವುದರಿಂದ ನೋವು ಕಡಿಮೆಯಾಗುವುದು.
* ರಕ್ತ ಸಂಚಾರಕ್ಕೆ ತುಂಬಾನೇ ಒಳ್ಳೆಯದು: ಬೆಳ್ಳಿ ದೇಹದಲ್ಲಿ ರಕ್ತ ಸಂಚಾರಕ್ಕೆ ತುಂಬಾನೇ ಒಳ್ಳೆಯದು, ಬೆಳ್ಳಿ ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಬೆಳ್ಳಿ ಒಳ್ಳೆಯ ನಿದ್ದೆಗೆ ಒಳ್ಳೆಯದು: ನಿದ್ರಾಹೀನತೆ ಸಂಬಂಧಿಸಿದ ಸಮಸ್ಯೆಯಿಂದ ಬೆಳ್ಳಿ ಸಹಾಯ ಮಾಡುತ್ತದೆ. ಬೆಳ್ಳಿಯ ಆಭರಣಗಳನ್ನು ಧರಿಸುವುದರಿಂದ ಗಾಢ ನಿದ್ದೆ ಬರುವುದು.
ಧಾರ್ಮಿಕ ಪ್ರಯೋಜನಗಳು
ವೈದಿಕ ಶಾಸ್ತ್ರದಲ್ಲಿ ಬೆಳ್ಳಿಯನ್ನು ಧರಿಸುವುದರಿಂದ ಈ ಪ್ರಯೋಜನಗಳನ್ನು ಪಡೆಯಬಹುದು
* ಋಣಾತ್ಮಕ ಶಕ್ತಿಯನ್ನು ದೂರವಿಡಲು ಸಹಾಯ ಮಾಡುತ್ತದೆ: ಬೆಳ್ಳಿಯನ್ನು ಧರಿಸುವುದರಿಂದ ಋಣಾತ್ಮಕ ಶಕ್ತಿಯನ್ನು ಹೊರಗಿಡಲು ಸಹಕಾರಿ ಎಂಬುವುದಾಗಿ ವೈದಿಕ ಶಾಸ್ತ್ರ ಹೇಳುತ್ತದೆ.
* ಎನರ್ಜಿ ಬ್ಯಾಲೆನ್ಸ್ ಮಾಡುತ್ತದೆ: ಬೆಳ್ಳಿ ದೇಹದಲ್ಲಿ ಎನರ್ಜಿ (ಶಕ್ತಿ)ಯನ್ನು ಸಮತೋಲನದಲ್ಲಿಡುತ್ತದೆ ಎಂದು ಹೇಳಲಾಗುವುದು. ಇದನ್ನು ಧರಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.
* ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ: ಬೆಳ್ಳಿಯ ಆಭರಣ ಧರಿಸುವುದರಿಂದ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.
ಆಕ್ಯೂಪ್ರೆಷರ್ ಪ್ರಯೋಜನಗಳು
ಆಕ್ಯೂಪ್ರೆಷರ್ ಚಿಕಿತ್ಸೆಯು ಬೆಳ್ಳಿಯನ್ನು ಧರಿಸುವುದರಿಂದ ಈ ಪ್ರಯೋಜನಗಳಿವೆ ಎಂದು ಹೇಳಿದೆ:
* ಬೆಳ್ಳಿಯ ಕಿವಿಯೋಲೆ ಧರಿಸುವುದರಿಂದ ದೇಹಕ್ಕೆ ಒಳ್ಳೆಯದು ಎಂದು ಹೇಳಲಾಗಿದೆ.
* ಬೆಳ್ಳಿಯ ಬ್ರಾಸೆಲೆಟ್: ಮಣಿಗಂಟಿಗೆ ಒತ್ತಡ ಬೀಳುವುದರಿಂದ ಅದರ ಪ್ರಯೋಜನ ದೇಹಕ್ಕೆ ದೊರೆಯಲಿದೆ.
* ಸಿಲ್ವರ್ ನೆಕ್ಲೆಸ್: ಇದು ನೆಕ್ ಪಾಯಿಂಟ್ ಮೇಲೆ ಒತ್ತಡ ಹಾಕುವುದು, ಇದರಿಂದ ದೇಹದ ವಿವಿಧ ಭಾಗಗಳಿಗೆ ಪ್ರಯೋಜನ ಸಿಗುವುದು.
ಜ್ಯೋತಿಷ್ಯ ಪರಿಹಾರ:
ಬೆಳ್ಳಿಯ ಕಡಗ ಬಳಸುವುದರಿಂದ ದೊರೆಯುವ ಪ್ರಯೋಜನಗಳು
* ಬೆಳ್ಳಿಯ ಕಡಗ ಧರಿಸುವುದರಿಂದ ಅದೃಷ್ಟ ತರಲಿದೆ
* ಮುಂಗೋಪ ನಿಯಂತ್ರಿಸಲು ಸಹಾಯ ಮಾಡುತ್ತದೆ
* ಆತಂಕ ಕಡಿಮೆ ಮಾಡುತ್ತದೆ
* ದೇಹ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ರಾಹು ದೋಷಕ್ಕೆ ಪರಿಹಾರ
ರಾಹು ದೋಷ ಕಡಿಮೆ ಮಾಡಲು ಬೆಳ್ಳಿಯ ಆಭರಣ ಧರಿಸಿದರೆ ಒಳ್ಳೆಯದು ಎಂದು ಹೇಳಲಾಗಿದೆ. ಬೆಳ್ಳಿಯ ಕಡಗವನ್ನು ಸೋಮವಾರ ಅಥವಾ ಶುಕ್ರವಾರ ಧರಿಸುವುದರಿಂದ ರಾಹುವಿನ ಋಣಾತ್ಮಕ ಶಕ್ತಿಯನ್ನು ತಗ್ಗಿಸಬಹುದು.



Click it and Unblock the Notifications
