Latest Updates
-
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ!
ಈ ಫೋಟೋದಲ್ಲಿರುವ ವ್ಯಕ್ತಿ ಈಗ ಶ್ರೀಮಂತ ನಟ..! ಯಾರು ಗೊತ್ತಾ?
ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಅತ್ಯಂತ ಕುತೂಹಲಕಾರಿ ವಿಚಾರಗಳು ಹೊರಬರುತ್ತವೆ. ಕೆಲವೊಮ್ಮೆ ಅಚ್ಚರಿಯ ವಿಚಾರಗಳು ಕೂಡ ನಡೆಯುತ್ತವೆ. ಅದರಲ್ಲೂ ಇವರನ್ನು ಗುರುತಿಸಿ ಎಂದು ಹಳೆಯ ಫೋಟೋಗಳು, ನಟ, ನಟಿ, ರಾಜಕಾರಣಿ, ಉದ್ಯಮಿ ಹೀಗೆ ಹಲವರ ಫೋಟೋಗಳು ಹರಿದಾಡುತ್ತಿರುತ್ತವೆ. ಆದ್ರೆ ಕೆಲವೊಮ್ಮೆ ಬಾಲ್ಯದ ಫೋಟೋಗಳು ಹರಿದಾಡಿದರೆ ಮತ್ತೆ ಕೆಲವೊಮ್ಮೆ ಅಪರೂಪದ ಫೋಟೋಗಳು ಹರಿದಾಡುತ್ತವೆ.
ಈಗಲೂ ಕೂಡ ಇಲ್ಲೊಂದು ಅಚ್ಚರಿ ಹುಟ್ಟಿಸುವ ಫೋಟೋ ಹರಿದಾಡುತ್ತಿದ್ದು, ಈ ಫೋಟೋದಲ್ಲಿರುವವರು ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಭಾರತ ಚಿತ್ರರಂಗದ ಶ್ರೀಮಂತ ನಟ ಹಾಗೂ ಬಹುಭಾಷೆಯಲ್ಲಿ ನಟಿಸಿ ಸೈಎನಿಸಿಕೊಂಡಿರುವ ಈ ನಟ ಯಾರು ಎಂಬ ಪ್ರಶ್ನೆಯೊಂದಿಗೆ ಹಲವರು ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

ಈ ಮೇಲಿನ ಫೋಟೋದಲ್ಲಿರುವ ವ್ಯಕ್ತಿ ಈಗ ಭಾರತದ ಶ್ರೀಮಂತ ನಟ, ಆದ್ರೆ ಈ ಫೋಟೋ ಅವರ ಕಾಲೇಜು ದಿನದಲ್ಲಿ ತೆಗೆಯಲಾಗಿದೆಯಂತೆ, ಹೀಗಾಗಿ ಹಲವರು ಅವರು ಯಾರು ಎಂಬುದನ್ನು ಸರಿಯಾಗಿ ಗುರುತಿಸಿದ್ದಾರೆ. ಮತ್ತೆ ಕೆಲವರು ಈ ನಟ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗದೆ ಪರದಾಡಿದ್ದಾರೆ. ಅಷ್ಟಕ್ಕೂ ಈ ಕಪ್ಪು ಬಿಳುಪಿನ ಫೋಟೋದಲ್ಲಿರುವ ನಟ ಮತ್ಯಾರು ಅಲ್ಲ ಅದು ಚಿರಂಜೀವಿ.
ತೆಲುಗು, ಕನ್ನಡ, ಮಲಯಾಳಂ ಸೇರಿ ಬಹುಭಾಷೆಯಲ್ಲಿ ನಟಿಸಿರುವ ಅದೇ ಚಿರಂಜೀವಿ ಅವರ ಕಾಲೇಜು ದಿನದ ಫೋಟೋ ಇದಾಗಿದೆ. ಚಿರಂಜೀವಿ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 46 ವರ್ಷಗಳೇ ಕಳೆದಿದೆ. ಈ ಸಂದರ್ಭದಲ್ಲಿ ಈ ಫೋಟೋ ಹರಿದಾಡುತ್ತಿದೆ. ಇನ್ನೂ ಅಚ್ಚರಿ ಎಂದರೆ ಮೊದಲ ಬಾರಿಗೆ ಅವರಿಗೆ ಅತ್ಯುತ್ತಮ ನಟ ಎಂಬ ಕೀರ್ತಿ ತಂದ ದಿನದಂದು ತೆಗೆದಿದ್ದ ಫೋಟೋ ಇದಾಗಿದೆಯಂತೆ.
ಅವರು ಕಾಲೇಜು ದಿನದಲ್ಲಿ ನಟಿಸಿದ್ದ ನಾಟಕದಲ್ಲಿ ಅವರ ನಟನೆ ಕಂಡು ಅತ್ಯುತ್ತಮ ನಟ ಎಂದು ಬಣ್ಣಿಸಿದ್ದರಂತೆ. ಈ ಘಟನೆಯನ್ನು ಸ್ವತಃ ನಟ ಚಿರಂಜೀವಿ ನೆನಪಿಸಿಕೊಂಡಿದ್ದಾರೆ. 1974 - 75 ರ ಅವಧಿಯಲ್ಲಿ..YNM ಕಾಲೇಜು ನರಸಾಪುರ ಮೊದಲ ನಾಟಕ ರಾಜೀನಾಮೆ. ಕೋನ ಗೋವಿಂದ ರಾವ್ ಅವರ ಕೆಲಸ ನನಗೆ ಮೊದಲ ಬಾರಿಗೆ ನಟನಾಗಿ ಮನ್ನಣೆ ನೀಡಿತು. ನನಗೂ ಉತ್ತಮ ನಟ ಪ್ರಶಸ್ತಿ ಸಿಕ್ಕಿದ್ದಕ್ಕೆ ಅವರು ನೀಡಿದ ಪ್ರೋತ್ಸಾಹವನ್ನು ಮರೆಯಲು ಸಾಧ್ಯವಿಲ್ಲ, ನಟನಾಗಿ 50 ವರ್ಷಗಳಾದದ್ದು ವರ್ಣಿಸಲಾಗದ ಸಂತೋಷವಾಗುತ್ತಿದೆ ಎಂದು ನಟ ಚಿರಂಜೀವಿ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಚಿರಂಜೀವಿ ಅವರ ರಾಜೀನಾಮೆ ನಾಟಕದಿಂದ ಅವರ ಜೀವನ ಬದಲಾಗಿತ್ತು, ನಂತರ ನಾಟಕಗಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದ ಚಿರಂಜೀವಿ ಮುಂದೆ ಬಹುದೊಡ್ಡ ನಟರಾಗಿ ಗುರುತಿಸಿಕೊಂಡರು. ಆಗಸ್ಟ್ 22, 1955 ರಂದು ಭಾರತದ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತುರು ಪಟ್ಟಣದಲ್ಲಿ ಅವರು ಜನಿಸಿದ್ದರು. ಅವರ ತಂದೆ ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದರು.
ತಂದೆ ಮಗನನ್ನು ಕೂಡ ಪೊಲೀಸ್ ಆಗಿ ಕಾಣುವ ಕನಸು ಕಂಡಿದ್ದರಂತೆ. ಆದ್ರೆ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಚಿರಂಜೀವಿ ಕಾಲೇಜು ಶಿಕ್ಷಣ ಮುಗಿಸಿ ಚೆನ್ನೈಗೆ ಆಗಮಿಸಿದರು. ಬಳಿಕ ನಟ ಅಲ್ಲು ರಾಮು ಲಿಂಗಯ್ಯ ಅವರ ಪುತ್ರಿ ಸುರೇಖಾ ಅವರನ್ನು ವಿವಾಹವಾದರು.



Click it and Unblock the Notifications