Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಇರಲಾರದೆ ಇರುವೆ ಬಿಟ್ಟುಕೊಂಡಂತೆಯಾಗಿದೆ ಲಾಯರ್(?) ಜಗದೀಶ್ ಪರಿಸ್ಥಿತಿ: ಶೋ ಬಗ್ಗೆ ಗೌರವ ಇಲ್ಲದವರು ಶೋಗೆ ಬೇಕಾ?
ಒಬ್ಬ ವ್ಯಕ್ತಿ ಗೌರವ ಪಡೆಯುವುದು ಹಾಗೂ ಕಳೆದುಕೊಳ್ಳುವುದು ತನ್ನ ಮಾತು ಹಾಗೂ ವರ್ತನೆಯಿಂದ. ಲಾಯರ್ ಜಗದೀಶ್ ಬಿಗ್‌ಬಾಸ್‌ಗೆ ಬರುವ ಇದ್ದ ಇಮೇಜ್ ಈಗ ಇಲ್ಲ, ಅದಕ್ಕೆ ಕಾರಣ ಅತಿರೇಕದ ವರ್ತನೆ. ಇವರನ್ನು ಎದುರು ಹಾಕಿಕೊಂಡರೆ ಈ ಪ್ರಪಂಚದಲ್ಲಿ ಯಾರಿಗೆ ಉಳಿಗಾಲವಿಲ್ಲ ಎಂಬಂಥ ವರ್ತನೆ, ಎಷ್ಟೊಂದು ಪ್ರಸಿದ್ಧ ವಕೀಲರಿದ್ದಾರೆ, ಆದರೆ ಅವರ ಯಾರಲ್ಲಿಯೂ ಈ ಬಗೆಯ ವರ್ತನೆಯಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಭಾರೀ ಸದ್ದು ಮಾಡುತ್ತಿದ್ದ ವಕೀಲ ಜಗದೀಶ್ ಬಿಗ್‌ಬಾಸ್‌ಗೆ ಬರ್ತಾರೆ ಎಂದಾಗ ಅವರ ಆಟ ಮಜವಾಗಿರುತ್ತದೆ ಎಂದು ಎಲ್ಲರು ಭಾವಿಸಿದ್ದರು(ಅವರು ಪಿಯುಸಿ ಮಾರ್ಕ್ಸ್ ಕಾರ್ಡ್ ನಕಲಿ ಎಂಬ ಕಾರಣಕ್ಕೆ ವಕೀಲ ಪದವಿ ಕೂಡ ರದ್ದಾಗಿದೆ,ಹಾಗಾಗಿ ಅವರು ವಕೀಲ ಅಲ್ಲ). ಆದರೆ ಈ ರೀತಿ ಹೇಸಿಗೆ ಹುಟ್ಟಿಸುತ್ತದೆ ಎಂದು ಯಾರೂ ಭಾವಿಸಿರಲಿಲ್ಲ.
ಸದೃಢವಾದ ಎತ್ತರ ಮೈಕಟ್ಟಿದೆ, ಜೋರಾಗಿ ಬಾಯಿ ಮಾಡುವ ತಾಕತ್ತಿದೆ, ಬಿಗ್‌ಬಾಸ್‌ನಲ್ಲಿ ಹವಾ ಸೃಷ್ಟಿಸಲು ಇನ್ನೇನು ಬೇಕು ಎಂಬ ಲೆಕ್ಕಚಾರದಲ್ಲಿ ಬಂದವರಂತೆ ಕಾಣುತ್ತಾರೆ. ಪ್ರಶಾಂತ್ ಸಂಬರ್ಗಿ ಹಾಗೂ ಪ್ರಥಮ್ರ ಸೀಸನ್‌ಗಳಲ್ಲಿ ಅವರ ಭಿನ್ನ ವರ್ತನೆ ಗಮನ ಸೆಳೆದಿದ್ದನ್ನು ನೋಡಿದ ಇವರು ನಾನು ಕೂಡ ಗಮನ ಸೆಳೆಯಬಹುದು, ಟಾಪ್ ಕಂಟೆಸ್ಟೆಂಟ್ ಆಗಿರುತ್ತೇನೆ ಎಂದು ಬಂದವರಿಗೆ ಬಿಗ್‌ಬಾಸ್‌ಗೆ ಬಂದ ಒಂದೇ ವಾರದಲ್ಲಿ ಭ್ರಮೆ ಕಟ್ಟಿದೆ.
ತಾನೇ ಗ್ರೇಟ್ ಎಂಬ ಅಹಂನಲ್ಲಿ ಇತರರನ್ನು ಕಡೆಗಣಿಸುತ್ತಿದ್ದಾರೆ
ಅವನು ಕಾಮಿಡಿಯನ್, ಇವಳು ಕಾಮಿಡಿಯನ್ ಹೆಂಡತಿ ಎಂದೆಲ್ಲಾ ಹೇಳುತ್ತಾರೆ, ಅಲ್ಲದೆ ಬಿಗ್‌ಬಾಸ್ ಮನೆಯಲ್ಲಿರುವವರಿಗೆ ನನ್ನ ಸಮಾನ ಯಾರೂ ಇಲ್ಲ ಎಂದು ಪದೇ ಪದೇ ಹೇಳುತ್ತಾ ತಾನು ಎಂಬ ಅಹಂ ತೋರಿಸುತ್ತಿದ್ದಾರೆ. ಎಲ್ಲರು ಹೆದರಿಕೊಳ್ಳುತ್ತಾರೆ ಎಂದು ಭಾವಿಸಿದ್ದರು, ಆದರೆ ಎಲ್ಲರೂ ಮುಗಿ ಬಿದ್ದಾಗ ಬಾಲ ಸುಟ್ಟ ಬೆಕ್ಕಿನಂತಾಗಿದೆ ಅವರ ಪರಿಸ್ಥಿತಿ.
ಇಲ್ಲಿಯವರನ್ನು ನಿನ್ನ ಬಿಡಲ್ಲ, ನಿನ್ನ ಮೇಲೆ ಕೇಸ್ ಹಾಕ್ತೀನಿ ಅಂತ ಹೆದರಿಸೋಕೆ ಅವರಾರು ಕಳ್ಳರಲ್ಲ, ಖದೀಮರಲ್ಲ ಅವರಂತೆಯೇ ಸ್ಪರ್ಧಿಗಳು
ಹೌದು ಇವರು ಲಾಯರ್ ಎಂದ ಮಾತ್ರಕ್ಕೆ ಅವರೆಲ್ಲಾ ಹೆದರಬೇಕೆ? ಅಲ್ಲಾ ಬಿಗ್‌ಬಾಸ್‌ಗೆ ಬಂದು ಬಿಗ್‌ಬಾಸ್‌ಗೆ ಬೆದರಿಕೆ ಹಾಕ್ತಾರೆ ಎಂದಾದರೆ ಅವರು ಬಿಗ್‌ಬಾಸ್‌ಗೆ ಬರುವ ಅವಶ್ಯಕತೆ ಏನಿತ್ತು? ನನಗೆ ಬಿಗ್‌ಬಾಸ್ ಖರೀದಿಸುವ ತಾಕತ್ತಿದೆ ಎಂದು ಹೇಳುತ್ತಾರೆಡ, ನನ್ನ ನಾಯಿಗೆ ತಿಂಗಳಿಗೆ ಒಂದು ಲಕ್ಷ ಖರ್ಚಾಗುತ್ತೆ ಎನ್ನುತ್ತಾರೆ, ಇದನ್ನೆಲ್ಲಾ ಕೇಳಿಸಿಕೊಂಡು ಒಂದೂವರೆ ಕೋಟಿ ಗೋಲ್ಡ್ ಹಾಕಿ ಬಂದ ಗೋಲ್ಡ್ ಸುರೇಶ್ ತಣ್ಣನೆ ನಗುತ್ತಾರೆ. ಅವರು ಬಂದಾಗಿನಿಂದ ನರಕದಲ್ಲಿದ್ದಾರೆ, ತಿನ್ನುವ ಊಟಕ್ಕೆ ಕಷ್ಟಪಡುತ್ತಿದ್ದಾರೆ, ಆದರೆ ತನ್ನ ಶ್ರೀಮಂತಿಕೆ ಬಡಾಯಿ ಕೊಚ್ಚಿಕೊಂಡಿದ್ದಿಲ್ಲ.
ಕಿಚ್ಚನ ಮಾತಿನ ಪೆಟ್ಟಿಗೆ ಲಾಯರ್ ಗಪ್‌ಚುಪ್
ಇದುವರೆಗೆ ಸೀಸನ್‌ನ ಮೊದಲ ವಾರವೇ ಕಿಚ್ಚ ಇಷ್ಟೊಂದು ಖಡಕ್ ಆಗಿ ಮಾತನಾಡಿರಲಿಲ್ಲ, ಕಳೆದ ಸಲ ವಿನಯ್‌ಗೆ ಬಳೆ ವಿಚಾರದಲ್ಲಿ ಕ್ಲಾಸ್ ತೆಗೆದುಕೊಂಡಿದ್ದರು, ಆದರೆ ಈ ಬಾರಿ ಮೊದಲ ಪಂಚಾಯಿತಿಯಲ್ಲಿ ಬಿಗ್‌ಬಾಸ್ ಹಾಳು ಮಾಡೋಕೆ ನಿಮ್ಮಾಪ್ಪನಾಣೆಗೂ ಸಾಧ್ಯವಿಲ್ಲ ಎಂದು ಖಡಕ್ ಆಗಿಯೇ ಎಚ್ಚರಿಸಿದ್ದಾರೆ.
ಬಿಗ್‌ಬಾಸ್ ಶೋಗೆ ಬರಬೇಕೆಂದು ಅನೇಕ ಕನಸು, ಆ ಶೋ ಬೇಕಾಗಿಲ್ಲ ಎನ್ನುವವರಿಗೆ ಆ ಶೋದಲ್ಲಿ ಮುಂದುವರೆಯಲು ಅವಕಾಶ ನೀಡಬೇಕೆ?
ಟಿಆರ್‌ಪಿ ಕಂಟೆಮಟ್ ಕೊಡುವ ಎಷ್ಟೋ ಸ್ಪರ್ಧಿಗಳು ಸಿಗುತ್ತಾರೆ, ಈ ರೀತಿಯ ವರ್ತನೆ ಮಾಡುವವರು ಬಿಗ್‌ಬಾಸ್‌ಗೆ ಬೇಕೆ? ಸಿಕ್ಕ ಅವಕಾಶ ಬಳಸಿಕೊಳ್ಳಲು ಗೊತ್ತಿಲ್ಲದವರು, ಆ ಶೋ ಬಗ್ಗೆ ಗೌರವ ಇಲ್ಲದವರು ಅಲ್ಲಿರಬೇಕೆ?



Click it and Unblock the Notifications