Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚರ್ಚೆ ಹುಟ್ಟುಹಾಕಿದ ಬೆಂಗಳೂರು-ಹೈದರಾಬಾದ್..! ಎರಡರಲ್ಲಿ ವಾಸಯೋಗ್ಯ ನಗರ ಯಾವುದು..?
ರಾಜ್ಯ ರಾಜಧಾನಿ ಬೆಂಗಳೂರು ಐಟಿ ವಲಯದ ತವರೂರು ಅಂತಲೇ ಫೇಮಸ್, ಭಾರತದ ಸಿಲಿಕಾನ್ ವ್ಯಾಲಿ ಅಂತ ಕರೆಯಲ್ಪಡುವ ನಗರವಿಂದು ಬೃಹತ್ ನಗರವಾಗಿ ಏಷ್ಯಾದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಕೀರ್ತಿ ಪಡೆದುಕೊಂಡಿದೆ. ವಿಶ್ವದ ಬೃಹತ್ ಕಂಪನಿಗಳು ತಮ್ಮ ಕೇಂದ್ರ ಕಚೇರಿಯನ್ನು ಬೆಂಗಳೂರಲ್ಲೇ ಹೊಂದಿವೆ. ಎಲ್ಲಾ ಐಟಿ ಹಬ್‌ಗಳು ಬೆಂಗಳೂರಿನಲ್ಲಿವೆ.
ನೀವು ಬಳಸುತ್ತಿರುವ ಬಹುತೇಕ ಸ್ಟಾರ್ಟ್‌ಅಪ್‌ಗಳು ಹುಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ. ಜೊತೆಗೆ ನಿತ್ಯ ಹತ್ತಾರು ಹೊಸ ಕಂಪನಿಗಳು ಆರಂಭವಾಗುತ್ತಿರೋದು ಇದೇ ಬೆಂಗಳೂರಿನಲ್ಲಿ. ಜೊತೆಗೆ ದಿನವೊಂದಕ್ಕೆ ಲಕ್ಷ ಮಂದಿ ಬೆಂಗಳೂರಿಗೆ ಬಂದರೆ ಒಂದಿಷ್ಟು ಮಂದಿ ಬೆಂಗಳೂರು ತೊರೆಯುತ್ತಾರೆ.

ಹಾಗೆ ನೋಡಿದ್ರೆ ಭಾರತದ ಬಹುತೇಕ ಪ್ರಮಾಣದ ಯುವ ಜನತೆ ನೆಲೆಸಿರೋದು ಬೆಂಗಳೂರಲ್ಲಿ. ಉದ್ಯೋಗ ಅರಸಿ ಬರುವವರಿಗೆಲ್ಲಾ ಆಶ್ರಯ, ಆಸರೆಯಾಗಿರೋದು ಬೆಂಗಳೂರು ಎಂಬ ಮಹಾನಗರಿಯೇ. ಆದ್ರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಬೇರೆ ಬೇರೆ ಕಾರಣಗಳಿಂದ ಸುದ್ದಿಯಾಗುತ್ತಿದೆ. ನೀರಿನ ಸಮಸ್ಯೆ, ಟ್ರಾಫಿಕ್, ರಸ್ತೆ, ಫ್ಲೈ ಓವರ್, ಮೆಟ್ರೋ, ಅಪರಾಧ, ಫುಡ್, ಬಾಡಿಗೆ, ಜನಸಂದಣಿ ಹೀಗೆ ಹೇಳುತ್ತಾ ಹೋದರೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಈ ಎಲ್ಲಾ ಕಾರಣದಿಂದಾಗಿ ಬೆಂಗಳೂರು ಈಗ ಸುದ್ದಿಯಾಗುತ್ತಿದೆ. ಅದರಲ್ಲೂ ಜನರ ಬದುಕಿನ ಪ್ರಶ್ನೆ ಎಂದು ಬಂದರೆ ಈಗ ಬೆಂಗಳೂರಿಗೆ ಪರ್ಯಾಯವಾಗಿ ಮತ್ತೊಂದು ನಗರ ಬೆಳೆಯುತ್ತಿದೆ. ಹೌದು ಬೆಂಗಳೂರಿಗೆ ಪರ್ಯಾಯ ನಗರ ಎಂದೇ ಹೇಳಲಾಗುತ್ತಿರುವ ಹೈದರಾಬಾದ್ ಈಗ ಸುದ್ದಿಯಾಗುತ್ತಿದೆ.
ಈಗ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ಉತ್ತಮವೋ ಇಲ್ಲ ಹೈದರಾಬಾದ್ ಅತ್ಯುತ್ತಮವೋ ಎಂಬ ಚರ್ಚೆಗಳು ಆರಂಭವಾಗಿವೆ. ಈ ಚರ್ಚೆ ಯಾವ ಮಟ್ಟಕ್ಕೆ ತಲುಪಿದೆ ಅಂದ್ರೆ ಎರಡೂ ರಾಜ್ಯಗಳ ರಾಜಕಾರಣಿಗಳು ಈ ಚರ್ಚೆಯಲ್ಲಿ ಮೂಗು ತೂರಿಸುವ ಮಟ್ಟಕ್ಕೆ ಬೆಳೆದಿದೆ.
ಕಳೆದ ಕೆಲ ವರ್ಷದಂದ ಬೆಂಗಳೂರು ವಿಪರೀತ ಜನಸಂದಣಿಯಿಂದಾಗಿ ಹತ್ತು ಹಲವು ಸಮಸ್ಯೆಗೆ ತೆರೆದುಕೊಳ್ಳುತ್ತಿದೆ. ಒಂದು ಸಮಸ್ಯೆ ಬಗೆಹರಿಯುವ ಮುನ್ನ ಮತ್ತೊಂದು ಸಮಸ್ಯೆ ಎದುರಾಗುತ್ತಿದೆ. ಇದಕ್ಕೆ ಮೂಲ ಕಾರಣ ವಿಪರೀತವಾಗಿ ಬೆಳೆದಿರುವ ಜನಸಂಖ್ಯೆ. ಬೆಂಗಳೂರು ತನ್ನ ವಿಸ್ತಾರವನ್ನ ಮತ್ತಷ್ಟು ಹೆಚ್ಚು ಮಾಡಿಕೊಳ್ಳುತ್ತಿದ್ದರೂ, ನಗರ ಪ್ರದೇಶ ಬೆಳೆದರೂ ಈ ಸಮಸ್ಯೆ ಬಗೆಹರಿಯುತ್ತಿಲ್ಲ.
ಹೀಗಾಗಿ ಒಂದು ಸಮೂಹ ಬೆಂಗಳೂರಿಗಿಂತಲೂ ಹೈದರಾಬಾದ್ ಎಲ್ಲ ಮಾರ್ಗದಲ್ಲೂ ಉತ್ತಮ ಎಂದು ವಾದಕ್ಕೆ ನಿಂತಿದೆ. ಅಲ್ಲದೆ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ತುಲನೆ ಮಾಡಿ ತಾಳೆ ಹಾಕಲಾಗುತ್ತಿದೆ. ಹೈದರಾಬಾದ್ ವಿಸ್ತೀರ್ಣದಲ್ಲಿ, ಮೂಲ ಸೌಕರ್ಯದಲ್ಲಿ, ಸಾರಿಗೆ ಸಂಪರ್ಕ, ರಸ್ತೆ, ಒಳ ಚರಂಡಿ, ತಂತ್ರಜ್ಞಾನದಲ್ಲಿ ಬೆಂಗಳೂರಿಗಿಂತ ಮುಂದಿದೆ ಎಂಬುದೇ ಈ ಚರ್ಚೆಯ ಪ್ರಮುಖ ವಾದವಾಗಿದೆ.
ಬೆಂಗಳೂರು ಮತ್ತು ಹೈದರಾಬಾದ್ ಮೆಟ್ರೋ ಹೇಗಿದೆ..?
ಹೈದರಾಬಾದ್ ಮೆಟ್ರೋ ರೈಲು ಕೆಂಪು, ನೀಲಿ ಮತ್ತು ಹಸಿರು ಮಾರ್ಗಗಳೊಂದಿಗೆ ಸೇವೆ ಒದಗಿಸುತ್ತದೆ. ಎರಡೂ ಮಾರ್ಗಗಳು ಒಟ್ಟು 72.95 ಕಿ.ಮೀ. ಈ ಮೆಟ್ರೋ ಸೇವೆಗಳು ಟ್ರಾಫಿಕ್ ದಟ್ಟಣೆಯನ್ನು ನಿವಾರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.
ಹಸಿರು ಮಾರ್ಗವು 15 ಕಿಮೀ ಮತ್ತು 16 ನಿಲ್ದಾಣಗಳನ್ನು ಒಳಗೊಳ್ಳುತ್ತದೆ. ಕಾರಿಡಾರ್ 1 ಎಂದೂ ಕರೆಯಲ್ಪಡುವ ಹೈದರಾಬಾದ್ ಮೆಟ್ರೋ ರೆಡ್ ಲೈನ್ 29.21 ಕಿಮೀ ವ್ಯಾಪಿಸಿದೆ, ಮಿಯಾಪುರದಿಂದ ಎಲ್ ಬಿ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ ಮತ್ತು 27 ನಿಲ್ದಾಣಗಳನ್ನು ಒಳಗೊಂಡಿದೆ.
ಬೆಂಗಳೂರು: ನಗರವು ನಮ್ಮ ಮೆಟ್ರೋ ಎಂಬ ಉತ್ತಮ ಮೆಟ್ರೋ ರೈಲು ಸೇವೆಯನ್ನು ಹೊಂದಿದೆ, ನೇರಳೆ ಮತ್ತು ಹಸಿರು ಮಾರ್ಗ, 42.30 ಕಿ.ಮೀ. ಹಳದಿ, ಗುಲಾಬಿ ಮತ್ತು ನೀಲಿ ಎಂಬ ಮೂರು ಇತರ ಸಾಲುಗಳು ಪ್ರಸ್ತುತ ನಿರ್ಮಾಣ ಹಂತದಲ್ಲಿವೆ. ಈ ಮಾರ್ಗಗಳು ಮೆಟ್ರೋ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುತ್ತವೆ ಮತ್ತು ಜನರಿಗೆ ತಡೆರಹಿತ ಪ್ರಯಾಣವನ್ನು ಒದಗಿಸುತ್ತವೆ.
ಹೈದರಾಬಾದ್‌ಗೆ ಹೋಲಿಸಿದರೆ ಬೆಂಗಳೂರು ಮೆಟ್ರೋ ಮಾರ್ಗ ಹೆಚ್ಚು ವಿಸ್ತರಿಸಿದೆ. ಭಾರತದಲ್ಲಿ 2ನೇ ಅತೀದೊಡ್ಡ ಮೆಟ್ರೋ ಮಾರ್ಗ ಬೆಂಗಳೂರು ಹೊಂದಿದೆ.



Click it and Unblock the Notifications

