Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕೋಟ್ಯಧಿಪತಿಗಳಿಗಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರು..!
ವಿಶ್ವದ ಶ್ರೀಮಂತರ ಉದ್ಯಮಿಗಳ ಪಟ್ಟಿಯಲ್ಲಿ ನಾವು ಭಾರತೀಯ ಮೂಲದ ಒಂದಿಷ್ಟು ಮಂದಿಯ ಹೆಸರು ನೋಡುತ್ತೇವೆ. ಏಕೆಂದರೆ ಭಾರತದಲ್ಲಿ ಹತ್ತು ಹಲವು ಉದ್ಯಮಗಳು ಈಗ ಕೋಟಿ ಕೋಟಿ ಉದ್ಯಮಗಳಾಗಿ ಬದಲಾಗಿವೆ. ಇನ್ನು ಕೆಲವು ಶ್ರೀಮಂತ ವ್ಯಕ್ತಿಗಳು ಭಾರತದಲ್ಲಿ ನೆಲೆಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಫೋರ್ಬ್ಸ್ ವಿಶ್ವ ಬಿಲಿಯನೇರ್ ಪಟ್ಟಿ ಬಿಡುಗಡೆಯಾಗಿದ್ದು ಇದರಲ್ಲೂ ಭಾರತೀಯರ ಹೆಸರು ಕೇಳಿಬಂದಿದೆ.
ಈ ಪಟ್ಟಿಯಲ್ಲಿ ಬರೋಬ್ಬರಿ 200 ಮಂದಿ ಭಾರತೀಯರಾಗಿದ್ದಾರೆ. ಅದರ ಜೊತೆಗೆ ವಿಶ್ವದ ಶ್ರೀಮಂತ ನಗರಗಳ ಸಾಲಿನಲ್ಲಿ ಭಾರತದ ಏಕೈಕ ನಗರವಾಗಿ ಬೆಂಗಳೂರು ಸ್ಥಾನ ಪಡೆದಿದೆ. ಭಾರತದ ಸಿಲಿಕಾನ್ ವ್ಯಾಲಿ, ಐಟಿ ಸಿಟಿ ಎಂದೆಲ್ಲಾ ಕರೆಸಿಕೊಳ್ಳುವ ಬೆಂಗಳೂರು ವಿಶ್ವ ಶ್ರೀಮಂತ ನಗರದಲ್ಲಿ ಒಂದಾಗಿದೆ.

ವಿಶ್ವದ ಟಾಪ್ 10 ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಬೆಂಗಳೂರು ಸ್ಥಾನ ಪಡೆದಿದೆ. ಏಕೆಂದರೆ ಭೆಂಗಳೂರಿನಲ್ಲಿಯೇ ಅತೀ ಹೆಚ್ಚು ಸ್ಟಾರ್ಟ್‌ಅಪ್‌ಗಳು, ಹೊಸ ಹೊಸ ಉದ್ಯಮಗಳು ಬೆಳೆಯುತ್ತವೆ. ಅದರಲ್ಲೂ ಯುವ ಉದ್ಯಮಿಗಳ ತವರೂರಾಗಿ ಬೆಂಗಳೂರು ಹೆಸರಾಗಿದೆ.
ಮಿಲಿಯನೇರ್‌ಗಳಿಗಾಗಿ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾದ ಬೆಂಗಳೂರನ್ನು 'ಗಾರ್ಡನ್ ಸಿಟಿ' ಮತ್ತು 'ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ' ಎಂದು ಕರೆಯಲಾಗುತ್ತದೆ. ಇದು ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನವನ್ನು ಹೊಂದಿದೆ. ವಲಯ ಮತ್ತು ಜಾಗತಿಕ ಟೆಕ್ ದೈತ್ಯರಾದ ಇನ್ಫೋಸಿಸ್ ಮತ್ತು ವಿಪ್ರೋದಂತಹ ದೊಡ್ಡ ದೊಡ್ಡ ಕಂಪನಿಗಳ ಮೂಲ ಸ್ಥಳವಾಗಿದೆ.
ಇದೇ ಕಾರಣದಿಂದಾಗಿ ಈ ವಿಶ್ವದ ವೇಗವಾಗಿ ಕೋಟ್ಯದಿಪತಿಗಳಿಗಾಗಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಯಲ್ಲೂ ಸ್ಥಾನಗಿಟ್ಟಿಸಿದೆ.
ಹಾಗಾದರೆ ವಿಶ್ವದ ಟಾಪ್ 10 ನಗರಗಳು ಯಾವುದು?
ನ್ಯೂ ಯಾರ್ಕ್
ನ್ಯೂಯಾರ್ಕ್‌ನಲ್ಲಿ ವಿಶ್ವದ ಅತ್ಯಂತ ಹೆಚ್ಚು ಕೋಟ್ಯಧಿಪತಿಗಳು ವಾಸವಿದ್ದಾರೆ. ಈ ನಗರ ಬೃಹತ್ ಕಂಪನಗಳ ತವರೂರು. ನಾವಿಂದು ನೋಡುತ್ತಿರುವ ಬಹುತೇಕ ಕಂಪನಿಗಳು ಹುಟ್ಟಿಕೊಂಡಿದ್ದೇ ಈ ನಗರದಲ್ಲಿ. ಹೀಗಾಗಿ ವಿಶ್ವದ ಕೋಟ್ಯಧಿಪತಿಗಳು ಈ ನಗರದವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಬೇ ಏರಿಯಾ ಟೆಕ್ ಹಬ್
Airbnb, Alphabet, Apple, Intel, Meta, Netflix, Nvidia ಮತ್ತು Uber ಸೇರಿದಂತೆ ವಿಶ್ವದ ಪ್ರಮುಖ ಕಂಪನಿಗಳ ಬಹುಸಂಖ್ಯೆಯು ಈ ಪ್ರದೇಶದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಇದು ಸಹ ಅಮೆರಿಕದಲ್ಲಿರುವ ಒಂದು ಪುಟ್ಟ ನಗರವಾಗಿದೆ. ಈ ನಗರದಲ್ಲಿ ಬಹುತೇಕ ಕಂಪನಿಗಳು ತಮ್ಮ ಕೇಂದ್ರ ಕಚೇರಿ ಹೊಂದಿವೆ.
ಟೋಕಿಯೋ
ಜಪಾನ್‌ನ ಟೋಕಿಯೋ ನಗರದಲ್ಲಿ ಬೃಹತ್ ಕೈಗಾರಿಕಾ ಕಂಪನಿಗಳಿವೆ. ಹಿಟಾಚಿ, ಮಿತ್ಸುಬಿಷಿ ಮತ್ತು ಸೋನಿಯಂತಹ ಕಾರ್ಪೊರೇಟ್ ದೊಡ್ಡ ಕಂಪನಿಗಳು ಈ ನಗರದಲ್ಲಿ ತಲೆ ಎತ್ತಿವೆ. ಕಡಿಮೆ ಸಂಖ್ಯೆಯ ಕೋಟ್ಯಧಿಪತಿಗಳ ಹೊಂದಿದ್ದರು ಈ ನಗರದಲ್ಲಿ ದೊಡ್ಡ ಕೈಗಾರಿಕೋದ್ಯಮಿಗಳ ಊರಾಗಿದೆ.
ಸಿಂಗಾಪುರ
ಸಿಂಗಾಪುರವು ನಮಗೆ ತಿಳಿದಂತ ಅತ್ಯಂತ ಸ್ವಚ್ಛ ನಗರ. ಜೊತೆಗೆ ಹಲವು ಕೋಟ್ಯಧಿಪತಿಗಳಿಗೆ ಆಶ್ರಯ ನೀಡಿರುವ ದೇಶವೂ ಹೌದು. ಈ ಸಿಂಗಾಪುರವು ವ್ಯಾಪಾರ ಸ್ನೇಹಿ ವಾತಾವರಣಕ್ಕೆ ಹೆಸರಾಗಿದ್ದು ನೂರಾರು ಮಂದಿ ಅಲ್ಲಿ ತಮ್ಮ ಉದ್ಯಮ ತೆರೆದಿದ್ದಾರೆ.
ಲಂಡನ್
ಇಪ್ಪತ್ತು ವರ್ಷಗಳ ಹಿಂದೆ, ಲಂಡನ್ ಅನ್ನು ಮಿಲಿಯನೇರ್‌ಗಳು ಮತ್ತು ಬಿಲಿಯನೇರ್‌ಗಳ ಕೇಂದ್ರವೆಂದು ಪರಿಗಣಿಸಲಾಗಿತ್ತು. ಆದರೆ ಇತ್ತೀಚಿಗೆ ಇಂಗ್ಲೆಂಡ್ ಆರ್ಥಿಕತೆ ಹಾಗೂ ಯೂರೋಪ್‌ನಲ್ಲಿ ಕಂಡುಬರುತ್ತಿರುವ ಆರ್ಥಿಕ ಹಿಂಜರಿತದ ಕಾರಣ ಈ ನಗರ ಈಗ ಸ್ವಲ್ಪ ಇಕ್ಕಟ್ಟಿಗೆ ಸಿಲುಕಿದೆ.
ಲಾಸ್ ಎಂಜಲೀಸ್
ಪ್ರಪಂಚದ ಮನರಂಜನಾ ಕೇಂದ್ರ ಎಂದೂ ಕರೆಯಲ್ಪಡುವ ಇದು ಬೆವರ್ಲಿ ಹಿಲ್ಸ್, ಲಗುನಾ ಬೀಚ್, ಮಾಲಿಬು ಮತ್ತು ನ್ಯೂಪೋರ್ಟ್ ಬೀಚ್‌ನ ಶ್ರೀಮಂತಿಕೆಯನ್ನು ಒಳಗೊಂಡಿದೆ. ಅನೇಕ ದೊಡ್ಡ ಕಂಪನಿಗಳು ಸಹ ಅಲ್ಲಿ ನೆಲೆಗೊಂಡಿವೆ.
ಇದಲ್ಲದೆ ಇನ್ನುಳಿದ ನಗರಗಳೆಂದರೆ
ಪ್ಯಾರಿಸ್
ಸಿಡ್ನಿ
ಹಾಂಗ್ ಕಾಂಗ್
ಬೀಜಿಂಗ್



Click it and Unblock the Notifications
