Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಬಹುಳಾ ಚತುರ್ಥಿ 2023: ಶುಭ ಮುಹೂರ್ತ, ಪೂಜಾ ವಿಧಿ ಹೇಗಿರಬೇಕು?
ಬಹುಳ ಚತುರ್ಥಿಯನ್ನು ಭಾದ್ರಪದ ಮಾಸದ ಕೃಷ್ಣ ಪಕ್ಷದ ಸಂಕಷ್ಟ ಚತುರ್ಥಿಯಂದು ಆಚರಿಸಲಾಗುತ್ತದೆ. ಈ ದಿನ ಗಣಪತಿಯ ಪೂಜೆಯ ಜೊತೆಗೆ ಹಸುಗೂಸನ್ನೂ ಪೂಜಿಸಲಾಗುತ್ತದೆ. ಸಂಕಷ್ಟಿ ಚತುರ್ಥಿಯಾಗಿರುವುದರಿಂದ ಈ ದಿನ ಗಣೇಶನ ಪೂಜೆಗೆ ಮಹತ್ವ ನೀಡಲಾಗಿದೆ. ಶ್ರೀಕೃಷ್ಣನ ಗೋಶಾಲೆಯಲ್ಲಿ ಒಂದು ಹಸು ಇತ್ತು. ಅದರ ಹೆಸರು ಬಹುಳ. ಇದೇ ಕಾರಣಕ್ಕೆ ಈ ಚತುರ್ಥಿ ಹಬ್ಬವನ್ನು ಬಹುಳ ಚತುರ್ಥಿ ಎಂದು ಕರೆಯಲಾಗುತ್ತದೆ. ಅಷ್ಟಕ್ಕೂ ಬಹುಳ ಚತುರ್ಥಿ ಯಾವಾಗ? ಶುಭ ಮುಹೂರ್ತ, ಆಚರಣಾ ವಿಧಿ ಬಗ್ಗೆ ತಿಳಿದುಕೊಳ್ಳೋಣ.

ಬಹುಳ ಚತುರ್ಥಿಯನ್ನು ಯಾವಾಗ ಆಚರಿಸಲಾಗುತ್ತದೆ?
ಬಹುಳ ಚತುರ್ಥಿಯನ್ನು ಸೆಪ್ಟೆಂಬರ್ 3 ರಂದು ಆಚರಿಸಲಾಗುತ್ತದೆ. ಭದ್ರಾ ಮಾಸದ ಕೃಷ್ಣ ಪಕ್ಷದ ಸಂಕಷ್ಟಿ ಚತುರ್ಥಿ ದಿನವನ್ನೇ ಬಹುಳ ಚತಿರ್ಥಿಯನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಗಣಪತಿಯನ್ನು ಪೂಜಿಸುವುದರಿಂದ ನಿಮ್ಮ ಕಷ್ಟಗಳು ದೂರವಾಗುತ್ತವೆ. ಮತ್ತು ನೀವು ಮಂಗಳಕರ ಫಲಿತಾಂಶಗಳನ್ನು ಪಡೆಯುತ್ತೀರಿ ಎಂದು ನಂಬಲಾಗಿದೆ.
ಬಹುಳ ಚತುರ್ಥಿಯ ಮಹತ್ವವೇನು?
ಈ ಉಪವಾಸವನ್ನು ಸತ್ಯ ಮತ್ತು ಧರ್ಮದ ವಿಜಯಕ್ಕಾಗಿ ಆಚರಣೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ಈ ಉಪವಾಸವು ಮಕ್ಕಳ ಸಂತೋಷ ಮತ್ತು ಪ್ರಗತಿಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಬಹುಳ ಚತುರ್ಥಿಯಂದು ಗೋವನ್ನು ಪೂಜಿಸುವುದು ಮಂಗಳಕರ ಮತ್ತು ಸಂಪತ್ತು ಪ್ರಾಪ್ತಿಯಾಗುತ್ತೆ ಎಂದು ನಂಬಲಾಗಿದೆ. ಬಹುಳ ಚತುರ್ಥಿ ದಿನದಂದು ಗೋಪಾಲಕರು ತಮ್ಮ ಹಸುವಿನ ಹಾಲನ್ನು ಕರುವಿಗೆ ಕುಡಿಯಲು ಬಿಡುತ್ತಾರೆ. ಈ ದಿನ ಗಣೇಶನ ಪೂಜೆಯ ಜೊತೆಗೆ ಬಹುಳ ಎಂಬ ಹಸುವನ್ನೂ ಕೂಡ ಪೂಜಿಸಲಾಗುತ್ತದೆ.
ಬಹುಳಾ ಚತುರ್ಥಿ 2023ರ ಮುಹೂರ್ತ :
ಹಿಂದೂ ಪಂಚಾಂಗದ ಪ್ರಕಾರ ಭದ್ರಮಾಸದ ಚತುರ್ಥಿ ಸೆಪ್ಟೆಂಬರ್ 2 ರ ರಾತ್ರಿ 8.49 ಕ್ಕೆ ಪ್ರಾರಂಭವಾಗುತ್ತದೆ. ಮತ್ತು ಮರುದಿನ ಸಂಜೆ 6.24 ಕ್ಕೆ ಕೊನೆಗೊಳ್ಳುತ್ತದೆ. ನಂಬಿಕೆಗಳ ಪ್ರಕಾರ ಬಹುಳಾ ಚತುರ್ಥಿ ಪೂಜೆಯನ್ನು ಸಂಜೆ ಸಮಯದಲ್ಲಿ ಕೈಗೊಳ್ಳಲಾಗುತ್ತದೆ. ಮತ್ತು ಚಂದ್ರನನ್ನು ನೋಡುವ ಮೂಲಕ ಉಪವಾಸವನ್ನು ಪೂರ್ಣಗೊಳಿಸಲಾಗುತ್ತದೆ.
ಬಹುಳಾ ಚತಿರ್ಥಿಯ ಉಪವಾಸದ ಕಥೆ!
ಶ್ರೀಕೃಷ್ಣನು ತನ್ನ ದನದ ಕೊಟ್ಟಿಗೆಯಲ್ಲಿದ್ದ ಬಹುಳ ಎಂಬ ಕಾಮಧೇನುವನ್ನು ತುಂಬಾನೇ ಇಷ್ಟಪಡುತ್ತಿದ್ದನು. ಒಮ್ಮೆ ಬಹುಳ ಎಂಬ ಕಾಪಧೇನುವನ್ನು ಶ್ರೀ ಕೃಷ್ಣನು ಪರೀಕ್ಷೇ ಮಾಡೋದಕ್ಕೆ ನಿರ್ಧರಿಸುತ್ತಾನೆ. ಒಂದು ದಿನ ಬಹುಳನು ಕಾಡಿಗೆ ಮೇಯಲು ಹೋದನು. ಶ್ರೀಕೃಷ್ಣನು ಸಿಂಹದ ರೂಪದಲ್ಲಿ ಅವನ ಮುಂದೆ ಇದ್ದಕ್ಕಿದ್ದಂತೆ ಕಾಣಿಸಿಕೊಂಡನು. ಮತ್ತು ಅವನ ಮೇಲೆ ಆಕ್ರಮಣ ಮಾಡಿದನು. ಇದನ್ನು ನೋಡಿದ ಬಹುಳ ಭಯಪಟ್ಟು ತನ್ನ ಕರುವಿಗೆ ಹಸಿವಾಗಿದ್ದು ಹಾಲು ಕುಡಿಸಬೇಕು ಎಂದು ಸಿಂಹದ ಬಳಿ ಬೇಡಿಕೊಂಡಳು. ತನ್ನ ಮಗುವಿಗೆ ಹಾಲುಣಿಸಿದ ನಂತರ ನಾಳೆ ನಾನೇ ನಿನ್ನ ಬಳಿಗೆ ಬರುತ್ತೇನೆ ಎಂದು ಸಿಂಹದ ಬಳಿ ಹೇಳುತ್ತಾಳೆ.
ಮರುದಿನ ಬಹುಲಾ ತನ್ನ ಕರುವಿಗೆ ಆಹಾರ ನೀಡಿದ ನಂತರ ಸಿಂಹದ ಬಳಿಗೆ ಮರಳಿತು. ಸಿಂಹದ ರೂಪ ತಳೆದ ಶ್ರೀಕೃಷ್ಣನು ಬಹುಳನ ಧರ್ಮನಿಷ್ಠೆ ಮತ್ತು ಬದ್ಧತೆಯನ್ನು ಕಂಡು ಬಹಳ ಸಂತುಷ್ಟನಾಗಿ ಕಲಿಯುಗದಲ್ಲಿ ನಿನಗಾಗಿ ಭದ್ರ ಮಾಸದ ಕೃಷ್ಣ ಪಕ್ಷವನ್ನು ಆಚರಿಸಲಾಗುವುದು ಎಂದು ಹೇಳಿದನು. ಈ ಕಾರಣಕ್ಕೆ ಅನೇಕ ಗೋಪಾಲಕರು ಈ ದಿನ ಹಸುಗಳಿಗೆ ಹಾಲು ಕೊಡದೆ ಕರುವಿಗೆ ಬಿಡುತ್ತಾರೆ. ಅಂದಿನಿಂದ ಇಂದಿನವರೆಗೆ ಈ ವಿಶೇಷ ಪೂಜೆಯನ್ನು ಮಾಡಲಾಗ್ತಿದೆ. ಈ ಪೂಜೆಯಿಂದ ಸ್ತ್ರೀಯರಿಗೆ ಸಂತಾನ-ಸುಖ ಪ್ರಾಪ್ತಿಯಾಗುತ್ತೆ ಎಂದು ನಂಬಲಾಗಿದೆ.
ಬಹುಳ ಚತುರ್ಥಿಯ ಆಚರಣೆ ಹೇಗಿರಬೇಕು?
ಬಹುಳ ಚತುರ್ಥಿಯ ದಿನ ಮುಂಜಾನೆ ಸ್ನಾನ ಮಾಡಿ. ನಂತರ ಶುಭ್ರವಾದ ಬಟ್ಟೆಯನ್ನು ಧರಿಸಿ. ಮೊದಲಿಗೆ ನಿಮ್ಮ ಮನೆಯಲ್ಲಿ ಹಸು ಇದ್ದರೆ ಅದನ್ನು ತೊಳೆದು. ಅದಕ್ಕೆ ಹಸಿಮೇವಿನ ಜೊತೆಗೆ ಬೆಲ್ಲವನ್ನು ಹಾಕಿ ತಿನ್ನಿಸಿ. ನೀವು ಇಡೀ ದಿನ ಉಪವಾಸವಿದ್ದು, ಸಂಜೆ ಗಣೇಶ, ಕೃಷ್ಣ ಮತ್ತು ತಾಯಿ ಹಸುವಿಗೆ ಪೂಜೆ ಸಲ್ಲಿಸಿ. ನಂತರ ಚಂದ್ರ ಕಾಣಿಸುವ ಸಂದರ್ಭದಲ್ಲಿ ಶಂಖದಲ್ಲಿ ಹಾಲನ್ನು ತುಂಬಿಸಿ ಮತ್ತು ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ. ಇದರ ಜೊತೆಗೆ ದುರ್ವಾ, ಗಂಧ, ಅಕ್ಷತೆಗಳಿಂದ ಶ್ರೀ ಗಣೇಶನಿಗೆ ಪೂಜೆ ಮಾಡಿ. ಹೀಗೆ ಬಹುಳ ಚತುರ್ಥಿಯಂದು ಉಪವಾಸ ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗಿ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.



Click it and Unblock the Notifications
