Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಥೈಲ್ಯಾಂಡ್‌ನ ಆಕಾಶದಲ್ಲೂ ಜೈ ಶ್ರೀರಾಮ್ ಘೋಷಣೆ..! 10 ಸಾವಿರ ಅಡಿಯಿಂದ ಧುಮುಕಿದ ಸೈನಿಕ..!
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22ರಂದು ಹಿಂದೂ ಧಾರ್ಮಿಕ ವಿಧಿ ವಿಧಾನಗಳ ಅನುಸರಿಸುವ ಮೂಲಕ ಮಂದಿರ ಉದ್ಘಾಟನೆ ಮಾಡಿದ್ದಾರೆ. ಕೋಟಿ ಕೋಟಿ ರಾಮ ಭಕ್ತರು ಅಯೋಧ್ಯೆ ರಾಮನ ಕಣ್ತುಂಬಿಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡ ರಾಮ ಲಲ್ಲಾ ಮೂರ್ತಿಗೆ ಸಾವಿರಾರು ಉಡುಗೊರೆಗಳು ಬಂದಿವೆ. ಸಾವಿರಾರು ಮಂದಿ ಚಿನ್ನ, ವಜ್ರ ಸೇರಿ ಹಲವು ಉಡುಗೊರೆಗಳ ಕಾಣಿಕೆಯಾಗಿ ಅರ್ಪಿಸಿದ್ದಾರೆ. ದೇಶ ವಿದೇಶದಿಂದಲೂ ಭಕ್ತರು ರಾಮನ ದರ್ಶನಕ್ಕೆ ಆಗಮಿಸಿದ್ದರು. ಇನ್ನು ಅಯೋಧ್ಯೆ ಭಾರತದ ಪ್ರಮುಖ ಯಾತ್ರಾ ಸ್ಥಳವಾಗಲಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದರು.

ಆಕಾಶದಲ್ಲಿ ಹರಡಿದ 'ಜೈ ಶ್ರೀರಾಮ್' ಘೋಷಣೆ
ಇತ್ತ ದೂರದ ಥೈಲ್ಯಾಂಡ್‌ನಲ್ಲೂ ರಾಮ ಮಂದಿರ ಉದ್ಘಾಟನೆಯ ಸಂಭ್ರಮ ಮುಗಿಲು ಮುಟ್ಟಿತ್ತು. ಮಾಜಿ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ಸಿಡಿಆರ್ ರಾಜ್‌ಕುಮಾರ್ ಥಾಯ್ಲೆಂಡ್‌ನಲ್ಲಿ 'ಜೈ ಶ್ರೀ ರಾಮ್' ಧ್ವಜದೊಂದಿಗೆ ಸ್ಕೈಡೈವ್ ಮಾಡಿ ಗಮನ ಸೆಳೆದಿದ್ದಾರೆ.
ಸ್ಕೈಡೈವಿಂಗ್ ವಿಶ್ಲೇಷಕ ಮತ್ತು ಕ್ರೀಡಾ ಮತ್ತು ಮಿಲಿಟರಿ ಸಿಬ್ಬಂದಿಗೆ ಬೋಧಕರಾಗಿರುವ ಮಾಜಿ ಅಧಿಕಾರಿ, 10,000 ಅಡಿಗಳಿಂದ ಹಾರಿದ್ದಾರೆ. ಅವರ ಜೊತೆಗೆ ದೊಡ್ಡದಾದ ಜೈ ಶ್ರೀರಾಮ್ ಎಂಬ ಬಾವುಟವೂ ಇದೆ. ಲಘು ವಿಮಾನವು 10,000 ಅಡಿಗಳನ್ನು ತಲುಪಿದಾಗ, ಅವರು ಬಾವುಟದೊಂದಿಗೆ ಜಿಗಿದರು.
ಇದಕ್ಕೂ ಮುನ್ನ ಮತ್ತೊಬ್ಬರು ಬೆಂಕಿಕಡ್ಡಿಗಳನ್ನು ಬಳಸಿ ರಾಮಮಂದಿರದ ಪ್ರತಿಕೃತಿಯನ್ನು ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರು. ಶಿಲ್ಪಿ ಶಾಶ್ವತ್ ರಂಜನ್ ಎಂಬ ಕಲಾವಿದ ಅಯೋಧ್ಯೆಯ ರಾಮಮಂದಿರದ ಈ ಪ್ರತಿಕೃತಿಯನ್ನು ಬೆಂಕಿ ಕಡ್ಡಿಗಳಲ್ಲಿ ಪೂರ್ಣಗೊಳಿಸಲು ಆರು ದಿನಗಳನ್ನು ತೆಗೆದುಕೊಂಡಿದ್ದರು. ಈ ಯೋಜನೆಯನ್ನು ಪೂರ್ಣಗೊಳಿಸಲು ಒಟ್ಟು 936 ಬೆಂಕಿಕಡ್ಡಿಗಳನ್ನು ಬಳಸಿದ್ದರು.
ಇದೀಗ ಮಾಜಿ ಕಮಾಂಡರ್ ಮಾಡಿರುವ ಈ ಸಾಹಸದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ದೂರದ ಥೈಲ್ಯಾಂಡ್‌ನಲ್ಲೂ ರಾಮನ ಭಕ್ತಿ ಹರಡಿರುವುದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಅಯೋಧ್ಯೆಗೂ ಥಾಯ್ ದೇಶಕ್ಕೂ ಇದೆ ನಂಟು..!
ಈ ಥೈಲ್ಯಾಂಡ್ ಕಥೆಗೂ ಮೊದಲು ನಾವು ಥೈಲ್ಯಾಂಡ್ ಸರ್ಕಾರ ಅಯೋಧ್ಯೆ ರಾಮಮಂದಿರಕ್ಕೆ ಕಳುಹಿಸುತ್ತಿರುವ ಉಡುಗೊರೆ ಕುರಿತು ತಿಳಿಯೋಣ. ಇದೇ ಮೊದಲ ಬಾರಿಗೆ ಥೈಲ್ಯಾಂಡ್ ರಾಮಮಂದಿರಕ್ಕೆ ಉಡುಗೊರೆಯಾಗಿ ಮಣ್ಣನ್ನು ಕಳುಹಿಸುತ್ತಿದೆ. ಥೈಲ್ಯಾಂಡ್‌ನಲ್ಲಿರುವ ಪವಿತ್ರ ರಾಮನ ಸ್ಥಳದಿಂದ ಈ ಮಣ್ಣನ್ನು ಕಳುಹಿಸಲಾಗುತ್ತಿದೆ. ಇದಕ್ಕೂ ಮೊದಲು ಥೈಲ್ಯಾಂಡ್‌ನ ಎರಡು ಪವಿತ್ರ ನದಿಗಳಿಂದ ರಾಮನ ದೇವಾಲಯಕ್ಕೆ ನೀರನ್ನು ಕಳುಹಿಸಿತ್ತು.
ಥೈಲ್ಯಾಂಡ್‌ನಲ್ಲಿ ಅಯುಥೆಯಾ ಎಂಬ ನಗರವಿದೆ. ಅಲ್ಲಿನ ರಾಜರಿಗೆ 'ರಾಮತಿಬೋಧಿ' (ಲಾರ್ಡ್ ರಾಮ) ಎಂದು ಬಿರುದು ನೀಡಲಾಗುತ್ತದೆ ಮತ್ತು ರಾಮಾಯಣದಲ್ಲಿ ಅಯೋಧ್ಯೆಯನ್ನು ರಾಮನ ರಾಜಧಾನಿ ಎಂದು ಉಲ್ಲೇಖಿಸಿರುವ ಸಂದರ್ಭಕ್ಕೆ ಇದು ಸಂಬಂಧ ಹೊಂದಿದೆ. ಇದಲ್ಲದೆ, ರಾಮ್‌ಕೀನ್ ಎಂದು ಕರೆಯಲ್ಪಡುವ ಥಾಯ್ ಧಾರ್ಮಿಕ ಪಠ್ಯವು ಥಾಯ್ ರಾಮಾಯಣಕ್ಕೆ ಹೋಲಿಸಬಹುದಾದ ಸ್ಥಾನಮಾನವನ್ನು ಹೊಂದಿದೆ.
ರಾಮಾನುಜನ್ ಅವರ ಕೃತಿ '300 ರಾಮಾಯಣ'ದಲ್ಲಿ ಈ ಪಠ್ಯವನ್ನು ವಾಲ್ಮೀಕಿಯ ರಾಮಾಯಣಕ್ಕೆ ಹೋಲಿಸಲಾಗಿದೆ.
ಸಾಂಪ್ರದಾಯಿಕವಾಗಿ 18 ನೇ ಶತಮಾನದಲ್ಲಿ ಕಿಂಗ್ ರಾಮ I ಅವರು ಹೊಸದಾಗಿ ರಚಿಸಿದ್ದಾರೆ ಎಂದು ನಂಬಲಾಗಿದೆ, ರಾಮ್‌ಕೀನ್ ಹಿಂದೂ ಪಠ್ಯದಲ್ಲಿ ರಾವಣನನ್ನು ಪ್ರತಿಬಿಂಬಿಸುವಂತೆ ಅಲ್ಲಿ ಥೋಟ್ಸಕ್‌ನನ್ನು ಕಾಣಬಹುದಾಗಿದೆ. ಹಾಗಾಗಿ ಎರಡೂ ದೇಶಗಳಲ್ಲಿ ರಾಮ ಮತ್ತು ರಾಮಾಯಣದ ಉಲ್ಲೇಖಗಳಿವೆ.
ಥಾಯ್‌ನಲ್ಲಿರುವ ಅಯುಥೆಯಾ ನಗರವು ಯುನೆಸ್ಕೋ ಪಾರಂಪರಿಕ ತಾಣವಾಗಿ ರಕ್ಷಿಸಲ್ಪಟ್ಟಿದೆ. ಭಾರತ ಮತ್ತು ಥೈಲ್ಯಾಂಡ್ ನಡುವೆ ಬಲವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಬಾಂಧವ್ಯವಿದೆ. ಥೈಲ್ಯಾಂಡ್‌ನ ರಾಜರು ಭಗವಾನ್ ರಾಮನ ವಂಶಸ್ಥರಿಗೆ ಸೇರಿದವರು, ಅವರ ಹೆಸರಿನಲ್ಲಿ ರಾಮನ ಬಿರುದನ್ನು ಹೊಂದಿದ್ದಾರೆ ಅವರದ್ದು ಸನಾತನ ಸಂಸ್ಕೃತಿ ಅಂತಲೂ ನಂಬಲಾಗಿದೆ.



Click it and Unblock the Notifications
