Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
15-20 ದಿನ ಅಯೋಧ್ಯೆ ರಾಮನ ದರ್ಶನಕ್ಕೆ ಬರಬೇಡಿ ಎಂದ ಟ್ರಸ್ಟ್..! ಏಕೆ ಗೊತ್ತಾ?
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವಿಶ್ವದ ಅತೀ ದೊಡ್ಡ ಧಾರ್ಮಿಕ ಸಮ್ಮೇಳನ ಮಹಾ ಕುಂಭಮೇಳೆ ನಡೆಯುತ್ತಿದೆ. ಈಗಾಗಲೇ ಕೋಟಿ ಕೋಟಿ ಭಕ್ತರು ತಿವ್ರೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಪ್ರಮುಖ ನಾಯಕರು ಕೂಡ ಅಲ್ಲಿಗೆ ಭೇಟಿ ನೀಡಿದ್ದಾರೆ. ನಿತ್ಯ ಕೋಟಿ ಕೋಟಿ ಮಂದಿ ಪ್ರಯಾಗ್‌ರಾಜ್ ತಲುಪುತ್ತಿದ್ದಾರೆ. ಹಾಗೆ ಈ ವರ್ಷದ ವಿಶೇಷ ಕುಂಭ ಆಗಿರುವುದರಿಂದ ದೇಶದ ಮೂಲೆ ಮೂಲೆಯಿಂದ ಹಿಡಿದು ವಿದೇಶಿ ಪ್ರಜೆಗಳು ಕೂಡ ಆಗಮಿಸಿದ್ದಾರೆ.
ಆದ್ರೆ ಪ್ರಯಾಗ್‌ರಾಜ್‌ನಲ್ಲಿ ಇಂದು ಕಾಲ್ತುಳಿತ ಉಂಟಾಗಿರುವ ಕುರಿತು ವರದಿಯಾಗಿದೆ. ಭಕ್ತರ ಶಿಬಿರದ ಬಳಿ ಭಾರಿ ಪ್ರಮಾಣದಲ್ಲಿ ಕಾಲ್ತುಳಿತ ಉಂಟಾಗಿದೆ. ಸೆಕ್ಟರ್ 2 ಬಳಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮೌನಿ ಅಮಾವಾಸ್ಯೆಯಂದು ಪವಿತ್ರ ಸ್ನಾನಕ್ಕಾಗಿ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಸೇರಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ಈ ಘಟನೆಯಲ್ಲಿ ಹಲವರು ಗಾಯೊಂಡಿದ್ದು, ಸಾವಿನ ಕುರಿತು ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. ಆದ್ರೆ ಇದೆಲ್ಲದರ ನಡುವೆ ಅಯೋಧ್ಯೆಯಲ್ಲಿಯೂ ಭಕ್ತರ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ರಾಮಜನ್ಮ ಭೂಮಿ ಟ್ರಸ್ಟ್ ಭಕ್ತರಿಗೆ ಎಚ್ಚರಿಕೆ ನೀಡಿದ್ದು, 15ರಿಂದ 20 ದಿನಗಳ ಕಾಲ ಭಕ್ತರು ರಾಮನ ದರ್ಶನಕ್ಕೆ ಬರುವುದನ್ನು ಮೂಂದೂಡುವಂತೆ ಸೂಚಿಸಲಾಗಿದೆ.
ಪ್ರಯಾಗ್‌ರಾಜ್‌ನಲ್ಲಿ ಕುಂಭ ಮೇಳ ಹಿನ್ನೆಲೆ ಹಾಗೆ ಇಂದು ಮೌನಿ ಅಮವಾಸ್ಯೆಯ ಕಾರಣಕ್ಕೆ ಸಾವಿರಾರು ಮಂದಿ ಒಂದೇ ಬಾರಿಗೆ ಅಯೋಧ್ಯೆ ತಲುಪಿದ್ದಾರೆ, ಇದರಿಂದ ಅಯೋಧ್ಯೆಯಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಹೀಗಾಗಿ 15ರಿಂದ 20 ದಿನಗಳ ಕಾಲ ಶ್ರೀರಾಮನ ದರ್ಶನಕ್ಕೆ ಬರುವುದನ್ನು ಮುಂದೂಡುವಂತೆ ಭಕ್ತರಿಗೆ ಟ್ರಸ್ಟ್ ಮನವಿ ಮಾಡಿಕೊಂಡಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಉಂಟಾಗಿರುವ ಒತ್ತಡದ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಲು ರಾಮ ಮಂದಿರ ಟ್ರಸ್ಟ್ ಮಂಗಳವಾರವೇ ತಿಳಿಸಿದೆ. ಹಾಗೆ ರಾಮಮಂದಿರಕ್ಕೆ ಆಗಮಿಸಲು ಯೋಚಿಸಿದ್ದರೆ ಕೆಲದಿನಗಳ ಕಾಲ ಮುಂದೂಡುವಂತೆ ಹೇಳಲಾಗಿದೆ. ಅಯೋಧ್ಯೆಯಲ್ಲಿ ಭಕ್ತರ ಸಾಲು, ನಿಲ್ಲಲ್ಲು ಕೂಡ ಜಾಗವಿಲ್ಲದೆ ಭಕ್ತರು ಓಡಾಡಲು ಆಗದೆ ನಿಂತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಕಳೆದ ಮೂರು ದಿನಗಳಲ್ಲಿ ಅಯೋಧ್ಯೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಅಭೂತಪೂರ್ವ ಏರಿಕೆ ಕಂಡುಬಂದಿದೆ. ಒಂದೇ ದಿನದಲ್ಲಿ ಇಷ್ಟೊಂದು ಪ್ರಮಾಣದ ಭಕ್ತರು ಆಗಮಿಸಿರುವುದು, ದೊಡ್ಡ ಜನಸಂಖ್ಯೆಯನ್ನು ತಡೆಯಲಾಗುವುದಿಲ್ಲ. ಹೀಗಾಗಿ ಭಕ್ತರು ಹಲವು ರೀತಿ ಸಮಸ್ಯೆ ಎದುರಿಸಬೇಕಾಗಿದೆ. ಹೀಗಾಗಿ 20 ದಿನಗಳ ಕಾಲ ನಿಮ್ಮ ಪ್ರವಾಸ ಮುಂದೂಡುವುದು ಉತ್ತಮ ಎಂದು ರಾಮಜನ್ಮ ಭೂಮಿ ಟ್ರಸ್ಟ್ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.
ಹಾಗೆ ವಸಂತ ಪಂಚಮಿಯ ಸಮಯದಲ್ಲೂ ರಾಮ ಭಕ್ತರು ಹೆಚ್ಚಾಗಿ ಅಯೋಧ್ಯೆಗೆ ಆಗಮಿಸುವುದರಿಂದ ಈ ಸಮಯದಲ್ಲೂ ಕೂಡ ರಾಮನ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಹರಿದು ಬರುವುದರಿಂದಾಗಿ ನೂಕು ನುಗ್ಗಲು ಹೆಚ್ಚಾಗಬಹುದು ಎಂಬ ಕಾರಣಕ್ಕೆ ಈ ದಿನಗಳಲ್ಲಿ ಭಕ್ತರು ಬರುವುದನ್ನು ನಿಯಂತ್ರಿಸಲು ಹೇಳಲಾಗಿದೆ.
ಅಯೋಧ್ಯೆಯಲ್ಲಿ ಈಗಗಾಲೇ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲು ಕುಂಭ ಮೇಳ ಆರಂಭವಾದಾಗಿನಿಂದ ಅಯೋಧ್ಯೆಯಲ್ಲಿ ಭಕ್ತರ ಸಂಖ್ಯೆ ದುಪ್ಪಟ್ಟು ಏರಿಕೆಯಾಗಿದೆ. ದರ್ಶನಕ್ಕೆ ಸಾಲು ಗಟ್ಟಿ ನಿಲ್ಲುವ ಜೊತೆಗೆ ಅಲ್ಲಿನ ಸೌಲಭ್ಯಗಳ ಬಳಸುವುದು ಕೂಡ ಕಷ್ಟಕರವಾಗುತ್ತಿದೆ. ಹಾಗೆ ಭಕ್ತರನ್ನು ನಿಯಂತ್ರಿಸುವುದು ಅಲ್ಲಿನ ಸಿಬ್ಬಂದಿ, ಟ್ರಸ್ಟ್‌ಗೆ ಹೊಸ ತಲೆನೋವು ತಂದಿದೆ.



Click it and Unblock the Notifications
