Latest Updates
-
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ
ಅನರ್ಹತೆಯಿಂದ ಹೊರಬಂದು ಪದಕ ಗೆದ್ದ ಕ್ರೀಡಾಪಟು..! ಫೋಗಟ್‌ಗೂ ಈ ಅವಕಾಶವಿತ್ತಾ?
ಪ್ಯಾರಿಸ್ ಒಲಿಂಪಿಕ್‌ನಲ್ಲಿ ಭಾರತದ ಕುಸ್ತಿ ಪಟು ವಿನೇಶ್ ಫೋಗಟ್ ಅಧಿಕ ತೂಕದ ಕಾರಣದಿಂದ ಅನರ್ಹರಾದ ಬಳಿಕ ಈಗ ಕುಸ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಈ ನಿಯಮದ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿರುವುದಲ್ಲದೆ, ಒಲಿಂಪಿಕ್ ನಿಯಮದಲ್ಲಿ ಬದಲಾವಣೆಗೆ ಭಾರೀ ಒತ್ತಡ ಕೇಳಿಬಂದಿದೆ. ಜೊತೆಗೆ ವಿನೇಶ್ ಫೋಗಟ್ ಬೆಂಬಲಕ್ಕೆ ಇಡೀ ದೇಶವೆ ನಿಂತಿದೆ.
ಆದರೆ ಒಂದು ದಿನದಲ್ಲಿ ತೂಕ ಇಳಿಸಿಕೊಳ್ಳಲು ಆಗದಿರುವುದು ಹಾಗೂ ತರಾತುರಿಯಲ್ಲಿ ಆಕೆಯನ್ನು ಅನರ್ಹಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈಗ ಫೋಗಟ್ ಪದಕ ಗೆಲ್ಲಲು ಇರುವ ಅವಕಾಶಗಳ ಕುರಿತಂತೆ ಈಗ ಚರ್ಚೆ ಆರಂಭವಾಗಿದೆ. ಅಲ್ಲದೆ ಫೋಗಟ್ ಕೋಚ್ ಹಾಗೂ ಮೆಂಟರ್ ಈ ಸಮಯದಲ್ಲಿ ಸ್ವಲ್ಪ ಜಾಗೃತರಾಗಿದ್ದರು ಆಕೆ ಫೈನಲ್ ಪಂದ್ಯ ಆಡುತ್ತಿದ್ದಳು ಎಂಬ ಮಾತುಗಳು ಕೇಳಿಬರುತ್ತಿವೆ.

ಪದಕ ಗೆಲ್ಲಲು ಯಾವೆಲ್ಲಾ ಅವಕಾಶವಿತ್ತು?
ಫೋಗಟ್ ಫೈನಲ್‌ನಲ್ಲಿ ಗೆಲ್ಲಬೇಕಾದರೆ ಪಂದ್ಯ ಆಡುವ ಅವಶ್ಯಕತೆ ಇರಲಿಲ್ಲ. ಅಂದರೆ ಆಕೆ ಮೊದಲೇ ಪಂದ್ಯದಿಂದ ಹಿಂದೆ ಸರಿಯಲು ಅವಕಾಶವಿತ್ತು. ಅನಾರೋಗ್ಯದ ಕಾರಣದಿಂದ ಪಂದ್ಯದಿಂದ ಹೊರಗುಳಿದಿದ್ದರೆ ಚಿನ್ನದ ಪದಕ ಆಕೆಯ ಕೈ ಸೇರುತ್ತಿತ್ತು. ಇದಲ್ಲದೆ ಪಂದ್ಯ ಅನರ್ಹತೆ ಘೋಷಣೆಗೂ ಮುನ್ನ ಕಾಲಾವಕಾಶಕ್ಕೆ ಮನವಿ ಮಾಡಬಹುದಿತ್ತು ಎಂಬ ಚರ್ಚೆ ಸಹ ಹುಟ್ಟಿಕೊಂಡಿದೆ.
ಅನರ್ಹತೆಯಿಂದ ಹೊರಬರಲು ಸಾಧ್ಯವಿತ್ತು..!
ಇನ್ನು ಅನರ್ಹತೆಯ ಘೋಷಣೆಯನ್ನು ಚಾಲೆಂಜ್ ಆಗಿ ಸ್ವೀಕರಿಸಿ ಮತ್ತೆ ಪಂದ್ಯದಲ್ಲಿ ಭಾಗಿಯಾಗಬಹುದಿತ್ತು. ಈ ಮೊದಲು ಕೀನ್ಯಾದ ಫೇಯ್ತ್ ಕಿಪ್ಯೆಗೊನ್ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಅನರ್ಹತೆಗೆ ಒಳಗಾಗಿದ್ದರು. 5 ಸಾವಿರ ಮೀಟರ್ ಓಟದಲ್ಲಿ ಬೆಳ್ಳಿ ಪದಕ ಸಹ ಗೆದ್ದಿದ್ದರು. ಅವರು ಓಟದಲ್ಲಿ ಇಥಿಯೋಪಿಯನ್ ರೇಸರ್ ಅವರಿಗೆ ಅಡಚಣೆ ಮಾಡಿದ್ದರು ಎಂಬ ಕಾರಣಕ್ಕೆ ಅನರ್ಹತೆಗೆ ಒಳಗಾಗಿದ್ದರು.
ಈ ಅನರ್ಹತೆಯಿಂದ ಅವರು ಗಳಿಸಿದ್ದ ಬೆಳ್ಳಿ ಪದಕವೂ ವಾಪಾಸು ನೀಡಬೇಕಾಗಿ ಬಂದಿತ್ತು. ಆದರೆ ಕೀನ್ಯಾದ ಮನವಿಯ ಆಲಿಸಿದ ಅಧಿಕಾರಿಗಳು ಮತ್ತೆ ಆಕೆಗೆ ಬೆಳ್ಳಿ ಪದಕ ಮರಳಿ ನೀಡಿದ್ದಾರೆ. ಆಕೆ ಟ್ರ್ಯಾಕ್‌ನಲ್ಲಿ ಓಡುವಾಗ ಪ್ರತಿಸ್ಪರ್ಧಿಗೆ ಅಡ್ಡಿಯಾಗಿರಲಿಲ್ಲ ಎಂದು ಸಾಬೀತು ಮಾಡಿದರು. ಇದು ಸಹ ಒಲಿಂಪಿಕ್‌ನಲ್ಲಿ ಭಾರೀ ಸುದ್ದಿ ಮಾಡಿತು. ಒಲಿಂಪಿಕ್ ತೀರ್ಪುಗಾರರು ತಕ್ಷಣದ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಆಕೆ 5 ಸಾವಿರ ಮೀಟರ್ ಓಟವನ್ನು 28.56 ಸೆಕೆಂಡ್‌ನಲ್ಲಿ ಮುಗಿಸಿದ್ದರು. ಆದರೆ ಇಥಿಯೋಪಿಯನ್ ನೆಮೆಸಿಸ್ ಗುಡಾಫ್ ತ್ಸೆಗೆ ಅವರು ಓಡುವಾಗ ಅಡ್ಡಿಯಾದರು ಎಂದು ಆರೋಪಿಸಲಾಗಿತ್ತು, ಇದು ಆಕೆ ಸಿಡಿಲು ಬಡಿದಂತಾಗಿತ್ತು, ಆದರೆ ಕೀನ್ಯಾದ ಮನವಿ ಮೇರೆಗೆ ಅನರ್ಹತೆಯ ನಿರ್ಧಾರ ಮತ್ತೆ ಪರಿಶೀಲನೆ ಮಾಡಲಾಗಿತ್ತು. ಬಳಿಕ ಆಕೆಯ ಅನರ್ಹತೆ ರದ್ದು ಮಾಡಲಾಗಿ ಚಿನ್ನದ ಪದಕ ನೀಡಲಾಗಿತ್ತು.
ಫೋಗಟ್ ಪ್ರಕರಣದಲ್ಲಿ ಇದೇಕೆ ಸಂಭವಿಸಿಲ್ಲ!
ಈಗ ವಿನೇಶ್ ಫೋಗಟ್ ಪ್ರಕರಣದಲ್ಲೂ ಈ ರೀತಿ ಅನರ್ಹತೆಯ ವಿರುದ್ಧ ಮೇಲ್ಮನವಿಗೆ ಅವಕಾಶವಿತ್ತಾ ಎಂಬ ಪ್ರಶ್ನೆ ಎದುರಾಗಿದೆ. ಅನರ್ಹತೆಗೂ ಮುನ್ನವೇ ಸಮಯ ಕೇಳಬಹುದಿತ್ತಾ? ಎಂಬ ಪ್ರಶ್ನೆಯಂತು ಮೂಡಿದೆ. ಆದರೆ ಏಕಾಏಕಿ ಅನರ್ಹತೆಯ ನಿರ್ಧಾರದಿಂದ ಇಡೀ ಭಾರತೀಯರ ಕನಸು ಭಗ್ನವಾಗಿದೆ. ಈಗ ಫೋಗಟ್ ಕುಸ್ತಿಗೆ ನಿವೃತ್ತಿ ಘೋಷಿಸಿ ಭಾವುಕರಾಗಿದ್ದಾರೆ.
ಈಗ ಇಡೀ ದೇಶ ಆಕೆಯ ಬೆನ್ನಿಗೆ ನಿಂತಿದ್ದು, ಆಕೆಯ ಸಾಧನೆಗೆ ಮೆಚ್ಚುಗೆ ಕೇಳಿಬಂದಿದೆ. ತೂಕ ಇಳಿಸಿಕೊಳ್ಳಲು ಆಕೆ ಮಾಡಿದ್ದ ತಯಾರಿ, ವಿಶ್ವದ ಬಲಿಷ್ಟ ಕುಸ್ತಿಪಟುವನ್ನು ಸೋಲಿಸಿದ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ಆದ್ರೆ ಫೈನಲ್ ಪಂದ್ಯದಲ್ಲಿ ಗೆದ್ದು ಭಾರತಕ್ಕೆ ಚಿನ್ನದ ಪದಕ ಗೆದ್ದೇ ಗೆಲ್ಲುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು.



Click it and Unblock the Notifications

