Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಆರ್ಥಿಕ ಸಮಸ್ಯೆ ನಿವಾರಣೆಗೆ ವಾಸ್ತು ಪರಿಹಾರವೇನು?
ಈಗೀನ ಕಾಲದಲ್ಲಿ ಹಣವಿಲ್ಲವೆಂದರೆ ಜೀವನದಲ್ಲಿ ನರಕ ನೋಡಿ ಬಿಡುತ್ತೇವೆ. ಎಲ್ಲದಕ್ಕೂ ಹಣಬೇಕು. ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟು ದುಡಿದರೂ ಕೈಯಲ್ಲಿ ಹಣ ನಿಲ್ಲಲ್ಲ, ಒಂದಲ್ಲಾ ಒಂದು ಖರ್ಚು ಬಂದು ಆರ್ಥಿಕ ಸ ಸಂಕಷ್ಟ ತಂದೊಡ್ಡುತ್ತದೆ. ಕೆಲವೊಮ್ಮೆ ಸಂಪಾದಿಸಿದ ಹಣವನ್ನೂ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಬಹುದು.
ಒಳ್ಳೆಯದಾಗಬಹುದು ಎಂಬ ನಿರೀಕ್ಷೆಯಿಂದ ಮಾಡಿದ ವ್ಯವಹಾರ ಹಳ್ಳ ಹಿಡಿಯಬಹುದು. ಹಣದ ಮುಗ್ಗಟ್ಟು ಬಂದರೆ ಮನುಷ್ಯ ಹೈರಾಣಾಗುತ್ತಾನೆ.
ವಾಸ್ತು ಶಾಸ್ತ್ರದಲ್ಲಿ ನಿಮ್ಮ ಆರ್ಥಿಕ ತೊಂದರೆಗಳನ್ನು ನೀಗಿಸಲು ಕೆಲವೊಂದು ಪರಿಹಾರಗಳಿವೆ, ಅವುಗಳ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಮನೆಯಲ್ಲಿ ಗಣೇಶನ ವಿಗ್ರಹ ಅಥವಾ ಫೋಟೋವಿರಲಿ
ಮನೆಯಲ್ಲಿ ಗಣೇಶನ ವಿಗ್ರಹ ಅಥವಾ ಫೋಟೋವನ್ನು ಇಟ್ಟು ಪೂಜಿಸಿದರೆ ಮಂಗಳಕರ ಫಲಿತಾಂಶ ದೊರೆಯಲಿದೆ. ಯಾವುದೇ ಪೂಜೆಗೆ ಮುನ್ನ ವಿಘ್ನ ನಿವಾರಕನ ಪೂಜೆ ಮಾಡಬೇಕು. ಹಣದ ತೊಂದರೆಯಿದ್ದರೆ ಬುಧವಾರ ಗಣೇಶನಿಗೆ ಗರಿಕೆಯನ್ನು ಅರ್ಪಿಸಿ ಪೂಜಿಸಿ. ಸಂತೋಷದ ಜೀವನಕ್ಕಾಗಿ, ನೃತ್ಯ ಭಂಗಿಯಲ್ಲಿರುವ ಗಣಪತಿಯ ಚಿತ್ರವನ್ನು ಮನೆಯಲ್ಲಿ ಇರಿಸಿ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಮನೆಯ ಮುಂಭಾಗದಲ್ಲಿ ತೆಂಗಿನಕಾಯಿ ಕಟ್ಟಿ
ಒಂದೇ ಒಂದು ತೆಂಗಿನಕಾಯಿಯನ್ನು ಕೆಂಪು ಅಥವಾ ಬಿಳಿ ಬಟ್ಟೆಯನ್ನು ಸುತ್ತು ಪೂಜಿಸಿ ಮನೆಯ ಮುಂದುಗಡೆ ಕಟ್ಟಬೇಕು. ಇದರಿಂದ ಲಕ್ಷ್ಮಿ ಕೃಪೆ ಮನೆ ಮೇಲಿರುತ್ತದೆ. ಹೀಗಾಗಿ ಮನೆಯಲ್ಲಿರುವ ಆರ್ಥಿಕ ಸಂಕಷ್ಟಗಳು ದೂರಾಗಿ ಮನೆಯಲ್ಲಿ ಅಭಿವೃದ್ದಿ ಕಂಡು ಬರುವುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಪೂಜಾ ಸ್ಥಳದಲ್ಲಿ ಶಂಖ
ಮನೆಯ ದೇವರ ಕೋಣೆಯಲ್ಲಿ ಶಂಖ ಇಡಿ. ಇದರಿಂದ ಮನೆಯ ವಾಸ್ತು ದೋಷಗಳು ದೂರವಾಗುತ್ತವೆ. ಅಲ್ಲದೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರಾಗುವುದು. ಪುರಾಣಗಳು ಮತ್ತು ಶಾಸ್ತ್ರಗಳ ಪ್ರಕಾರ ಶಂಖವು ಶ್ರೀ ವಿಷ್ಣು ಮತ್ತು ತಾಯಿ ಲಕ್ಷ್ಮಿಗೆ ತುಂಬಾ ಪ್ರಿಯವಾಗಿದೆ. ಶಂಖ ಅಕಾರಾತ್ಮಕ ಶಕ್ತಿ, ಉತ್ಸಾಹ ಮತ್ತು ಆತ್ಮವಿಶ್ವಾಸದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಲಕ್ಷ್ಮಿ ದೇವತೆ ಮತ್ತು ಕುಬೇರನ ಚಿತ್ರ
ಹಣದ ಕೊರತೆಯನ್ನು ನೀಗಿಸಲು, ಮನೆಯಲ್ಲಿ ಲಕ್ಷ್ಮಿ ದೇವಿಯೊಂದಿಗಿನ ಕುಬೇರನ ಚಿತ್ರವನ್ನು ಇರಿಸಿ ಪೂಜಿಸಿ. ತಾಯಿ ಲಕ್ಷ್ಮಿ ಸಂಪತ್ತಿನ ದೇವತೆ ಮತ್ತು ಭಗವಂತ ಕುಬೇರನು ಆದಾಯದ ಮೂಲ. ಈ ಮೂಲಕ ಇಬ್ಬರ ಕೃಪೆಯಿಂದ ಹಣದ ಸಮಸ್ಯೆ ದೂರಾಗುವುದು.
ಕೊಳಲು ಮತ್ತು ನವಿಲು ಗರಿ
ಪೂಜಾ ಮನೆಯಲ್ಲಿ ಕೊಳಲು ಇರುವಂತೆ ನೋಡಿಕೊಳ್ಳಿ. ಮನೆಯಲ್ಲಿ ಬಿದಿರಿನ ಕೊಳಲನ್ನು ಇಡುವುದರಿಂದ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಾಗುವುದು. ಮನೆಯಲ್ಲಿ ಕೊಳಲನ್ನು ಇಡುವುದರಿಂದ ವ್ಯಾಪಾರದಲ್ಲಿ ಬೆಳವಣಿಗೆ ಮತ್ತು ಉದ್ಯೋಗದಲ್ಲಿ ಪ್ರಗತಿ ಕಂಡು ಬರುವುದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.
ಇದಲ್ಲದೆ ವಾಸ್ತು ದೋಷ ನಿವಾರಣೆಗೆ ಮನೆಯಲ್ಲಿ ನವಿಲು ಗರಿಗಳನ್ನು ಇಡುವುದು ಒಳ್ಳೆಯದು. ಇದರಿಂದ ನಿಮ್ಮ ಆದಾಯದಲ್ಲಿ ಹೆಚ್ಚಳವಾಗುವುದು, ಖರ್ಚು ಕಡಿಮೆಯಾಗಿ ಉಳಿತಾಯ ಹೆಚ್ಚಾಗುವುದು.
ಮನೆಯಲ್ಲಿ ಸಮೃದ್ಧಿಗಾಗಿ ವಾಸ್ತು ಸಲಹೆಗಳು
ಹಣವನ್ನು ಸಂಗ್ರಹಿಸಲು ನಿಮಗೆ ತೊಂದರೆಯಾಗಿದ್ದರೆ ಈ ಕ್ರಮಗಳನ್ನು ಅನುಸರಿಸಿ.
* ಹಿಟ್ಟು ಹಾಗೂ ಬೆಲ್ಲವನ್ನು ಮಿಕ್ಸ್ ಮಾಡಿ ರೊಟ್ಟಿ ತಯಾರಿಸಿ ಆ ರೊಟ್ಟಿಯನ್ನು ಗುರುವಾರ ಸಂಜೆ ಹಸುವಿಗೆ ತಿನ್ನಿಸಿ. ಹೀಗೆ ಮಾಡುವುದರಿಂದ ಗ್ರಹಗಳ ದೋಷ ನಿವಾರಣೆಯಾಗುವುದು.
* ಸಾಸಿವೆ ಎಣ್ಣೆಯನ್ನು ರೊಟ್ಟಿಗೆ ಹಾಕಿ ಶನಿವಾರ ಕಪ್ಪು ನಾಯಿಗೆ ನೀಡಿ. ಇದರಿಂದ ಶನಿಕೃಪೆಗೆ ಪಾತ್ರರಾಗುವಿರಿ.
* ಲಕ್ಷ್ಮಿಯನ್ನು ಶುಕ್ರವಾರ ಕಮಲದ ಹೂಗಳನ್ನು ಅರ್ಪಿಸಿ ಪೂಜಿಸಿ.
ಮನೆಯ ಮುಖ್ಯ ಬಾಗಿಲಿಗೆ ಅಶೋಕ ಅಥವಾ ಮಾವಿನ ಎಲೆಗಳ ಹಾರದ ತೋರಣ ಹಾಕಿ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ.
ಐದು ನಾಣ್ಯಗಳು, ಸ್ವಲ್ಪ ಕುಂಕುಮ ಮತ್ತು ಬೆಳ್ಳಿಯ ನಾಣ್ಯಗಳನ್ನು ಶುಕ್ರವಾರದಂದು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಮನೆಯ ಕಬೋರ್ಡ್‌ನಲ್ಲಿ ಇಡಿ.
ಲಕ್ಷ್ಮಿಯ ಆರಾಧನೆ
* ಮನೆಯಲ್ಲಿ ಮಹಾಲಕ್ಷ್ಮಿಯ ಕುಳಿತಿರುವ ಮೂರ್ತಿ ಇಡಿ.
* ಪ್ರತಿದಿನ ಲಕ್ಷ್ಮಿಯನ್ನು ಆರಾಧಿಸಿ ಕುಂಕುಮ ಅರ್ಪಿಸಿ. ಹೀಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ.
* ಆರ್ಥಿಕ ಲಾಭಕ್ಕಾಗಿ ಪ್ರಾರ್ಥಿಸುವಾಗ ಶುದ್ಧವಾದ ಕೆಂಪು ಬಣ್ಣದ ಬಟ್ಟೆಯಲ್ಲಿ ಅರಿಶಿನ, ಸಿಂಧೂರ ಮತ್ತು ಕೆಲವು ನಾಣ್ಯಗಳನ್ನು ಇಟ್ಟು ಸುತ್ತಿ ಅದನ್ನು ನಿಮ್ಮ ಮನೆಯ ಕಬೋರ್ಡ್‌ನಲ್ಲಿ ಇಟ್ಟು ಪೂಜಿಸಿ.



Click it and Unblock the Notifications
